ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ 8 ವಿಕೆಟ್ ಗೆಲುವು ದಾಖಲಿಸಿದೆ. ಕೊಹ್ಲಿ ಹಾಗೂ ಗಿಲ್ ಸೆಂಚುರಿ ಅಬ್ಬರಕ್ಕೆ ವಿಂಡೀಸ್ ಮಕಾಡೆ ಮಲಗಿದೆ. ಸತತ ಸಿಕ್ಸರ್ ಮೂಲಕ ಕೊಹ್ಲಿ ಪಂದ್ಯ ಫಿನೀಶ್ ಮಾಡಿದ್ದಾರೆ.

ತಿರುವನಂತಪುರಂ (ಸೆ.27) ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ವೆಸ್ಟ್ ಇಂಡೀಸ್ ನೀಡಿದ 296 ರನ್ ಟಾರ್ಗೆಟ್ ಚೇಸ್ ಮಾಡಿದ ಭಾರತ, 41.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಶುಬಮನ್ ಗಿಲ್ 110 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ ಅಜೇಯ 139 ರನ್ ಸಿಡಿಸಿದ್ದಾರೆ. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಗಿಲ್-ಕೊಹ್ಲಿ ಸೆಂಚುರಿ

296 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿತ್ತು. ರೋಹಿತ್ ಶರ್ಮಾ ಹಾಗೂ ಶುಬಮನ್ ಗಿಲ್ ಉತ್ತಮ ಜೊತೆಯಾಟ ಗೆಲುವಿನತ್ತ ಹೆಜ್ಜೆ ಹಾಕುವಂತೆ ಮಾಡಿತ್ತು. ರೋಹಿತ್ ಶರ್ಮಾ 32 ರನ್ ಸಿಡಿಸಿ ಔಟಾದರು. ಇತ್ತ ಗಿಲ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ವಿಂಡೀಸ್ ತಂಡದ ಸೋಲು ಖಚಿತಪಡಿಸಿತು. ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು. 108 ಎಸೆತದಲ್ಲಿ 110 ರನ್ ಸಿಡಿಸಿ ಔಟಾದರು.

ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಕೇವಲ 74 ಎಸೆತದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಕೊಹ್ಲಿ 88 ಎಸೆತದಲ್ಲಿ ಅಜೇಯ 139 ರನ್ ಸಿಡಿಸಿದರು. ರುತುರಾಜ್ ಗಾಯಕ್ವಾಡ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 41.4 ಓವರ್‌ಗಳಲ್ಲಿ ಗೆಲುವು ಸಾಧಿಸಿತು. 42ನೇ ಓವರ್‌ನ 3 ಮತ್ತು ನಾಲ್ಕನೇ ಎಸೆತವನ್ನು ವಿರಾಟ್ ಕೊಹ್ಲಿ ಸತತ 2 ಸಿಕ್ಸರ್ ಸಿಡಿಸಿ ಪಂದ್ಯವನ್ನು ಸಿಕ್ಸರ್ ಮೂಲಕ ಫಿನೀಶ್ ಮಾಡಿದರು.

ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಕೊಹ್ಲಿ ಏಕದಿನ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಏಕದಿನ ಇನ್ನಿಂಗ್ಸ್ ಗರಿಷ್ಠ ಸಿಕ್ಸರ್

  • 2026ರ ತಿರುವನಂತಪುರಂ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ 9 ಸಿಕ್ಸರ್
  • 2023ರ ತಿರುವನಂತಪುರಂ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 8 ಸಿಕ್ಸರ್
  • 2013ರ ಜೈಪುರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ 7 ಸಿಕ್ಸರ್
  • 2025ರ ರಾಂಚಿ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ದ 7 ಸಿಕ್ಸರ್

ಯಾವ ಬೌಲರ್ ವಿರುದ್ದ ಕೊಹ್ಲಿ ಗರಿಷ್ಠ ರನ್ (ಏಕದಿನ)

  1. ಟ್ರೆಂಟ್ ಬೋಲ್ಟ್ ವಿರುದ್ಧ 54 ರನ್, 2016ರ ಮೊಹಾಲಿ ಪಂದ್ಯ
  2. ಅಲ್ಜಾರಿ ಜೊಸೆಫ್ ವಿರುದ್ಧ 53 ರನ್, 2026ರ ತಿರುವನಂತಪುರಂ ಪಂದ್ಯ
  3. ವಿಶ್ವ ಫೆರ್ನಾಂಡೋ ವಿರುದ್ದ 45 ರನ್, 2017ರ ಕೊಲಂಬೊ ಪಂದ್ಯ
  4. ಲಹಿರು ಕುಮಾರ ವಿರುದ್ದ 45 ರನ್, 2023ರ ತಿರುವಂತನಪುರಂ ಪಂದ್ಯ