Published : Mar 27, 2026, 07:53 AM ISTUpdated : Mar 27, 2026, 10:30 PM IST

India Latest News Live: ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ - ಹಿಮದಡಿ ಹೂತು ಹೋದ ಡಜನ್‌ಗಟ್ಟಲೇ ವಾಹನಗಳು

ಸಾರಾಂಶ

ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಸೇರಿ ಹಲವು ಆತಂಕಗಳು ಸೃಷ್ಟಿಯಾಗಿರುವ ನಡುವೆಯೇ, ಈ ಕುರಿತು ರಾಜ್ಯಗಳ ಸಿದ್ಧತೆಯನ್ನು ಪರಾಮರ್ಶಿಸಲು, ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ 6.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

7 kille after avalanche hits Srinagar-Leh highway

10:30 PM (IST) Mar 27

ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ - ಹಿಮದಡಿ ಹೂತು ಹೋದ ಡಜನ್‌ಗಟ್ಟಲೇ ವಾಹನಗಳು

ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಸಂಭವಿಸಿದ ಭಾರಿ ಹಿಮಪಾತದಲ್ಲಿ 7 ಜನರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಡಜನ್‌ಗಟ್ಟಲೆ ವಾಹನಗಳು ಹಿಮದಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
Read Full Story

10:10 PM (IST) Mar 27

ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ - ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಾಂಖೆಡೆ ಗ್ರೌಂಡ್ಸ್‌ಮೆನ್‌ಗಳಿಗೆ ಭರ್ಜರಿ ಉಡುಗೊರೆ

ಟಿ20 ವಿಶ್ವಕಪ್‌ಗೂ ಮುನ್ನ ವಾಂಖೆಡೆ ಸಿಬ್ಬಂದಿಗೆ ನೀಡಿದ್ದ ಭರವಸೆಯನ್ನು ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಡೇರಿಸಿದ್ದಾರೆ. ಕಠಿಣ ಅಭ್ಯಾಸಕ್ಕೆ ಸಹಕರಿಸಿದ ಸಿಬ್ಬಂದಿಯನ್ನು ಸನ್ಮಾನಿಸಿ, ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. 

Read Full Story

09:21 PM (IST) Mar 27

ಇರಾನ್‌ ಮೇಲೆ 850ಕ್ಕೂ ಅಧಿಕ ಟೊಮಾಹಾಕ್ ಕ್ಷಿಪಣಿ ದಾಳಿ - ಬರಿದಾಯ್ತು ಅಮೆರಿಕದ ಅಸ್ತ್ರ, ಪೆಂಟಗನ್‌ನಲ್ಲಿ ಶುರುವಾಯ್ತು ಆತಂಕ

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ಕೇವಲ ನಾಲ್ಕು ವಾರಗಳಲ್ಲಿ 850ಕ್ಕೂ ಹೆಚ್ಚು 'ಟೊಮಾಹಾಕ್' ಕ್ಷಿಪಣಿಗಳನ್ನು ಬಳಸಿದೆ. ಈ ಕ್ಷಿಪಣಿಗಳ ದುಬಾರಿ ಬೆಲೆ ಮತ್ತು ದೀರ್ಘ ಉತ್ಪಾದನಾ ಸಮಯದಿಂದಾಗಿ, ಬಳಕೆಯ ವೇಗವು ಉತ್ಪಾದನೆಯನ್ನು ಮೀರಿಸಿದೆ.

