LIVE NOW
Published : Jun 06, 2026, 05:15 AM ISTUpdated : Jun 06, 2026, 11:10 PM IST

India Latest News Live: Shivaji Maharaj Statue - ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?

ಸಾರಾಂಶ

ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಇಲ್ಲಿನ ಕಾಂಗ್‌ಪೋಕ್ಪಿ ಜಿಲ್ಲೆಯ ಮನೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಮೂವರನ್ನು ಹತ್ಯೆಗೈದಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ 7 ಮನೆಗಳು ಬೆಂಕಿಗಾಹುತಿಯಾಗಿವೆ.

ಜಿಲ್ಲೆಯ ಲೊಯಿಬೋಲ್‌ ಖುಲ್ಲೆನ್‌ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಏಕಾಏಕಿ ಇಲ್ಲಿನ ನಾಗರಿಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಭಯಗೊಂಡು ಕೆಲವು ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಕಾಡಿನಲ್ಲಿ ಅಡಗಿ ಕುಳಿತ ಪ್ರಸಂಗವೂ ನಡೆಯಿತು.

11:10 PM (IST) Jun 06

Shivaji Maharaj Statue - ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?

ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಇಸ್ರೇಲ್‌ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಘೋಷಿಸಿದ್ದಾರೆ. ಭಾರತ ಮತ್ತು ಯಹೂದಿ ಜನಾಂಗದ ಐತಿಹಾಸಿಕ ಹೋರಾಟಗಳ ನಡುವೆ ಸಾಮ್ಯತೆ ಇದೆ, ಈ ಹೆಜ್ಜೆ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆಯೇ?

Read Full Story

10:43 PM (IST) Jun 06

ಎಲ್ಲಾ ಖರ್ಚು ವೆಚ್ಚ ಬಿಸಿಸಿಐ ನೋಡಿಕೊಳ್ಳಲಿದೆ, ವೈಭವ್ ಸೂರ್ಯವಂಶಿಗಾಗಿ ಮಹತ್ವದ ನಿರ್ಧಾರ

ವೈಭವ್ ಸೂರ್ಯವಂಶಿಗೆ ನೆರವಾಗಲು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೈಭವ್ ಕೇವಲ 15ರ ಹುಡುಗ. ಹೀಗಾಗಿ ಆತನಿಗಾಗಿ ನಿಯಮ ಬದಲಿಸಿದ ಬಿಸಿಸಿಐ ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಹೇಳಿದೆ.

 

Read Full Story

10:15 PM (IST) Jun 06

ಇದ್ದಕ್ಕಿದ್ದಂತೆಯೇ ಬಿಲೇನಿಯರ್ ಆದ ಬಡ ಪ್ಲಂಬರ್..! ಬ್ಯಾಂಕ್ ಖಾತೆಗೆ ಜಮಾ ಆಯ್ತು 294.80 ಕೋಟಿ..! ಇಷ್ಟೊಂದು ದುಡ್ಡು ಬಂದಿದ್ದು ಎಲ್ಲಿಂದ?

ಬಿಹಾರದ ಬೋಧ್‌ಗಯಾದ ಪ್ಲಂಬರ್ ವಿಕಾಸ್ ಕುಮಾರ್ ಅವರ ಜಿಯೋ ಪೇಮೆಂಟ್ ಬ್ಯಾಂಕ್ ಖಾತೆಗೆ ಒಂದೇ ದಿನದಲ್ಲಿ 294.80 ಕೋಟಿ ರೂಪಾಯಿ ಜಮೆಯಾಗಿದೆ. ತಿಂಗಳಿಗೆ 10-12 ಸಾವಿರ ಸಂಪಾದಿಸುವ ವಿಕಾಸ್, ಖಾತೆಯಲ್ಲಿನ ಹಣ ನೋಡಿ ತಬ್ಬಿಬ್ಬಾಗಿದ್ದು, ಈ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

09:21 PM (IST) Jun 06

ಇಬ್ಬರು ಮಾಜಿ ಪತ್ನಿಯರ ಸಮ್ಮುಖದಲ್ಲಿ ಅಮೀರ್ ಖಾನ್ 3ನೇ ಮದುವೆ - ಯಾವಾಗ, ಎಲ್ಲಿ?

