Published : May 09, 2026, 07:05 AM ISTUpdated : May 09, 2026, 09:55 PM IST

India Latest News Live: ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ

ಸಾರಾಂಶ

ಕೋಲ್ಕತಾ: ‘ಚುನಾವಣೆ ವೇಳೆ ಪಕ್ಷವು ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ’ ಎಂದು ಪ.ಬಂಗಾಳದ ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಭರವಸೆ ನೀಡಿದ್ದಾರೆ.

ಸಿಎಂ ಹುದ್ದೆಗೆ ತಮ್ಮ ಆಯ್ಕೆಯ ಬಳಿಕ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ’ ಎನ್ನುವ ಮೂಲಕ ಡಬಲ್‌ ಎಂಜಿನ್‌ ಸರ್ಕಾರ ಉತ್ತಮ ಆಡಳಿತ ಕೊಡಲಿದೆ ಎಂಬ ವಾಗ್ದಾನವನ್ನೂ ಅಧಿಕಾರಿ ಮಾಡಿದರು.

09:55 PM (IST) May 09

ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ

ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಬಾಂಗ್ಲಾದೇಶ, ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳನ್ನು ಕೆರಳಿಸಿದೆ. ಈ ಗೆಲುವಿನ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿದೆ.

 

Read Full Story

09:46 PM (IST) May 09

ನಟ ಶಾಹಿದ್ ಕಪೂರ್‌ಗೆ ದಾರಿ ಬಿಟ್ಟ ವಯಸ್ಸಾದ ವ್ಯಕ್ತಿ - ವೈರಲ್ ಆಯ್ತು ಹೃದಯ ಗೆದ್ದ ವಿಡಿಯೋ!

ಏರ್‌ಪೋರ್ಟ್‌ನಲ್ಲಿ ನಟ ಶಾಹಿದ್ ಕಪೂರ್‌ ಜೊತೆ ವಯಸ್ಸಾದ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿಯ ಕಾಳಜಿ ಮತ್ತು ಅದಕ್ಕೆ ಶಾಹಿದ್ ತೋರಿದ ವಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ.

Read Full Story

09:22 PM (IST) May 09

ಮಕ್ಕಳೇ ಡಿಸೈನರ್ಸ್! ಕಾಲಿನ ಮೇಲೆ ಆ ಹೊಸ ಟ್ಯಾಟೂ ಹಾಕಿಸಿಕೊಂಡ ಗ್ಲೋಬಲ್ ಪಾಪ್ ತಾರೆ ರಿಹಾನಾ!

ಗ್ಲೋಬಲ್ ಪಾಪ್ ಐಕಾನ್ ರಿಹಾನಾ ತಮ್ಮ ಕಾಲಿನ ಮೇಲೆ ಒಂದು ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದರ ವಿಶೇಷತೆ ಏನೆಂದರೆ, ಈ ಟ್ಯಾಟೂವನ್ನು ಡಿಸೈನ್ ಮಾಡಿದ್ದು ರಾಪರ್ A$AP Rocky ಜೊತೆಗಿನ ಅವರ ಮೂವರು ಮಕ್ಕಳು!

Read Full Story

09:05 PM (IST) May 09

Video - ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ - ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ

ಬಿಹಾರದ ರೈಲು ನಿಲ್ದಾಣದಲ್ಲಿ, ಸೌತೆಕಾಯಿಗಳನ್ನು ತಾಜಾ ಎಂದು ತೋರಿಸಲು ರಾಸಾಯನಿಕ ಬಣ್ಣದಲ್ಲಿ ಅದ್ದಿ ಮಾರಾಟ ಮಾಡುತ್ತಿದ್ದ ಮಹಿಳೆಯರ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

08:49 PM (IST) May 09

ಹಾಲಿವುಡ್‌ನಲ್ಲಿ ಬಾಲಿವುಡ್ ನಟಿ ಹವಾ - ಅಲೌಕಿಕ ಯುದ್ಧದ ಕಥೆಯಲ್ಲಿ ದಿಶಾ ಪಟಾನಿ ಹೊಸ ಅವತಾರ!