Read Full Story

08:31 PM (IST) Mar 27

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ

ಪ್ರೀತಿಗೆ ಅಡ್ಡಿಯಾಗಿದ್ದ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ, ಸ್ವತಃ ಪೊಲೀಸ್ ಆಗಿದ್ದ ಮಗಳೇ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ. ಮೂರು ವರ್ಷಗಳ ಹಿಂದೆ 'ಹಠಾತ್ ಸಾವು' ಎಂದು ದಾಖಲಾಗಿದ್ದ ಈ ಪ್ರಕರಣ, ಪತಿಯೊಂದಿಗಿನ ಜಗಳದ ನಂತರ ಆತನೇ ಸತ್ಯ ಬಾಯಿಬಿಟ್ಟಾಗ ಕೊಲೆ ಎಂದು ಬಯಲಾಗಿದೆ.
Read Full Story

08:28 PM (IST) Mar 27

ViRosh Temple Visit - ‘ರಣಬಲಿ’ಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್-ರಶ್ಮಿಕಾ ಜೋಡಿ

ಮದುವೆಯಾಗಿ ಒಂದು ತಿಂಗಳಾದರೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹವಾ ಕಮ್ಮಿಯಾಗಿಲ್ಲ. ಪಾರ್ಟಿ, ಮೋಜು-ಮಸ್ತಿ ಜೊತೆಗೆ ಸಂಪ್ರದಾಯಗಳನ್ನು ಪಾಲಿಸುತ್ತಾ, ದೇವಸ್ಥಾನಗಳಿಗೂ ಈ ಜೋಡಿ ಭೇಟಿ ನೀಡುತ್ತಿದೆ.

Read Full Story

08:22 PM (IST) Mar 27

ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್

ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್, ಇಬ್ಬರು ಪೊಲೀಸರ ಬುದ್ಧಿಯಾದ ಕಾರಣ ಪ್ರಕರಣ ಗೊತ್ತೇ ಆಗಲಿಲ್ಲ. 3 ವರ್ಷ ಬಳಿಕ ಈ ಕೇಸ್ ಬಹಿರಂಗವಾಗಿದ್ದೇ ರೋಚಕ.

Read Full Story

08:01 PM (IST) Mar 27

Bhumi Pednekar - ನೀರು ಮಾರೋ ಬ್ಯುಸಿನೆಸ್‌ಗೆ ಇಳಿದ ಬಾಲಿವುಡ್ ನಟಿ - ಬಾಟಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ನಟಿಯರು ಈಗ ಕೇವಲ ನಟನೆಗೆ ಸೀಮಿತವಾಗಿಲ್ಲ, ಬ್ಯುಸಿನೆಸ್ ಲೋಕಕ್ಕೂ ಕಾಲಿಡುತ್ತಿದ್ದಾರೆ. ಕೃತಿ ಸನನ್, ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಸಾಲಿಗೆ ಈಗ ಭೂಮಿ ಪೆಡ್ನೇಕರ್ ಕೂಡ ಸೇರಿದ್ದಾರೆ. ಅವರು ತಮ್ಮದೇ ಆದ ವಾಟರ್ ಬ್ರ್ಯಾಂಡ್ ಶುರು ಮಾಡಿದ್ದಾರೆ.

Read Full Story

07:54 PM (IST) Mar 27

ನೋಕಿಯಾದಿಂದ 14,000 ಉದ್ಯೋಗಿಗಳ ವಜಾ - ಭಾರತದ ಟೀಮ್‌ಗೂ ತಟ್ಟಲಿದೆ ಲೇ-ಆಫ್ ಬಿಸಿ

ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆಯಾಗಿದ್ದ ನೋಕಿಯಾ, ತನ್ನ 14,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ವಹಿವಾಟು ಕುಸಿತ ಮತ್ತು ಸಾಂಸ್ಥಿಕ ಪುನರ್ರಚನೆಯು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ. 

Read Full Story

07:46 PM (IST) Mar 27

Ruhaanika Dhawan - ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ 'ಯೇ ಹೆ ಮೊಹಬ್ಬತೇಂ' ನಟಿ - ಫೋಟೋಸ್ ವೈರಲ್

ಇತ್ತೀಚೆಗೆ ರುಹಾನಿಕಾ ಧವನ್ ಸೀರೆಯಲ್ಲಿ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ರುಹಾನಿಕಾ ಧವನ್ ಮೆರೂನ್ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದಾರೆ.

