Published : Aug 20, 2026, 07:50 AM ISTUpdated : Aug 20, 2026, 10:35 PM IST

India Live News: ದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!

ಸಾರಾಂಶ

ದೇಶದಲ್ಲಿ ಆಡಳಿತ ಪಕ್ಷ ಎನ್‌ಡಿಎ ಮತ್ತು ವಿಪಕ್ಷಗಳಾದ ಇಂಡಿಯಾ ಒಕ್ಕೂಟಗಳು ಜೆನ್‌ಝೀಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜೆನ್‌ಝೀಗಳ ಬಳಿಯೇ ಹೋಗಲು ನಿರ್ಧರಿಸಿದ್ದು, ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳಿಸುವ ಚಿಂತನೆಯನ್ನು ಮಾಡಿದೆ. ಈ ಮೂಲಕ ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ ಅವರ ಬೇಡಿಕೆಗಳನ್ನು ಅರಿಯುವ ಕಾರ್ಯಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ಕೋಚಿಂಗ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಜೊತೆಗೆ, 'ಒಂದು ದಿನ, ಒಂದು ವಿಶ್ವವಿದ್ಯಾಲಯ' ಕಾರ್ಯಕ್ರಮದಡಿ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ, ಯುವಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.

ಮತ್ತೊಂದೆಡೆ ಇಂಡಿಯಾ ಒಕ್ಕೂಟದ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಜೆನ್‌ಝೀ ಯುವ ಸಮುದಾಯವನ್ನು ತಮ್ಮತ್ತ ಸೆಳೆಯಲು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ದೆಹಲಿ, ಜಾರ್ಖಂಡ್‌ ಜೆನ್‌ಝೀ ಹೋರಾಟದ ಎಫೆಕ್ಟ್‌ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಎಲ್ಲ ಕಾಂಗ್ರೆಸ್ ಆಡಳಿತಾರೂಢ ರಾಜ್ಯಗಳ ಮುಖ್ಯಮಮಂತ್ರಿಗಳಿಗೆ ಆದೇಶ ನೀಡಿದ್ದಾರೆ. ಶಿಕ್ಷಣ ತಜ್ಞರ ಜತೆ ಚರ್ಚೆ ನಡೆಸಿ ವರದಿ ಸಲ್ಲಿಸಲು 1 ತಿಂಗಳ ಗಡುವು ನೀಡಿದ್ದಾರೆ.

10:35 PM (IST) Aug 20

ದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!

ದೇಶದ ಸೆಮಿ-ಹೈಸ್ಪೀಡ್ ರೈಲು 'ವಂದೇ ಭಾರತ್ ಎಕ್ಸ್‌ಪ್ರೆಸ್' ಭಾರತೀಯ ರೈಲ್ವೆಗೆ ಬೃಹತ್ ಆದಾಯದ ಮೂಲವಾಗಿದೆ, ದಕ್ಷಿಣ ಭಾರತದಲ್ಲೇ 806 ಕೋಟಿ ರೂ. ಗಳಿಸಿದೆ. ದುಬಾರಿ ಟಿಕೆಟ್ ದರ, ಶೇ.100ರಷ್ಟು ಆಕ್ಯುಪೆನ್ಸಿ ಮತ್ತು ವೇಗದ ಪ್ರಯಾಣದ ಕಾರಣ ಇದು ಯಶಸ್ವಿಯಾಗಿದೆ.

Read Full Story

09:58 PM (IST) Aug 20

ಜಿಯೋ ರಿಚಾರ್ಜ್ ದರ ಹೆಚ್ಚಳ ಬಹುತೇಕ ಖಚಿತ - ಗ್ರಾಹಕರಿಗೆ ಶೀಘ್ರದಲ್ಲೇ ಶಾಕ್ ನೀಡಲು ಮುಹೂರ್ತ ಫಿಕ್ಸ್!

ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ರೀಚಾರ್ಜ್ ದರಗಳನ್ನು ಶೇಕಡಾ 15-20 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ದರ ಏರಿಕೆಯಿಂದ ಗ್ರಾಹಕರನ್ನು ತಾತ್ಕಾಲಿಕವಾಗಿ ರಕ್ಷಿಸಲು, ಕಂಪನಿಯು ₹300 ಮೌಲ್ಯದ 'ಜಿಯೋ ಪ್ರೈಮ್ ಮೆಂಬರ್‌ಶಿಪ್' ಅನ್ನು ಪರಿಚಯಿಸಿದೆ.

Read Full Story

09:45 PM (IST) Aug 20

ಅಲ್ಲು ಅರ್ಜುನ್ ಜೊತೆ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್? ‘ರಾಕ’ ಸಿನಿಮಾದಲ್ಲಿ ಮಹತ್ವದ ಪಾತ್ರದ ಆಫರ್!