ಬಾಲಿವುಡ್‌ ನಟಿ ದಿಶಾ ಪಟಾನಿ ನಟನೆಯ 'ದಿ ಪೋರ್ಟಲ್ ಆಫ್ ಫೋರ್ಸ್' ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಇದರಲ್ಲಿ ಅವರು ಎರಡು ಬಣಗಳ ನಡುವೆ ಸಿಲುಕುವ 'ಜೆಸ್ಸಿಕಾ' ಎಂಬ ವಿಶೇಷ ಶಕ್ತಿಯುಳ್ಳ ಪಾತ್ರ ಮಾಡಿದ್ದಾರೆ.

Read Full Story

08:49 PM (IST) May 09

ದಳಪತಿ ವಿಜಯ್ 'SSLC ಮಾಕ್ಸ್‌ಕಾರ್ಡ್' ವೈರಲ್ ಆಗಿರೋ ಬೆನ್ನಲ್ಲೇ ಓಡಾಡ್ತಿರೋ ಕಾಮೆಂಟ್ ಏನ್ ಗೊತ್ತಾ?

ಸಿನಿಮಾ ಪರದೆಯ ಮೇಲೆ ನೂರಾರು ವಿಲನ್‌ಗಳನ್ನು ಏಕಾಂಗಿಯಾಗಿ ಚಚ್ಚಿ ಹಾಕುವ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣದ ಲೇಕ್ಕಾಚಾರ ಮಾಡುವ 'ದಳಪತಿ' ವಿಜಯ್ ಅವರ ಹಳೆಯ ರಿಪೋರ್ಟ್ ಕಾರ್ಡ್ ಈಗ ಇಡೀ ಸೌತ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 

Read Full Story

08:47 PM (IST) May 09

ಬಿಸಿಸಿಐ ACU ದಾಳಿಯಲ್ಲಿ ಸಿಕ್ಕಿಬಿದ್ದ ಐಪಿಎಲ್ ಸ್ಟಾರ್ ಪ್ಲೇಯರ್, ಹೊಟೆಲ್ ರೂಂನ ತಡರಾತ್ರಿ ಸೀಕ್ರೆಟ್

ಆಟಾಗಾರರು ಅಪರಿಚಿತರು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯಸ್ಥರು ಐಪಿಎಲ್ ಸ್ಟಾರ್ ಆಟಗಾರರನ್ನು ಹೊಟೆಲ್ ರೂಂಗಳಲ್ಲಿ ಭೇಟಿಯಾಗುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ದಳ ಅಧಿಕಾರಿಗಳ ಈ ಕುರಿತ ತಂಡದ ಮ್ಯಾನೇಜರ್ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.

Read Full Story

08:27 PM (IST) May 09

ಯಾವ ಫೋಟೋ ನೋಡಿದ್ರೂ ಕುಂಬಳಕಾಯಿ ತರ ಕಾಣ್ತಿದ್ದೆ, ಆಂಟಿ ಅಂದಾಗ ಬೇಜಾರಾಯ್ತು - ನಟಿ ಜ್ಯೋತಿ ಕೃಷ್ಣ ನೋವಿನ ಮಾತು

ನಟಿ ಜ್ಯೋತಿ ಕೃಷ್ಣ ತಮ್ಮ ತೂಕ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಪ್ರಯಾಣ ಮತ್ತು ಮಾನಸಿಕ ಒತ್ತಡದಿಂದಾಗಿ 81 ಕೆ.ಜಿ ತೂಕ ಹೆಚ್ಚಾಗಿತ್ತು, ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಿತ್ತು ಎಂದು ಜ್ಯೋತಿ ಕೃಷ್ಣ ಹೇಳಿದ್ದಾರೆ.

Read Full Story

08:21 PM (IST) May 09

ರಶ್ಮಿಕಾ ಜೊತೆ ಬಾಲ್ಕನಿಗೆ ಬಂದು ವಿಜಯ್ ಮಾಡಿದ 'ಈ ಕೆಲಸ' ವೈರಲ್; ಇಷ್ಟು ವರ್ಷದಲ್ಲಿ ಇದೇ ಮೊದಲಂತೆ!

ವಿಜಯ್ ನಿವಾಸದ ಮುಂದೆ ಶನಿವಾರ ಬೆಳ್ಳಂಬೆಳಗ್ಗೆಯೇ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಕಂಡು ವಿಜಯ್, ಪ್ರೀತಿಯ ಪತ್ನಿ ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದು ಬಾಲ್ಕನಿಗೆ ಆಗಮಿಸಿದರು. ದಂಪತಿಗಳಿಬ್ಬರೂ ಮುಗುಳ್ನಗುತ್ತಾ ಕೈ ಬೀಸುತ್ತಿದ್ದ ದೃಶ್ಯ ವೈರಲ್ ಆಗಿದೆ.