ಬಾಲಿವುಡ್‌ನಲ್ಲಿ ಸದ್ಯ ಮದುವೆ ಸೀಸನ್ ಜೋರಾಗಿದೆ. ಎಲ್ಲೆಲ್ಲೂ ಗ್ಲಾಮರ್, ಸಂಬಂಧಗಳು ಮತ್ತು ಸ್ಟಾರ್ ಪವರ್ ಬಗ್ಗೆಯೇ ಚರ್ಚೆ. ಅಮೀರ್ ಖಾನ್ ಅವರದ್ದು ಎನ್ನಲಾದ ಮದುವೆಯಿಂದ ಹಿಡಿದು, ಅನ್ಶುಲಾ ಕಪೂರ್ ಮತ್ತು..

Read Full Story

08:55 PM (IST) Jun 06

ನನ್ನ ಮನೆಗೆ ಬಂದು ಅಪ್ಪಿಕೊಂಡ ಮೊದಲ ಹೀರೋ ಅವನೇ.. ಪ್ರಭಾಸ್‌ಗೆ ಶಾಕ್ ಕೊಟ್ಟ ಆ ಸ್ಟಾರ್ ಯಾರು?

ಒಬ್ಬ ಸ್ಟಾರ್ ಹೀರೋ ಮೊದಲ ಬಾರಿಗೆ ಪ್ರಭಾಸ್‌ ಮನೆಗೆ ಹೋಗಿ, ಸಿನಿಮಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದರಂತೆ. ಆ ಸಮಯದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.

Read Full Story

08:23 PM (IST) Jun 06

ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ಐಪಿಎಲ್‌ನಲ್ಲಿ ಜಗತ್ತನ್ನೆ ಬೆರಗುಗೊಳಿಸಿದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ವೈಭವ್ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.

 

Read Full Story

08:17 PM (IST) Jun 06

ದುನಿಯಾ ವಿಜಯ್ ಜೊತೆ ವಿಜಯ್ ಸೇತುಪತಿ ಮಿಂಚು - 'ಸ್ಲಂ ಡಾಗ್'ನಲ್ಲಿ ಸ್ಯಾಂಡಲ್‌ವುಡ್‌ನ ಸಲಗ!

ತಮಿಳು ನಟ ವಿಜಯ್ ಸೇತುಪತಿ ಹಾಗೂ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಸ್ಲಂ ಡಾಗ್' ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜೂನ್ 8 ರಂದು ಟೀಸರ್ ಬಿಡುಗಡೆಯಾಗಲಿದೆ.

Read Full Story

07:15 PM (IST) Jun 06

‘ಪೆದ್ದಿ’ ಬಳಿಕ ಟ್ರೆಂಡಿಂಗ್‌ನಲ್ಲಿ ಜಾನ್ವಿ - ವೈರಲ್‌ ಆಯ್ತು ಹಳೆಯ ಸಿನಿಮಾಗಳ ಆ ದೃಶ್ಯಗಳು!

ರಾಮ್ ಚರಣ್ ಜೊತೆಗಿನ 'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ವಿವಾದ ಎದ್ದಿದೆ. ಆದರೆ ಇದು ಮೊದಲೇನಲ್ಲ. ಈ ಹಿಂದೆಯೂ 'ಘೋಸ್ಟ್ ಸ್ಟೋರೀಸ್', 'ಉಲಝ್' ಮತ್ತು 'ದೇವರ ಪಾರ್ಟ್ 1' ನಂತಹ ಸಿನಿಮಾಗಳಲ್ಲಿ ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳು ಸಖತ್ ವೈರಲ್ ಆಗಿದ್ದವು.