Read Full Story

07:42 PM (IST) Mar 27

ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್‌ವಾಕ್‌ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

07:31 PM (IST) Mar 27

ನನಗೆ ಗಂಡಸಿನ ಅಗತ್ಯವಿಲ್ಲ - ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ ಎಂದ ಮಲೈಕಾ ಅರೋರಾ!

ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿ, ವೈಯಕ್ತಿಕ ಜೀವನದ ಬಗ್ಗೆ ಹರಿದಾಡುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಇವು ತನಗೆ ಕಿರಿಕಿರಿ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.

Read Full Story

07:30 PM (IST) Mar 27

ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ

ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗವಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ ಹೆಚ್ಚಾಗುತ್ತಿದೆ.

Read Full Story

07:10 PM (IST) Mar 27

2.38 ಲಕ್ಷ ಕೋಟಿ ರೂಪಾಯಿ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ - ಶತ್ರುಗಳಿಗೆ ನಡುಕ ಹುಟ್ಟಿಸಲಿದೆ ಎಸ್-400, ಧನುಷ್ ಗನ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭೂಸೇನೆ, ವಾಯುಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳಿಗಾಗಿ 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. 

Read Full Story

06:37 PM (IST) Mar 27

ಫೇಸ್‌ಬುಕ್, ವ್ಯಾಟ್ಸಾಪ್‌ಗೆ ಆಧಾರ್ ವೆರಿಫಿಕೇಶನ್ ನಿಯಮ, ಸಂಸದೀಯ ಸಮಿತಿ ಮಹತ್ವದ ಪ್ರಸ್ತಾವನೆ

ಫೇಸ್‌ಬುಕ್, ವ್ಯಾಟ್ಸಾಪ್‌ಗೆ ಆಧಾರ್ ವೆರಿಫಿಕೇಶನ್ ನಿಯಮ, ಸಂಸದೀಯ ಸಮಿತಿ ಮಹತ್ವದ ಪ್ರಸ್ತಾವನೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾದ ಅನಿವಾರ್ಯತೆ ಹಲವೆಡೆ ಇದೆ. ಇದೀಗ ಸೋಶಿಯಲ್ ಮೀಡಿಯಾಕೂ ಇದು ಅನಿವಾರ್ಯವಾಗುತ್ತಿದೆ.

Read Full Story

06:12 PM (IST) Mar 27

ರಾಮ ನವಮಿಯಂದು ಬಂತು ಯಶ್ ಸಿನಿಮಾದ ಬಿಗ್ ಅಪ್‌ಡೇಟ್ - ಆ ವಿಶೇಷ ದಿನ ರಾಮಾಯಣದ ಫಸ್ಟ್ ಲುಕ್ ರಿಲೀಸ್

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಈ ಮೆಗಾ ಪ್ರಾಜೆಕ್ಟ್‌ ಅನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Read Full Story

05:59 PM (IST) Mar 27

ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ 10 ರೂ ಇಳಿಕೆ ಬಳಿಕ ನಿಮ್ಮ ನಗರದಲ್ಲಿ ಎಷ್ಟಾಗಿದೆ ಇಂಧನ ದರ?

ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ 10 ರೂ ಇಳಿಕೆ ಬಳಿಕ ನಿಮ್ಮ ನಗರದಲ್ಲಿ ಎಷ್ಟಾಗಿದೆ ಇಂಧನ ದರ? ತೈಲ ಆತಂಕದ ಬೆನ್ನಲ್ಲೇ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇದರಿಂದ ಜನಸಾಮಾನ್ಯರು ಖರೀದಿಸುವ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆಯಾ?

Read Full Story

05:52 PM (IST) Mar 27

Dhurandhar - 'ಲಿಯಾರಿಯಲ್ಲಿ ಹೀಗೆಲ್ಲಾ ಆಗಲ್ಲ' - ಸಾರಾ ಅರ್ಜುನ್ ಲುಕ್ ಬಗ್ಗೆ ಪಾಕಿಸ್ತಾನದ ವ್ಯಕ್ತಿ ಆಕ್ಷೇಪ!

