ನವದೆಹಲಿ:ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕವಾದ ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಗೋಮೂತ್ರ ತಜ್ಞ’ ಎಂದು ಟೀಕಿಸಿದ್ದನ್ನು ಖಂಡಿಸಿ, 215 ಶಿಕ್ಷಣ ತಜ್ಞರು ಪ್ರಿಯಾಂಕಾ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪಕುಲಪತಿಗಳು ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಅನೇಕರು ಇದರಲ್ಲಿದ್ದಾರೆ.
‘ಕಾಮಕೋಟಿ ಅವರನ್ನು ನೀವು ಟೀಕಿಸಿದ್ದು ನಮಗೆ ನಿರಾಶೆ ತಂದಿದೆ. ಆ ನಿರಾಶೆಯನ್ನು ವ್ಯಕ್ತಪಡಿಸಲು ನಾವು ಈ ಪತ್ರ ಬರೆಯುತ್ತಿದ್ದೇವೆ. ಪ್ರೊ। ಕಾಮಕೋಟಿ ಭಾರತದ ಅಗ್ರಗಣ್ಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಒಂದರ ಮುಖ್ಯಸ್ಥರಾಗಿದ್ದಾರೆ. ಪ್ರತಿ ಶಿಕ್ಷಣ ತಜ್ಞರಂತೆ, ಅವರು ಸಹ ಊಹೆಗಳನ್ನು ಮಂಡಿಸಲು, ಸಾಂಪ್ರದಾಯಿಕ ಜ್ಞಾನವನ್ನು ಚರ್ಚಿಸಲು ಮತ್ತು ವೈಜ್ಞಾನಿಕ ಸಂವಾದಗಳಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಒಬ್ಬ ವಿದ್ವಾಂಸನನ್ನು ಅವರ ಅಭಿಪ್ರಾಯಗಳ ಸಾರವನ್ನು ತಿಳಿದು ಅಳೆಯುವ ಬದಲು, ಅವರಿಗೆ ಒಂದು ಹಣೆಪಟ್ಟಿ ಕಟ್ಟುವುದು ಸಲ್ಲದು ಎಂದಿದ್ದಾರೆ.
ಈ ಹಿಂದೆ ಕಾಮಕೋಟಿ ಗೋಮೂತ್ರದ ಮಹತ್ವದ ಬಗ್ಗೆ ಹೇಳಿದ್ದರು. ಪ್ರಿಯಾಂಕಾ ಇದನ್ನೇ ಮುಂದಿಟ್ಟುಕೊಂಡು ಕಾಮಕೋಟಿ ಗೋಮೂತ್ರ ತಜ್ಞ ಎಂದು ಟೀಕಿಸಿದ್ದರು.
11:53 PM (IST) Jul 31
ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಹಾಗೂ ತಾಯಿಯ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಯುವತಿಯ ವಿರುದ್ಧ ಪ್ರಧಾನಿ ಮೋದಿ ಉದಾರತೆ ತೋರಿದ್ದಾರೆ. ಶಿಕ್ಷೆಯ ಬದಲು ದಾರಿ ತಪ್ಪಿದ ಯುವಕರಿಗೆ ಸನ್ಮಾರ್ಗ ತೋರಬೇಕು ಎಂದು ಹೇಳಿದ್ದಾರೆ.
11:33 PM (IST) Jul 31
ಬಾಲಿವುಡ್ ನಟಿ ಕೃತಿ ಸನೋನ್, ಟಾಲಿವುಡ್‌ನ ಸ್ಟಾರ್ ನಟರೊಬ್ಬರ ಜೊತೆ ನಟಿಸುವುದು ತಮ್ಮ ಕನಸು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ಆ ಕುತೂಹಲಕಾರಿ ವಿವರಗಳು ಇಲ್ಲಿವೆ.
