Published : May 02, 2026, 07:33 AM ISTUpdated : May 02, 2026, 10:31 PM IST

National News Live: ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

ಸಾರಾಂಶ

ನವದೆಹಲಿ (ಮೇ.2): ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕುವುದಾಗಿ ಘೋಷಿಸಿರುವ ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಅಂದಾಜು, ನೆರೆಯ ಬಾಂಗ್ಲಾ ದೇಶದ ತಲೆನೋವಿಗೆ ಕಾರಣವಾಗಿದೆ. ಈ ಬಗ್ಗೆ ಬಾಂಗ್ಲಾದ ಎನ್‌ಸಿಪಿ ಸಂಸದ ಅಖ‌ರ್ ಹೊಸೈನಿ ಆತಂಕ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:31 PM (IST) May 02

ಬೇಸಿಗೆಯಲ್ಲಿ ತಿರುಮಲಕ್ಕೆ ಹೋಗ್ತಿದ್ದೀರಾ? ಶ್ರೀವಾರಿ ದರ್ಶನಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ, ಈ ಬೇಸಿಗೆಯ ಜನದಟ್ಟಣೆಯಲ್ಲೂ ಶ್ರೀವಾರಿ ದರ್ಶನವನ್ನು ಸುಲಭವಾಗಿ ಪಡೆಯಲು ನಿಮಗಾಗಿ ಕೆಲವು ಟಿಪ್ಸ್ ಇಲ್ಲಿವೆ.
Read Full Story

08:51 PM (IST) May 02

ರಾಜಮೌಳಿ 'ವಾರಣಾಸಿ'ಯಲ್ಲಿ ರಾಮಾಯಣದ ಟ್ವಿಸ್ಟ್ - 20 ನಿಮಿಷದ ಆ ಸೀನ್‌ಗೆ ಫ್ಯಾನ್ಸ್ ಫಿದಾ!

ಕಾಮಿಕ್ ಕಾನ್ ಎಕ್ಸ್‌ಪೀರಿಯನ್ಸ್ ಮೆಕ್ಸಿಕೋ 2026 ಕಾರ್ಯಕ್ರಮದಲ್ಲಿ ಎಸ್.ಎಸ್. ಕಾರ್ತಿಕೇಯ ವಾರಣಾಸಿ ಬಗ್ಗೆ ಒಂದು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ 'ರಾಮಾಯಣ'ಕ್ಕೆ ಸಂಬಂಧಿಸಿದ ಸುಮಾರು 20 ನಿಮಿಷದ..

Read Full Story

08:31 PM (IST) May 02

ಇರಾನ್ ಹಡಗುಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ವಿವಾದಾತ್ಮಕ ಹೇಳಿಕೆ ನೀಡಿದ ಟ್ರಂಪ್

ಫ್ಲೋರಿಡಾ ರ‍್ಯಾಲಿಯಲ್ಲಿ, ಡೊನಾಲ್ಡ್ ಟ್ರಂಪ್ ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳುವ ಅಮೆರಿಕದ ಕ್ರಮವನ್ನು 'ಕಡಲ್ಗಳ್ಳರ ಕೆಲಸ'ಕ್ಕೆ ಹೋಲಿಸಿದ್ದಾರೆ. ಹೋರ್ಮುಜ್ ಜಲಸಂಧಿಯಲ್ಲಿನ ಈ ಘಟನೆಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದನ್ನು 'ಸಶಸ್ತ್ರ ದರೋಡೆ' ಎಂದು ಕರೆದಿದೆ.
Read Full Story

07:03 PM (IST) May 02

ನಮ್ಮ ಚಿನ್ನ, ನಮ್ಮ ಮನೆಯಲ್ಲಿ! ಭಾರತದಿಂದ ಅತಿದೊಡ್ಡ ನಿರ್ಧಾರ, ಅಚ್ಚರಿಯಲ್ಲಿ ಜಗತ್ತು

ಜಾಗತಿಕ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ, ಭಾರತ ತನ್ನ ಚಿನ್ನದ ಮೀಸಲನ್ನು ವಿದೇಶಗಳಿಂದ ಸುರಕ್ಷಿತವಾಗಿ ದೇಶಕ್ಕೆ ತರುತ್ತಿದೆ. ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳ ವಿರುದ್ಧ ಇದೊಂದು ಪ್ರಮುಖ ರಕ್ಷಣಾತ್ಮಕ ಕ್ರಮವೆಂದು ಪರಿಗಣಿಸಲಾಗಿದೆ.
Read Full Story