Read Full Story

08:15 PM (IST) May 09

ನಾಳೆ 3 - 45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ, ರಾಜ್ಯಪಾಲರ ಒಪ್ಪಿಗೆ

ಎಲ್ಲಾ ಕಸರತ್ತು ಬಳಿಕ ನಟ ವಿಜಯ್ ಟಿವಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತಿದೆ. ನಾಳೆ 3.45ಕ್ಕೆ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Read Full Story

07:28 PM (IST) May 09

ಹೋಟೆಲ್, ಟಿಕೆಟ್‌ಗೂ ಚೌಕಾಸಿ ಮಾಡ್ತಾರೆ, ಅಲ್ಲಿ ಗೌರವ ಸಿಗಲ್ಲ - ಬಾಲಿವುಡ್ ಅನುಭವ ಬಿಚ್ಚಿಟ್ಟ ನಟಿ ಸಿಮ್ರಾನ್!

ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ನಟಿ ಸಿಮ್ರಾನ್, ಪ್ರೇಕ್ಷಕರ ಹಾಟ್ ಫೇವರಿಟ್. ಬಾಲಿವುಡ್ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ, ಸಿಮ್ರಾನ್ ಹೆಚ್ಚು ಸಕ್ರಿಯರಾಗಿದ್ದು ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ.

Read Full Story

07:15 PM (IST) May 09

ರೈಲಿನಲ್ಲಿ ಅಜ್ಜನ ಪಕ್ಕ ಮಲಗಿದ್ದ 6 ವರ್ಷ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ, ಆರೋಪಿ ಅರೆಸ್ಟ್

ಸೀಟು ಸಿಗದೆ ಅಜ್ಜನ ಪಕ್ಕ ರೈಲು ಕೋಚ್‌ನ ನೆಲದಲ್ಲಿ ಮಲಗಿದ್ದ 6 ವರ್ಷದ ಬಾಲಕಿ ಮೇಲೆ ಲೈ0ಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆ ಸಂಬಂಧ 40ರ ಹರೆಯದ ಆರೋಪಿಯನ್ನು ಬಂಧಿಸಲಾಗಿದೆ.

 

Read Full Story

07:03 PM (IST) May 09

Drishyam 3 - 'ಪ್ರತಿ ಹುಟ್ಟುಹಬ್ಬಕ್ಕೂ ಸಿನಿಮಾ ರಿಲೀಸ್ ಮಾಡೋಕಾಗಲ್ಲ, ಇದು ಸ್ಪೆಷಲ್' - ಮೋಹನ್‌ಲಾಲ್

ಚಿತ್ರರಂಗದಲ್ಲಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಜೋಡಿಯ 'ದೃಶ್ಯಂ 3'. ಈ ಸಿನಿಮಾ ಮೇ 21 ರಂದು ಮೋಹನ್‌ಲಾಲ್ ಅವರ ಹುಟ್ಟುಹಬ್ಬದ ದಿನದಂದೇ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.

Read Full Story

06:45 PM (IST) May 09

ಧುರಂಧರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ - ಮೂರನೇ ಭಾಗದ ಬಗ್ಗೆ ಸುಳಿವು ಕೊಟ್ಟ ಸಹ ನಿರ್ಮಾಪಕಿ!

ರಣವೀರ್ ಸಿಂಗ್ ನಟನೆಯ ಧುರಂಧರ್-1 ಚಿತ್ರ ಹಿಟ್ ಆಗಿದೆ. ಧುರಂಧರ್-2 ಚಿತ್ರವೂ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಇದೀಗ ಮುಂದಿನ ಭಾಗದ ಬಗ್ಗೆ ಸಹ ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಸುಳಿವು ಕೊಟ್ಟಿದ್ದಾರೆ.

Read Full Story

06:41 PM (IST) May 09

ಅಲ್ಲು ಕುಟುಂಬದಿಂದ ಪುಷ್ಪ 2 ಸಂತ್ರಸ್ತನ ಭೇಟಿ, ಕಾಲ್ತುಳಿತದಲ್ಲಿ ಗಾಯಗೊಂಡ ಶ್ರೀತೇಜ್​​ ಹೆಸರಲ್ಲಿ 2 ಕೋಟಿ ಠೇವಣಿ!