Read Full Story

06:39 PM (IST) Jun 06

Kangana Ranaut - ನನ್ನ ಸಿನಿಮಾಗೆ ತೆರಿಗೆ ವಿನಾಯಿತಿ ಕೊಡಿ - ಒಡಿಶಾ ಸಿಎಂಗೆ ಕಂಗನಾ ಮನವಿ

ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರ ಮುಂಬರುವ 'ಭಾರತ್ ಭಾಗ್ಯ ವಿಧಾತ' ಚಿತ್ರದ ವಿಶೇಷ ಪ್ರದರ್ಶನವನ್ನು ಭುವನೇಶ್ವರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್..

Read Full Story

05:24 PM (IST) Jun 06

ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ

ಬೆಂಗಳೂರು: ಇದೇ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜತೆಗೆ ಆರು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.

 

Read Full Story

05:19 PM (IST) Jun 06

32 ವರ್ಷದ ಬಳಿಕ ಶಾರುಖ್ ಸಿನಿಮಾದಲ್ಲಿ ಆಗಿದ್ದ ಗುಟ್ಟು ರಟ್ಟು ಮಾಡಿ ಶಾಕ್ ಮೂಡಿಸಿದ ನಟಿ ಸುಚಿತ್ರಾ ಕೃಷ್ಣಮೂರ್ತಿ!

'ಕಭಿ ಹಾಂ ಕಭಿ ನಾ' ಚಿತ್ರವು ಕೇವಲ ಒಂದು ಸಿನಿಮಾ ಆಗಿರದೆ, ಅನೇಕ ಕಲಾವಿದರ ಬದುಕಿನ ಅವಿಸ್ಮರಣೀಯ ಭಾಗವಾಗಿ ಇಂದಿಗೂ ಉಳಿದುಕೊಂಡಿದೆ. ಸುಚಿತ್ರಾ ಅವರ ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಮಿಗಳು ಹಳೆಯ ನೆನಪುಗಳಿಗೆ ಜಾರುವಂತೆ ಮಾಡಿದೆ.

Read Full Story

05:09 PM (IST) Jun 06

ಗಂಡ ಡ್ಯೂಟಿಗೆ, ಹೆಂಡ್ತಿ ಪ್ರಿಯಕರನ ಭೇಟಿಗೆ..ಶಾಪಿಂಗ್‌ ಮಾಲ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದವಳಿಗೆ ಗೂಸಾ ಇಟ್ಟ ಪತಿರಾಯ!

ನೋಯ್ಡಾದ ಜುಡಿಯೋ ಸ್ಟೋರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಶಾಪಿಂಗ್ ಮಾಡುತ್ತಿದ್ದ ಪತ್ನಿಯನ್ನು ಪತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಇಬ್ಬರನ್ನೂ ರಸ್ತೆಗೆಳೆದು ಥಳಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

05:00 PM (IST) Jun 06

ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್

ಟೀಂ ಇಂಡಿಯಾ ಟಿ20 ನಾಯಕತ್ವ ಹಾಗೂ ಟಿ20 ತಂಡದಿಂದಲೂ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಕ್ಯಾಪ್ಟೆನ್ಸಿ ನೀಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಮೊದಲ ಪೋಸ್ಟ್ ಮೂಲಕ ಮನದಾಳ ಹೇಳಿಕೊಂಡಿದ್ದಾರೆ.

Read Full Story

04:51 PM (IST) Jun 06

IPL 2026 ಫೈನಲ್ ಸೋಲಿನ ಬೆನ್ನಲ್ಲೇ ಈ ಮೂವರಿಗೆ ಗುಜರಾತ್ ಟೈಟಾನ್ಸ್ ಗೇಟ್‌ಪಾಸ್? ಈ ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು

2026ನೇ ಸೀಸನ್ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ತಂಡವು ಫೈನಲ್‌ನಲ್ಲಿ ಆರ್‌ಸಿಬಿ ಎದುರು ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಮೂವರಿಗೆ ಗೇಟ್‌ಪಾಸ್ ನೀಡಲು ಗುಜರಾತ್ ಫ್ರಾಂಚೈಸಿ ರೆಡಿಯಾಗಿದೆ.