ಪುಷ್ಪ 2 ನಂತರ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಕ'. ಅಟ್ಲಿ ನಿರ್ದೇಶನದ ಈ ಚಿತ್ರದ ಬಗ್ಗೆ ಈಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Read Full Story

09:26 PM (IST) Aug 20

ಶ್ರಾವಣ ಮಾಸದಲ್ಲಿ ನಿತಿನ್ ನಬಿನ್ ಮಾಂಸಾಹಾರ ತಿಂದ್ರಾ? 'ಇದು ಸುಳ್ಳು ಸುದ್ದಿ' ಕಾಂಗ್ರೆಸ್ ಪೋಸ್ಟ್‌ಗೆ ಬಿಜೆಪಿ ಕೆಂಡಾಮಂಡಲ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದಾರೆಂದು ಛತ್ತೀಸ್‌ಗಢ ಕಾಂಗ್ರೆಸ್ ಸುಳ್ಳು ಪೋಸ್ಟ್ ಮಾಡಿದೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಇದು ಸೋಲಿನ ಹತಾಶೆಯಿಂದ ಮಾಡುತ್ತಿರುವ ಅಪಪ್ರಚಾರ ಎಂದು ಬಿಜೆಪಿ ಕಿಡಿಕಾರಿದೆ.

Read Full Story

08:24 PM (IST) Aug 20

ಐಟಿ ಉದ್ಯೋಗಿಗಳ ಪ್ರೈವೆಸಿಗೆ ಬಿತ್ತು ಕನ್ನ - ಲ್ಯಾಪ್‌ಟಾಪ್‌ಗಳಲ್ಲಿ ಮಾನಿಟರಿಂಗ್ ಸಾಫ್ಟ್‌ವೇರ್ ಹಾಕಿ ಟ್ರ್ಯಾಕ್‌ ಮಾಡಲು ಆರಂಭಿಸಿದ ಟಿಸಿಎಸ್!

TCS ತನ್ನ ಉದ್ಯೋಗಿಗಳ ಲ್ಯಾಪ್‌ಟಾಪ್‌ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್‌ಪೀರಿಯನ್ಸ್ ಮಾನಿಟರಿಂಗ್' ಟೂಲ್ ಅಳವಡಿಸಿದೆ. ಈ ಕ್ರಮವು ಡೇಟಾ ಭದ್ರತೆಗಾಗಿಯೇ ಅಥವಾ ಉದ್ಯೋಗಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂಬ ಆತಂಕ ಮತ್ತು ಅನುಮಾನಗಳನ್ನು ಸಿಬ್ಬಂದಿ ವಲಯದಲ್ಲಿ ಹುಟ್ಟುಹಾಕಿದೆ.

Read Full Story

07:46 PM (IST) Aug 20

ಮಹಿಳಾ ಏಷ್ಯಾಕಪ್ 2026 - ಭಾರತ ಚಾಂಪಿಯನ್ ಆದರೆ ಪಿಸಿಬಿ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಪಡೆಯುತ್ತಾ ಹರ್ಮನ್‌ಪ್ರೀತ್ ಪಡೆ?

ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್‌ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.

Read Full Story

07:04 PM (IST) Aug 20

ಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ - ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಎಚ್‌ಎಎಲ್ ಮತ್ತು ಸೈಯಂಟ್ ನಡುವಿನ ನಿಷ್ಕ್ರಿಯ ಜಂಟಿ ಉದ್ಯಮ 'ಇನ್ಫೋಟೆಕ್ HAL ಲಿಮಿಟೆಡ್' ಅನ್ನು ವಿಸರ್ಜಿಸಲು ಆದೇಶಿಸಿದೆ. ಈ ಬೆಳವಣಿಗೆಯು ಎಚ್‌ಎಎಲ್‌ನ ಪ್ರಮುಖ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಸಂಸ್ಥೆಯು ಉತ್ತಮ ಆರ್ಥಿಕ ಸಾಧನೆ ಮತ್ತು ಸರ್ಕಾರದ ದೇಶೀಕರಣ ನೀತಿಗಳಿಂದಾಗಿ ಸದೃಢವಾಗಿ ಮುನ್ನಡೆಯುತ್ತಿದೆ.
Read Full Story

06:50 PM (IST) Aug 20

ಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.

Read Full Story

06:50 PM (IST) Aug 20

Watch - ಲಾರ್ಡ್ಸ್ ಬಾಲ್ಕನಿಯಲ್ಲಿ ಮರುಕಳಿಸಿದ 'ದಾದಾ' ಖದರ್ - ಇಂಗ್ಲೆಂಡ್ ನೆಲದಲ್ಲಿ ಕೋಟ್ ಬಿಚ್ಚಿ ಸಂಭ್ರಮಿಸಿದ ಭಾರತೀಯ ದಿವ್ಯಾಂಗ ಕ್ರಿಕೆಟಿಗರು!

ಇಂಗ್ಲೆಂಡ್ ವಿರುದ್ಧದ 7ನೇ ಟಿ20 ಪಂದ್ಯದಲ್ಲಿ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ 118 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವನ್ನು ತಂಡವು ಲಾರ್ಡ್ಸ್ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಶೈಲಿಯಲ್ಲಿ ಕೋಟ್ ಕಳಚಿ ಸಂಭ್ರಮಿಸುವ ಮೂಲಕ ಸ್ಮರಣೀಯವಾಗಿಸಿತು.
Read Full Story

06:38 PM (IST) Aug 20

AIನಿಂದ ಉದ್ಯೋಗ ನಷ್ಟ ಭೀತಿ - ಕಾರ್ಪೊರೇಟ್ ಕಂಪನಿಗಳಿಗೆ ಮಾಜಿ RBI ಗವರ್ನರ್ ರಘುರಾಮ್ ಹೊಸ ತೆರಿಗೆ ಅಸ್ತ್ರ ಪ್ರಸ್ತಾಪ!

ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು, ಕೃತಕ ಬುದ್ಧಿಮತ್ತೆಯಿಂದ (AI) ಉಂಟಾಗುವ ಉದ್ಯೋಗ ನಷ್ಟವನ್ನು ಸರಿದೂಗಿಸಲು ಕಂಪನಿಗಳು ಬಳಸುವ 'AI ಟೋಕನ್‌ಗಳ' ಮೇಲೆ ತೆರಿಗೆ ವಿಧಿಸಬೇಕೆಂದು ಪ್ರತಿಪಾದಿಸಿದ್ದಾರೆ. ಮಾನವ ಮತ್ತು ಯಾಂತ್ರಿಕ ಶ್ರಮದ ನಡುವಿನ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಹಾಗೂ ಉದ್ಯೋಗಿಗಳಿಗೆ ಮರು ತರಬೇತಿ ನೀಡುವ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲು ಅವರು ಸಲಹೆ ನೀಡಿದ್ದಾರೆ.
Read Full Story

06:17 PM (IST) Aug 20

Hyundai Price Hike - ಹ್ಯುಂಡೈ ಕಾರ್ ಬೆಲೆ ಮತ್ತೆ ಏರಿಕೆ! ಯಾವ ಮಾಡೆಲ್‌ಗೆ ಎಷ್ಟು ಬೆಲೆ ಏರಿಕೆ?

ಹ್ಯುಂಡೈ ಮೋಟಾರ್ ಇಂಡಿಯಾ ತನ್ನೆಲ್ಲಾ ಕಾರುಗಳ ಬೆಲೆಯನ್ನು 2026ರ ಸೆಪ್ಟೆಂಬರ್‌ನಿಂದ 1% ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾಗಾಟ ವೆಚ್ಚ ಮತ್ತು ಜಾಗತಿಕ ಅಸ್ಥಿರತೆಗಳು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಇದು 2026ರಲ್ಲಿ ಕಂಪನಿಯು ಮಾಡುತ್ತಿರುವ ಮೂರನೇ ಬೆಲೆ ಏರಿಕೆಯಾಗಿದೆ.
Read Full Story

06:14 PM (IST) Aug 20

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು - ಪಂದ್ಯ ಮುಗಿದ ಬೆನ್ನಲ್ಲೇ ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಲಾಯ್ತು ಚೆಂಡು!

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ, ಇಬ್ಬರು ಇಂಗ್ಲೆಂಡ್ ಬೌಲರ್‌ಗಳಾದ ಓಲ್ಲೀ ರಾಬಿನ್ಸನ್ ಮತ್ತು ಜೋಶ್ ಟಂಗ್ ತಲಾ 5 ವಿಕೆಟ್ ಪಡೆದರು. ಈ ಅಪರೂಪದ ಸಾಧನೆಗಾಗಿ, ಪಂದ್ಯದ ಚೆಂಡನ್ನು ಎರಡು ಭಾಗವಾಗಿ ಕತ್ತರಿಸಿ ಇಬ್ಬರಿಗೂ ನೆನಪಿನ ಕಾಣಿಕೆಯಾಗಿ ಹಂಚಲಾಯಿತು.
Read Full Story

06:07 PM (IST) Aug 20

ಕ್ಷೀರಪಥದ ಕೇಂದ್ರದಲ್ಲಿ ವಿಶ್ವದ ಅತ್ಯಂತ ವೇಗದ ನಕ್ಷತ್ರ ಪತ್ತೆ - ಕಪ್ಪು ಕುಳಿಯ ರಹಸ್ಯ ಬಿಡಿಸಲಿದೆಯೇ S301?

ಖಗೋಳಶಾಸ್ತ್ರಜ್ಞರು ನಮ್ಮ ಕ್ಷೀರಪಥದ ಕೇಂದ್ರದಲ್ಲಿರುವ ಕಪ್ಪು ಕುಳಿಯ ಸುತ್ತ ಅತ್ಯಂತ ವೇಗವಾಗಿ ಪರಿಭ್ರಮಿಸುವ 'S301' ಎಂಬ ನಕ್ಷತ್ರವನ್ನು ಪತ್ತೆಹಚ್ಚಿದ್ದಾರೆ. ಈ ನಕ್ಷತ್ರದ ಅಸಾಧಾರಣ ವೇಗ ಮತ್ತು ವಿಶಿಷ್ಟ ಕಕ್ಷೆಯು, ಕಪ್ಪು ಕುಳಿಯ ಗುಣಲಕ್ಷಣಗಳನ್ನು ಅರಿಯಲು ಮತ್ತು ಐನ್‌ಸ್ಟೈನ್ ಸಿದ್ಧಾಂತವನ್ನು ಪರೀಕ್ಷಿಸಲು ವಿಜ್ಞಾನಿಗಳಿಗೆ ಸಹಾಯ ಮಾಡಲಿದೆ.
Read Full Story