'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬವು ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಿ, ಗಾಯಗೊಂಡ ಬಾಲಕನ ಹೆಸರಲ್ಲಿ 2 ಕೋಟಿ ಠೇವಣಿ ಇಟ್ಟಿದೆ.
Read Full Story

06:35 PM (IST) May 09

ನಟ ವಿಜಯ್ ಭೇಟಿಗೆ ರಾಜ್ಯಪಾಲರ ಅವಕಾಶ, ನಾಳೆ ಸಿಎಂ ಆಗಿ ಪ್ರಮಾಣಚವನ ಸಾಧ್ಯತೆ

ತಮಿಳುನಾಡು ರಾಜ್ಯಪಾಲರು ತಮ್ಮ ಕೇರಳ ಪ್ರವಾಸ ರದ್ದು ಮಾಡಿ ನಟ ವಿಜಯ್ ಜೊಸೆಫ್ ಭೇಟಿಗೆ ಸಮಯ ನೀಡಿದ್ದಾರೆ. ನಾಳೆ ನಟ ವಿಜಯ್ ಜೊಸೆಫ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

Read Full Story

06:12 PM (IST) May 09

ಸರ್ಕಾರ ರಚನೆ, ಪ್ರಮಾಣವಚನ ನಡುವೆ ರಾಜಕೀಯ ಬಿರುಗಾಳಿ, ಸಚಿವ ಸಂಜೀವ್ ಅರೋರಾ ಅರೆಸ್ಟ್

ಸರ್ಕಾರ ರಚನೆ ಕಸರತ್ತು, ಪ್ರಮಾಣವಚನ ಸಂಭ್ರಮಗಳ ನಡುವೆ ರಾಜಕೀಯ ಬಿರುಗಾಳಿ ಎದ್ದಿದೆ. ಬರೋಬ್ಬರಿ 100 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಪ್ ಸಚಿವ ಅರೆಸ್ಟ್ ಆಗಿದ್ದಾರೆ.

 

Read Full Story

06:04 PM (IST) May 09

ರಾಜಕೀಯದ ಹುಚ್ಚು ಹಿಡಿಸಿದ್ದ ಅಪ್ಪನ ವಿರುದ್ಧವೇ ತಿರುಗಿ ನಿಂತ ವಿಜಯ್, ತಂದೆ ಪಕ್ಷ ವಿರೋಧಿಸಿ, ಟಿವಿಕೆ ಕಟ್ಟಿದ ಕಥೆ!

ನಟ ವಿಜಯ್ ರಾಜಕೀಯ ಪ್ರವೇಶದ ಕನಸು ಕಂಡಿದ್ದು ಅವರ ತಂದೆ ಎಸ್.ಎ. ಚಂದ್ರಶೇಖರ್. 2020ರಲ್ಲಿ ಮಗನಿಗಾಗಿ ಪಕ್ಷ ಸ್ಥಾಪಿಸಿದಾಗ, ವಿಜಯ್ ಅದನ್ನು ವಿರೋಧಿಸಿ, ತಮ್ಮ ಹೆಸರು ಬಳಸದಂತೆ ತಂದೆ-ತಾಯಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ, ವಿಜಯ್ ತಮ್ಮದೇ ಟಿವಿಕೆ ಪಕ್ಷ ಸ್ಥಾಪಿಸಿ, ತಂದೆಯ ಹಳೆಯ ಕನಸನ್ನು ನನಸು ಮಾಡಿದ್ದಾರೆ.
Read Full Story

05:44 PM (IST) May 09

ನಟ ವಿಜಯ್ ಸರ್ಕಾರ ರಚನೆ ಖಚಿತ ಬೆನ್ನಲ್ಲೇ ಎಐಎಡಿಎಂಕೆ 30 ಬಂಡಾಯ ಶಾಸಕರ ಮಹತ್ವದ ಸಭೆ

ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.