 

Read Full Story

04:43 PM (IST) Jun 06

Aadhaar Card Misuse Check - ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ? - ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ

ಡಿಜಿಟಲ್ ಯುಗದಲ್ಲಿ ಅನಿವಾರ್ಯವಾಗಿರುವ ಆಧಾರ್ ಕಾರ್ಡ್, ದುರುಪಯೋಗದ ಅಪಾಯವನ್ನೂ ಹೊಂದಿದೆ. ನಿಮ್ಮ ಅನುಮತಿಯಿಲ್ಲದೆ ಬೇರೆಯವರು ನಿಮ್ಮ ಆಧಾರ್ ಬಳಸುತ್ತಿದ್ದಾರೆಯೇ ಎಂದು ತಿಳಿಯಲು, ಅದರ ಬಳಕೆಯ ಇತಿಹಾಸವನ್ನು (Authentication History) ಸುಲಭವಾಗಿ ಪರಿಶೀಲಿಸಬಹುದು.

Read Full Story

04:38 PM (IST) Jun 06

ವಿಜಯ್‌ ‘ಜನ ನಾಯಗನ್‌’ ಬಿಡುಗಡೆಯಾಗದೇ 5 ತಿಂಗಳು - ಕೊನೆಗೂ ಹೊರಬಿತ್ತು ಅಸಲಿ ಕಾರಣ!

ಸಿಎಂ ವಿಜಯ್‌ ಮಾತಿನಂತೆ ನಿರ್ಮಾಣಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್‌ಗೆ ಇರುವ ಅಡಚಣೆಗಳು ಕೊನೆಗೊಂಡ ಬಳಿಕ ಕೆವಿಎನ್‌ ಪ್ರೊಡಕ್ಷನ್‌ ಸ್ವತಂತ್ರವಾಗಿ ಚಿತ್ರದ ವಿತರಣೆ ಮಾಡಲಿದೆ.

Read Full Story

04:26 PM (IST) Jun 06

ಶ್ರೀದೇವಿ ಮಾಡಿದ ಸಾಧನೆ ಮಗಳು ಯಾಕೆ ಮಾಡಲಿಲ್ಲ? ಕಾರಣ ಕೇಳಿದ್ರೆ ಅಚ್ಚರಿ!

ಜಾನ್ವಿ ಕಪೂರ್‌ಗೆ ಮಾತ್ರ ಸೌತ್‌ ಸಿನಿಮಾ ಯಶಸ್ಸಿನ ಬಾಗಿಲು ತೆರೆಯುತ್ತಿಲ್ಲ. ದೊಡ್ಡ ಸ್ಟಾರ್‌ ನಟರು, ಬಹು ಕೋಟಿ ವೆಚ್ಚದ ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣಕ್ಕೆ ಬಂದರೂ ಜಾನ್ವಿ ಕಪೂರ್‌ಗೆ ಯಶಸ್ಸು ಸಿಗುತ್ತಿಲ್ಲ.

Read Full Story

01:39 PM (IST) Jun 06

ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಶ್ರೇಯಸ್ ಅಯ್ಯರ್ ನೂತನ ನಾಯಕರಾಗಿ ಆಯ್ಕೆಯಾಗಿದ್ದರೆ, ವಿಶ್ವಕಪ್ ಗೆದ್ದುಕೊಟ್ಟಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಐಪಿಎಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಚೊಚ್ಚಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Read Full Story

01:19 PM (IST) Jun 06

ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಯಾಕಿರಲ್ಲ? ಎಮೆರ್ಜೆನ್ಸಿಗೆ ಏನು ಮಾಡಬೇಕು?

Medical Shop in Indian Railway Station: ನೀವು ರೈಲ್ವೆ ಪ್ರಯಾಣಿಕರಾಗಿದ್ರೆ ಪ್ಲಾಟ್‌ಫಾರಂಗಳಲ್ಲಿ ಮೆಡಿಕಲ್ ಶಾಪ್‌ಗಳಿಲ್ಲದಿರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ರೈಲ್ವೆ ನಿಯಮಗಳಲ್ಲಿನ ಬದಲಾವಣೆಯಿಂದ ಔಷಧಿ ಮಳಿಗೆಗಳು ಕಾಣಿಸಲ್ಲ.