05:40 PM (IST) Aug 20

ಕೈಗೆಟಕುವ ದರದಲ್ಲಿ ಐಕ್ಯೂ Z11 ಸ್ಮಾರ್ಟ್‌ಫೋನ್ ಹಾಗೂ iQOO ಬಡ್ಸ್ ಭಾರತದಲ್ಲಿ ಬಿಡುಗಡೆ

ಐಕ್ಯೂ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ತನ್ನ ನೂತನ iQOO Z11 ಸ್ಮಾರ್ಟ್‌ಫೋನ್ ಮತ್ತು iQOO ಬಡ್ಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ Z11 ಫೋನ್ 144Hz ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಟರ್ಬೊ ಚಿಪ್‌ಸೆಟ್, ಮತ್ತು 7,050mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story

05:39 PM (IST) Aug 20

NASA Viking Mission - ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಇಳಿದ ಬಾಹ್ಯಾಕಾಶ ನೌಕೆ; ಕೆಂಪು ಗ್ರಹದ ಚಿತ್ರಗಳು ಭೂಮಿಗೆ ರವಾನೆ

1976ರಲ್ಲಿ ನಾಸಾದ ವೈಕಿಂಗ್ 1 ನೌಕೆಯು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದು ಕೆಂಪು ಗ್ರಹದ ಮೇಲ್ಮೈಯ ಮೊದಲ ಕ್ಲೋಸ್-ಅಪ್ ಚಿತ್ರಗಳನ್ನು ಭೂಮಿಗೆ ಕಳುಹಿಸಿತು. ಆರು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಈ ನೌಕೆಯು, ಮಂಗಳದ ವಾತಾವರಣ ಮತ್ತು ಜೀವದ ಕುರುಹುಗಳ ಬಗ್ಗೆ ಅಧ್ಯಯನ ನಡೆಸಿತು.
Read Full Story

05:22 PM (IST) Aug 20

ಚಾಣಕ್ಯ ನೀತಿ ಪ್ರಕಾರ, ಬುದ್ಧಿವಂತ ವ್ಯಕ್ತಿ ಈ 5 ವಿಷಯಗಳನ್ನು ಯಾರಿಗೂ ಹೇಳಲ್ಲ..! ಯಾಕಂದ್ರೆ?

ಮನುಷ್ಯನ ಮಾತಿಗೆ ಎಲ್ಲಿಲ್ಲದ ಶಕ್ತಿ ಇದೆ. ಒಂದು ಮಾತು ಸಂಬಂಧವನ್ನು ಬೆಳೆಸಬಲ್ಲದು, ಮುರಿಯಬಲ್ಲದು. ಹಾಗಾಗಿ ಯಾವಾಗ ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾರೊಂದಿಗೆ ಏನು ಹೇಳಬೇಕು? ಎಂಬ ಬಗ್ಗೆ ಎಚ್ಚರಿಕೆ ಇರಬೇಕು. ಚಾಣಕ್ಯನ ಪ್ರಕಾರ, ಬುದ್ಧಿವಂತ ವ್ಯಕ್ತಿ ಯಾರಿಗೂ ಹೇಳದ ಆ 5 ವಿಷಯಗಳು ಯಾವುವು ನೋಡೋಣ.

Read Full Story

04:53 PM (IST) Aug 20

ಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಮಹಿಳೆ ಹೊರಹಾಕಿದ್ದು ಯಾಕೆ? ಜನಾಂಗೀಯ ತಾರತಮ್ಯದ ಅಸಲಿ ಸತ್ಯ ಬಿಚ್ಚಿಟ್ಟ ವ್ಲಾಗರ್!

ಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಮಹಿಳೆಯನ್ನು ಹೊರಹಾಕಿದ ಘಟನೆಯನ್ನು ಪ್ರವಾಸಿ ವ್ಲಾಗರ್ ರಾಹುಲ್ ವಿವರಿಸಿದ್ದಾರೆ. ಹಾಸ್ಟೆಲ್‌ನ ಚೆಕ್-ಔಟ್ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಇದು ಜನಾಂಗೀಯ ತಾರತಮ್ಯದ ಪ್ರಕರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

04:18 PM (IST) Aug 20

ಭಾರತದ ಒಂದೇ ಸಿಟಿ, ಎರಡು ರಾಜ್ಯಗಳಿಗೆ ರಾಜಧಾನಿ! ಯಾವುದು ಆ ನಗರ? ಇದರ ಹಿಂದಿನ ಕಥೆಯೇನು?

ನಮ್ಮ ದೇಶದಲ್ಲಿ ಎರಡು ರಾಜ್ಯಗಳಿಗೆ ಒಂದೇ ರಾಜಧಾನಿ ಇದೆ. ಆ ರಾಜ್ಯಗಳು ಯಾವುವು? ಒಂದೇ ನಗರವನ್ನು ಎರಡು ರಾಜ್ಯಗಳು ರಾಜಧಾನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗಾದರೆ ಆಡಳಿತ ಯಾರ ಕೈಯಲ್ಲಿದೆ?

Read Full Story

04:08 PM (IST) Aug 20

ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌ನಿಂದ ಮುತ್ತಜ್ಜಿಯ ಲೆಹೆಂಗಾವರೆಗೆ - ಪಟಿಯಾಲ ರಾಜಮನೆತನದ ಕಲಾ ವೈಭವ, ರಹಸ್ಯ ಕಥೆಗಳು!