Read Full Story

05:41 PM (IST) May 09

ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್‌, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್‌, ವಿಸಿಕೆ ಹಾಗೂ ಐಯುಎಂಎಲ್‌ ಬೆಂಬಲ ನೀಡಿವೆ, ಇದರಿಂದ ಶಾಸಕರ ಬಲ 120ಕ್ಕೆ ಏರಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

Read Full Story

05:17 PM (IST) May 09

ಬಂಗಾಳದಲ್ಲಿ ಬಿಜೆಪಿ ಸರ್ಕಾರ, 15 ವರ್ಷ ಬಳಿಕ ಸಿಪಿಎಂ ಪತ್ರಿಕೆಗೆ ಸಿಕ್ತು ಸರ್ಕಾರಿ ಜಾಹೀರಾತು

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ತಮ್ಮ ಪಕ್ಷದ ಬೆಂಬಲದ, ನಾಯಕರ ಪತ್ರಿಕೆ, ತಮ್ಮ ಪರವಾಗಿರುವ ಪತ್ರಿಕೆ, ಮಾಧ್ಯಮಗಳಿಗೆ ಜಾಹೀರಾತು ನೀಡುವ ಪದ್ಧತಿ ಇತ್ತು. ಇದೀಗ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೇ ಸಿಪಿಎಂ ಪಕ್ಷದ ಪತ್ರಿಕೆಗೆ ಜಾಹೀರಾತು ಸಿಕ್ಕಿದೆ.

Read Full Story

05:13 PM (IST) May 09

ತ್ರಿಷಾ ಲಕ್ಸುರಿ ಲೈಫ್ ಈಗ ರಾಜಕೀಯ ಚರ್ಚೆಯ ಹಾಟ್ ಟಾಪಿಕ್ - ತಲೈವಿ ಆಗ್ತಾರಾ ವಿಜಯ್ ದೇವತೆ?

ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ವಿಜಯ ಸಾಧಿಸಿ ಸಿಎಂ ಆಗುವ ಹೊಸ್ತಿಲಿನಲ್ಲಿರೋವಾಗ, ತ್ರಿಷಾ ಹೆಸರು ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ದಳಪತಿ ಗೆಳತಿ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಬರ್ತಾರೆ ಅಂತ ಸುದ್ದಿಯಾಗ್ತಾ ಇದೆ.

Read Full Story

05:12 PM (IST) May 09

BREAKING - ಕೊನೆಗೂ ಮುಗಿದ ಅನಿಶ್ಚಿತತೆ - ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

Read Full Story

04:55 PM (IST) May 09

ರೇ*ಪಿಸ್ಟ್​ಗೆ ಪೊಲೀಸರ ರಕ್ಷಣೆ; ಪದೇ ಪದೇ ಜಾಮೀನು- ಕೋರ್ಟ್​ನಲ್ಲಿಯೇ ಇರಿದು ಕೊಂದ ಮಹಿಳೆಯರು

ನ್ಯಾಯ ವಿಳಂಬದಿಂದ ಬೇಸತ್ತ ನಾಗ್ಪುರದ 200 ಮಹಿಳೆಯರು, ಸರಣಿ ಅ*ತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ಪದೇ ಪದೇ ಜಾಮೀನು ಪಡೆಯುತ್ತಿದ್ದ ರೇಪಿಸ್ಟ್ ಅಕ್ಕು ಯಾದವ್‌ನನ್ನು ಕೋರ್ಟ್ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಿದರು. ದಶಕಗಳ ಕಾಲ ನೋವುಂಡಿದ್ದ ಮಹಿಳೆಯರು 15 ನಿಮಿಷಗಳಲ್ಲಿ ತಮ್ಮ ಆಕ್ರೋಶವನ್ನು ತೀರಿಸಿಕೊಂಡರು, ನಂತರ ಕೋರ್ಟ್ ಇವರನ್ನು ಖುಲಾಸೆಗೊಳಿಸಿತು.

Read Full Story

04:53 PM (IST) May 09

ಸಿನಿಮಾದ ಪಂಚ್ ಡೈಲಾಗ್ ರಾಜಕೀಯದಲ್ಲಿ ವರ್ಕೌಟ್ ಆಗುತ್ತಾ? ವಿಜಯ್‌ಗೆ ಕಠಿಣ ಪರೀಕ್ಷೆ!

ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಯನ್ನ ಹಿಂದಿಕ್ಕಿ ವಿಜಯ್ ನಾಯಕತ್ವದ ಟಿವಿಕೆ ಪಾರ್ಟಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಳಪತಿ ವಿಜಯ್ ಗುರುವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಅಂತ ಹೇಳಲಾಗಿತ್ತು.

