ತಿರುವನಂತಪುರ: ಕರ್ನಾಟಕದ ಯಲಹಂಕದ ಕೋಗಿಲು ಬಡಾವಣೆ ಅಕ್ರಮ ಮನೆ ನೆಲಸಮ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಈಗ ದೆಹಲಿಯಲ್ಲಿನ ಅಕ್ರಮ ಕಟ್ಟಡ ಧ್ವಂಸ ಕುರಿತು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಟರ್ಕ್‌ಮನ್ ಗೇಟ್ ಅಕ್ರಮ ಒತ್ತುವರಿ ತೆರವು ಕುರಿತು ಎಕ್ಸ್‌ನಲ್ಲಿ ‘ದೆಹಲಿಯ ಬಿಜೆಪಿ ಸರ್ಕಾರವು ಸಂಘ ಪರಿವಾರದ ವಿಭಜನೆ ನೀತಿಯನ್ನು ಜಾರಿಗೊಳಿಸುತ್ತಿದೆ. ಅಲ್ಪಸಂಖ್ಯಾತರು, ಶೋಷಿತರನ್ನು ಗುರಿ ಮಾಡುತ್ತಿರುವ ಈ ಬುಲ್‌ಡೋಸರ್ ರಾಜ್‌ನನ್ನು ಜಾತ್ಯಾತೀತರು, ಪ್ರಜಾಪ್ರಭುತ್ವ ಪಡೆಗಳು ತಡೆಯಬೇಕು. ದೆಹಲಿ ಘಟನೆಯು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿವೆ’ ಎಂದು ಕಿಡಿಕಾರಿದರು.

10:00 PM (IST) Jan 08
Arrest Warrant Issued Against Pakistan PM Shehbaz Sharif by Baloch Leaders ಪಾಕಿಸ್ತಾನದಿಂದ ದೊಡ್ಡ ಸುದ್ದಿ ಹೊರಬಂದಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ವಿರುದ್ಧ ಪಾಕಿಸ್ತಾನದಿಂದಲೇ ಬಂಧನ ವಾರಂಟ್ ಹೊರಡಿಸಲಾಗಿದೆ. ಇದು ಚರ್ಚೆಯ ವಿಷಯವಾಗಿದೆ.
09:10 PM (IST) Jan 08
ಪೊಲೀಸರಿಗೆ ತಲೆನೋವಾಗಿದ್ದ ವಿಐಪಿ ಕಾರು ಕಳ್ಳನನ್ನು ಯಾವುದೇ ಕುರುಹುಗಳಿಲ್ಲದೆ ಹಿಡಿಯುವುದು ಕಷ್ಟವಾಗಿತ್ತು. ಆದರೆ, ಕದ್ದ ಕಾರಿನೊಳಗೆ ಸಿಕ್ಕ ಸತ್ತ ಸೊಳ್ಳೆಯಿಂದ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ರೋಚಕ ಘಟನೆ ಹೇಗೆ ನಡೆಯಿತು ಎನ್ನೋದನ್ನು ನೋಡಿ!
08:22 PM (IST) Jan 08
Who is Vedanta’s Successor After Anil Agarwal’s Son Agnivesh’s Death ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ನಿಧನರಾಗಿದ್ದಾರೆ. ಇದರ ನಂತರ ವೇದಾಂತ ಗ್ರೂಪ್‌ಗೆ ಮುಂದಿನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ.
07:58 PM (IST) Jan 08
ಸಾಗರ ಯುದ್ಧ ಆರಂಭಿಸಿತಾ ಅಮೆರಿಕ? ವಶಪಡಿಸಿದ ರಷ್ಯಾ ತೈಲ ಟ್ಯಾಂಕರ್‌ಲ್ಲಿ ಮೂವರು ಭಾರತೀಯರು ಇದ್ದಾರೆ ಎಂದು ವರದಿಯಾಗಿದೆ. ವೆನಿಜುವೆಲಾದಿಂದ ಚೇಸ್ ಮಾಡಿ ಈ ತೈಲ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ.
