ಮಾಸ್ಕೋ (ಜು.2): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಭಾರತಕ್ಕೆ ಅತಿದೊಡ್ಡ ತೈಲ ರಫ್ತುದಾರ ದೇಶವಾದ ರಷ್ಯಾ, ಇದೀಗ ಭಾರತದಿಂದಲೇ ತೈಲ ಖರೀದಿಗೆ ಮುಂದಾಗಿದೆ. ರಷ್ಯಾದ ತೈಲ ಸಂಸ್ಕರಣಾ ಘಟಕಗಳ ಮೇಲೆ ಉಕ್ರೇನ್ ದಾಳಿ ಪರಿಣಾಮ ಉತ್ಪಾದನೆ ಶೇ.30 ರಷ್ಟು ಕುಸಿತವಾಗಿದೆ. ಹೀಗಾಗಿ ದೇಶದಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತದಿಂದಲೇ ಸಂಸ್ಕರಿತ ತೈಲ ಖರೀದಿಗೆ ರಷ್ಯಾ ಮುಂದಾಗಿದ್ದು, ಮೊದಲ ಹಂತದಲ್ಲಿ 5 ಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ಭಾರತ, ರಷ್ಯಾಕ್ಕೆ ರವಾನಿಸಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:10 PM (IST) Jul 02
ರೈತರೊಬ್ಬರಿಗೆ ಹಾವು ಕಚ್ಚಿದಾಗ, ಅವರ ಪತ್ನಿ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು ಬಾಯಿಯಿಂದ ವಿಷವನ್ನು ಹೀರಿ ತೆಗೆದಿದ್ದಾರೆ. ಹಾವು ಕಚ್ಚಿದಾಗ ಬಾಯಿಯಿಂದ ವಿಷ ಹೀರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
10:13 PM (IST) Jul 02
ರಿವೋಲ್ಟ್ ಮೋಟಾರ್ಸ್, ಹೊಸ ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ 160 ಕಿ.ಮೀ ಮೈಲೇಜ್, 90 ಕಿ.ಮೀ ಗರಿಷ್ಠ ವೇಗ, ಮತ್ತು 3.24 kWh ಪೋರ್ಟಬಲ್ ಬ್ಯಾಟರಿಯನ್ನು ಹೊಂದಿದೆ.
10:09 PM (IST) Jul 02
ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ನವರಾತ್ರಿ ಹಬ್ಬಕ್ಕೆ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.
09:08 PM (IST) Jul 02
Lilo & Stitch Voice Actress: ಹಾಲಿವುಡ್ ನಟಿ ಡೇವೀ ಚೇಸ್ ಅವರ ಸಾವಿಗೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಕಾರಣ ಎಂದು ಲಾಸ್ ಏಂಜಲೀಸ್ ಕರೋನರ್ ಕಚೇರಿ ಖಚಿತಪಡಿಸಿದೆ.
09:03 PM (IST) Jul 02
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮುಂದುವರಿದರೂ, ಈ ಹಿಂದೆ ದುಬಾರಿ ಬೆಲೆಗೆ ಖರೀದಿಸಿದ ತೈಲದಿಂದಾದ ನಷ್ಟವನ್ನು ತೈಲ ಕಂಪನಿಗಳು ಇನ್ನೂ ಸರಿದೂಗಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
08:58 PM (IST) Jul 02
08:28 PM (IST) Jul 02
08:06 PM (IST) Jul 02
08:05 PM (IST) Jul 02
ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಅಧಿಕ ಫೀಚರ್‌ಗಳನ್ನು ಹೊಂದಿರುವ ನಾಲ್ಕು ಅತ್ಯುತ್ತಮ ಫೋನ್‌ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು ದೈತ್ಯ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಪ್ರೊಸೆಸರ್‌ಗಳನ್ನು ಒಳಗೊಂಡಿವೆ.
07:52 PM (IST) Jul 02
ಇರಾಕ್‌ನ ಬಗ್ದಾದ್‌ನಲ್ಲಿ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ, ಅಧಿಕಾರಿಗಳು 927 ಕೋಟಿ ರೂಪಾಯಿ ನಗದು ಮತ್ತು 27 ಕೆ.ಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದಲ್ಲಿ ಚಿನ್ನದ ಒಳ ಉಡುಪುಗಳು ಸೇರಿವೆ.
07:45 PM (IST) Jul 02
ಕೆಲವೊಮ್ಮೆ ಜೀವನದ ದಿಕ್ಕನ್ನೇ ಬದಲಿಸಲು ಒಂದೇ ಒಂದು ಹೊಗಳಿಕೆ ಸಾಕು. ಬಾಲಿವುಡ್‌ನ ಖ್ಯಾತ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ಅವರ ಕಥೆಯೂ ಇದೇ ರೀತಿ ಇದೆ. ಕೇವಲ 6-7 ರೂಪಾಯಿಗೆ ಮೆಹೆಂದಿ ಹಾಕುತ್ತಿದ್ದ ವೀಣಾ..