Read Full Story

04:43 PM (IST) May 09

Vi ನಿಂದ ಹೊಸ ಹೈಬ್ರಿಡ್ ಪ್ರಿಪೇಯ್ಡ್ ಪ್ಲಾನ್ ರಿಲೀಸ್‌ - ಏರ್‌ಟೆಲ್‌ ಗ್ರಾಹಕರೇ ನೇರ ಟಾರ್ಗೆಟ್‌!

ವೋಡಾಫೋನ್ ಐಡಿಯಾ (Vi) ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ₹4,997 ರ 'ಹೈಬ್ರಿಡ್' ಪ್ರಿಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ. ಈ 365 ದಿನಗಳ ವ್ಯಾಲಿಡಿಟಿಯ ಪ್ಲ್ಯಾನ್, ಭಾರತದಲ್ಲಿ ದೈನಂದಿನ ಡೇಟಾ, ಕರೆ ಸೌಲಭ್ಯದ ಜೊತೆಗೆ 100ಕ್ಕೂ ಹೆಚ್ಚು ದೇಶಗಳಲ್ಲಿ ಅಂತರಾಷ್ಟ್ರೀಯ ರೋಮಿಂಗ್ ಪ್ರಯೋಜನಗಳನ್ನು ನೀಡುತ್ತದೆ.
Read Full Story

04:26 PM (IST) May 09

ವಿಜಯ್ ಗೆಲುವಿನಿಂದ ತಮಿಳು ಸಿನಿರಂಗಕ್ಕೆ ಶಾಕ್ - ರಜನಿಕಾಂತ್-ಕಮಲ್​​ ಹಾಸನ್ ಸಿನಿಮಾ ಭವಿಷ್ಯ ಏನು?

ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಹೀನಾಯ ಸೋಲಿನ ಪರಿಣಾಮ ಅಷ್ಟಿಷ್ಟಲ್ಲ. ಇದು ತಮಿಳು ಚಿತ್ರರಂಗದ ಮೇಲೆ ಅದರಲ್ಲೂ ಪ್ರಭಾವಿ ಹೀರೋಗಳಿಗೆ ನಡುಕ ಹುಟ್ಟಿಸಿದೆ. ದಶಕಗಳ ಬಳಿಕ ಇವರಿಬ್ಬರು ಒಂದಾಗಿ ತೆರೆ ಹಂಚಿಕೊಳ್ಳೋ ಕನಸು ಕಂಡಿದ್ರು.

Read Full Story

04:13 PM (IST) May 09

ತ್ರಿಷಾ ತಿರುಚ್ಚಿ ತಲೈವಿ - ದಳಪತಿ ವಿಜಯ ದೇವತೆ ರಾಜಕೀಯ ಎಂಟ್ರಿ ಖಚಿತ ಎಂದ ಜ್ಯೋತಿಷಿ!

ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ದಳಪತಿ ಗೆಳತಿ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ.

Read Full Story

03:51 PM (IST) May 09

ಐಪಿಎಲ್ 2026 ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ - ಟಿವಿ ರೇಟಿಂಗ್ ಮಹಾ ಕುಸಿತ!

ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಸಾಂಪ್ರದಾಯಿಕ ಟಿವಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಡಿಜಿಟಲ್ ವೇದಿಕೆಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ವೀಕ್ಷಕರು ಟಿವಿಯಿಂದ ಸ್ಮಾರ್ಟ್‌ಫೋನ್‌ಗಳಿಗೆ ಸ್ಥಳಾಂತರಗೊಂಡಿದ್ದಾರೆ.

Read Full Story

03:36 PM (IST) May 09

ನಟ ವಿಜಯ್ ಸರ್ಕಾರ ರಚನೆ ಡೀಲ್ ಫೈನಲ್? ಸುಳಿವು ನೀಡಿದ ಪಳನಿಸ್ವಾಮಿ ಪೋಸ್ಟ್

ತಮಿಳುನಾಡು ರಾಜಕೀಯಲ್ಲಿ ಮೇಲಿಂದ ಮೇಲೆ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾಡಿದ ಪೋಸ್ಟ್ ನಟ ವಿಜಯ್ ಸಿಎಂ ಆಗೋದು ಖಚಿತಪಡಿಸುತ್ತಿದೆಯಾ? ಇಪಿಎಸ್ ಪೋಸ್ಟ್‌ನಲ್ಲಿ ಏನಿದೆ?

 

Read Full Story

03:25 PM (IST) May 09

ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?

ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಪರದಾಡಿ, ಕೊನೆಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ.
Read Full Story

03:01 PM (IST) May 09

ಮದುವೆಯ ವೇಳೆ ಅಭಿಷೇಕ್‌ ತಲೆಗೆ ಧರಿಸಿದ್ದ ಆಭರಣವನ್ನ ಅಂಬಾನಿ ಕುಟುಂಬಕ್ಕೆ ಮಾರಿದ್ರಾ ಬಚ್ಛನ್‌ ಫ್ಯಾಮಿಲಿ?

ಅಭಿಷೇಕ್ ಬಚ್ಚನ್ ಅವರ ಮದುವೆಯ ಆಭರಣ ಮತ್ತು ಇತ್ತೀಚೆಗೆ ಈಶಾ ಅಂಬಾನಿ ಮೆಟ್ ಗಾಲಾದಲ್ಲಿ ಧರಿಸಿದ್ದ ಆಭರಣದ ನಡುವಿನ ಅಚ್ಚರಿಯ ಹೋಲಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಚ್ಚನ್ ಕುಟುಂಬವು ತಮ್ಮ ಪಾರಂಪರಿಕ ಆಭರಣವನ್ನು ಅಂಬಾನಿಗಳಿಗೆ ಮಾರಾಟ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ.

Read Full Story

02:27 PM (IST) May 09

ತಮಿಳುನಾಡು ರಾಜಕೀಯದ ಅತಿದೊಡ್ಡ ಟ್ವಿಸ್ಟ್ - ಕೇವಲ 2 ಸೀಟು ಗೆದ್ದರೂ ಸಿಎಂ ಆಗ್ತಾರಾ ತಿರುಮಾವಳವನ್? ವಿಜಯ್ ಹಾದಿಗೆ ದ್ರಾವಿಡ ಕಂಟಕ!

ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಪಕ್ಷ ಬಹುಮತದ ಅಂಚಿನಲ್ಲಿದೆ. ವಿಜಯ್‌ರನ್ನು ಅಧಿಕಾರದಿಂದ ದೂರವಿಡಲು, ದ್ರಾವಿಡ ಪಕ್ಷಗಳು 2 ಸ್ಥಾನ ಗೆದ್ದ ವಿಸಿಕೆ ನಾಯಕ ತಿರುಮಾವಳವನ್ ಅವರನ್ನೇ ಮುಖ್ಯಮಂತ್ರಿ ಮಾಡುವ ಅಚ್ಚರಿಯ ತಂತ್ರ ರೂಪಿಸುತ್ತಿವೆ.
Read Full Story

01:33 PM (IST) May 09

West Bengal ಗುರು ಔಟ್​, ಶಿಷ್ಯ ಇನ್​ - ಸಿಎಂ ಸ್ಥಾನ ಏರಿದ ದೀದಿ ಮಾಜಿ ಬಲಗೈ ಬಂಟ - ಗಮನ ಸೆಳೆದ 98ರ ವೃದ್ಧ

ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಂಡಿದ್ದು, ಬಿಜೆಪಿ 207 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದೆ. ಒಂದು ಕಾಲದಲ್ಲಿ ದೀದಿಯ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Read Full Story

01:26 PM (IST) May 09

70ನೇ ವಯಸ್ಸಿನಲ್ಲಿ 20ರ ಯುವತಿಯನ್ನು 4ನೇ ಮದುವೆಯಾದ 11 ಮಕ್ಕಳ ತಂದೆ; ದೂರು ದಾಖಲು

70 ವರ್ಷದ ವ್ಯಕ್ತಿ ತಮಗಿಂತ 50 ವರ್ಷ ಚಿಕ್ಕ ಯುವತಿಯನ್ನು ನಾಲ್ಕನೇ ಮದುವೆಯಾಗಿದ್ದಾರೆ. ಈ ಮದುವೆಯಿಂದಾಗಿ ಅವರ ಎರಡನೇ ಪತ್ನಿ ಆಸ್ತಿ ಕಬಳಿಕೆ ಮತ್ತು ಜೀವಬೆದರಿಕೆ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Read Full Story

01:01 PM (IST) May 09

ರಾಜ್ಯದ ಜನರಿಗೆ ಗುಡ್​ ನ್ಯೂಸ್​ - ಮೂರು ಡೆಮು ರೈಲುಗಳು ಕಾಯಂ- 6 ಜಿಲ್ಲೆಗಳ ಫುಲ್​ ಡಿಟೇಲ್ಸ್​ ಇಲ್ಲಿದೆ