10:53 PM (IST) Jul 31
ಚೆಂಗನ್ನೂರಿನ ರಸ್ತೆಯೊಂದರಲ್ಲಿ ಸುಮಾರು 2000 ಬಳಸಿದ ಕಾಂಡೋಮ್‌ಗಳು ಪತ್ತೆಯಾಗಿವೆ. ಈ ಘಟನೆಯ ಫೋಟೋಗಳು ವೈರಲ್ ಆಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
10:47 PM (IST) Jul 31
ನಟ ರಾಮ್ ಚರಣ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯಿಂದ ಅಭಿಮಾನಿಗಳು ತೀವ್ರ ಆತಂಕಗೊಂಡಿದ್ದಾರೆ. ಮೆಗಾ ಪವರ್ ಸ್ಟಾರ್‌ಗೆ ಯಾಕೆ ಹೀಗೆಲ್ಲಾ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ರಾಮ್ ಚರಣ್‌ಗೆ ನಿಜಕ್ಕೂ ಕೆಟ್ಟ ಸಮಯ ನಡೆಯುತ್ತಿದೆಯೇ?
10:02 PM (IST) Jul 31
ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಅಗತ್ಯವಿರುವ ನಾಲ್ಕು ಉಪಗ್ರಹಗಳ ಬದಲು ಕೇವಲ ಮೂರು ಮಾತ್ರವೇ ನ್ಯಾವಿಗೇಷನ್ ಸೇವೆ ನೀಡುತ್ತಿದೆ.
09:32 PM (IST) Jul 31
ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ಗಳನ್ನು ನೋಡಿದಾಗ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಅತ್ಯಂತ ಗ್ಲಾಮರಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯ ನಂತರ ಇಷ್ಟೊಂದು ಬೋಲ್ಡ್ ಪಾತ್ರಕ್ಕೆ ಸೈ ಎಂದಿದ್ದು ಯಾಕೆ? ಗುಟ್ಟು ರಟ್ಟಾಗಿದೆ ನೋಡಿ..
09:21 PM (IST) Jul 31
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಎಲ್‌ಐಸಿಯು ಹಲವು ಯೋಜನೆಗಳನ್ನು ಹೊಂದಿದೆ. ಈ ಲೇಖನದಲ್ಲಿ, ಮಧ್ಯಮ ವರ್ಗದವರಿಗೆ ಸೂಕ್ತವಾದ ಎಲ್‌ಐಸಿ ಅಮೃತಬಾಲ್, ಚಿಲ್ಡ್ರನ್ಸ್ ಮನಿ ಬ್ಯಾಕ್ ಮತ್ತು ಜೀವನ್ ತರುಣ್ ಎಂಬ ಮೂರು ಅತ್ಯುತ್ತಮ ಯೋಜನೆಗಳ ವಿವರ ನೀಡಲಾಗಿದೆ.
08:57 PM (IST) Jul 31
08:37 PM (IST) Jul 31
ಅಯ್ಯಯ್ಯೋ.. ರಶ್ಮಿಕಾ ಅವರಿಗೆ ಗಾಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಗೆಟ್ ವೆಲ್ ಸೂನ್ ರಶ್ಮಿ" (Get Well Soon Rashmika) ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. "ನಮ್ಮ ಶ್ರೀವಲ್ಲಿ ಬೇಗ ಗುಣಮುಖರಾಗಿ ಬರಲಿ' ಎಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
08:35 PM (IST) Jul 31
ಕೇಂದ್ರದ ನರೇಂದ್ರ ಮೋದಿ ಸರ್ಕಾರವು 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ' (PM-KISAN) ಯೋಜನೆಯನ್ನು 2030-31ರವರೆಗೆ ವಿಸ್ತರಿಸಿ, ಅದಕ್ಕಾಗಿ 3.15 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟಿದೆ.
07:07 PM (IST) Jul 31
07:04 PM (IST) Jul 31
06:49 PM (IST) Jul 31
ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮತ್ತು ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಗೆ ಸುಪ್ರೀಂ ಕೋರ್ಟ್ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. 17 ವರ್ಷಗಳಿಂದ ಪ್ರತ್ಯೇಕವಾಗಿಯೇ ಈ ಜೋಡಿ ವಾಸ ಮಾಡುತ್ತಿತ್ತು.