07:01 PM (IST) May 02

ಪಟೌಡಿ ಪ್ಯಾಲೇಸ್‌ನಲ್ಲಿ 'ಹರಿಯಾಣದ ಬಿಸಿಲು' ಎಂಜಾಯ್ ಮಾಡಿದ ನಟಿ ಕರೀನಾ - ಫೋಟೋಸ್ ವೈರಲ್!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದ್ಯ ಹರಿಯಾಣದಲ್ಲಿರುವ ತಮ್ಮ ಪಟೌಡಿ ಪ್ಯಾಲೇಸ್‌ನಲ್ಲಿ ಕುಟುಂಬದ ಜೊತೆ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ತಮ್ಮ ಹಾಲಿಡೇ ದಿನಗಳ ಒಂದೊಂದೇ ಝಲಕ್ ಅನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

Read Full Story

06:42 PM (IST) May 02

ಅಳಿಯನ ಜೊತೆ ಪತ್ನಿ ಎಸ್ಕೇಪ್ - 8 ಮಕ್ಕಳ ತಾಯಿ ಮಾಡಿದ ಕೆಲಸಕ್ಕೆ ಕಣ್ಣೀರಿಡುತ್ತಿರುವ ಪತಿ!

ಕುಟುಂಬದ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಖುಷಿಯಾಗಿದ್ದ ದಿನವೇ ಘೋರ ದುರಂತವೊಂದು ನಡೆದಿದೆ. 8 ಮಕ್ಕಳ ತಾಯಿಯೊಬ್ಬರು ದಿಢೀರ್ ನಾಪತ್ತೆಯಾಗಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಅವರು ಒಬ್ಬರೇ ಹೋಗಿಲ್ಲ, ಬದಲಿಗೆ ತನ್ನ ಅಳಿಯನ ಜೊತೆ ಹೋಗಿರಬಹುದು ಎಂಬ ಅನುಮಾನ ಮೂಡಿದೆ.

Read Full Story

06:19 PM (IST) May 02

Mom Era - ಮಾಲ್ಡೀವ್ಸ್‌ನಲ್ಲಿ ಮಗಳು-ಪತಿ ಜೊತೆ ಕಿಯಾರಾ - 'ತಾಯ್ತನದ ಖುಷಿ'ಯಲ್ಲಿ ಟಾಕ್ಸಿಕ್ ಬ್ಯೂಟಿ!

ಬಾಲಿವುಡ್ ಸ್ಟಾರ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮಗಳು ಸರಾಯಾ ಜೊತೆ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಕಿಯಾರಾ ತಮ್ಮ 'ಮಾಮ್ ಎರಾ'ದ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Read Full Story

06:01 PM (IST) May 02

ಕಾರ್ಮಿಕರ ದಿನದಂದು 'ಬಾಷಾ' ಅವತಾರದಲ್ಲಿ ರಜನಿಕಾಂತ್ - ತಲೈವಾ ದೇವಸ್ಥಾನದಲ್ಲಿ ವಿಶೇಷ ಪೂಜೆ!

ಮಧುರೈನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ರಜನಿಕಾಂತ್ ಅವರೇ ಒಬ್ಬ ಕಾರ್ಮಿಕರಾಗಿ ಜೀವನ ಆರಂಭಿಸಿದ್ದನ್ನು ಸ್ಮರಿಸಿ, ಅವರ 'ಬಾಷಾ' ಸಿನಿಮಾದ ಆಟೋ ಡ್ರೈವರ್ ಪಾತ್ರದ ಥೀಮ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Read Full Story

05:39 PM (IST) May 02

ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್

ಮದುವೆಯೊಂದರಲ್ಲಿ, ಹಾರ ಬದಲಾವಣೆ ಶಾಸ್ತ್ರದ ವೇಳೆ ವಧು ದಿಢೀರ್ ವೇದಿಕೆಯಿಂದ ಜಿಗಿದು ಓಡಿಹೋಗಿದ್ದಾಳೆ. ತನ್ನ ಪ್ರಿಯಕರನನ್ನು ಹುಡುಕಿ ಹೋದ ವಧುವಿನ ಈ ನಡೆಯಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.