07:31 PM (IST) Jan 08
ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ, ಭಾರತದ ಕ್ರೀಡೆಯಲ್ಲಿನ ಮಹತ್ತರ ಬದಲಾವಣೆಗೆ ಕಾರಣವಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕನ ಪಾಡೆಲ್ ಸ್ಪೋರ್ಟ್ಸ್ ಹೂಡಿಕೆ ಏನು?
07:27 PM (IST) Jan 08
Ritika Sajdeh Buys ₹26.30 Cr Luxury Home in Mumbai’s Ahuja Towers ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ರೋಹಿತ್ ಶರ್ಮ ಐಪಿಎಲ್ ಸ್ಯಾಲರಿಗಿಂತ ಹೆಚ್ಚಿನ ಹಣ ಕೊಟ್ಟು ಅವರು ಈ ಮನೆ ಖರೀದಿ ಮಾಡಿದ್ದಾರೆ.
07:12 PM (IST) Jan 08
20 ನಿಮಿಷ ಧೈರ್ಯ ತೆಗೆದುಕೊಂಡು ಕ್ಲಿಫ್ ಡೈವ್, ಗೋವಾದಲ್ಲಿ ನಟಿಯ ಎದೆ ಝಲ್ಲೆನಿಸುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲ್ಲು ಬಂಡೆಗಳ ಮೇಲಿನಿಂದ ಕ್ಲಿಫ್ ಡೈವ್ ಮಾಡಿರುವ ನಟಿ ಹಲವರ ಹುಬ್ಬೇರಿಸಿದ್ದಾರೆ. ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
06:29 PM (IST) Jan 08
ಮಾರುಕಟ್ಟೆಗೆ ಬಂದಿದೆ ಅಡ್ವಾನ್ಸ್ ಲಾಲಿಪಾಪ್, ಚೀಪಿದರೆ ಮ್ಯೂಸಿಕ್ ಕೇಳುವ ಕ್ಯಾಂಡಿ ಬೆಲೆ ಎಷ್ಟು?, ಮಕ್ಕಳದಿಂದ ಹಿಡಿದು ದೊಡ್ಡವರೆಗೂ ಲಾಲಿಪಾಪ್ ಚಾಕ್ಲೇಟ್ ಸ್ವಾದ ಬಹುತೇಕರು ಅನುಭವಿಸಿರುತ್ತಾರೆ. ಇದೀಗ ನಿಮ್ಮ ಬಾಲ್ಯದ ಸವಿನೆನಪಿಗೆ ಮ್ಯೂಸಿಕ್ ಸೇರಿಕೊಂಡಿದೆ. ಇದು ಹೊಸ ಲಾಲಿಪಾಪ್
06:10 PM (IST) Jan 08
ಕೇರಳದಲ್ಲಿ ಭಿಕ್ಷುಕರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ನಂತರ ಆತನ ಬಳಿ ಇದ್ದ ಪೆಟ್ಟಿಗೆಯನ್ನು ತೆರೆದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅದರೊಳಗಿರುವ ಭಾರಿ ಮೊತ್ತದ ಹಣ ನೋಡಿ ಶಾಕ್ ಕಾದಿತ್ತು. ಯಾರಿಗೂ ಆ ಭಿಕ್ಷುಕನ ಬಳಿ ಅಷ್ಟೊಂದು ಮೊತ್ತದ ಹಣ ಇರಬಹುದು ಎಂಬ ಕಲ್ಪನೆಯೂ ಇರಲಿಲ್ಲ.