ಭಾರತೀಯ ರೈಲ್ವೆಯು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಮೂರು ಹೊಸ ಡೆಮು ರೈಲು ಸೇವೆಗಳನ್ನು ಕಾಯಂಗೊಳಿಸಿದೆ. ಈ ರೈಲುಗಳು ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ, ಮತ್ತು ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸಲಿದ್ದು, ಪ್ರಯಾಣವನ್ನು ಸುಲಭಗೊಳಿಸಲಿವೆ.
Read Full Story

12:19 PM (IST) May 09

ಬಾಹ್ಯಾಕಾಶದ 'ರಹಸ್ಯ' ಏಲಿಯನ್ಸ್‌ ಫೈಲ್‌ ಓಪನ್ ಮಾಡಿದ ಪೆಂಟಗನ್‌ - ಚಂದ್ರನ ಮೇಲೆ ವಿಚಿತ್ರ ಬೆಳಕು ಕಂಡಿದ್ದ ಗಗನಯಾತ್ರಿಗಳು!

ಅಮೆರಿಕದ ರಕ್ಷಣಾ ಇಲಾಖೆ 'ಪೆಂಟಗನ್' ದಶಕಗಳಷ್ಟು ಹಳೆಯದಾದ 'ಹಾರುವ ತಟ್ಟೆ' (UFO) ಕುರಿತ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿದೆ. ಗಗನಯಾತ್ರಿಗಳು ಕಂಡ ವಿಚಿತ್ರ ಬೆಳಕುಗಳು, ಹ್ಯೂಮನಾಯ್ಡ್‌ಗಳ ಉಲ್ಲೇಖಗಳಿದ್ದರೂ, ಇವು ಪರಕೀಯ ಜೀವಿಗಳೇ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.

Read Full Story

11:44 AM (IST) May 09

ಸಿಎಂ ಆಗಿ ಸುವೇಂದು ಪ್ರಮಾಣವಚನ, ವೇದಿಕೆಯಲ್ಲಿ ಬಂಗಾಳ ಬಿಜೆಪಿಯ ಹಿರಿಯ ನಾಯಕನ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ!

ದಶಕಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Read Full Story

10:05 AM (IST) May 09

Titan Mission - ಚಂದ್ರ, ಮಂಗಳ ಆಯ್ತು, ಈಗ ಶನಿ ಸರದಿ! ಮನುಷ್ಯನ ಮುಂದಿನ ಟಾರ್ಗೆಟ್ ಟೈಟಾನ್

ವಿಜ್ಞಾನಿಗಳು ಶನಿಗ್ರಹದ ಉಪಗ್ರಹವಾದ ಟೈಟಾನ್ ಅನ್ನು ಮಾನವನ ಮುಂದಿನ ಸಂಭಾವ್ಯ ನೆಲೆಯಾಗಿ ಪರಿಗಣಿಸುತ್ತಿದ್ದಾರೆ. ನಾಸಾದ 'ಡ್ರಾಗನ್‌ಫ್ಲೈ' ಯೋಜನೆ ಮತ್ತು ಮುಂಬರುವ ಶೃಂಗಸಭೆಯು ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳಾಗಿದ್ದು, ಅಲ್ಲಿನ ವಿಪರೀತ ಶೀತದಂತಹ ಸವಾಲುಗಳ ನಡುವೆಯೂ ಟೈಟಾನ್ ಅನ್ನು ಆಕರ್ಷಕವಾಗಿಸಿದೆ.

Read Full Story

09:30 AM (IST) May 09

Operation Sindoora anniversary - ಭಾರತೀಯ ಸೇನೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದೇಕೆ? ಪಾಕ್ ಸೇನಾ ವಕ್ತಾರನ ಈ ಪ್ರಶ್ನೆ ಫುಲ್ ಟ್ರೋಲ್!

ಆಪರೇಷನ್‌ ಸಿಂದೂರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾರತೀಯ ಸೇನಾಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದ್ದಕ್ಕೆ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್‌ ಷರೀಫ್‌ ಚೌಧರಿ ಪ್ರಶ್ನಿಸಿದ್ದಾರೆ. 

Read Full Story

More Trending News