Read Full Story

05:25 PM (IST) May 02

ಸೂರ್ಯನ 'ಕರುಪ್ಪು' ಚಿತ್ರದಲ್ಲಿ ವಕೀಲೆಯಾದ ನಟಿ ತ್ರಿಶಾ - ಪಾತ್ರದ ಫಸ್ಟ್ ಲುಕ್ ರಿಲೀಸ್!

ನಟ ಸೂರ್ಯ ನಾಯಕರಾಗಿ ನಟಿಸುತ್ತಿರುವ 'ಕರುಪ್ಪು' ಚಿತ್ರತಂಡವು ನಟಿ ತ್ರಿಶಾ ಕೃಷ್ಣನ್ ಅವರ ಪಾತ್ರದ ಒಂದು ಝಲಕ್ ಹಂಚಿಕೊಂಡಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ತನ್ನ ಎಕ್ಸ್ ಖಾತೆಯಲ್ಲಿ ತ್ರಿಶಾ ಪಾತ್ರದ ವಿಡಿಯೋ ತುಣುಕನ್ನು ಶೇರ್ ಮಾಡಿದೆ.

Read Full Story

05:05 PM (IST) May 02

ಬರ್ತ್‌ಡೇ ದಿನವೇ ಫ್ಯಾನ್ಸ್‌ಗೆ ಗಿಫ್ಟ್ ಕೊಟ್ಟ ನಟ ಅಜಿತ್ - ರೇಸಿಂಗ್ ಡಾಕ್ಯುಮೆಂಟರಿ ಫಸ್ಟ್ ಲುಕ್ ಔಟ್!

ನಟ ಅಜಿತ್ ತಮ್ಮ 55ನೇ ಹುಟ್ಟುಹಬ್ಬದ ದಿನವಾದ ಮೇ 1ರಂದು ಫ್ಯಾನ್ಸ್‌ಗೆ ಒಂದು ಸ್ಪೆಷಲ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಬಹುನಿರೀಕ್ಷಿತ ರೇಸಿಂಗ್ ಡಾಕ್ಯುಮೆಂಟರಿ 'ಗ್ಲಾಡಿಯೇಟರ್ಸ್'ನ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ.

Read Full Story

04:38 PM (IST) May 02

Fact Check - ದುರಂತದಲ್ಲೂ ನಕಲಿ ಫೋಟೋ ಹಾವಳಿ- ವೈರಲ್​ ಆಗ್ತಿರೋದು ಎಐ ಸೃಷ್ಟಿ; ಅಸಲಿಗೆ ಆಗಿದ್ದೇನು

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಜಬಲ್ಪುರ ದುರಂತದ ತಾಯಿ-ಮಗುವಿನ ಫೋಟೋ ಎಐ ನಿರ್ಮಿತ ಎಂದು ಫ್ಯಾಕ್ಟ್‌ಚೆಕ್‌ನಿಂದ ತಿಳಿದುಬಂದಿದೆ. ಆದರೆ, ಬಾರ್ಗಿ ಅಣೆಕಟ್ಟಿನಲ್ಲಿ ನಡೆದ ನೈಜ ದೋಣಿ ದುರಂತದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ತಾಯಿ-ಮಗು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
Read Full Story

04:22 PM (IST) May 02

ಕಾರ್ಪೋರೇಟ್ ವಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಕ್ರಮ ಸಂಬಂಧ ಬಿಚ್ಚಿಟ್ಟ ಯುವತಿ; Video

ಕಾರ್ಪೋರೇಟ್ ಕಚೇರಿಯಲ್ಲಿ ವಿವಾಹಿತ ಮಹಿಳಾ ಸಹೋದ್ಯೋಗಿಗಳು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಯುವತಿಯೊಬ್ಬಳು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕಾರ್ಪೋರೇಟ್ ವಲಯದಲ್ಲಿನ ಸಂಬಂಧಗಳ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದ್ದು, ನೆಟ್ಟಿಗರು ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Read Full Story

