ಭಾರತದ ಅತೀ ಎತ್ತರದ ಫ್ಯಾಮಿಲಿ ದಾಖಲೆ ಬರೆದ ಕುಲಕರ್ಣಿ ಕುಟುಂಬ, ಸರಾಸರಿ 7ಅಡಿ ಹೈಟ್, ಈ ಕುಟುಂಬದಲ್ಲಿ ಎಲ್ಲರೂ ಸರಾಸರಿ 7 ಅಡಿ ಎತ್ತರ. ಭಾರತದ ಅತೀ ಎತ್ತರದ ಕುಟುಂಬ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಪುಣೆ (ಡಿ.26) ಅತೀ ಕಿರಿದು, ಹೆಚ್ಚು ತೂಕ, ಎತ್ತರ ಸೇರಿದಂತೆ ಹಲವು ನೈಸರ್ಗಿಕ ಕಾರಣಗಳಿಂದ ವ್ಯಕ್ತಿಗಳು ದಾಖಲೆ ಪುಟ ಸೇರುತ್ತಾರೆ. ಈ ಪೈಕಿ ಪುಣೆಯ ಕುಲಕರ್ಣಿ ಕುಟುಂಬ ಭಾರತದ ಅತೀ ಎತ್ತರದ ಕುಟುಂಬ ಅನ್ನೋ ದಾಖಲೆ ಬರೆದಿದ್ದಾರೆ. ಈ ಕುಟುಂಬ ಸದಸ್ಯರ ಸರಾಸರಿ ಎತ್ತರ 6 ರಿಂದ 7 ಅಡಿ ಎತ್ತರ. ಈ ಕುಟುಂಬದಲ್ಲಿ ಹುಟ್ಟುವ ಎಲ್ಲರೂ ಅತೀ ಎತ್ತರದ ವ್ಯಕ್ತಿಗಳಾಗಿದ್ದಾರೆ.ದಶಕಗಳ ಹಿಂದೆ ಈ ಕುಟುಂಬ ಕುಲಕರ್ಣಿ ಕುಟುಂಬ ಲಿಮ್ಕಾ ಬುಕ್ ದಾಖಲೆ ಪುಟ ಸೇರಿಕೊಂಡಿದ್ದರು. ಇವರ ಕುಟುಂಬದ ಒಟ್ಟು ಎತ್ತರ 26 ಅಡಿ.

ಕುಲಕರ್ಣಿ ಕುಟುಂಬದ ಎತ್ತರ ದಾಖಲೆ

ಪುಣೆಯ ಶರದ್ ಕುಲಕರ್ಣಿ ಕುಟುಂಬದ ಎಲ್ಲರೂ ಎತ್ತರದ ವ್ಯಕ್ತಿಗಳು. ಶರದ್ ಕುಲಕರ್ಣಿ ಅತೀ ಎತ್ತರದ ವ್ಯಕ್ತಿಯಾಗಿದ್ದ ಕಾರಣ ಮದುವೆಯಾಗಲು ಎತ್ತರದ ಹುಡುಗಿ ಹುಡುಕಲು ಕಷ್ಟಪಟ್ಟಿದ್ದರು. ಶರದ್ ಕುಲಕರ್ಣಿ ಎತ್ತರ 7 ಅಡಿ 2 ಇಂಚು ಎತ್ತರಗ ವ್ಯಕ್ತಿ. ತೀವ್ರ ಹುಡುಕಾಟದ ಬಳಿಕ 6 ಅಡಿ 3 ಇಂಚು ಎತ್ತರದ ಸಂಜೋತ್ ಕುಲಕರ್ಣಿ ಜೊತೆ ಮದುವೆಯಾಗಿದ್ದರು. ಈ ದಂಪತಿಗಳ ಇಬ್ಬರ ಹೆಣ್ಣುಮಕ್ಕಳ ಎತ್ತರವೂ 6 ಅಡಿಗಿಂತ ಹೆಚ್ಚು. ಮಗಳು ಸಾನ್ಯ ಕುಲಕರ್ಣಿ 6 ಅಡಿ ನಾಲ್ಕು ಇಂಚು, ಮತ್ತೋರ್ವ ಮಗಳು ಮೃಗ ಕುಲಕರ್ಣಿ 6 ಅಡಿ 2 ಎಂಚು ಎತ್ತರ ಹೊಂದಿದ್ದಾರೆ.

ಕುಲಕರ್ಣ ಕುಟಂಬದ ಲಿಮ್ಕಾ ಬುಕ್ ದಾಖಲೆ

  • ಶರದ್ ಕುಲಕರ್ಣಿ: 7.2 ಅಡಿ ಎತ್ತರ
  • ಸಂಜೋತ್ ಕುಲಕರ್ಣಿ : 6.3 ಅಡಿ ಎತ್ತರ
  • ಸಾನ್ಯ ಕುಲಕರ್ಣಿ: 6.4 ಅಡಿ ಎತ್ತರ
  • ಮೃಗ ಕುಲಕರ್ಣಿ: 6.2 ಅಡಿ ಎತ್ತರ
  • 1989ರಲ್ಲಿ ಮದುವೆಯಾದ ಈ ಜೋಡಿ

1989ರಲ್ಲಿ ಶರದ್ ಕುಲಕರ್ಣಿ ಹಾಗೂ ಸಂಜೋತ್ ಕುಲಕರ್ಣಿ ಮದುವೆಯಾಗಿದ್ದು. ಇವರ ಮದುವೆ ಪುಣೆಯಲ್ಲಿ ಭಾರಿ ಸದ್ದು ಮಾಡಿತ್ತು. ಇದೇ ವೇಳೆ ಲಿಮ್ಕಾ ಬುಕ್ ದಾಖಲೆ ಪುಟ ಸೇರಿಕೊಂಡಿತ್ತು. ಹಲವು ವರ್ಷಗಳ ಕಾಲ ವಿಶ್ವದ ಅತೀ ಎತ್ತರದ ದಂಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಕ್ಯಾಲಿಫೋರ್ನಿಯಾದ ವೇಯ್ನ್ ಹಾಗೂ ಲೌರಿ ಹ್ಯಾಲ್ಕಿಸ್ಟ್ ದಂಪತಿ ಈ ದಾಖಲೆ ಮುರಿದಿದ್ದರು.