ಸೋಶಿಯಲ್ ಮೀಡಿಯಾದಲ್ಲಿ 'ಧುರಂಧರ್' ಸಿನಿಮಾ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ. ಇತ್ತೀಚೆಗೆ ಪಾಕಿಸ್ತಾನಿ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಅವರು ಚಿತ್ರದ ಕಥೆ, ಪಾತ್ರಗಳು ಮತ್ತು ವಾಸ್ತವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Read Full Story

05:31 PM (IST) Mar 27

ನೀನು ಜಾಣನಾಗಿರಬೇಕು, ಸೆ*ಕ್ಸಿ ಆಗಿರಬೇಕು ಎಂದಿದ್ದ - ಕಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ರಣ‌ವೀರ್ ಸಿಂಗ್

ಬಾಲಿವುಡ್‌ನ ಟಾಪ್ ನಟರಲ್ಲಿ ರಣ‌ವೀರ್ ಸಿಂಗ್ ಕೂಡ ಒಬ್ಬರು. 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಣ್‌ವೀರ್, 2012ರ ಹೊತ್ತಿಗೆ ಬಿ-ಟೌನ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

Read Full Story

05:09 PM (IST) Mar 27

1000 ಕೋಟಿ ಕ್ಲಬ್‌ ಸೇರಿದ ಧುರಂಧರ್ 2 - RRR, KGF 2 ದಾಖಲೆ ಮುರಿದುಹಾಕಿದ ರಣವೀರ್ ಚಿತ್ರ

‘ಧುರಂಧರ್‌ 2’ ಸಿನಿಮಾ ಬಿಡುಗಡೆಯಾದ ಏಳೇ ದಿನಗಳಲ್ಲಿ 1000 ಕೋಟಿ ಕ್ಲಬ್‌ ಸೇರಿದೆ. ವಿಶ್ವಾದ್ಯಂತ ಒಟ್ಟು 1006 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್‌ ಮಾಡಿದ ಚಿತ್ರವಾಗಿ ಗುರುತಿಸಿಕೊಂಡಿದೆ.

Read Full Story

04:05 PM (IST) Mar 27

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂ ಗೆದ್ದು ಸಂಭ್ರಮಿಸಿದ್ದ ತಹಶಿಲ್ದಾರ್ ಅರೆಸ್ಟ್

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂ ಗೆದ್ದು ಸಂಭ್ರಮಿಸಿದ್ದ ತಹಶಿಲ್ದಾರ್ ಅರೆಸ್ಟ್ ಆಗಿದ್ದಾರೆ. ಭಾರಿ ಜನಪ್ರಿಯತೆ ಹೊಂದಿದ್ದ ಸರ್ಕಾರಿ ಅಧಿಕಾರಿ ಇದೀಗ 2.5 ಕೋಟಿ ರೂಪಾಯಿ ಗೋಲ್ಮಾಲ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

Read Full Story

03:49 PM (IST) Mar 27

RCB, RR ದಾಖಲೆಯ ಮಾರಾಟದಿಂದ ಬಂಪರ್‌ ಆದಾಯ ಗಳಿಸಲಿರುವ BCCI

ಐಪಿಎಲ್ ಫ್ರಾಂಚೈಸಿಗಳಾದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಸುಮಾರು 31,000 ಕೋಟಿ ರೂ.ಗೆ ಮಾರಾಟವಾಗಿವೆ. 2026ರ ಐಪಿಎಲ್ ಸೀಸನ್ ನಂತರ ಹೊಸ ಮಾಲೀಕತ್ವ ಜಾರಿಗೆ ಬರಲಿದ್ದು, ಈ ಒಪ್ಪಂದದಿಂದ ಬಿಸಿಸಿಐಗೆ ಶೇ. 5ರಷ್ಟು ವರ್ಗಾವಣೆ ಶುಲ್ಕದಿಂದಾಗಿ ಭಾರಿ ಲಾಭವಾಗಲಿದೆ.
Read Full Story