03:39 PM (IST) May 02

ಅಣ್ಣಾ, ಕಾಲು ಮುಗಿತೀನಿ, ಸಿಲಿಂಡರ್ ಬಿಟ್ ಬಿಡಿ - ರಸ್ತೆ ಬದಿ ಮಹಿಳಾ ವ್ಯಾಪಾರಿ ಕಣ್ಣೀರು

ತಮ್ಮ ಸಿಲಿಂಡರ್ ವಶಪಡಿಸಿಕೊಳ್ಳದಂತೆ ಅಧಿಕಾರಿಯ ಕಾಲಿಗೆ ಬಿದ್ದ ಬೀದಿಬದಿ ವ್ಯಾಪಾರಿ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಬೀದಿಬದಿ ವ್ಯಾಪಾರಿಗಳ ಸಂಕಷ್ಟ ಮತ್ತು ಎಲ್‌ಪಿಜಿ ಬೆಲೆ ಏರಿಕೆಯ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

03:36 PM (IST) May 02

ಜಿಯೋಫೋನ್‌ಗೆ ಮಾತ್ರವೇ ಮೀಸಲಾಗಿದ್ದ ಪ್ಲಾನ್‌ಗಳು ರದ್ದು; ಈಗ ಎಲ್ಲವೂ '4G ಫೀಚರ್ ಫೋನ್' ಪ್ಲಾನ್‌ಗಳು!

ಟ್ರಾಯ್ ನಿರ್ದೇಶನದ ಮೇರೆಗೆ, ರಿಲಯನ್ಸ್ ಜಿಯೋ ತನ್ನ ಜಿಯೋಭಾರತ್ ಮತ್ತು ಜಿಯೋಫೋನ್ ಪ್ಲಾನ್‌ಗಳನ್ನು ಪುನರ್ರಚಿಸಿದೆ. ಹಳೆಯ ಪ್ಲಾನ್‌ಗಳನ್ನು ತೆಗೆದುಹಾಕಿ, '4G ಫೀಚರ್ ಫೋನ್ ಪ್ಲಾನ್' ಎಂಬ ಹೊಸ ಹೆಸರಿನಲ್ಲಿ ನೂತನ ಪ್ಲಾನ್‌ಗಳನ್ನು ಪರಿಚಯಿಸಿದ್ದು, ಇದರ ಆರಂಭಿಕ ಬೆಲೆ 123 ರೂ. ಆಗಿದೆ.
Read Full Story

02:00 PM (IST) May 02

ಅಮೆರಿಕದೊಂದಿಗೆ ಮತ್ತೆ ಯುದ್ಧ ಅನಿವಾರ್ಯ - ವಾಷಿಂಗ್ಟನ್ ನಂಬಿಕೆಗೆ ಅರ್ಹವಲ್ಲ ಎಂದು ಗುಡುಗಿದ ಇರಾನ್!

ಅಮೆರಿಕ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲದ ಕಾರಣ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಯುದ್ಧ ಪುನರಾರಂಭವಾಗುವ ಸಾಧ್ಯತೆಯಿದೆ ಎಂದು ಇರಾನ್ ಸಶಸ್ತ್ರ ಪಡೆಗಳು ಎಚ್ಚರಿಸಿವೆ. ಅಮೆರಿಕದ ಯಾವುದೇ ಮೂರ್ಖತನಕ್ಕೆ ತಕ್ಕ ಉತ್ತರ ನೀಡಲು ತಮ್ಮ ಸೇನೆ ಸಜ್ಜಾಗಿದೆ ಎಂದು ಹೇಳಿವೆ.

Read Full Story

01:31 PM (IST) May 02

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನು 'ನಿಲ್ಲದ' ಪಯಣ - ದೇಶದ ಮೊದಲ ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆ ಗುಜರಾತ್‌ನಲ್ಲಿ ಆರಂಭ!

ಭಾರತದ ಪ್ರಥಮ 'ಮಲ್ಟಿ-ಲೇನ್ ಫ್ರೀ ಫ್ಲೋ' ಬ್ಯಾರಿಯರ್ ರಹಿತ ಟೋಲ್ ವ್ಯವಸ್ಥೆಯು ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಆರಂಭವಾಗಿದೆ. ಈ ನೂತನ ವ್ಯವಸ್ಥೆಯು ANPR ಮತ್ತು ಫಾಸ್ಟ್‌ಟ್ಯಾಗ್ ತಂತ್ರಜ್ಞಾನ ಬಳಸಿ, ವಾಹನಗಳು ನಿಲ್ಲದೆಯೇ ಟೋಲ್ ಸಂಗ್ರಹಿಸುತ್ತದೆ.

