LIVE NOW
Published : Sep 27, 2026, 08:00 AM ISTUpdated : Sep 27, 2026, 11:43 AM IST

India News Live: Renault Duster Hybrid - ಅಕ್ಟೋಬರ್‌ 17ಕ್ಕೆ ಹೊಸ ಡಸ್ಟರ್‌ ಲಾಂಚ್‌; Grand Vitara, Hyryderಗೆ ನೇರ ಪೈಪೋಟಿ! ಮೈಲೇಜ್‌ ಎಷ್ಟು?

ಸಾರಾಂಶ

ಎಸ್‌ಐಆರ್‌ ಸೇರಿ ಹಲವು ವಿಚಾರಗಳಲ್ಲಿ ಇನ್ನಿಬ್ಬರು ಆಯುಕ್ತರ ಅಭಿಪ್ರಾಯಗಳನ್ನು ಕಡೆಗಣಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದರು ಎಂಬ ಆರೋಪ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ನಡುವೆಯೇ, ‘ಎಲ್ಲಾ ಆದೇಶಗಳನ್ನು ಮೂವರೂ ಚುನಾವಣಾ ಆಯುಕ್ತರ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ’ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮೂವರೂ ಆಯುಕ್ತರನ್ನು ಒಳಗೊಂಡ ಪೂರ್ಣ ಆಯೋಗ ಶನಿವಾರ ಮಹತ್ವದ ಸಭೆ ನಡೆಸಿ, ಆರೋಪಗಳ ಕುರಿತು ಸ್ಪಷ್ಟನೆ ನೀಡಿದೆ. ಇದೇ ವೇಳೆ, ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಬಳಸುವ ‘ಫಾರ್ಮ್‌ 6’ರಲ್ಲಿ ಮಾಡಲಾದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ ಎಂದೂ ಆಯೋಗ ತಿಳಿಸಿದೆ.

‘ದೇಶಾದ್ಯಂತ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಇನ್ನಿಬ್ಬರ ಆಕ್ಷೇಪಗಳನ್ನು ಕಡೆಗಣಿಸಿ ಸಿಇಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ‘ಯಾವುದೇ ಭಿನ್ನಮತವಿಲ್ಲ’ ಎಂಬ ಸ್ಪಷ್ಟನೆ ಬಂದಿದೆ.

11:43 AM (IST) Sep 27

Renault Duster Hybrid - ಅಕ್ಟೋಬರ್‌ 17ಕ್ಕೆ ಹೊಸ ಡಸ್ಟರ್‌ ಲಾಂಚ್‌; Grand Vitara, Hyryderಗೆ ನೇರ ಪೈಪೋಟಿ! ಮೈಲೇಜ್‌ ಎಷ್ಟು?

ರೆನಾಲ್ಟ್ ಕಂಪನಿಯು ಅಕ್ಟೋಬರ್ 17ರಂದು ಹೊಸ ಡಸ್ಟರ್ 'ಸ್ಟ್ರಾಂಗ್ ಹೈಬ್ರಿಡ್' ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಡೀಸೆಲ್ ಎಂಜಿನ್ ಕೈಬಿಟ್ಟು, 1.8 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳ ಸಂಯೋಜನೆಯೊಂದಿಗೆ ಪ್ರತಿ ಲೀಟರ್‌ಗೆ 26 ಕಿ.ಮೀ ಮೈಲೇಜ್ ನೀಡುವ ಗುರಿಯನ್ನು ಹೊಂದಿದೆ. ಈ ಕಾರು ಮಾರುತಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ನಂತಹ ಹೈಬ್ರಿಡ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Read Full Story

11:17 AM (IST) Sep 27

20 ವರ್ಷ ಹಿಂದೆ ವಿದೇಶಿಗನ ಮರಣಪತ್ರದಲ್ಲಿತ್ತು ಜ್ಞಾನೇಶ್‌ ಹೆಸರು! ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಾಜಿ ಸಚಿವನ ಹೇಳಿಕೆ ಸಂಚಲನ

CPIM Leader Thomas Isaac on Gyanesh Kumar ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್‌ ಕುಮಾರ್‌ ಅವರ ಹೆಸರು 20 ವರ್ಷಗಳ ಹಿಂದಿನ ಮಲೇಷ್ಯಾ ವ್ಯಕ್ತಿಯೊಬ್ಬರ ಮರಣಪತ್ರದಲ್ಲಿ ಉಲ್ಲೇಖವಾಗಿತ್ತು ಎಂದು ಕೇರಳದ ಮಾಜಿ ಸಚಿವ ಥಾಮಸ್‌ ಐಸಾಕ್‌ ಆರೋಪಿಸಿದ್ದಾರೆ.

Read Full Story

10:07 AM (IST) Sep 27

ವೆಸ್ಟ್‌ ಇಂಡೀಸ್ ಚಾಲೆಂಜ್‌ಗೆ ಟೀಂ ಇಂಡಿಯಾ! ಇಂದಿನಿಂದ ಹೈವೋಲ್ಟೇಜ್ ಸರಣಿ, ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?