06:18 PM (IST) Jul 02
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಕೈಬಿಡಲಿದೆಯೇ? ಕಳಪೆ ಪ್ರದರ್ಶನದ ನಂತರ ತಂಡದ ಅಚ್ಚರಿಯ ಹೇಳಿಕೆ ಮತ್ತು ಇತರ ತಂಡಗಳ ಸ್ಪಷ್ಟನೆ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.
06:09 PM (IST) Jul 02
06:04 PM (IST) Jul 02
ಆಂಧ್ರಪ್ರದೇಶದ ಕೈಕಲೂರಿನಲ್ಲಿ ಅಪರೂಪದ ಹಳದಿ ಕಪ್ಪೆಗಳು ಕಾಣಿಸಿಕೊಂಡಿವೆ. ಇವು ಇಂಡಿಯನ್ ಬುಲ್ ಫ್ರಾಗ್ ಆಗಿದ್ದು, ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಗಳು ಹೆಣ್ಣನ್ನು ಆಕರ್ಷಿಸಲು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಪರಿಸರ ಮಾಲಿನ್ಯದಿಂದಾಗಿ ಈ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
05:29 PM (IST) Jul 02
Obsession ಸಿನಿಮಾದ ಡಿವಿಡಿ, ಬ್ಲೂ-ರೇ ಮತ್ತು 4K UHD ಆವೃತ್ತಿಗಳನ್ನು ಜುಲೈ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಅಲ್ಲದೆ, ಪೀಕಾಕ್ ಸ್ಟ್ರೀಮಿಂಗ್ ಸೇವೆಯಲ್ಲೂ ಇದು ಲಭ್ಯವಾಗುವ ನಿರೀಕ್ಷೆಯಿದೆ.
05:20 PM (IST) Jul 02
05:17 PM (IST) Jul 02
'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರು. ಜೊತೆಗೆ, ಮುಖ್ಯ ಭೂಮಿಕೆಯಲ್ಲಿ ನಟರಾದ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಈ ಹೊಸ ಬೆಳವಣಿಗೆ ಆಗಿದ್ದು, ಅದೇನು ಅಂತ ನೋಡಿ..
05:02 PM (IST) Jul 02
Rajamouli France Honour: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ ಫ್ರಾನ್ಸ್‌ನಲ್ಲಿ ಅಪರೂಪದ ಗೌರವ ಸಿಕ್ಕಿದೆ. ಫ್ರಾನ್ಸ್‌ನ ಲಿಯಾನ್ ನಗರದಲ್ಲಿರುವ ಲ್ಯೂಮಿಯೆರ್ ಮ್ಯೂಸಿಯಂಗೆ ರಾಜಮೌಳಿ ಭೇಟಿ ನೀಡಿದ್ದರು.
04:42 PM (IST) Jul 02
ಭಾರೀ ಮಳೆಯಿಂದಾಗಿ, ಫೋನ್‌ನಲ್ಲಿ ಮಾತನಾಡುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಖಾಸಗಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಠಿಣ ಕ್ರಮದ ಭರವಸೆ ನೀಡಿದೆ.
04:38 PM (IST) Jul 02
ಬೆಂಗಳೂರು: ಭಾರತೀಯ ರೈಲ್ವೇ ಪ್ರಯಾಣಿಕರು ನೂರು ದಿನಕ್ಕೂ ಹೆಚ್ಚಿನ ಕಾಲ ಮುಂಗಡವಾಗಿ ಟಿಕೆಟ್ ಬುಕ್ ಮಾಡುವವರು ಓದಲೇಬೇಕಾದ ಸುದ್ದಿಯಿದೆ. ಯಾಕೆಂದರೆ ಈ ವಿಚಾರದಲ್ಲಿ ಭಾರತೀಯ ರೈಲ್ವೇ ಇದೀಗ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
04:36 PM (IST) Jul 02
04:05 PM (IST) Jul 02
ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕೆಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಆಗ್ರಹಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿಯೇ ವೈಭವ್ ಆಡಬೇಕಿತ್ತು, ಒತ್ತಡವಿಲ್ಲದ ಯುವ ಆಟಗಾರನನ್ನು ಬೆಂಚ್ ಮೇಲೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
03:13 PM (IST) Jul 02
ಬೆಂಗಳೂರು: ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
02:16 PM (IST) Jul 02
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪಿಎಫ್ ಕಡಿತದ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ₹15,000ಕ್ಕಿಂತ ಹೆಚ್ಚು ಮೂಲ ವೇತನ ಹೊಂದಿರುವ ನೌಕರರು ₹1,800ಕ್ಕಿಂತ ಹೆಚ್ಚಿನ ಪಿಎಫ್ ದೇಣಿಗೆಯನ್ನು ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಅವರ ಕೈಗೆ ಸಿಗುವ ಸಂಬಳ ಹೆಚ್ಚಾಗಲಿದೆ.