Read Full Story

12:27 PM (IST) May 02

ಗಂಡಂದಿರ ಎಕ್ಸ್​ಚೇಂಜ್​ಗೆ ಕೋರಿ ಹೈಕೋರ್ಟ್​ಗೆ ಹೋದ ಅಕ್ಕ-ತಂಗಿ! ಆಗಿದ್ದೇನು? ಕೋರ್ಟ್​ ಕೊಟ್ಟ ತೀರ್ಪೇನು

ಮಧ್ಯಪ್ರದೇಶದ ಗ್ವಾಲಿಯರ್ ಹೈಕೋರ್ಟ್‌ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಿಡ್ನಾಪ್ ಪ್ರಕರಣವೆಂದು ಆರಂಭವಾದ ಕೇಸ್, ಇಬ್ಬರು ಸಹೋದರಿಯರು ತಮ್ಮ ಗಂಡಂದಿರನ್ನು ವಿನಿಮಯ ಮಾಡಿಕೊಳ್ಳಲು ಬಯಸುವುದರೊಂದಿಗೆ ಅಂತ್ಯಗೊಂಡಿದೆ. ಕೋರ್ಟ್​ ಕೊಟ್ಟ ತೀರ್ಪೇನು?

Read Full Story

12:20 PM (IST) May 02

Malaika Arora - ವಯಸ್ಸಿನ ಬಗ್ಗೆ ಯಾಕೆ ಅಷ್ಟೊಂದು ತಲೆಕೆಡಿಸಿಕೊಳ್ತೀರಾ? ಗಂಡಸರಿಗೊಂದು ನ್ಯಾಯ, ಹೆಂಗಸರಿಗೊಂದು ನ್ಯಾಯವೇ?

"ಯಾವುದೇ ಮಹಿಳೆ ತನ್ನ ವಯಸ್ಸಿನ ಬಗ್ಗೆ ಕ್ಷಮೆಯಾಚಿಸುವ ಅಥವಾ ಮುಜುಗರ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ತಮ್ಮ ವಯಸ್ಸನ್ನು ಒಂದು ಗೌರವದ ಪದಕದಂತೆ (Badge of Honour) ಧರಿಸಬೇಕು ಮತ್ತು ತಮ್ಮ ಸಾಧನೆಯನ್ನು ಸಂಭ್ರಮಿಸಬೇಕು" ಎಂದಿದ್ದಾರೆ.

Read Full Story

12:17 PM (IST) May 02

West Bengal Elections - ಮೇ 4ಕ್ಕೆ ಮಮತಾ ಸರ್ಕಾರ ಸೋಲೋದು ಪಕ್ಕಾ; ಭವಿಷ್ಯ ನುಡಿದ ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ!

ಪಶ್ಚಿಮ ಬಂಗಾಳದಲ್ಲಿ ಮರುಮತದಾನ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸ್ವಾಗತಿಸಿದ್ದಾರೆ. ಇದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹೀನಾಯ ಸೋಲನ್ನು ಖಚಿತಪಡಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

Read Full Story

12:00 PM (IST) May 02

ಮಹಾಕಾಲನ ಸನ್ನಿಧಿಯಲ್ಲಿ ಪವಾಡ - ಉಜ್ಜಯಿನಿಯಲ್ಲಿ ಉತ್ಖನನ ವೇಳೆ ಪತ್ತೆಯಾದ ಬೃಹತ್ ಪುರಾತನ ಶಿವಲಿಂಗ!

ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಬಳಿ 2028ರ ಸಿಂಹಸ್ಥ ಕುಂಭಮೇಳದ ಸಿದ್ಧತೆಗಾಗಿ ನಡೆಯುತ್ತಿದ್ದ ಉತ್ಖನನ ಕಾರ್ಯದ ವೇಳೆ ಬೃಹತ್, ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಭಸ್ಮ ಆರತಿಯ ಪುಣ್ಯಕಾಲದಲ್ಲಿಯೇ ಈ ಶಿವಲಿಂಗ ದರ್ಶನ ನೀಡಿರುವುದು ಭಕ್ತರಲ್ಲಿ ಹರ್ಷ ಮೂಡಿಸಿದೆ.