2027ರ ಏಕದಿನ ವಿಶ್ವಕಪ್ ಸಿದ್ಧತೆಯ ಭಾಗವಾಗಿ ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಇಂದು ತಿರುವನಂತಪುರಂನಲ್ಲಿ ನಡೆಯಲಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನಾಯಕ ಶುಭ್‌ಮನ್ ಗಿಲ್ ನೇತೃತ್ವದ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನ ತೀವ್ರ ಕುತೂಹಲ ಮೂಡಿಸಿದೆ.
Read Full Story

09:45 AM (IST) Sep 27

'ಅದು ಮುರಿದುಬಿದ್ದಿರೋ ಮನೆ'.. ಗೋವಿಂದ-ಸುನೀತಾ ಸಂಸಾರದ ಬಗ್ಗೆ ಕೋಮಲ್ ರಾಣಿ ಪೋಸ್ಟ್ ವೈರಲ್

ಆಗಸ್ಟ್‌ನಲ್ಲಿ ಗೋವಿಂದ ಮತ್ತು ಕೋಮಲ್ ರಾಣಿ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸಂದರ್ಭದಿಂದಲೇ ಈ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ಆ ಬಳಿಕ ಗೋವಿಂದ ಹಾಗೂ ಕೋಮಲ್ ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ, ಕೋಮಲ್ ರಾಣಿ ರಿಯಾಕ್ಟ್ ಮಾಡಿದ್ದಾರೆ..

Read Full Story

09:32 AM (IST) Sep 27

ಏಷ್ಯನ್ ಗೇಮ್ಸ್‌ - ಕಬಡ್ಡಿಯಲ್ಲಿ ಭಾರತಕ್ಕೆ ಡಬಲ್ ಚಿನ್ನ..! ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತ ಪುರುಷ, ಮಹಿಳಾ ತಂಡಗಳು

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳು ಇರಾನ್ ವಿರುದ್ಧ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡಿವೆ. ಅಥ್ಲೆಟಿಕ್ಸ್ ಮತ್ತು ಶೂಟಿಂಗ್‌ನಲ್ಲಿಯೂ ಭಾರತ ಪದಕಗಳನ್ನು ಗೆದ್ದಿದ್ದು, ಒಟ್ಟು 30 ಪದಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಈ ಐತಿಹಾಸಿಕ ಸಾಧನೆಯ ಹಿಂದೆ ಕನ್ನಡಿಗ ಕೋಚ್‌ಗಳಾದ ಬಿ.ಸಿ.ರಮೇಶ್ ಮತ್ತು ಮಮತಾ ಪೂಜಾರಿ ಅವರ ಕೊಡುಗೆಯೂ ಇದೆ.
Read Full Story

09:11 AM (IST) Sep 27

'ರಾವಣ' ಪಾತ್ರಕ್ಕೆ ಕನ್ನಡದ ಸ್ಟಾರ್ ಯಶ್ ಆಯ್ಕೆ ಹಿಂದಿನ ಗುಟ್ಟೇನು? 'ರಾಮಾಯಣ'ದ ಈ ಅಸಲೀ ಕಾರಣ ಈಗ ಬಹಿರಂಗ!

ನಮಿತ್ ಮಲ್ಹೋತ್ರಾ ‘ರಾಮಾಯಣ’ ಸಿನಿಮಾದ ಮಹತ್ವದ ಪಾತ್ರವಾಗಿರುವ ರಾವಣನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ಯೂಟ್ಯೂಬರ್ ಹಾಗೂ ಜಾಗತಿಕ ತಾರೆ ಮಿಸ್ಟರ್‌ಬೀಸ್ಟ್ ಅಂದರೆ ಜಿಮ್ಮಿ ಡೊನಾಲ್ಡ್‌ಸನ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಯಶ್ ಕಾರ್ಯಕ್ರಮಕ್ಕೆ ಗೈರಾಗಿದ್ದರೂ ಯಶ್ ಬಗ್ಗೆ ನಮಿತ್ ಹೀಗೆ ಹೇಳಿದ್ದಾರೆ..

Read Full Story

08:33 AM (IST) Sep 27

'ಭಜನೆ ಮಾಡೋಕೆ ಟೈಂ ಇದೆ, ಉತ್ರ ಕೊಡೋಕೆ ಇಲ್ಲ..'ಪ್ರಧಾನಿ ಮೋದಿ ಬಗ್ಗೆ ಪ್ರಿಯಾಂಕ್‌ ಖರ್ಗೆ-ಬಿಜೆಪಿ ಭಾರಿ ಜಟಾಪಟಿ! ಹೇಳಿದ್ದೇನು?

ದೀನ್‌ ದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಪ್ರಧಾನಿ ಮೋದಿ ಭಜನೆ ಮಾಡಿದ್ದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಪ್ರಶ್ನೆಗಳಿಗೆ ಉತ್ತರಿಸದ ಮೋದಿ ಭಜನೆಗೆ ಸಮಯ ನೀಡುತ್ತಾರೆ ಎಂದು ಅವರು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಏನು ಹೇಳಿದೆ?

Read Full Story

More Trending News