03:44 PM (IST) Mar 27

ಹುಟ್ಟುಹಬ್ಬದ ಗಿಫ್ಟ್ - ಟೀಂ ಇಂಡಿಯಾ ಎಂಟ್ರಿಗೆ ವೈಭವ್‌ ಸೂರ್ಯವಂಶಿಗೆ ಗ್ರೀನ್ ಸಿಗ್ನಲ್!

ಐಪಿಎಲ್ 2026 ಆರಂಭಕ್ಕೂ ಒಂದು ದಿನ ಮುನ್ನ, ಯುವ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೆ ಐಸಿಸಿ ನಿಯಮಗಳಿಂದ ಮುಕ್ತಿ ಸಿಕ್ಕಿದೆ. 15 ವರ್ಷ ಪೂರೈಸಿದ ಅವರು ಈಗ ಟೀಂ ಇಂಡಿಯಾ ಆಯ್ಕೆಗೆ ಅರ್ಹರಾಗಿದ್ದಾರೆ.
Read Full Story

03:37 PM (IST) Mar 27

ಕ್ಯೂ ನಿಲ್ಲಬೇಕಾದ ಅವಶ್ಯಕತೆ ಇಲ್ಲ, ಜನರ ಆತಂಕಕ್ಕೆ ಫುಲ್ ಸ್ಟಾಪ್ ಇಟ್ಟ ಕೇಂದ್ರ ಸರ್ಕಾರ

ಕ್ಯೂ ನಿಲ್ಲಬೇಕಾದ ಅವಶ್ಯಕತೆ ಇಲ್ಲ, ಜನರ ಆತಂಕಕ್ಕೆ ಫುಲ್ ಸ್ಟಾಪ್ ಇಟ್ಟ ಕೇಂದ್ರ ಸರ್ಕಾರ, ಮಧ್ಯಪ್ರಾಚ್ಯ ಯುದ್ದ, ಗ್ಯಾಸ್ ಹಾಗೂ ಇಂಧನ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಲಾಕ್‌ಡೌನ್ ವದಂತಿಗಳು ಹಬ್ಬಿದೆ ಇದಕ್ಕೆ ಕೇಂದ್ರ ಸರ್ಕಾರದ ಉತ್ತರವೇನು?

 

Read Full Story

03:16 PM (IST) Mar 27

Gold Price Drop - ಚಿನ್ನದ ಬೆಲೆ ದಿಢೀರ್ ಕುಸಿತಕ್ಕೆ ಕಾರಣವೇನು? ಇಲ್ಲಿದೆ ಅಸಲಿ ಸತ್ಯ

ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆ ಇತ್ತೀಚೆಗೆ ದಿಢೀರ್ ಕುಸಿದಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದರೂ ಚಿನ್ನದ ಬೆಲೆ ಇಳಿಕೆಯಾಗಿದ್ದು ಹಲವರನ್ನು ಅಚ್ಚರಿಗೊಳಿಸಿದೆ.

Read Full Story

03:05 PM (IST) Mar 27

ಪರೀಕ್ಷೆ ಪಾಸ್ ಮಾಡಿ ಸ್ವೀಟ್ ಬದಲು ಹಾಜ್‌ಮೊಲಾ ಹಂಚಿಕೆ, ಪ್ರಶ್ನಿಸಿದ ಮಹಿಳೆಗೆ ಪುಟಾಣಿ ಉತ್ತರ ಕೇಳಿ ದಂಗು