06:07 PM (IST) Jan 08
ಶೋಯೆಬ್ ಮಲೀಕ್ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದ ಆಘಾತಕಾರಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ದುಬೈನಲ್ಲಿ ಮಗನೊಂದಿಗೆ ವಾಸಿಸುತ್ತಿರುವ ಅವರು, ಟೆನಿಸ್ ನಿವೃತ್ತಿಯ ನಂತರ ತಮ್ಮ ಫಿಟ್‌ನೆಸ್ ಮತ್ತು ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
05:02 PM (IST) Jan 08
ರಿಲೋಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?, ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ಪಮೇಲಾ ಗೋಸ್ವಾಮಿ ಇದೀಗ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಬ್ಯೂಟಿ, ಜನಪ್ರಿಯತೆಯೊಂದಿಗೆ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪಮೇಲಾ ಯಾರು?
04:56 PM (IST) Jan 08
04:53 PM (IST) Jan 08
ಬಿಹಾರದ ಮುರ್ಷಿದ್ ಅಲಂ ಎಂಬ ಯುವಕ ಕೇವಲ 1 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪನ್ನು ನಿರ್ಮಿಸಿದ್ದಾರೆ. ಕೇವಲ 18 ದಿನಗಳಲ್ಲಿ ನಿರ್ಮಿಸಲಾದ ಈ ವಾಹನವು ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.
04:32 PM (IST) Jan 08
ರಾಜ್‌ಕೋಟ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭಕ್ಕೂ ಮೊದಲೇ ಭಾರತ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಕ್ರಿಕೆಟಿಗ ಟೆಸ್ಟಿಕಲ್ಸ್‌ಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
04:22 PM (IST) Jan 08
EPFO Wage Limit Hike: Centre Likely to Raise Ceiling to ₹25,000-30,000 ವೇತನ ಮಿತಿಯು ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಲ್ಲಿ ಉದ್ಯೋಗಿಗಳು ಕಡ್ಡಾಯ ಮಾಸಿಕ ಭವಿಷ್ಯ ನಿಧಿ ಕೊಡುಗೆಗಳನ್ನು ನೀಡಬೇಕಾದ ವೇತನ ಮಟ್ಟವನ್ನು ನಿರ್ಧರಿಸುತ್ತದೆ.
04:18 PM (IST) Jan 08
ಟಾಕ್ಸಿಕ್ ಸಿನಿಮಾದ ಆ ಸೀನ್ ಗೀತು ನಿರ್ದೇಶಿಸಿದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆರ್‌ವಿಜಿ ಹೇಳಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಹೇಳಿದ ಸೀನ್ ಯಾವುದು? ಯಾವು ಪರುಷರ ನಿರ್ದೇಶಕನಿಗೂ ಆ ಸೀನ್ ತೆಗೆಯಲು ಆಗುತ್ತಿರಲಿಲ್ಲ ಅಂದಿದ್ದೇಕೆ?
03:43 PM (IST) Jan 08
ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡುವುದರ ಬಗ್ಗೆ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ಇದಕ್ಕೆ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೊಹ್ಲಿ ಹೆಸರು ಬಳಸದೆ ಕೆಲವರಿಗೆ ಜೀವನವಿಲ್ಲ ಎಂದಿದ್ದಾರೆ.
03:35 PM (IST) Jan 08
ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೇಲಿಯೇ ಎದ್ದು ಹೋಲ ಮೇದಂತಹ ಘಟನೆ ನಡೆದಿದೆ. ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಪ್ರಕರಣದಲ್ಲಿ ಭಕ್ಷಕನಾಗಿದ್ದಾನೆ. ಇಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ
02:14 PM (IST) Jan 08
ಅಪ್ರಾಪ್ತ ಶೂಟರ್ ಒಬ್ಬರು ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ರಾಷ್ಟ್ರೀಯ ಶೂಟಿಂಗ್ ಕೋಚ್ ಅಂಕುಶ್ ಭಾರದ್ವಾಜ್ ಅವರನ್ನು ಅಮಾನತುಗೊಳಿಸಿದೆ.
01:54 PM (IST) Jan 08
ದಕ್ಷಿಣದ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರಿ ಮಳೆ, ಉತ್ತರದಲ್ಲಿ ಚಳಿ ಎಚ್ಚರಿಕೆ ನೀಡಿದ ಐಎಂಡಿ, ಎರಡು ರಾಜ್ಯಗಳಲ್ಲಿನ ಭಾರಿ ಮಳೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರಿನ ಹವಾಮಾನ ಏನು?