06:47 PM (IST) Jul 31
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇಂದು (ಜುಲೈ 31) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಮತ್ತೊಮ್ಮೆ ಸುದ್ದಿಯಲ್ಲಿದೆ.
06:32 PM (IST) Jul 31
06:30 PM (IST) Jul 31
ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಗ್ಗೆ ದಿನಕ್ಕೊಂದು ಹೊಸ ಅಪ್‌ಡೇಟ್ ಹೊರಬರುತ್ತಿದ್ದು, ಇದೀಗ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.
06:05 PM (IST) Jul 31
ಬಜಾಜ್ ಆಟೋ ಸಂಸ್ಥೆಯು ಆಗಸ್ಟ್ 12 ರಂದು ತನ್ನ ಜನಪ್ರಿಯ ಪಲ್ಸರ್ ಸರಣಿಯ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಪಲ್ಸರ್ N160, ಹೊಸ ಪೀಳಿಗೆಯ ಪಲ್ಸರ್ 125 ಅಥವಾ 150 ಆಗಿರಬಹುದೆಂದು ನಿರೀಕ್ಷಿಸಲಾಗಿದೆ.
06:05 PM (IST) Jul 31
05:01 PM (IST) Jul 31
ತೆಲುಗು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನಿಯಾ ಅಕುಲ್ ಅವರ 3 ತಿಂಗಳ ಮಗಳು ಶಿಖಾ ವೀರಗೋಣಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ. ತನ್ನ ತಂದೆಯ ಅಂಗೈ ಮೇಲೆ 2 ನಿಮಿಷ 43 ಸೆಕೆಂಡುಗಳ ಕಾಲ ಸಮತೋಲನ ಸಾಧಿಸುವ ಮೂಲಕ ಈ ಪುಟಾಣಿ ವಿಶ್ವದಾಖಲೆಗೆ ಪಾತ್ರಳಾಗಿದ್ದಾಳೆ.
04:36 PM (IST) Jul 31
04:18 PM (IST) Jul 31
04:11 PM (IST) Jul 31
03:59 PM (IST) Jul 31
03:54 PM (IST) Jul 31
03:45 PM (IST) Jul 31
03:02 PM (IST) Jul 31
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು, ನಂತರ ಅಲ್ಲೇ ಉದ್ಯೋಗ ಮಾಡಬೇಕೆನ್ನುವುದು ಕನಸು ಹೊತ್ತು ಹಲವು ವಿದೇಶಿ ವಿದ್ಯಾರ್ಥಿಗಳಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಶಾಕ್ ನೀಡುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಇಂತಹ ವಿದ್ಯಾರ್ಥಿಗಳಿಂದ 95 ಲಕ್ಷ ರೂ.ಶುಲ್ಕ ವಸೂಲಿ ಮಾಡುವ ಪ್ರಸ್ತಾಪವೊಂದು ಚರ್ಚೆಯಲ್ಲಿದೆ.
02:54 PM (IST) Jul 31
ಧುರಂಧರ್ ಸಿನಿಮಾದಲ್ಲಿ ಉಝೈರ್ ಬಲೂಚ್ ಪಾತ್ರದ ಬಗ್ಗೆ ಬಹುತೇಕರು ನೋಡಿದ್ದೀರಿ. ಇದೀಗ ರಿಯಲ್ ಉಝೈರ್ ಬಲೂಚ್ ಸಹೋದರನ ಮೇಲೆ ಅಪರಿಚಿತನ ಗುಂಡಿನ ದಾಳಿಯಾಗಿದೆ. ಸದ್ಯ ಜುಬೈರ್ ಬಲೂಚ್ ಆರೋಗ್ಯ ಗಂಭೀರವಾಗಿದೆ.
02:51 PM (IST) Jul 31
02:33 PM (IST) Jul 31
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಲ್ಲಿ 10 ನಾವಿಕರು ಸೇರಿದಂತೆ ಒಟ್ಟು 16 ಭಾರತೀಯ ನಾಗರಿಕರು ಮೃತಪಟ್ಟಿದ್ದು, 75 ಮಂದಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಅಧಿಕೃತ ಮಾಹಿತಿಯಲ್ಲೇನಿದೆ? ತಿಳಿಯಿರಿ.