ಪಟಿಯಾಲ ರಾಜಮನೆತನದ ಕುಡಿ ರಾಜೇಶ್ವರಿ ಕುಮಾರಿ, ತಮ್ಮ ಕುಟುಂಬದ ಪ್ರಸಿದ್ಧ ಆಭರಣಗಳ ಆಚೆಗಿನ ಕಲೆ, ಕ್ರೀಡೆ ಮತ್ತು ಫ್ಯಾಷನ್ ಪರಂಪರೆಯನ್ನು ಅನಾವರಣಗೊಳಿಸಿದ್ದಾರೆ. ತಮ್ಮ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ, ಅವರು ಐತಿಹಾಸಿಕ ಕ್ರೀಡಾ ಪದಕಗಳು, ಅಮೃತಶಿಲೆಯ ಪ್ರತಿಮೆಗಳು ಮತ್ತು ತಮ್ಮ ಮುತ್ತಜ್ಜಿಯ ಪುನರುಜ್ಜೀವನಗೊಂಡ ಲೆಹೆಂಗಾದಂತಹ ಅಮೂಲ್ಯ ವಸ್ತುಗಳ ಹಿಂದಿನ ಕಥೆಗಳನ್ನು ಹಂಚಿಕೊಂಡಿದ್ದಾರೆ.
Read Full Story

04:00 PM (IST) Aug 20

ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು.. ತಮ್ಮದೇ ಪ್ರಾಂಶುಪಾಲರನ್ನ 27 ಬಾರಿ ಇರಿದು ಕೊಂದರು.. ಕಾರಣ?

ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು, ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಕ್ಕಳನ್ನು ತಿದ್ದಲು ಹೋದ ಗುರುವನ್ನೇ ಹಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಈ ಪ್ರಕರಣ, ಸಮಾಜದಲ್ಲಿ ಮಕ್ಕಳ ಕ್ರೂರ ಮನಸ್ಥಿತಿಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

Read Full Story

03:30 PM (IST) Aug 20

1984ರ ಸಿಖ್ ವಿರೋಧಿ ಗಲಭೆ ಕೇಸ್, ಜೀವಾವಧಿ ಶಿಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ನಿಧನ

1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ, ಪ್ರಮುಖ ನಾಯಕ ಸಜ್ಜನ್ ಕುಮಾರ್ ನಿಧನರಾಗಿದ್ದಾರೆ. ಏನಿದು ಸಿಖ್ ಗಲಭೆ?

Read Full Story

03:23 PM (IST) Aug 20

ಅದೊಂದು ಕಾರಣಕ್ಕಾಗಿ ಸಚಿನ್‌ಗಿಂತ ಕೊಹ್ಲಿಯೇ ಗ್ರೇಟ್ ಎಂದ ಎಬಿಡಿ..! ಸುಳ್ಳು ಹೇಳಿದ್ರಾ ಡಿವಿಲಿಯರ್ಸ್‌?

ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ಅಂಕಿಅಂಶಗಳು ಸಚಿನ್ ಪರವಾಗಿದ್ದರೂ, ವಿದೇಶಿ ಸರಣಿಗಳನ್ನು ಗೆಲ್ಲುವ ತಂಡವಾಗಿ ಭಾರತವನ್ನು ರೂಪಿಸಿದ ಕೊಹ್ಲಿಯ ಪ್ರಭಾವವನ್ನು ಎಬಿಡಿ ಶ್ಲಾಘಿಸಿದ್ದಾರೆ.
Read Full Story

03:21 PM (IST) Aug 20

ಹೊಗಳಿಕೆ ಹೆಸರಲ್ಲಿ ಜನಾಂಗೀಯ ನಿಂದನೆ! ವಿದೇಶಿ ಮಹಿಳೆಗೆ ಭಾರತೀಯ ನೀಡಿದ ಶಾಂತ ಪ್ರತಿಕ್ರಿಯೆಗೆ ನೆಟ್ಟಿಗರ ಶ್ಲಾಘನೆ

ರೆಸ್ಟೋರೆಂಟ್‌ನಲ್ಲಿ ಕುಟುಂಬದೊಂದಿಗೆ ಊಟ ಮಾಡುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬರಿಗೆ, ಪಾಶ್ಚಿಮಾತ್ಯ ಮಹಿಳೆಯೊಬ್ಬರು 'ಭಾರತೀಯನಾಗಿದ್ದರೂ ಉತ್ತಮ ಸುವಾಸನೆ ಬೀರುತ್ತಿದ್ದೀರಿ' ಎಂದು ಜನಾಂಗೀಯ ನಿಂದನೆಯ ಮಾತುಗಳನ್ನಾಡಿದ್ದಾರೆ. ಈ 'ಸಾಂದರ್ಭಿಕ ಜನಾಂಗೀಯತೆ'ಗೆ ಆ ವ್ಯಕ್ತಿ ತೋರಿದ ಸಂಯಮದ ಮತ್ತು ಪ್ರಬುದ್ಧ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Read Full Story

