ಚೆನ್ನೈ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡಿನ ಬಲವಾದ ವಿರೋಧದ ನಡುವೆಯೇ, ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿ ರಕ್ಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಮೂಲಕ ಸೌಹಾರ್ದಯುತವಾಗಿ ಯೋಜನೆ ಜಾರಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಚೆನ್ನೈನ ಕೋವಲಂನಲ್ಲಿ ಶಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಮೇಕೆದಾಟು ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನಲ್ಲಿ, ಒಂದು ವೇಳೆ ಕೇವಲ ಒಂದು ಹನಿ ನೀರು ಉಳಿದಿದ್ದರೂ ಸಹ ಕುಡಿಯುವ ನೀರಿಗಾಗಿ ಮೀಸಲಿಡುವ 5 ಟಿಎಂಸಿ ನೀರನ್ನು ಹೊರತುಪಡಿಸಿ, ಉಳಿದೆಲ್ಲಾ ನೀರನ್ನು ತಮಿಳುನಾಡಿಗೇ ಬಿಡಲಾಗುವುದು ಎಂದು ಶಾ ಅವರ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದೇನೆ. ಆದ್ದರಿಂದ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ನಿಶ್ಚಿಂತೆಯಿಂದಿರಬಹುದು. ಈ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಮಗಾಗಲ್ಲ, ಬದಲಿಗೆ ನಿಮಗಾಗಿಯೇ’ ಎಂದರು.
ರೈತರಿಗೆ ಸಹಾಯ: ನಾನು, ‘ನಾನು ನಿಮಗೆ ಭರವಸೆ ನೀಡುತ್ತೇನೆ. ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಸಹಾಯ ಮಾಡಲಿದೆ. ನಮಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.
09:47 PM (IST) Aug 21
09:05 PM (IST) Aug 21
ಕೆಲವೊಮ್ಮೆ ಸಣ್ಣಪುಟ್ಟ ಸಮಸ್ಯೆಗಳೂ ಮನಸ್ಸನ್ನು ಭಾರಾಗಿಸುತ್ತವೆ. ಅಂತಹ ಸಮಯದಲ್ಲಿ ಒಂಟಿತನ, ಭರವಸೆ, ಪರಿಶ್ರಮ, ಪ್ರೀತಿ ಮತ್ತು ಸ್ನೇಹದಂತಹ ಬೇರೆ ಬೇರೆ ಭಾವನೆಗಳ ಬಗ್ಗೆ ಹೇಳುವ ಈ 5 ಸುಂದರ ಸಿನಿಮಾಗಳನ್ನು ನೋಡಿ, ಮನಸ್ಸು ಹಗುರವಾಗುತ್ತೆ!
08:19 PM (IST) Aug 21
ನಟಿ ಸ್ನೇಹ ಅವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
08:07 PM (IST) Aug 21
07:50 PM (IST) Aug 21
07:43 PM (IST) Aug 21
'ಹೈವಾನ್' ಚಿತ್ರದ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಜೊತೆ ನಟರಾದ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ವೇದಿಕೆಯಲ್ಲಿದ್ದರು. ಈ ವೇಳೆ ಆ ಬಾಲಿವುಡ್ ನಟರಿಬ್ಬರೂ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ.
07:43 PM (IST) Aug 21
ಟಾಟಾ ಮೋಟಾರ್ಸ್ ತನ್ನೆಲ್ಲಾ ಕಾರು ಮತ್ತು ಎಸ್‌ಯುವಿಗಳ ದರವನ್ನು ಸೆಪ್ಟೆಂಬರ್ 1 ರಿಂದ ಹೆಚ್ಚಿಸಲು ನಿರ್ಧರಿಸಿದ್ದು, ಉತ್ಪಾದನಾ ವೆಚ್ಚ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಇವಿ ಸೇರಿದಂತೆ ಎಲ್ಲಾ ಮಾದರಿಗಳ ಮೇಲೆ ಗರಿಷ್ಠ ₹25,000 ವರೆಗೆ ದರ ಏರಿಕೆಯಾಗಲಿದೆ.
07:20 PM (IST) Aug 21
ಜಪಾನ್ ವಿದ್ಯಾರ್ಥಿಗಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ಭಾರಿ ಕುತೂಹಲ ಕೆರಳಿಸಿದೆ. ವಿದ್ಯಾರ್ಥಿಗಳು ಜೆನ್‌ಝಿ ಸ್ಟೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಯೋಗಿ, ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದು ಸೆಲ್ಫಿ ನೀಡಿದ್ದಾರೆ. ಇಷ್ಟೇ ಅಲ್ಲ ಒಹಾಯೊ ಗೊಜೈಮಾಸು ಎಂದು ಅಚ್ಚರಿ ಮೂಡಿಸಿದ್ದಾರೆ.