Read Full Story

11:26 AM (IST) May 02

ಮಮತಾ ಬ್ಯಾನರ್ಜಿಗೆ ಸುಪ್ರೀಂ ಶಾಕ್ - ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರ ನೇಮಕ ಕಾನೂನುಬದ್ಧ; ಟಿಎಂಸಿ ಅರ್ಜಿ ವಜಾ!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ, ಪಕ್ಷಪಾತದ ಆರೋಪ ಮಾಡಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Read Full Story

11:22 AM (IST) May 02

ಗ್ಯಾರಂಟಿ ಜಾರಿ ಮಾಡಿದ ರಾಜ್ಯಗಳಿಗೆ ಸಂಕಷ್ಟ? ಕೇಂದ್ರ ನೀಡಿದ ಆ ಒಂದು ಎಚ್ಚರಿಕೆ ಏನು?

ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಹೆಚ್ಚುತ್ತಿರುವ ಆದಾಯ ಕೊರತೆ ಮತ್ತು ಸಾಲದ ಹೊರೆಯ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ಆರ್ಥಿಕ ಸ್ಥಿತಿಯು ಭವಿಷ್ಯದಲ್ಲಿ ಗಂಭೀರ ಸಂಕಷ್ಟಕ್ಕೆ ಕಾರಣವಾಗಬಹುದು ಎಂದು ಹಣಕಾಸು ಸಚಿವಾಲಯವು ರಾಜ್ಯಗಳ ವರದಿ ಆಧರಿಸಿ ಎಚ್ಚರಿಸಿದೆ.
Read Full Story

11:02 AM (IST) May 02

ಬಂಗಾಳದಲ್ಲಿ ಇವಿಎಂ ಅಕ್ರಮ ಆರೋಪ - 15 ಬೂತ್‌ಗಳಲ್ಲಿ ಮರುಮತದಾನ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 15 ಮತಗಟ್ಟೆಗಳಲ್ಲಿ ಚುನಾವಣಾ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮರುಮತದಾನಕ್ಕೆ ಆದೇಶಿಸಿದೆ. ಡೈಮಂಡ್ ಹಾರ್ಬರ್ ಮತ್ತು ಮಗ್ರಾಹತ್ ಪಶ್ಚಿಮ ಕ್ಷೇತ್ರಗಳಲ್ಲಿ ನಡೆದ ಈ ಘಟನೆಗೆ, ಇವಿಎಂ ಗುಂಡಿಗೆ ಟೇಪ್ ಹಾಕಿದಂತಹ ಆರೋಪಗಳು ಕಾರಣವಾಗಿವೆ.

Read Full Story

10:06 AM (IST) May 02

'ಹುಚ್ಚರ ಕೈಗೆ ಅಣ್ವಸ್ತ್ರ ಸಿಗಬಾರದು..' ಇರಾನ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿ ಸಮರ ಸಾರಿದ ಡೊನಾಲ್ಡ್ ಟ್ರಂಪ್!

ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಅಮೆರಿಕವು ಆ ದೇಶದೊಂದಿಗೆ ಯುದ್ಧದಲ್ಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇರಾನ್ ಸಲ್ಲಿಸಿದ್ದ ಹೊಸ ಶಾಂತಿ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಅವರು, ಮಿಲಿಟರಿ ದಾಳಿ ಮತ್ತು ಮಾತುಕತೆ ಎರಡೂ ಆಯ್ಕೆಗಳನ್ನು ಮುಕ್ತವಾಗಿಟ್ಟಿದ್ದಾರೆ.
Read Full Story

08:41 AM (IST) May 02

ಮೇ ತಿಂಗಳಲ್ಲಿ ವರುಣನ ಆರ್ಭಟ - ವಾಡಿಕೆಗಿಂತ ಹೆಚ್ಚಿನ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ!