01:18 PM (IST) Aug 20

ಭಿಕ್ಷುಕನಾದ ಯುಟ್ಯೂಬರ್; 8 ಗಂಟೆಯಲ್ಲಿ ಸಿಕ್ಕ ಹಣ ನೋಡಿ ಇದೇ ಬೆಸ್ಟ್ ಜಾಬ್ ಎಂದ ಜನರು

ಪುರುಷೋತ್ತಮ್ ವಶಿಷ್ಠ ಎಂಬ ಯುಟ್ಯೂಬರ್, ಹರಿದ್ವಾರದ ಕನ್ವರ್ ಯಾತ್ರೆಯ ವೇಳೆ ಎಂಟು ಗಂಟೆಗಳ ಕಾಲ ಭಿಕ್ಷುಕರಾಗಿ ಭಿಕ್ಷೆ ಬೇಡಿದ್ದಾರೆ. ಈ ಸಾಮಾಜಿಕ ಪ್ರಯೋಗದಲ್ಲಿ, ಯುಪಿಐ ಕ್ಯೂಆರ್ ಕೋಡ್ ಬಳಸಿ ಅವರು ಗಳಿಸಿದ ಹಣ ಮತ್ತು ಭಿಕ್ಷುಕರ ಆದಾಯದ ಕುರಿತಾದ ಅಚ್ಚರಿಯ ಮಾಹಿತಿಯನ್ನು ಈ ವಿಡಿಯೋ ಬಹಿರಂಗಪಡಿಸುತ್ತದೆ.
Read Full Story

01:12 PM (IST) Aug 20

Indian Economy - 2036ಕ್ಕೆ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆ! ಚೀನಾ ಸಾಧಿಸಿದ್ದು ನಮಗೂ ಸಾಧ್ಯ!

ಸತತ ಸುಧಾರಣೆಗಳನ್ನು ಜಾರಿಗೆ ತಂದರೆ 2036ರ ವೇಳೆಗೆ ಭಾರತ 20 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು Equirus ವರದಿ ಹೇಳಿದೆ. ಈ ಮಹತ್ವಾಕಾಂಕ್ಷೆಯ ಗುರಿ ತಲುಪಲು ಚೀನಾದಂತೆ ಶೇ.18ರಷ್ಟು ಬೆಳವಣಿಗೆ ಬೇಕು. ಇದಕ್ಕಾಗಿ 20 ಅಂಶಗಳ ಸುಧಾರಣಾ ಕಾರ್ಯಸೂಚಿಯನ್ನು ವರದಿ ಮುಂದಿಟ್ಟಿದೆ.
Read Full Story

01:05 PM (IST) Aug 20

Child Missing Case - ಬಾಲಕಿ ಜ್ಞಾನೇಶ್ವರಿ ಮಿಸ್ಸಿಂಗ್ ಕೇಸ್‌; ಮಗಳ ಪತ್ತೆಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ತಂದೆ

ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಾಪತ್ತೆಯಾದ ಎರಡು ವರ್ಷದ ಬಾಲಕಿ ಜ್ಞಾನೇಶ್ವರಿ ಪ್ರಕರಣ 70 ದಿನ ಕಳೆದರೂ ಬಗೆಹರಿದಿಲ್ಲ. ಮಗಳ ಪತ್ತೆಗಾಗಿ ತಂದೆ ಗಣೇಶ್ ಯೂಟ್ಯೂಬ್ ಚಾನೆಲ್ ಆರಂಭಿಸಿ ಸುಳಿವಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
Read Full Story

01:04 PM (IST) Aug 20

ಸಂಬಳ ಒಂದೇ ಸಾಕಾಗಲ್ಲ! ನಾನು 24ಕ್ಕೆ 2 ಮನೆ ತಗೊಂಡೆ, ಆದ್ರೆ ನನ್ನ ಮಕ್ಕಳಿಗೆ ಸಾಧ್ಯವಿಲ್ಲ! ಉದ್ಯೋಗ ಮೀರಿ ಯೋಚಿಸಿ

ಭಾರತೀಯ ಉದ್ಯಮಿ ರಿಯಾ ಉಪ್ರೇತಿ ಅವರ ಪ್ರಕಾರ, ಹೆಚ್ಚುತ್ತಿರುವ ಹಣದುಬ್ಬರವನ್ನು ಕೇವಲ 9-5 ಉದ್ಯೋಗದಿಂದ ನಿಭಾಯಿಸಲಾಗದು. ಆಸ್ತಿ ಬೆಲೆಗಳು ಆದಾಯಕ್ಕಿಂತ ವೇಗವಾಗಿ ಏರುತ್ತಿರುವುದರಿಂದ, ಸಂಪತ್ತು ಸೃಷ್ಟಿಸಲು ಸ್ವಂತ ಉದ್ಯಮ, ಇಕ್ವಿಟಿ ಹೂಡಿಕೆ ಅಥವಾ ವೈಯಕ್ತಿಕ ಬ್ರ್ಯಾಂಡ್‌ನಂತಹ ಹೆಚ್ಚುವರಿ ಆದಾಯದ ಮೂಲಗಳನ್ನು ಹೊಂದುವುದು ಅನಿವಾರ್ಯವಾಗಿದೆ.
Read Full Story

12:53 PM (IST) Aug 20

Toxic Countdown Day 06 - ಟಾಕ್ಸಿಕ್ ಕೌಂಟ್‌ಡೌನ್ 06.. ಇಂಗ್ಲಿಷ್ ಟ್ರೇಲರ್ ಬಿಡುಗಡೆಗೆ ಬಳಿಕ ಯಶ್ ಸಿನಿಮಾದ ಕ್ರೇಜ್ ಹೇಗಿದೆ? ಸ್ಪೆಷಲ್‌ ಸ್ಟೋರಿ ನೋಡಿ!

ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದಾರೆ.