 

Read Full Story

12:31 PM (IST) Jun 06

IPL ರೀತಿ ಮೊಬೈಲ್‌ನಲ್ಲೇ FIFA World Cup ಫುಟ್‌ಬಾಲ್‌ ನೋಡ್ಬೇಕಾ, ಇಷ್ಟು ಹಣ ಪಾವತಿ ಮಾಡಿ..

ಭಾರತದಲ್ಲಿ ಫಿಫಾ ವಿಶ್ವಕಪ್ 2026 ರ ಪ್ರಸಾರ ಹಕ್ಕನ್ನು ಜೀ ಎಂಟರ್‌ಟೈನ್‌ಮೆಂಟ್ ಪಡೆದುಕೊಂಡಿದೆ. ಆನ್‌ಲೈನ್‌ನಲ್ಲಿ ವೀಕ್ಷಿಸಲು ಜೀ5 ಪ್ರೀಮಿಯಂ ಚಂದಾದಾರಿಕೆ (ಕನಿಷ್ಠ ₹299) ಕಡ್ಡಾಯವಾಗಿದ್ದು, ಟಿವಿಯಲ್ಲಿ ಯುನೈಟ್8 ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.

Read Full Story

12:10 PM (IST) Jun 06

ಎಲ್‌ಪಿಜಿಗಿಂತ ಕಡಿಮೆ ಬೆಲೆ, ಶೀಘ್ರದಲ್ಲೇ ಬರಲಿದೆ ಎಥನಾಲ್‌ ಕುಕ್ಕಿಂಗ್‌ ಸ್ಟವ್

ಕೇಂದ್ರ ಸರ್ಕಾರವು ಎಲ್‌ಪಿಜಿಗೆ ಪರ್ಯಾಯವಾಗಿ ಕಡಿಮೆ ವೆಚ್ಚದ, ಪರಿಸರಸ್ನೇಹಿ 'ಎಥನಾಲ್ ಆಧಾರಿತ ಅಡುಗೆ ಸ್ಟವ್' ಅನ್ನು ಪರಿಚಯಿಸಿದೆ. ಕೃಷಿ ಉತ್ಪನ್ನಗಳಿಂದ ತಯಾರಿಸಿದ ಎಥನಾಲ್ ಬಳಸಿ ಕಾರ್ಯನಿರ್ವಹಿಸುವ ಈ ಸ್ಟವ್, ಅಡುಗೆ ವೆಚ್ಚವನ್ನು ಕಡಿಮೆ ಮಾಡಲಿದೆ.

Read Full Story

12:07 PM (IST) Jun 06

ರೈಲಿನಲ್ಲಿ ಇವರಿಗೆ ಟಿಕೆಟ್ ಬೇಕಿಲ್ಲ, ಫ್ರೀಯಾಗಿ ಪ್ರಯಾಣಿಸಿ! ಯಾರು ಗೊತ್ತಾ ಈ ಅದೃಷ್ಟವಂತರು?

Indian Railways Free Travel Policy: ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ ಕೆಲವರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹಾಗೆಯೇ ಈ ನಿಯಮಗಳಲ್ಲಿ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಹಾಗಾಗಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

Read Full Story

11:39 AM (IST) Jun 06

ಚಿನ್ನದ ಬೆಲೆಯಲ್ಲಿ ಮಹಾ ಕುಸಿತ! ಇಂದು ಒಂದೇ ದಿನ 3000 ರುಪಾಯಿ ದಿಢೀರ್ ಇಳಿಕೆ! ಒಂದು ಗ್ರಾಮ್ ಗೋಲ್ಡ್ ರೇಟ್‌ ಎಷ್ಟು ಗೊತ್ತಾ?