06:54 PM (IST) Aug 21
06:34 PM (IST) Aug 21
06:04 PM (IST) Aug 21
ಇನ್ಸಿಡಿಯಸ್ ತನ್ನ 6ನೇ ಭಾಗವಾದ 'ಇನ್ಸಿಡಿಯಸ್: ಔಟ್ ಆಫ್ ದಿ ಫರ್ದರ್' ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಬೆಚ್ಚಿಬೀಳಿಸಲು ಬಂದಿದೆ. ಈ ಬಾರಿ ಪ್ರಶ್ನೆ ಒಂದೇ, ದೆವ್ವ ನಮ್ಮನ್ನು ಹೆದರಿಸುತ್ತಿದೆಯಾ? ಅಥವಾ ನಾವೇ ದೆವ್ವದ ಲೋಕದಲ್ಲಿ ಸಿಕ್ಕಿಹಾಕಿಕೊಂಡಿದ್ದೀವಾ?
05:57 PM (IST) Aug 21
ಯಾವ ಸಿನಿಮಾ ನಿರ್ಮಾಪಕರು ಸಿನಿಮಾ ಕಾರ್ಮಿಕರ ಕಲ್ಯಾಣ ನಿಧಿಗೆ ₹1 ಕೋಟಿ ದೇಣಿಗೆ ನೀಡುತ್ತಾರೋ, ಅಂತಹ ಚಿತ್ರಗಳ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಲ್ಟಿಪ್ಲೆಕ್ಸ್‌ಗಳು ಪ್ರತಿ ಶೋನಲ್ಲೂ 25% ಸೀಟುಗಳನ್ನು ಕಡಿಮೆ ದರದಲ್ಲಿ ಮೀಸಲಿಡಬೇಕು ಎಂದು ಈ ರಾಜ್ಯದ ಸರ್ಕಾರ ಹೇಳಿದೆ. ಕರ್ನಾಟಕದಲ್ಲಿ ಹೇಗಿದೆ?
04:57 PM (IST) Aug 21
04:54 PM (IST) Aug 21
South Cinema: 2023ರಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವು ಇದೀಗ OTTಯಲ್ಲಿ ಲಭ್ಯವಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸರಣಿ ಕೊ*ಲೆ ಪ್ರಕರಣವನ್ನು ತನಿಖೆ ಮಾಡುವ ರೋಚಕ ಕಥೆಯನ್ನು ಈ ಚಿತ್ರ ಹೊಂದಿದೆ.
04:44 PM (IST) Aug 21
ಇಂದು, ಅಂದರೆ 21 ಆಗಸ್ಟ್ 2026ರ 'ವರಮಹಾಲಕ್ಷ್ಮೀ' ಹಬ್ಬದ ದಿನವೇ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಹಿರಿಯ ನಟಿ ಸಾಹುಕಾರ್ ಜಾನಕಿ ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು.
04:35 PM (IST) Aug 21
ಪ್ರಸಿದ್ಧ ಜಾನಪದ ನಟ ಈಶ್ವರ್ ಸಾಯಿ, ಸಹ-ನಟಿ ಮಾಧುರಿ ರಾಥೋಡ್ ಜೊತೆ ಹೋಟೆಲ್‌ನಲ್ಲಿದ್ದಾಗ ಪತ್ನಿಯ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪತ್ನಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು, ತನ್ನ ಗಂಡನನ್ನು ಮಾಧುರಿಯೇ ದಾರಿ ತಪ್ಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
04:33 PM (IST) Aug 21
ಆ್ಯಕ್ಷನ್ ಸಿನಿಮಾಗಳಿಗಾಗಿ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವ ಪ್ರಭಾಸ್, ‘ಬಾಹುಬಲಿ’, ‘ಸಾಹೋ’ ಹಾಗೂ ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಠಿಣ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
03:45 PM (IST) Aug 21
70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ 'ಪದ್ಮಶ್ರೀ' ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
03:44 PM (IST) Aug 21
03:20 PM (IST) Aug 21
02:58 PM (IST) Aug 21
ಅಡುಗೆ ಮಾಡುವಾಗ ಅಪ್ಪಿತಪ್ಪಿ ಪಲ್ಯ ಅಥವಾ ಸಾರಿಗೆ ಹೆಚ್ಚು ಉಪ್ಪು ಹಾಕಿಬಿಟ್ರಾ? ಅದನ್ನು ತಿನ್ನಲಾಗದೆ ಬಿಸಾಡುತ್ತಿದ್ದೀರಾ? ಇನ್ನು ಮುಂದೆ ಆ ಚಿಂತೆ ಬೇಡ. ಕೆಲವೇ ನಿಮಿಷಗಳಲ್ಲಿ ಉಪ್ಪನ್ನು ಕಡಿಮೆ ಮಾಡಿ, ಮತ್ತೆ ರುಚಿಕರವಾಗಿ ಮಾಡಬಹುದು.