01:17 PM (IST) Jan 08
ವಿಜಯ್ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಬರೋಡಾ ಪರ ಆಡಿದ ಹಾರ್ದಿಕ್ ಪಾಂಡ್ಯ, ಕೇವಲ 31 ಎಸೆತಗಳಲ್ಲಿ 9 ಸಿಕ್ಸರ್‌ಗಳೊಂದಿಗೆ 75 ರನ್ ಸಿಡಿಸಿ ಅಬ್ಬರಿಸಿದರು. ಪ್ರಿಯಾಂಶು ಮೋಲಿಯಾ ಶತಕ (113) ಮತ್ತು ಜಿತೇಶ್ ಶರ್ಮಾ ಅವರ 73 ರನ್‌ಗಳ ನೆರವಿನಿಂದ ಬರೋಡಾ ತಂಡ 391 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
12:47 PM (IST) Jan 08
ಪ್ರೀತಿಸಿದವರೆಲ್ಲರೂ ಸಿಗ್ತಾರೆ ಜೀವನಪೂರ್ತಿ ಜೊತೆಗಿರ್ತಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಬದುಕಿನಲ್ಲಿ ಸೆಕೆಂಡ್ ಛಾನ್ಸ್ ಅಂತ ಒಂದು ಇರುತ್ತೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಟೀನೇಜ್‌ನಲ್ಲಿ ಪ್ರೀತಿಸಿ ದೂರಾಗಿದ್ದ ಜೋಡಿ ಇಳಿವಯಸ್ಸಿನಲ್ಲಿ ಮದುವೆಯಾಗಿದ್ದಾರೆ.
12:30 PM (IST) Jan 08
ವಾಸ ಯೋಗ್ಯವಾಗಿತ್ತಾ ಮಂಗಳ ಗ್ರಹ? ನೀರಿನಿಂದ ರೂಪುಗೊಂಡಿರುವ 8 ಅಸಾಮಾನ್ಯ ಗುಹೆ ಪತ್ತೆ, ಜ್ವಾಲಾಮುಖಿ ಚಟುವಟಿಕೆಯಿಂದ ರೂಪುಗೊಂಡಿಲ್ಲ, ಬದಲಿಗೆ ನೀರಿನಲ್ಲಿ ಕರಗುವ ಬಂಡೆಗಳ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡಿವೆ ಎಂದಿದ್ದಾರೆ.
12:02 PM (IST) Jan 08
11:18 AM (IST) Jan 08
ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500 ಪ್ರತಿಶತ ಸುಂಕ ವಿಧಿಸುವ ಹೊಸ ನಿರ್ಬಂಧ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ. ಇದು ಭಾರತದ ಮೇಲೆ ತೀವ್ರ ಪರಿಣಾಮ ಬೀರಲಿದೆ.
10:32 AM (IST) Jan 08
ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿ, 4-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆದರೆ, ತಮ್ಮ ವಿದಾಯದ ಟೆಸ್ಟ್ ಪಂದ್ಯವನ್ನಾಡಿದ ಖವಾಜಾ, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
09:42 AM (IST) Jan 08
ಢಾಕಾ: ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಹೇಳಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸಂಬಂಧವು ಇತಿಹಾಸದಲ್ಲೇ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.
09:11 AM (IST) Jan 08
ಬೆಂಗಳೂರು: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡ ಕ್ಷಣವನ್ನು ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ನೆನಪು ಮಾಡಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
08:26 AM (IST) Jan 08
ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭದ್ರತಾ ಸಮಸ್ಯೆ ಇಲ್ಲದ ಕಾರಣ, ಪೂರ್ವನಿಗದಿಯಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಐಸಿಸಿ ಎಚ್ಚರಿಸಿದೆ ಎನ್ನಲಾಗಿದೆ.