Gold Rate Today: ಕಳೆದ ಕೆಲದಿನಗಳಿಂದ ಸ್ವಲ್ಪ ಸ್ವಲ್ಪವೇ ಇಳಿಕೆಯತ್ತ ಮುಖಮಾಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡಿದೆ. ಅಂದ ಹಾಗೆ ಜೂನ್ 06ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

 

Read Full Story

11:15 AM (IST) Jun 06

'ಹೆಂಡ್ತಿ ಫೋನ್‌ ಬಂದ್ರೆ ಇವರೂ ಹೆದರ್ತಾರೆ..' ಭಾಷಣದ ನಡುವೆ ಪತ್ನಿ ಕಾಲ್‌ಗೆ ಉತ್ತರಿಸಿದ ಸುನೀಲ್‌ ಗವಾಸ್ಕರ್‌ ಫುಲ್‌ ಟ್ರೋಲ್‌

ಮುಂಬೈನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ, ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಮ್ಮ ಭಾಷಣದ ಮಧ್ಯೆ ಪತ್ನಿಯ ಫೋನ್ ಕರೆಗೆ ಉತ್ತರಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅವರ ಕುಟುಂಬ ಪ್ರೇಮವನ್ನು ಶ್ಲಾಘಿಸುತ್ತಿದ್ದಾರೆ.
Read Full Story

10:43 AM (IST) Jun 06

ಆಫ್ಘಾನಿಸ್ತಾನ ಎದುರಿನ ಸರಣಿ ಮಾತ್ರವಲ್ಲ, ಈ ಮೇಜರ್ ಏಕದಿನ ಸರಣಿಯಿಂದಲೂ ವಿರಾಟ್ ಕೊಹ್ಲಿ ಔಟ್!

Virat Kohli Injury Update ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ಮತ್ತಷ್ಟು ತಡವಾಗುವ ಸಾಧ್ಯತೆಯಿದೆ. ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿರುವ ಕೊಹ್ಲಿ, ಮತ್ತೊಂದು ಮಹತ್ವದ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

 

Read Full Story

10:28 AM (IST) Jun 06

ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್ ಕಾರ್ಯಕ್ರಮದಲ್ಲಿ ಹೈಡ್ರಾಮಾ - ಭಾರತದಲ್ಲಿ ಪ್ರಜಾಪ್ರಭುತ್ವ ದಮನ ಎಂದ ಮಹಿಳೆ

ಲಂಡನ್‌ನ ಬಿರ್ಕ್‌ಬೆಕ್ ಕಾಲೇಜಿನಲ್ಲಿ ನಡೆದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಉಪನ್ಯಾಸದ ವೇಳೆ ಗದ್ದಲ ಉಂಟಾಗಿದೆ. ಭಾರತದಲ್ಲಿನ ಪ್ರಜಾಪ್ರಭುತ್ವದ ದಮನದ ಬಗ್ಗೆ ಮಹಿಳೆಯೊಬ್ಬರು ಪ್ರಶ್ನಿಸಿದಾಗ ಗೊಂದಲ ಸೃಷ್ಟಿಯಾಯಿತು. ಈ ಘಟನೆಯನ್ನು ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದೆ.
Read Full Story

09:56 AM (IST) Jun 06

ಬಾಲ್ಕನಿ ಹೂವಿನ ಕುಂಡದಲ್ಲಿ ಫ್ಲೈಯಿಂಗ್ ಕಾಂಡೋಮ್; ನಿಮ್ಮ ಶೃಂಗಾರದ ಕುರುಹು ಬೇಡ ಎಂದ ಮಾಲೀಕ

ಕೋಲ್ಕತ್ತಾದ ವ್ಯಕ್ತಿಯೊಬ್ಬರ ಬಾಲ್ಕನಿಯ ಹೂವಿನ ಕುಂಡದಲ್ಲಿ ಬಳಕೆಯಾದ ಕಾಂಡೋಮ್ ಪತ್ತೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಪೋಸ್ಟ್ ಹಂಚಿಕೊಂಡ ಅವರು, ತಮ್ಮ ಮೇಲಿನ ಮಹಡಿಯ ನಿವಾಸಿಗಳು ಶೃಂಗಾರದ ಕುರುಹುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
Read Full Story

08:39 AM (IST) Jun 06

ಇಂದಿನಿಂದ ಭಾರತ vs ಆಫ್ಘಾನಿಸ್ತಾನ ಟೆಸ್ಟ್; ಟೀಂ ಇಂಡಿಯಾ ಪರ 4 ಸ್ಪಿನ್ನರ್ ಕಣಕ್ಕೆ?