01:55 PM (IST) Aug 21
ದೀಪಿಕಾ ಈ ಪ್ರಾಜೆಕ್ಟ್‌ನಿಂದ ಹೊರಬಂದ ಮೇಲೆ ಆ ಸ್ಥಾನಕ್ಕೆ ಬಂದಿದ್ದು 'ನ್ಯಾಷನಲ್ ಕ್ರಶ್' ತೃಪ್ತಿ ಡಿಮ್ರಿ. ಸದ್ಯಕ್ಕೆ 'ಸ್ಪಿರಿಟ್' ಚಿತ್ರದ ಆಕ್ಷನ್ ಟ್ವಿಸ್ಟ್‌ಗಳ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ದೀಪಿಕಾ ಪಡುಕೋಣೆ ಹಾಗೂ ಸಂದೀಪ್ ವಂಗಾ ಈ ಸಂಘರ್ಷಕ್ಕೆ ನಿಜವಾದ ಕಾರಣ ಈಗ ಬಹಿರಂಗವಾಗಿದೆ! ಈ ಸ್ಟೋರಿ ನೋಡಿ..
01:01 PM (IST) Aug 21
12:44 PM (IST) Aug 21
12:12 PM (IST) Aug 21
ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿರುವ ಬೆಂಗಳೂರಿನ ಬಹಳಷ್ಟು ಥಿಯೇಟರ್‌ಗಳಲ್ಲಿ ಯಶ್ ಅವರ ಭಾರೀ ಎತ್ತರದ ಕಟೌಟ್‌ಗಳು ನಿರ್ಮಾಣ ಆಗಿವೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
11:31 AM (IST) Aug 21
11:30 AM (IST) Aug 21
ವಿಜಯ್ ಮತ್ತು ತ್ರಿಶಾ ಮದುವೆಯಾಗುತ್ತಾರೆ ಎಂಬ ರೂಮರ್‌ಗಳು ಹರಿದಾಡುತ್ತಲೇ ಇವೆ. ವಿಜಯ್ ಅವರ ಡಿವೋರ್ಸ್ ಕೇಸ್ ಮುಕ್ತಾಯಗೊಂಡಿದೆ ಎಂಬ ಸುದ್ದಿಯೂ ಇದೆ. ಆದರೆ, ತ್ರಿಶಾ ಮಾತ್ರ ಯಾವುದಕ್ಕೂ ಬಾಯಿ ಬಿಡುತ್ತಿಲ್ಲ. ತನ್ನ ಮನಸ್ಸಿಗೆ ಬಂದಂತೆ ಬದುಕುವ ಈ ಚೆಲುವೆ ಮುಂದಿನ ದಿನಗಳಲ್ಲಿ ಯಾವ 'ದಿಢೀರ್' ನಿರ್ಧಾರ ಪ್ರಕಟಿಸುತ್ತಾರೋ..! ಈ ಸ್ಟೋರಿ ನೋಡಿ..
11:08 AM (IST) Aug 21
09:19 AM (IST) Aug 21
09:00 AM (IST) Aug 21
08:10 AM (IST) Aug 21
07:49 AM (IST) Aug 21
ಕರ್ನಾಟಕದಲ್ಲಿ ಮೂವರು ಸೇರಿದಂತೆ ಭಾರತದಾದ್ಯಂತ ಭದ್ರತಾ ಸಂಸ್ಥೆಗಳು ಇತ್ತೀಚೆಗೆ ಸೆರೆಹಿಡಿದ 250 ಜನರು ತನ್ನ ಸಂಘಟನೆಗೆ ಸೇರಿದವರಲ್ಲ ಎಂದಿರುವ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶೆಹಜಾದ್ ಭಟ್ಟಿ, ನನ್ನ ತಂಡದ ಇನ್ನೂ 3000 ಜನರು ಭಾರತದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ.
ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿದ್ದಾರೆ
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಭಟ್ಟಿ, ‘ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟವರು ನನ್ನ ಸಂಗಡಿಗರಲ್ಲ. ಬದಲಿಗೆ ಅವರೆಲ್ಲ ಕಾಕ್ರೋಚ್ ಜನತಾ ಪಕ್ಷಕ್ಕೆ (ಸಿಜೆಪಿ) ಸೇರಿದವರಾಗಿದ್ದಾರೆ. ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿ ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೂ ನಮ್ಮನ್ನು ಪತ್ತೆ ಮಾಡುವಲ್ಲಿ ನಿಮ್ಮ ಭದ್ರತಾ ಪಡೆಗಳು ವಿಫಲವಾದವೇ? ಇಷ್ಟು ತಡವಾಗಿ ಕಾರ್ಯಾಚರಣೆ ಆರಂಭಿಸಿದ್ದೇಕೆ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಂತೆಯೇ, ಬಂಧಿತರ ಗುರುತುಗಳನ್ನು ಬಹಿರಂಗಪಡಿಸಿ, ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವಂತೆಯೂ ಚ್ಯಾಲೆಂಜ್ ಮಾಡಿದ್ದಾನೆ.