ಪರೀಕ್ಷೆ ಪಾಸ್ ಮಾಡಿ ಸ್ವೀಟ್ ಬದಲು ಹಾಜ್‌ಮೊಲಾ ಹಂಚಿಕೆ, ಅಕ್ಕ ಪಕ್ಕದ ಮನೆಯವರಿಗೆ ಹಂಚಿದ್ದಾಳೆ. ಸ್ವೀಟ್ ಬದಲು ಹಾಜ್‌ಮೋಲಾ ಹಂಚುತ್ತಿರುವುದೇಕೆ, ಇದೇನು ಹೀಗೆ ಎಂದು ಪ್ರಶ್ನಿಸಿದ ಮಹಿಳೆ ಪುಟಾಣಿ ನೀಡಿದ ಉತ್ತರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

02:53 PM (IST) Mar 27

ಅಪಾರ್ಟ್‌ಮೆಂಟ್‌ನ ಪೆಂಟ್‌ಹೌಸನ್ನು Airbnbಗೆ ಬಾಡಿಗೆ ನೀಡುವುದನ್ನು ವಿರೋಧಿಸಿದ್ದಕ್ಕೆ ಮಹಿಳೆ ಕೊಲೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ, ಏರ್‌ಬಿಎನ್‌ಬಿಗೆ ಪೆಂಟ್‌ಹೌಸ್‌ ಬಾಡಿಗೆ ನೀಡುವುದನ್ನು ವಿರೋಧಿಸಿದ್ದಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ವೊಬ್ಬರನ್ನು  ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತಂದೆ-ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Read Full Story

02:12 PM (IST) Mar 27

ನಾನು ಯಾರಿಗೂ ಏನೂ ಪ್ರೂವ್ ಮಾಡಬೇಕಾಗಿಲ್ಲ; ಟೀಕಾಕಾರರಿಗೆ ಶುಭ್‌ಮನ್ ಗಿಲ್ ಖಡಕ್ ಉತ್ತರ

ಐಪಿಎಲ್ ಆರಂಭಕ್ಕೂ ಮುನ್ನ, ತಮ್ಮ ಟಿ20 ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಎದ್ದಿದ್ದ ಟೀಕೆಗಳಿಗೆ ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ ಖಡಕ್ ಉತ್ತರ ನೀಡಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು ತಾನೇ ಎಂದು ಅಂಕಿಅಂಶಗಳ ಮೂಲಕ ಸ್ಪಷ್ಟಪಡಿಸಿರುವ ಅವರು, ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದಿದ್ದಾರೆ.
Read Full Story

02:11 PM (IST) Mar 27

Excise Duty - ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತ - ಕೇಂದ್ರದ ಈ ನಿರ್ಧಾರದ ಹಿಂದಿನ ಕಾರಣವೇನು?

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ, ಗ್ರಾಹಕರನ್ನು ಮತ್ತು ಆರ್ಥಿಕತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.

Read Full Story

01:25 PM (IST) Mar 27

ರಕ್ಷಕನೇ ಭಕ್ಷಕನಾದಾಗ - ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆಯನ್ನೇ ಕೊಂದ ಪಾಪಿ

ತನಗೆ ಪ್ರತಿವರ್ಷ ರಾಖಿ ಕಟ್ಟುತ್ತಿದ್ದ ವಿಧವೆ ಮಹಿಳೆಯನ್ನೇ  ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ಆತ ಆಕೆಯ ಕುಟುಂಬದೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದು, ಪೊಲೀಸರ ತನಿಖೆಯ ವೇಳೆ ಆತನ ಮನೆಯಲ್ಲೇ ಶವ ಪತ್ತೆಯಾಗಿದೆ.

Read Full Story

01:20 PM (IST) Mar 27

ಐಪಿಎಲ್ ಚಿಯರ್‌ಲೀಡರ್‌ಗಳ ಪ್ರತಿ ದಿನದ ಸಂಬಳ ಎಷ್ಟು? ಯಾವ ತಂಡ ಹೆಚ್ಚು ದುಡ್ಡು ಕೊಡುತ್ತೆ ಗೊತ್ತಾ?

ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳ ಸಂಬಳವು ಪ್ರತಿ ಫ್ರಾಂಚೈಸಿಗೆ ಭಿನ್ನವಾಗಿರುತ್ತದೆ, ಇದರಲ್ಲಿ ಕೆಕೆಆರ್ ಅತಿ ಹೆಚ್ಚು ಪಾವತಿಸುತ್ತದೆ. ಪಂದ್ಯದ ಸಂಬಳದ ಜೊತೆಗೆ, ಇವರು ಬೋನಸ್‌ಗಳು, ಪಾರ್ಟಿಗಳು ಮತ್ತು ಫೋಟೋಶೂಟ್‌ಗಳಿಂದ ಹೆಚ್ಚುವರಿ ಆದಾಯ ಗಳಿಸುತ್ತಾರೆ ಹಾಗೂ ಫ್ರಾಂಚೈಸಿಗಳು ಇವರ ಪ್ರಯಾಣ ಮತ್ತು ವಸತಿ ವೆಚ್ಚವನ್ನೂ ಭರಿಸುತ್ತವೆ.
Read Full Story

12:32 PM (IST) Mar 27

J&K ವಿಧಾನಸಭೆ ರಣರಂಗ - ಖಮೇನಿ ಹತ್ಯೆಗೆ ಪ್ರತಿಭಟನೆ, ಮೋದಿ ವಿರುದ್ಧ ಕಾಂಗ್ರೆಸ್ ಶಾಸಕ ಇರ್ಫಾನ್ ಹಫೀಜ್ ಕಿಡಿ, 'ರಾಹುಲ್ ಪಪ್ಪು' ಎಂದ ಬಿಜೆಪಿ!

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಇರಾನ್ ನಾಯಕ ಅಲಿ ಖಮೇನಿ ನಿಧನದ ಕುರಿತ ಪ್ರತಿಭಟನೆ ಮತ್ತು ರಾಹುಲ್ ಗಾಂಧಿಯವರನ್ನು 'ಪಪ್ಪು' ಎಂದು ಕರೆದಿದ್ದಕ್ಕೆ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ನಡೆದ ತೀವ್ರ ಮಾತಿನ ಚಕಮಕಿಯಿಂದಾಗಿ ರಣರಂಗವಾಗಿ ಮಾರ್ಪಟ್ಟಿತು..

Read Full Story

12:16 PM (IST) Mar 27

ನಾನು ಶಿವ, ನೀನು ಪಾರ್ವತಿ, ದಿಲ್ ಡ್ಯಾನ್ಸ್ ಆಡೋಣ ಬಾರ, ಮತ್ತೊಬ್ಬ ಜ್ಯೋತಿಷಿ ರಾಸಲೀಲೆ ಕೇಸ್

ನಾನು ಶಿವ, ನೀನು ಪಾರ್ವತಿ, ದಿಲ್ ಡ್ಯಾನ್ಸ್ ಆಡೋಣ ಬಾರ, ಹೀಗೆ ಹೇಳುತ್ತಾ ಮಹಿಳೆ ಜೊತೆ ಮಂಚದಾಟ ನಡೆಸಿದ ಮತ್ತೊಬ್ಬ ಜ್ಯೋತಿಷಿ ವಿರುದ್ದ ಕೇಸ್ ದಾಖಲಾಗಿದೆ. ನಾಸಿಕ್‌ನ ಅಶೋಕ್ ಖಾರಟ್ ಗುರೂಜಿಯ ಪ್ರಕರಣದ ಬಳಿಕ ಈ ಕೇಸ್ ಬಯಲಾಗಿದೆ.

Read Full Story

12:01 PM (IST) Mar 27

ಈ ಸಲ ಐಪಿಎಲ್‌ನಲ್ಲಿ 300+ ರನ್‌ ದಾಖಲೆ? 300+ ನಿರೀಕ್ಷೆಗೆ ಏನು ಕಾರಣ?

ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ರನ್‌ಗಳ ಹೊಳೆ ಹರಿದಿದ್ದು, ತಂಡವೊಂದು 300 ರನ್ ಗಳಿಸುವ ಸನಿಹಕ್ಕೆ ಬಂದಿದೆ. ಇಂಪ್ಯಾಕ್ಟ್‌ ಆಟಗಾರ ನಿಯಮ, ಸ್ಫೋಟಕ ಬ್ಯಾಟಿಂಗ್ ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಂತಹ ಕಾರಣಗಳಿಂದ 2026ರ ಐಪಿಎಲ್‌ನಲ್ಲಿ ಈ ಬೃಹತ್ ಮೊತ್ತ ದಾಖಲಾಗುವ ನಿರೀಕ್ಷೆ ಹೆಚ್ಚಾಗಿದೆ.
Read Full Story

11:19 AM (IST) Mar 27

ಬೆಂಗಳೂರಿಗೆ ಮರಳಿದ ಅಂತಾರಾಷ್ಟ್ರೀಯ ಕ್ರಿಕೆಟ್; ಈ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡು ಮ್ಯಾಚ್!

ಬಿಸಿಸಿಐ 2026-27ರ ತವರಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ಮರಳಿವೆ. ಈ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು ವೆಸ್ಟ್‌ಇಂಡೀಸ್‌ ವಿರುದ್ಧ ಟಿ20 ಮತ್ತು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದೆ.
Read Full Story

10:16 AM (IST) Mar 27

ಜಿಮ್‌ಗೆ ಹೋಗದೆ ಮನೆಯಲ್ಲೇ ಸುಲಭವಾಗಿ ತೂಕ ಇಳಿಸಲು 5 ಟಿಪ್ಸ್! ಟ್ರೈ ಮಾಡಿ ನೋಡಿ

ಈಗಿನ ಕಾಲದಲ್ಲಿ ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಿಮ್‌ಗೆ ಹೋಗಲು ಸಮಯವಿಲ್ಲದೆ, ತೂಕವನ್ನು ಹೇಗೆ ಇಳಿಸುವುದು ಎಂದು ತಿಳಿಯದೆ ಗೊಂದಲಕ್ಕೊಳಗಾಗಿದ್ದಾರೆ. ಅಂತಹವರಿಗಾಗಿಯೇ ಈ ಸಿಂಪಲ್ ಟಿಪ್ಸ್. ಇವುಗಳನ್ನು ಶಿಸ್ತಿನಿಂದ ಪಾಲಿಸಿದರೆ ಮನೆಯಲ್ಲೇ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

Read Full Story

10:02 AM (IST) Mar 27

ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕ 10 ರೂ ಇಳಿಸಿದ ಕೇಂದ್ರ ಸರ್ಕಾರ - ಬೆಲೆ ಏರಿಕೆ ಭೀತಿಯಲ್ಲಿದ್ದ ಜನರಿಗೆ ನೆಮ್ಮದಿ

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ದರ ಏರಿಕೆಯ ಆತಂಕದಲ್ಲಿದ್ದ ಜನರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಪ್ರತಿ ಲೀಟರ್‌ಗೆ ತಲಾ 10 ರೂಪಾಯಿ ಇಳಿಕೆ ಮಾಡಿದೆ.
Read Full Story

09:07 AM (IST) Mar 27

IPL 2026 ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ನೋಡಿ ಆರ್‌ಸಿಬಿ ತಂಡದ ಮ್ಯಾಚ್ ಟೈಮ್ ಟೇಬಲ್!

ಐಪಿಎಲ್‌ನ 2ನೇ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಏಪ್ರಿಲ್ 13 ರಿಂದ ಮೇ 24ರ ವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಈ ಲೇಖನದಲ್ಲಿ ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಸೇರಿದಂತೆ, ಉದ್ಘಾಟನಾ ಸಮಾರಂಭ ರದ್ದತಿ ಮತ್ತು ಪ್ರಮುಖ ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story

More Trending News