Read Full Story

12:21 PM (IST) Aug 20

ಭಾರತದಲ್ಲೇ ಸೃಷ್ಟಿಯಾಗಿತ್ತಾ ಈ ಭೂಮಿಯ ಮೊದಲ ಜೀವ? ಪೂರ್ವ ಭಾರತದಲ್ಲಿ ಪತ್ತೆಯಾಯ್ತು 3.5 ಶತಕೋಟಿ ವರ್ಷ ಹಳೆಯ ರಹಸ್ಯ!

ಪೂರ್ವ ಭಾರತದ ಸಿಂಗ್‌ಭೂಮ್ ವಲಯದಲ್ಲಿ, ಸುಮಾರು 3.5 ಶತಕೋಟಿ ವರ್ಷಗಳಷ್ಟು ಹಳೆಯ ಜೈವಿಕ ಕುರುಹುಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಆವಿಷ್ಕಾರವು ಭೂಮಿಯ ಮೇಲಿನ ಜೀವಿಗಳ ಉಗಮವು ಹಿಂದೆ ಭಾವಿಸಿದ್ದಕ್ಕಿಂತಲೂ ಪ್ರಾಚೀನವಾದುದು ಎಂಬುದಕ್ಕೆ ಬಲವಾದ ಸಾಕ್ಷಿ ಒದಗಿಸಿದೆ. ಜ್ವಾಲಾಮುಖಿ ಬೂದಿಯ ಪದರಗಳಲ್ಲಿ ಸಂರಕ್ಷಿಸಲ್ಪಟ್ಟಿದ್ದ ಈ ಅವಶೇಷಗಳು, ದ್ಯುತಿಸಂಶ್ಲೇಷಣೆಯಂತಹ ಸಂಕೀರ್ಣ ಪ್ರಕ್ರಿಯೆಗಳು ಅಂದೇ ಇತ್ತೆಂದು ತೋರಿಸಿದೆ.

Read Full Story

12:14 PM (IST) Aug 20

2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದ ರಾಬಿನ್ ಉತ್ತಪ್ಪ..! ಅರ್‌ಸಿಬಿಯಿಂದ ಇಬ್ಬರು, ಏಕೈಕ ಕನ್ನಡಿಗನಿಗೆ ಸ್ಥಾನ

ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅಚ್ಚರಿಯ ಆಯ್ಕೆಗಳಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಏಕೈಕ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
Read Full Story

12:12 PM (IST) Aug 20

ಬಿಜೆಪಿ ತೊರೆದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರಧಾನಿ ಪಟ್ಟದ ರೋಚಕ ಭವಿಷ್ಯ ನುಡಿದ ಶೆಹಜಾದ್

ಬಿಜೆಪಿಯ ಫೈರ್ ಬ್ರ್ಯಾಂಡ್ ವಕ್ತಾರ ಶೆಹಜಾದ್ ಪೂನಾವಾಲ ಪಕ್ಷ ತೊರೆದಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುತ್ತಾರಾ ಅನ್ನೋ ಕುರಿತು ರೋಚಕ ಭವಿಷ್ಯ ನುಡಿದಿದ್ದಾರೆ. ಪೂನಾವಾಲ ಹೇಳಿದ್ದೇನು?

Read Full Story

11:21 AM (IST) Aug 20

ಗಾಲೆ ಟೆಸ್ಟ್ ಹೀನಾಯ ಸೋಲಿನ ಬೆನ್ನಲ್ಲೇ ಶ್ರೀಲಂಕಾಗೆ ಡಬಲ್ ಶಾಕ್; ಎರಡನೇ ಟೆಸ್ಟ್‌ನಿಂದ ಇಬ್ಬರು ಸ್ಟಾರ್ ಕ್ರಿಕೆಟರ್ಸ್ ಔಟ್

ಭಾರತ ವಿರುದ್ಧದ ಗಾಲೆ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡ ಶ್ರೀಲಂಕಾ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ದೊಡ್ಡ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಬ್ಯಾಟರ್‌ಗಳಾದ ದಿನೇಶ್ ಚಂಡಿಮಾಲ್ ಮತ್ತು ಕುಸಾಲ್ ಮೆಂಡಿಸ್ ಕೊಲಂಬೊ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ.
Read Full Story

11:08 AM (IST) Aug 20

ಭಾರತೀಯ ರೈಲ್ವೆ ಜೊತೆ ಕೈಜೋಡಿಸಿದ ಅಮೆಜಾನ್ ; 24 ಗಂಟೆಯಲ್ಲಿ 350 ರಿಂದ 400 ಟನ್ ಸರಕು

ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ಅಮೆಜಾನ್ ಇಂಡಿಯಾವು ಭಾರತೀಯ ರೈಲ್ವೆಯೊಂದಿಗೆ ತನ್ನ ಪಾಲುದಾರಿಕೆಯನ್ನು ಬಲಪಡಿಸಿದೆ. ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (DFC) ಬಳಸಿಕೊಂಡು, ಕಂಪನಿಯು ದೆಹಲಿ, ಮುಂಬೈ, ಮತ್ತು ಇತರ ಪ್ರಮುಖ ನಗರಗಳಿಗೆ ತ್ವರಿತ ಹಾಗೂ ಪರಿಸರಸ್ನೇಹಿ ಡೆಲಿವರಿ ಒದಗಿಸಲು ಸಜ್ಜಾಗಿದೆ.
Read Full Story

10:58 AM (IST) Aug 20

ಭಾರತೀಯ ರೈಲ್ವೆಯಿಂದ ಆಕರ್ಷಕ 'ಬಾಲಿ ಪ್ರವಾಸ ಪ್ಯಾಕೇಜ್' - ಹೈದರಾಬಾದ್‌ನಿಂದ ಕೈಗೆಟುಕುವ ದರದಲ್ಲಿ ಇಂಡೋನೇಷ್ಯಾ ಸುತ್ತಿ!