01:22 PM (IST) Jul 02
01:01 PM (IST) Jul 02
11:42 AM (IST) Jul 02
Terror Module ಪಾಕಿಸ್ತಾನ ಮೂಲದ ISI ಹ್ಯಾಂಡ್ಲರ್ ಸೂಚನೆಯಂತೆ ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
11:41 AM (IST) Jul 02
11:33 AM (IST) Jul 02
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' ಅನ್ನು ಸ್ಥಳೀಯ ಉದ್ಯಮಿಯೊಬ್ಬ ನೆಲಸಮಗೊಳಿಸಿದ್ದಾನೆ. ಈ ಕೃತ್ಯವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆಗ್ರಹಿಸಿದೆ. ಸಿಖ್ ಸಮುದಾಯದ ಪ್ರತಿಭಟನೆಯ ನಂತರ, ಪಾಕಿಸ್ತಾನ ಸರ್ಕಾರವು ಗುರುದ್ವಾರವನ್ನು ಪುನರ್ ಸ್ಥಾಪಿಸುವುದಾಗಿ ಭರವಸೆ ನೀಡಿದೆ.
11:32 AM (IST) Jul 02
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ಟಿ20 ಪಂದ್ಯವು ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡನೇ ಮ್ಯಾಚ್ ಆರಂಭದ ಸಮಯ ಬದಲಾಗಿದೆ.
11:24 AM (IST) Jul 02
FSSAI, ರೆಡ್‌ಬುಲ್ ಮತ್ತು ಸ್ಟಿಂಗ್ ಸೇರಿದಂತೆ ಆರು ಪ್ರಮುಖ ಎನರ್ಜಿ ಡ್ರಿಂಕ್ ಬ್ರ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಕಂಪನಿಗಳು 'ಎನರ್ಜಿ ಡ್ರಿಂಕ್' ಎಂದು ಕಾನೂನುಬಾಹಿರವಾಗಿ ಬ್ರ್ಯಾಂಡಿಂಗ್ ಮಾಡಿ ತಪ್ಪು ಮಾಹಿತಿ ನೀಡುತ್ತಿವೆ ಎಂದು ಪ್ರಾಧಿಕಾರ ಆರೋಪಿಸಿದೆ.
10:31 AM (IST) Jul 02
09:32 AM (IST) Jul 02
ಅಯೋಧ್ಯೆ ರಾಮಮಂದಿರದ ಹುಂಡಿಯಿಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ದೇಗುಲದ ನೌಕರರೇ ಕದ್ದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 42 ದಿನಗಳಲ್ಲಿ 70ಕ್ಕೂ ಹೆಚ್ಚು ಬಾರಿ ನಡೆದ ಈ ವ್ಯವಸ್ಥಿತ ಲೂಟಿಯ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ.
09:31 AM (IST) Jul 02
09:31 AM (IST) Jul 02
08:40 AM (IST) Jul 02
ಡುರ್ಹಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರ ಹೊರತಾಗಿಯೂ ಫಿಫ್ಟಿ ಬಾರಿಸಿದ ನಾಯಕ ಶ್ರೇಯಸ್ ಅಯ್ಯರ್ ಅಪರೂಪದಲ್ಲೇ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
08:33 AM (IST) Jul 02
ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಸಪ್ತಪದಿಯಂತಹ ಸಾಂಪ್ರದಾಯಿಕ ವಿಧಿಗಳಿಲ್ಲದೆ ಕೇವಲ ನೋಂದಣಿ ಮಾಡಿಕೊಂಡರೆ ಹಿಂದೂ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
07:54 AM (IST) Jul 02
07:42 AM (IST) Jul 02
Global energy alert ಉಕ್ರೇನ್ ದಾಳಿಯಿಂದಾಗಿ ರಷ್ಯಾದ ತೈಲ ಸಂಸ್ಕರಣಾ ಘಟಕಗಳು ಹಾನಿಗೊಳಗಾಗಿದ್ದು, ದೇಶದಲ್ಲಿ ತೀವ್ರ ಪೆಟ್ರೋಲ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ರಷ್ಯಾ ಇದೀಗ ಭಾರತದಿಂದಲೇ ಸಂಸ್ಕರಿಸಿದ ಪೆಟ್ರೋಲ್ ಖರೀದಿಸುತ್ತಿದೆ.