ಐಪಿಎಲ್ ನಂತರ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಮುಲ್ಲಾನ್‌ಪುರದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಶುಭ್‌ಮನ್‌ ಗಿಲ್ ನಾಯಕತ್ವದ ತಂಡದಲ್ಲಿ ಆಟಗಾರರ ಆಯ್ಕೆ ಗೊಂದಲವಿದ್ದು, ಸುಧಾರಿತ ಪ್ರದರ್ಶನ ನೀಡುತ್ತಿರುವ ಅಫ್ಘಾನ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಈ ಪಂದ್ಯವು ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಆಗಿದೆ.
Read Full Story

08:26 AM (IST) Jun 06

ಉತ್ತರಾಧಿಕಾರಿಗಳ ಸೃಷ್ಟಿ ಮಾಡಿಕೊಳ್ತಿವೆ AI ಟೂಲ್ಸ್‌! ಟೆಕ್‌ ಇತಿಹಾಸದಲ್ಲೇ ಬಹುದೊಡ್ಡ ಬೆಳವಣಿಗೆ

ಆ್ಯಂಥ್ರೋಪಿಕ್‌ ಕಂಪನಿಯ ಕ್ಲಾಡ್‌ನಂತಹ ಎಐ ಟೂಲ್‌ಗಳು ತಮ್ಮ ಉತ್ತರಾಧಿಕಾರಿಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿವೆ. ಈ ಸ್ವ-ಸುಧಾರಣಾ ತಂತ್ರಜ್ಞಾನವು ಮಾನವನ ಉದ್ಯೋಗಗಳಿಗೆ ಕುತ್ತು ತರಬಹುದೆಂಬ ಆತಂಕವನ್ನು ಹುಟ್ಟುಹಾಕಿದ್ದು, ಎಐ ಬೆಳವಣಿಗೆಗೆ ತಾತ್ಕಾಲಿಕ ತಡೆ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Read Full Story

08:26 AM (IST) Jun 06

ಮಹಾರಾಜ ಟಿ20 ಟ್ರೋಫಿ ಆಟಗಾರರ ಹರಾಜು - ಕರುಣ್‌ ನಾಯರ್‌ಗೆ ಜಾಕ್‌ಪಾಟ್, ಕೆ ಎಲ್ ರಾಹುಲ್ ಅನ್‌ಸೋಲ್ಡ್!

5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಕರುಣ್ ನಾಯರ್ ₹18 ಲಕ್ಷಕ್ಕೆ ಮಂಗಳೂರು ತಂಡಕ್ಕೆ ಮಾರಾಟವಾಗುವ ಮೂಲಕ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಆರ್. ಸ್ಮರಣ್, ಮನೀಶ್ ಪಾಂಡೆ, ಮತ್ತು ಮಯಾಂಕ್ ಅಗರ್‌ವಾಲ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಹೆಚ್ಚಿನ ಮೊತ್ತಕ್ಕೆ ವಿವಿಧ ತಂಡಗಳ ಪಾಲಾದರು.
Read Full Story

08:14 AM (IST) Jun 06

ಫ್ರೆಂಚ್ ಓಪನ್ - ಅಲೆಕ್ಸಾಂಡರ್ ಜ್ವೆರೆವ್‌ ಫೈನಲ್‌ಗೆ ಲಗ್ಗೆ, ಚೊಚ್ಚಲ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣು!

ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಅಲೆಕ್ಸಾಂಡರ್‌ ಜ್ವೆರೆವ್‌ ಪುರುಷರ ಸಿಂಗಲ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ರಷ್ಯಾದ ಮಿರ್ರಾ ಆ್ಯಂಡ್ರೀವಾ ಮತ್ತು ಪೋಲೆಂಡ್‌ನ ಮಜಾ ಚ್ವಾಲಿನ್ಸ್ಕಾ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
Read Full Story

07:25 AM (IST) Jun 06

ಅಂಡಮಾನ್‌ ಕಡಲಲ್ಲಿ ನೈಸರ್ಗಿಕ ಅನಿಲ ಪತ್ತೆ; 1900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಬಾವಿ

ಆಯಿಲ್ ಇಂಡಿಯಾ ಲಿ. ಅಂಡಮಾನ್ ಸಮುದ್ರದಲ್ಲಿ ಹೊಸ ನೈಸರ್ಗಿಕ ಅನಿಲ ಬಾವಿಯನ್ನು ಪತ್ತೆ ಮಾಡಿದೆ. ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ 15 ಕಿ.ಮೀ. ದೂರದಲ್ಲಿರುವ ಶ್ರೀ ವಿಜಯಪುರಂ-3 ಬಾವಿಯಲ್ಲಿ ಅನಿಲದ ಉಪಸ್ಥಿತಿ ದೃಢಪಟ್ಟಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.
Read Full Story

07:15 AM (IST) Jun 06

ನೋಟು ರದ್ದತಿ ಬಳಿಕ ವಂಚನೆಯ ₹6 ಕೋಟಿ ನೋಟು ಸುಟ್ಟಿದ್ದ ವ್ಯಕ್ತಿ! ಆರೋಪಿಯಿಂದ ತಪ್ಪೊಪ್ಪಿಗೆ

ಕೇರಳ ಲಾಟರಿ ಕಲ್ಯಾಣ ನಿಧಿ ವಂಚನೆ ಪ್ರಕರಣದ ಪ್ರಮುಖ ಆರೋಪಿಯು, ತಾನು ಲಪಟಾಯಿಸಿದ್ದ ₹14 ಕೋಟಿಗಳಲ್ಲಿ ₹6 ಕೋಟಿಯನ್ನು ಸುಟ್ಟುಹಾಕಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 2016ರ ನೋಟು ರದ್ದತಿ ಬಳಿಕ ಹಳೆಯ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ.
Read Full Story

05:37 AM (IST) Jun 06

ಮೋದಿ ನನ್ನ ಬೆಸ್ಟ್‌ ಫ್ರೆಂಡ್‌ ಎಂದ ಟ್ರಂಪ್; ಮಹತ್ವದ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ

ಭಾರತದ ಪ್ರಧಾನಿ ಮೋದಿಯವರನ್ನು ತಮ್ಮ ಆಪ್ತ ಸ್ನೇಹಿತ ಎಂದು ಕರೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೀಘ್ರದಲ್ಲೇ ಲಾಭದಾಯಕ ವ್ಯಾಪಾರ ಒಪ್ಪಂದದ ಸುಳಿವು ನೀಡಿದ್ದಾರೆ. ಮತ್ತೊಂದೆಡೆ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮೋದಿ ಯಾವುದೇ ಒತ್ತಡಕ್ಕೆ ಮಣಿಯುವವರಲ್ಲ ಎಂದು ಪ್ರಶಂಸಿಸಿದ್ದಾರೆ. ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಜುಲೈನಲ್ಲಿ ಭಾರತ-ಅಮೆರಿಕ ಒಪ್ಪಂದದ ಮೊದಲ ಹಂತದ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
Read Full Story

05:30 AM (IST) Jun 06

ಅಣ್ಣಾಮಲೈ ರಾಜೀನಾಮೆಯಿಂದ ನಮಗೇನೂ ನಷ್ಟವಿಲ್ಲ, ನಮ್ಮದು ವಿಶ್ವದ ಅತಿದೊಡ್ಡ ಪಕ್ಷ ಎಂದ ಬಿಜೆಪಿ

ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ಭಾಷಾ ವಿಚಾರ ಮತ್ತು ಮೈತ್ರಿ ಕುರಿತ ಭಿನ್ನಮತದಿಂದಾಗಿ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅವರು 'ವಿ ದ ಲೀಡರ್ಸ್‌ ಫೌಂಡೇಶನ್‌' ಮೂಲಕ ಹೊಸ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿದ್ದು, ಭವಿಷ್ಯದಲ್ಲಿ ತಮ್ಮದೇ ಪಕ್ಷವನ್ನು ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
Read Full Story

More Trending News