ಐಆರ್‌ಸಿಟಿಸಿ ಹೈದರಾಬಾದ್‌ನಿಂದ 'ಬಾಲಿ ಪ್ಯಾರಡೈಸ್' ಎಂಬ 4-ರಾತ್ರಿ ಮತ್ತು 5-ದಿನಗಳ ವಿಶೇಷ ಪ್ರವಾಸವನ್ನು ಆಯೋಜಿಸಿದೆ. ಸೆಪ್ಟೆಂಬರ್ 24, 2026 ರಿಂದ ಪ್ರಾರಂಭವಾಗುವ ಈ ಪ್ಯಾಕೇಜ್, ವಿಮಾನಯಾನ, ವಸತಿ, ಆಹಾರ ಮತ್ತು ಕಿಂತಮಣಿ, ಉಬುದ್, ಉಲುವಾಟು ದೇವಾಲಯದಂತಹ ಪ್ರಮುಖ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ.
Read Full Story

10:40 AM (IST) Aug 20

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ - ಆಯುಷ್ ಶೆಟ್ಟಿ, ಪಿ.ವಿ. ಸಿಂಧು ಪ್ರಿಕ್ವಾರ್ಟರ್‌ಗೆ ಪ್ರವೇಶ!

ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಮತ್ತು ಕನ್ನಡಿಗ ಆಯುಷ್‌ ಶೆಟ್ಟಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಲಕ್ಷ್ಯ ಸೇನ್‌ ಆಘಾತಕಾರಿ ಸೋಲು ಕಂಡಿದ್ದಾರೆ. ಇನ್ನೊಂದೆಡೆ, ರಾಷ್ಟ್ರೀಯ ಜೂನಿಯರ್‌ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಎರಡನೇ ದಿನವೂ 9 ಚಿನ್ನದ ಪದಕಗಳನ್ನು ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ.
Read Full Story

10:01 AM (IST) Aug 20

Sergio Gor - 'ಪಿಒಕೆ ಜನ ಭಾರತ ಸೇರಲು ಬಯಸುತ್ತಾರೆ..' ; ಅಮೆರಿಕ ರಾಯಭಾರಿ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಆಘಾತ!

ಜಮ್ಮು ಕಾಶ್ಮೀರ ವಿವಾದದ ಬಗ್ಗೆ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅಶಾಂತಿಗೆ ಪಾಕಿಸ್ತಾನವೇ ಕಾರಣವಾಗಿದ್ದು, ಅಲ್ಲಿನ ಜನರು ಭಾರತ ಸೇರಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯಿಂದ ಪಾಕ್‌ ಆಘಾತ

Read Full Story

07:52 AM (IST) Aug 20

ಕೇಂದ್ರದಿಂದ ಜೆನ್‌ಝೀ ಸೆಳೆಯಲು ಕೇಂದ್ರದ ಹೊಸ ಪ್ಲಾನ್! ನಿತ್ಯ ಒಂದು ವಿವಿಗೆ ಒಬ್ಬ ಕೇಂದ್ರ ಸಚಿವ, ಯುವಕರ ಜತೆ ನೇರ ಸಂವಹನ

ನವದೆಹಲಿ(ಆ.20): ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಯುವಕರಿಗೆ ಉಚಿತ ಆನ್‌ಲೈನ್‌ ಕೋಚಿಂಗ್‌ ಕ್ಲಾಸ್‌ ಆರಂಭಿಸುವ ಬಗ್ಗೆ ಪ್ರಧಾನಿ ಮೋದಿ(PM Narendra Modi) ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್‌ ಜೋಶಿ(Pralhad joshi) ಅವರು ಈ ಕುರಿತು ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಡೆಸಿದ್ದಾರೆ. ಯೋಜನೆಯ ಅನುಷ್ಠಾನ, ರೂಪುರೇಷೆ ಮತ್ತಿತರ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ತ್ವರಿತ ಚಾಲನೆಗೆ ಕ್ರಮ ಕೈಗೊಂಡಿದ್ದಾರೆ.

ಜೆನ್‌ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ

ಜೆನ್‌ ಝೀ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಯುವಜನತೆಯನ್ನು ತಲುಪುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಪ್ರತಿದಿನ ಒಬ್ಬ ಕೇಂದ್ರ ಸಚಿವರನ್ನು ಒಂದು ವಿಶ್ವವಿದ್ಯಾಲಯಕ್ಕೆ ಕಳುಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಯುವಕರೊಂದಿಗೆ ನೇರವಾಗಿ ಸಂವಹನ ನಡೆಸಿ, ಅವರ ಕಳಕಳಿಗಳನ್ನು ಆಲಿಸಲು ಮತ್ತು ದೇಶ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.

Read Full Story

More Trending News