02:30 PM (IST) Jul 31
ಆಗಸ್ಟ್ 21, 2026 ರಂದು ಈ ಪ್ರಕರಣ ಮತ್ತೆ ನ್ಯಾಯಾಲಯದ ಮುಂದೆ ಬರಲಿದೆ. ಅಲ್ಲಿಯವರೆಗೆ ಯಂಗ್ ಫಿಲ್ಲಿ ಮೇಲೆ ತೂಗುಗತ್ತಿ ಇದ್ದೇ ಇರುತ್ತದೆ. ತನ್ನ ಅಭಿಮಾನಿಗಳ ನಡುವೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಈ ರ್‍ಯಾಪರ್ ಕಥೆ ಮುಂದೇನು? ಈ ಸ್ಟೋರಿ ನೋಡಿ..
01:48 PM (IST) Jul 31
01:35 PM (IST) Jul 31
ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸಿದ ಪ್ರತಭಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದ ಅಸಲಿಯತ್ತು ಬಯಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಪುತ್ರಿ ಹಾಗೂ ಹಲವು ಪೊಲೀಸ್ ಕುಟುಂಬಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.
01:28 PM (IST) Jul 31
01:08 PM (IST) Jul 31
01:06 PM (IST) Jul 31
12:34 PM (IST) Jul 31
11:51 AM (IST) Jul 31
11:20 AM (IST) Jul 31
ಪ್ರಖರ ಮಾತುಗಳಿಂದಲೇ ಎದುರಾಳಿಗಳನ್ನು ಮಣಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಬಿಜೆಪಿಯಿಂದ ಹೊರಬಂದಿದ್ದಾರೆ. ಸೋಶಿಯಲ್ ಮೀಡಿಯಾ, ಸುದ್ದಿಗೋಷ್ಠಿ, ಸುದ್ದಿ ವಾಹನಿಗಳ ಚರ್ಚೆಯಲ್ಲಿ ಪೂನಾವಾಲ ಹಲವರ ಬೆವರಿಳಿಸಿದ್ದಾರೆ. ದಿಢೀರ್ ರಾಜೀನಾಮೆ ಇದೀಗ ಕೋಲಾಹಲ ಸೃಷ್ಟಿಸಿದೆ.
10:59 AM (IST) Jul 31
ಆಷಾಢ ಮಾಸವನ್ನು 'ಶೂನ್ಯ ಮಾಸ' ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶ, ಮುಂಜಿ ಮುಂತಾದ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾದರೆ ಈ ಆಷಾಢ ಅಥವಾ ಶೂನ್ಯ ಮಾಸದಲ್ಲಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದೇ? ಇದರಿಂದ ಲಾಭವಾಗುತ್ತದೆಯೇ ಅಥವಾ ನಷ್ಟವೇ ಎಂಬ ಗೊಂದಲ ಹಲವರಲ್ಲಿದೆ. ಇದರ ಧಾರ್ಮಿಕ ಮತ್ತು ಆರ್ಥಿಕ ಹಿನ್ನೆಲೆ ಹಾಗೂ ಇಂದಿನ ಚಿನ್ನದ ದರದ ವಿವರ ಇಲ್ಲಿದೆ.
10:42 AM (IST) Jul 31
ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಕ್ವಾಂಟಮ್ ಎನರ್ಜಿ ಕಂಪನಿಯು ತನ್ನ ಹೊಸ 'ಪ್ಲಾಸ್ಮಾ' ಇ-ಸ್ಕೂಟರ್ ಅನ್ನು ಪರಿಚಯಿಸಿದೆ. ₹1.25 ಲಕ್ಷ ಎಕ್ಸ್-ಶೋರೂಂ ಬೆಲೆಯ ಈ ಸ್ಕೂಟರ್, ಒಂದೇ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಯಾಕೆ ಈ ಬೈಕ್ ಖರೀದಿಸಬೇಕು ಎಂದರೆ..