LIVE NOW
Published : Dec 26, 2025, 07:50 AM ISTUpdated : Dec 26, 2025, 12:40 PM IST

India News Live: ಭಾರತದಲ್ಲಿ ಈ ವರ್ಷ ಗರಿಷ್ಠ ಮಾರಾಟವಾದ ಕಾರ್‌ಗಳ ಲಿಸ್ಟ್‌, ಮಾರುತಿಗೆ ಸಾಟಿಯೇ ಇಲ್ಲ!

ಸಾರಾಂಶ

ನವದೆಹಲಿ (ಡಿ.26): ದೀಪು ಚಂದ್ರದಾಸ್ ಎಂಬ ಹಿಂದು ವ್ಯಕ್ತಿಯನ್ನು ಹ*ತ್ಯೆಗೈದು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಭೀಕರ ಘಟನೆ ಮಾಸುವ ಮುನ್ನವೇ ಬಾಂಗ್ಲಾದೇಶ ದಲ್ಲಿ ಮತ್ತೊಬ್ಬ ಹಿಂದು ಯುವಕನನ್ನು ಗುಂಪೊಂ ದು ಹತ್ಯೆಗೈದಿದೆ. ಮೃತ ವ್ಯಕ್ತಿಯನ್ನು ಅಮೃತ್‌ ಮಂಡಲ್ ಗುರುತಿಸಲಾಗಿದೆ. ಕಳೆದ 5 ದಿನಗಳಲ್ಲಿ ಮೂರು ಕಡೆ 7 ಹಿಂದುಗಳ ಮನೆಗೆ ಬೆಂಕಿ ಹಾಕಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

12:40 PM (IST) Dec 26

ಭಾರತದಲ್ಲಿ ಈ ವರ್ಷ ಗರಿಷ್ಠ ಮಾರಾಟವಾದ ಕಾರ್‌ಗಳ ಲಿಸ್ಟ್‌, ಮಾರುತಿಗೆ ಸಾಟಿಯೇ ಇಲ್ಲ!

2025ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಅಂಕಿಅಂಶಗಳು ಇಲ್ಲಿವೆ. ಈ ವರ್ಷದ ವಿಶೇಷವೆಂದರೆ ಎಸ್‌ಯುವಿಗಳ ಅಬ್ಬರದ ನಡುವೆಯೂ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳು ತಮ್ಮ ಪ್ರಾಬಲ್ಯ ಮೆರೆದಿವೆ.

Read Full Story

12:23 PM (IST) Dec 26

ಸಿಸಿಟಿವಿಗಾದ್ರೂ ಸ್ವಲ್ಪ ಮರ್ಯಾದೆ ಕೊಡಿ - ಮನೆಯಲ್ಲಿ ಏನೂ ಸಿಗದೆ ರೊಚ್ಚಿಗೆದ್ದ ಕಳ್ಳ ಬರೆದ ಪತ್ರದಲ್ಲಿ ಏನಿದೆ?

ತಮಿಳುನಾಡಿನ ಮನೆಯೊಂದಕ್ಕೆ ನುಗ್ಗಿದ ಕಳ್ಳ, ಸಿಸಿಟಿವಿ ಇದ್ದರೂ ಹಣ ಸಿಗದಿದ್ದಕ್ಕೆ ನಿರಾಶೆಗೊಂಡಿದ್ದಾನೆ. ಮನೆಯಲ್ಲಿ ಹಣವಿಲ್ಲದ ಮೇಲೆ ಸಿಸಿಟಿವಿ ಯಾಕೆ ಎಂದು ಮಾಲೀಕನಿಗೆ ಪತ್ರ ಬರೆದು, 2 ಸಾವಿರ ರೂ. ಹಾಗೂ ಸಿಸಿಟಿವಿ ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾನೆ.
Read Full Story

12:23 PM (IST) Dec 26

ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ - ಫಿನಾಯಿಲ್ ಸೇವಿಸಿ ಸೋದರಿಯರಿಬ್ಬರು ಸಾವಿಗೆ ಶರಣು

ಲಕ್ನೋದಲ್ಲಿ, ದೀರ್ಘಕಾಲದ ಖಿನ್ನತೆ ಮತ್ತು ತಮ್ಮ ಸಾಕುನಾಯಿಯ ಅನಾರೋಗ್ಯದಿಂದ ಮನನೊಂದಿದ್ದ ಇಬ್ಬರು ಸಹೋದರಿಯರು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.
Read Full Story

12:16 PM (IST) Dec 26

ವಿಜಯ್ ಹಜಾರೆ ಟ್ರೋಫಿ - ಎರಡನೇ ಪಂದ್ಯದಲ್ಲೂ ಅಬ್ಬರಿಸಿದ ಕೊಹ್ಲಿ! ಗುಜರಾತ್ ಎದುರು ವಿರಾಟ್ ಗಳಿಸಿದ ಸ್ಕೋರ್ ಎಷ್ಟು?