ಭಾರತೀಯ ಹವಾಮಾನ ಇಲಾಖೆಯು (IMD) ಮೇ ತಿಂಗಳಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಅನಿರೀಕ್ಷಿತ ಮಳೆಯು ಬಿಸಿಲಿನಿಂದ રાહತ ನೀಡುವ ನಿರೀಕ್ಷೆಯಿದ್ದರೂ, ಕೆಲವು ಪ್ರದೇಶಗಳಲ್ಲಿ ಪ್ರವಾಹ ಮತ್ತು ಬೆಳೆ ಹಾನಿಯ ಆತಂಕವನ್ನು ಸೃಷ್ಟಿಸಿದೆ.
Read Full Story

08:07 AM (IST) May 02

ವಾಹನ ಸವಾರರಿಗೆ ಹಾಗೂ ಗೃಹಿಣಿಯರಿಗೆ ಬಿಗ್ ಶಾಕ್ - 5-7 ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ?

ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 4-5 ರೂ. ಹಾಗೂ ಸಿಲಿಂಡರ್ ಬೆಲೆ 40-50 ರೂ. ಏರಿಕೆಯಾಗುವ ಸಾಧ್ಯತೆಯಿದೆ.

Read Full Story

07:50 AM (IST) May 02

ಎಣ್ಣೆ ಕುಡಿದು ಸದನಕ್ಕೆ ಬರ್ತಾನೆ ಪಂಜಾಬ್‌ ಸಿಎಂ! ಆಲ್ಕೋಹಾಲ್‌ ಟೆಸ್ಟ್ ಮಾಡಿಸಲು ವಿಧಾನಸಭೇಲಿ ಪ್ರತಿಪಕ್ಷ ಸದಸ್ಯರಿಂದ ಬಿಗಿಪಟ್ಟು!

ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮದ್ಯಪಾನ ಮಾಡಿ ಬಂದಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ. ಸಿಎಂಗೆ ಮದ್ಯಪಾನ ಪತ್ತೆ ಪರೀಕ್ಷೆ ನಡೆಸಬೇಕೆಂದು ಕಾಂಗ್ರೆಸ್ ಮತ್ತು ಅಕಾಲಿದಳ ಆಗ್ರಹಿಸಿದವು, ಆದರೆ ಸ್ಪೀಕರ್ ಬೇಡಿಕೆ ತಿರಸ್ಕರಿಸಿದ್ದರಿಂದ ವಿಪಕ್ಷಗಳು ಸಭಾತ್ಯಾಗ

 

Read Full Story

07:33 AM (IST) May 02

ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ ₹990, ಶೀಘ್ರ ಹೋಟೆಲ್‌ ತಿನಿಸುಗಳ ದರ ಇನ್ನಷ್ಟು ಹೆಚ್ಚಳ

ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ ₹990 ರಷ್ಟು ಹೆಚ್ಚಳವಾಗಿದ್ದು, ಇದು ಹೋಟೆಲ್‌ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ಬೆಲೆ ಏರಿಕೆಯ ಹೊರೆಯನ್ನು ಸರಿದೂಗಿಸಲು, ಹೋಟೆಲ್‌ಗಳು ಅನಿವಾರ್ಯವಾಗಿ ಕಾಫಿ, ಟೀ, ತಿಂಡಿ ಮತ್ತು ಊಟದ ದರವನ್ನು ಹೆಚ್ಚಿಸಲು ಮುಂದಾಗಿವೆ.

 

Read Full Story

07:33 AM (IST) May 02

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ, ಸಮೀಕ್ಷೆಗಳಿಂದ ಬಾಂಗ್ಲಾದೇಶಕ್ಕೆ ನಡುಕ, ಮಮತಾ ಮತಬ್ಯಾಂಕ್ ಯಾರು ಅನ್ನೋದು ಬಾಯಿಬಿಟ್ಟ ಬಾಂಗ್ಲಾದೇಶಿ ಸಂಸದ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದೆಂಬ ಚುನಾವಣೋತ್ತರ ಸಮೀಕ್ಷೆಗಳು ಬಾಂಗ್ಲಾದೇಶದ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಅಕ್ರಮ ವಲಸಿಗರನ್ನು ಹೊರಹಾಕಿದರೆ, ಬಾಂಗ್ಲಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಅಲ್ಲಿನ ಸಂಸದ ಅಖ್ತರ್‌ ಹೊಸೈನಿ ಕಳವಳ ವ್ಯಕ್ತಪಡಿಸಿದ್ದಾರೆ.

 

Read Full Story

More Trending News