ರಿಲೊಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?
ರಿಲೊಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?, ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ಪಮೇಲಾ ಗೋಸ್ವಾಮಿ ಇದೀಗ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಬ್ಯೂಟಿ, ಜನಪ್ರಿಯತೆಯೊಂದಿಗೆ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪಮೇಲಾ ಯಾರು?

ಟ್ರೆಂಡ್ ಆದ ಪಮೇಲಾ ಗೋಸ್ವಾಮಿ
ಸಿನಿಮಾ ನಟಿ, ಯುವ ಗಾಯಕಿ, ಮಾಡೆಲ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಬಿಜೆಪಿ ಸೇರಿಕೊಂಡು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಬಹುತೇಕ ಎಲ್ಲಾ ಪಕ್ಷದಲ್ಲೂ ಸಿನಿಮಾ ರಂಗದ, ಮನೋರಂಜನೆ ಕ್ಷೇತ್ರದ ಸಾಧಕರಿದ್ದಾರೆ. ಇದರ ನಡುವೆ ಬೆಜಿಪಿಯ ನಾಯಕಿ ಪಮೇಲಾ ಗೋಸ್ವಾಮಿ ಭಾರಿ ಟ್ರೆಂಡ್ ಆಗಿದ್ದಾರೆ.
ಪಶ್ಚಿಮ ಬಂಗಾಳ ನಾಯಕಿ ಗೋಸ್ವಾಮಿ
ಪಮೇಲಾ ಗೋಸ್ವಾಮಿ ಬಜೆಪಿಯ ಪಶ್ಚಿಮ ಬಂಗಾಳದ ನಾಯಕಿ. ಪಶ್ಚಿಮ ಬಂಗಾಳ ಬಿಜೆಪಿ ಸೆಕ್ರೆಟರಿಯಾಗಿಯಾಗಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಮಹಿಳಾ ಯು ಮೋರ್ಚಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ವಿವಾದದ ಬಳಿಕ 2021ರಿಂದ ರಾಜಕೀಯದಿಂದ ದೂರ ಉಳಿಯಬೇಕಾಗಿ ಬಂದಿತ್ತು. ಇದೀಗ ಮತ್ತೆ ಪಶ್ಚಿಮ ಬಂಗಾಳದ ಸಕ್ರಿಯಾಗಿದ್ದಾರೆ.
ಜೈಲು ಸೇರಿದ್ದ ಪಮೇಲಾ ಗೋಸ್ವಾಮಿ
ಪಮೇಲಾ ಗೋಸ್ವಾಮಿ ಬೆಂಬಲಿಗರು ಹೇಳುವಂತೆ , ನಾಯಕಿ ಪಶ್ಚಿಮ ಬಂಗಾಳದಲ್ಲಿ ಖಾಯಂ ಆಗಿ ನೆಲಸಲು ನಿರ್ಧರಿಸಿದ್ದಾರೆ. ಈ ಕುರಿತು ಇತ್ತೀಚೆಗೆ ಸುಳಿವು ನೀಡಿದ್ದರು ಎಂದು ಬೆಂಬಲಿಗರು ಹೇಳಿದ್ದಾರೆ. ಬಹುಬೇಗ ಪಶ್ಚಿಮ ಬಂಗಾಳದಲ್ಲಿ ಗುರುತಿಸಿಕೊಂಡ ಪಮೇಲಾ ಅಷ್ಟೇ ಬೇಗ ಜೈಲು ಸೇರಿದ್ದರು.
ಏನಿದು ವಿವಾದಿತ ಘಟನೆ?
ಪಮೇಲಾ ಗೋಸ್ವಾಮಿ ಮಾಡೆಲ್ ಸೇರಿದಂತೆ ಗ್ಲಾಮರಸ್ ಲೋಕದಿಂದ ರಾಜಕೀಯಕ್ಕೆ ಧುಮಿಕದ ನಾಯಕಿ. 2019ರಲ್ಲಿ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಪಮೇಲಾಗೆ ಇದ್ದ ಜನಪ್ರಿಯತೆಯಿಂದ ಪಶ್ಚಿಮ ಬಂಗಾಳದಲ್ಲಿ ಭಾರಿ ಜನಪ್ರಿಯ ನಾಯಕಿಯಾಗಿ ಬಹುಬೇಗನೆ ಬೆಳೆದು ನಿಂತಿದ್ದರು. ಹೀಗಾಗಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕ, ಮಹಿಳಾ ಯುವ ಮೋರ್ಚಾ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿತ್ತು.
ದಿಢೀರ್ ಬೆಳವಣಿಗೆ ಸಹಿಸಲಿಲ್ಲ ಪಕ್ಷದ ಹಲವು ನಾಯಕರು
ಪಮೇಲಾ 2019ರಲ್ಲಿ ಪಕ್ಷ ಸೇರಿದ ಕೆಲವೇ ತಿಂಗಳಲ್ಲಿ ಮಹಿಳಾ ಯುವ ಮೋರ್ಚಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇದು ಬಿಜೆಪಿಯ ಇತರ ಕೆಲ ನಾಯಕರು, ಮಹಿಳಾ ನಾಯಕಿಯರು ಕಣ್ಣು ಕೆಂಪಾಗಿಸಿತ್ತು ಎಂದು ಖುದ್ದು ಪಮೇಲಾ ಹೇಳಿಕೊಂಡಿದ್ದಾರೆ. ಇದರ ಪರಿಣಾಮ 2021ರಲ್ಲಿ ಪ್ರಯಾಣ ಮಾಡುತ್ತಿದ್ದ ಪಮೇಲಾಳನ್ನು ಕೋಲ್ಕತಾ ಪೊಲೀಸರು ತಡೆದು ವಾಹನದಿಂದ 90 ಗ್ರಾಂ ಕೋಕೇನ್ ವಶಪಡಿಸಿಕೊಂಡಿದ್ದರು. ಇದರೊಂದಿಗೆ ಪಮೇಲಾ ಬಂಧನವಾಗಿತ್ತು.
ದಿಢೀರ್ ಬೆಳವಣಿಗೆ ಸಹಿಸಲಿಲ್ಲ ಪಕ್ಷದ ಹಲವು ನಾಯಕರು
ಗಂಭೀರ ಆರೋಪ ಮಾಡಿದ್ದ ಪಮೇಲಾ
ತನ್ನ ಏಳಿಗೆ ಸಹಿಸದ ಪಕ್ಷದೊಳಗಿನ ನಾಯಕರೇ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. 90 ಗ್ರಾಂ ಕೋಕೋನ್ ಸಾಗಿಸುವ ದಾರಿದ್ರ್ಯ ನನಗೆ ಬಂದಿಲ್ಲ. ಅಂತಹ ಕೆಲಸಕ್ಕೆ ನಾನು ಇಳಿಯಲ್ಲ ಎಂದಿದ್ದರು. ಆದರೆ ಜೈಲು ಸೇರಿದ ಪಮೇಲಾ ಕಾನೂನು ಹೋರಾಟ ನಡೆಸಿ ಬಿಡುಗಡೆಯಾಗಿದ್ದಾರೆ. ಇದೀಗ ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.
ಗಂಭೀರ ಆರೋಪ ಮಾಡಿದ್ದ ಪಮೇಲಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