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ, 15 ವರ್ಷಗಳ ಬಳಿಕ ಆಡುತ್ತಿರುವ ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧ 77 ರನ್ ಗಳಿಸಿ ಶತಕ ವಂಚಿತರಾದರು. ಕೊಹ್ಲಿ ಔಟಾದ ನಂತರ, ನಾಯಕ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು.
Read Full Story

11:35 AM (IST) Dec 26

online betting app tragedy - ಆನ್ಲೈನ್ ಬೆಟ್ಟಿಂಗ್‌ನಲ್ಲಿ ಒಂದು ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಸಾವಿಗೆ ಶರಣು

ಆನ್‌ಲೈನ್ ಬೆಟ್ಟಿಂಗ್ ಆಪ್‌ನಲ್ಲಿ ಹಣ ಹೂಡಿಕೆ ಮಾಡಿ ಬರೋಬ್ಬರಿ ಒಂದು ಲಕ್ಷ ರೂಪಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಯೋರ್ವ ಸಾವಿಗೆ ಶರಣಾದ ದುರಂತ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವಕನನ್ನು 18 ವರ್ಷದ ವಿಕ್ರಮ್ ಎಂದು ಗುರುತಿಸಲಾಗಿದೆ.

Read Full Story

11:15 AM (IST) Dec 26

ಕ್ರಿಶ್ಚಿಯನ್ನರ ಮೇಲೆ ದಾಳಿ, ಕ್ರಿಸ್‌ಮಸ್ ದಿನವೇ ನೈಜೀರಿಯಾ ಮೇಲೆ ಬಾಂಬ್‌ ದಾಳಿ ಮಾಡಿದ ಅಮೆರಿಕ!

ನೈಜೀರಿಯಾವು ವರ್ಷಗಳಿಂದ ಐಸಿಸ್ ಭಯೋತ್ಪಾದಕರು ಮತ್ತು ಬೊಕೊ ಹರಾಮ್‌ನಿಂದ ಉಗ್ರಗಾಮಿ ಹಿಂಸಾಚಾರವನ್ನು ಎದುರಿಸುತ್ತಿದೆ, ದೇಶದ ಉತ್ತರದಾದ್ಯಂತ ನಾಗರಿಕರು ಮತ್ತು ಧಾರ್ಮಿಕ ಸಮುದಾಯಗಳ ಮೇಲೆ ಆಗಾಗ್ಗೆ ದಾಳಿಗಳು ನಡೆಯುತ್ತಿವೆ.

 

Read Full Story

10:51 AM (IST) Dec 26

ಮಹಿಳಾ ಟಿ20 - ಸರಣಿ ಜಯದ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ!

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತೀಯ ಮಹಿಳಾ ತಂಡ, 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ತಂಡದ ಅಗ್ರ ಆಟಗಾರ್ತಿಯರ ಭರ್ಜರಿ ಫಾರ್ಮ್ ನಲ್ಲಿರುವ ಸ್ಪಿನ್ನರ್ ವೈಷ್ಣವಿ ಶರ್ಮಾ ಉತ್ತಮ ಪ್ರದರ್ಶನವು ಮುಂಬರುವ ವಿಶ್ವಕಪ್‌ ತಯಾರಿಗೆ ಬಲ ತುಂಬಿದೆ.

Read Full Story

09:53 AM (IST) Dec 26

ವಿಜಯ್‌ ಹಜಾರೆ ಟೂರ್ನಿ - ಕೇರಳ ಎದುರು ಕರ್ನಾಟಕಕ್ಕೆ 2ನೇ ಜಯದ ಗುರಿ!

ವಿಜಯ್‌ ಹಜಾರೆ ಟ್ರೋಫಿಯ ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕವು ಬಲಿಷ್ಠ ಕೇರಳ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದರೂ, ಕರ್ನಾಟಕದ ಬೌಲಿಂಗ್ ವಿಭಾಗವು ಸುಧಾರಣೆ ಕಾಣಬೇಕಿದ್ದು, ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮತ್ತೊಂದು ರನ್ ಹೊಳೆ ನಿರೀಕ್ಷಿಸಲಾಗಿದೆ.
Read Full Story

07:52 AM (IST) Dec 26

ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’

ಫಾಕ್ಸ್‌ಕಾನ್‌ ಐಫೋನ್‌ ಘಟಕ 8 ತಿಂಗಳಲ್ಲಿ 30 ಸಾವಿರ ನೌಕರರ ನೇಮಿಸಿಕೊಂಡಿದೆ. ಇದು ಕಾಂಗ್ರೆಸ್‌ ಸರ್ಕಾರದ ಶ್ರಮದ ಫಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೊಗಳಿದ್ದಾರೆ. ಆದರೆ ಇದು ಮೋದಿ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಶ್ರಮದ ಫಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ನೀಡಿದ್ದಾರೆ.

 

Read Full Story

07:52 AM (IST) Dec 26

ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ

ತೈವಾನ್‌ನಂತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವಾಗಿಸಿಕೊಳ್ಳುವುದನ್ನು ಪ್ರಮುಖ ಆಸಕ್ತಿಗಳಲ್ಲೊಂದು ಎಂದು ಪರಿಗಣಿಸಿರುವುದಾಗಿ ಅಮೆರಿಕದ ವರದಿ ಹೇಳಿದೆ. ‘ತೈವಾನ್‌, ದಕ್ಷಿಣ ಚೀನಾ ಸಮುದ್ರ, ಸೆಂಕಾಕು ದ್ವೀಪಗಳ ಜತೆ ಅರುಣಾಚಲವನ್ನೂ ಸೇರಿಸಿಕೊಂಡು, 2047ರ ಹೊತ್ತಿಗೆ ಅಖಂಡ ಚೀನಾವನ್ನು ನಿರ್ಮಿಸುವ ಗುರಿ

 

Read Full Story

07:52 AM (IST) Dec 26

370ನೇ ವಿಧಿ ರದ್ದತಿ ಬಿಜೆಪಿಯ ಹೆಮ್ಮೆ : ಪ್ರಧಾನಿ ಮೋದಿ ಹರ್ಷ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಸಾರಿ ಹೇಳುವ ‘ರಾಷ್ಟ್ರೀಯ ಪ್ರೇರಣಾ ಸ್ಥಳ’ವನ್ನು, ಅವರ 101ನೇ ಜನ್ಮದಿನದಂದು ಲಖನೌದಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಮಾರಕವನ್ನು ಉದ್ಘಾಟಿಸಿದರು.

 

Read Full Story

07:51 AM (IST) Dec 26

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಬರ್ಬರ ಹತ್ಯೆ

ದೀಪು ಚಂದ್ರದಾಸ್‌ ಎಂಬ ಹಿಂದು ವ್ಯಕ್ತಿಯನ್ನು ಹತ್ಯೆಗೈದು, ಮರಕ್ಕೆ ಕಟ್ಟಿ ಬೆಂಕಿ ಹಚ್ಚಿದ ಭೀಕರ ಘಟನೆ ಮಾಸುವ ಮುನ್ನವೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನನ್ನು ಗುಂಪೊಂದು ಹತ್ಯೆಗೈದಿದೆ. ಮೃತ ವ್ಯಕ್ತಿಯನ್ನು ಅಮೃತ್‌ ಮಂಡಲ್‌ ಎಂದು ಗುರುತಿಸಲಾಗಿದೆ.

 

Read Full Story

07:51 AM (IST) Dec 26

3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ

3500 ಕಿ.ಮೀ ದೂರದವರೆಗೆ ತಲುಪಬಲ್ಲ ಸಾಮರ್ಥ್ಯದ ಕೆ-4 ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಭಾರತ ಗುರುವಾರ ಯಶಸ್ವಿಯಾಗಿ ಪ್ರಯೋಗಿಸಿದೆ. ಬಂಗಾಳಕೊಲ್ಲಿಯಲ್ಲಿ ಬೀಡುಬಿಟ್ಟಿರುವ 6000 ಟನ್‌ ತೂಕದ ಐಎನ್‌ಎಸ್‌ ಅರಿಘಾತ್‌ ಸಬ್‌ಮರೀನ್‌ನಿಂದ ಇದು ಕ್ಷಿಪಣಿಯ 2ನೇ ಪರೀಕ್ಷೆಯಾಗಿದೆ.

 

Read Full Story

07:51 AM (IST) Dec 26

₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ

ಒಡಿಶಾದಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ತಲೆಗೆ 1.1 ಕೋಟಿ ರು. ಬಹುಮಾನ ಹೊಂದಿದ್ದ ಗಣೇಶ್‌ ಉಯಿಕೆ (69) ಸೇರಿದಂತೆ 6 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಇದು ಇನ್ನು 3 ತಿಂಗಳಲ್ಲಿ ದೇಶವನ್ನು ನಕ್ಸಲ್‌ ಮುಕ್ತ ಮಾಡುವ ಕೇಂದ್ರ ಸರ್ಕಾರ ಪ್ರಯತ್ನಕ್ಕೆ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗಿದೆ.

 

Read Full Story

More Trending News