Published : Aug 30, 2026, 07:09 AM ISTUpdated : Aug 30, 2026, 10:07 PM IST

India Latest News Live: 'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ - ಸಖತ್ ಕ್ಯೂಟ್‌ ಆಗಿ ಕಾಣಿಸಿಕೊಂಡ ನಟಿ ಇವರೇನಾ?

ಸಾರಾಂಶ

ಈ ವರ್ಷ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆಯಲಿರುವ ಬಿಹಾರದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಪಾಸ್‌ ಆದರೂ ಅವರ ಅಂಕಪಟ್ಟಿಯಲ್ಲಿ ‘ಫೇಲ್‌’ ಎಂದು ಬರೆಯುವುದಿಲ್ಲ. ಅದರ ಬದಲು ‘ಕೌಶಲ್ಯ ತರಬೇತಿಗೆ ಅರ್ಹ’ ಎಂದು ಬರೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಕಾರಾತ್ಮಕ ರೀತಿಯಲ್ಲಿ ನೈತಿಕ ಬಲ ತುಂಬಲು ಈ ಕ್ರಮ ಅನುಸರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಶಿಕ್ಷಣ ಸಚಿವ ಮಿಥಿಲೇಶ್‌ ತಿವಾರಿ, ‘ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಪಡೆಯಲು ವಿಫಲರಾದ ಮಾತ್ರಕ್ಕೆ ವಿದ್ಯಾರ್ಥಿಗಳ ಪ್ರತಿಭೆ ಮಾಯವಾಗುವುದಿಲ್ಲ. 10ನೇ ತರಗತಿಯ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 1 ತಿಂಗಳ ಕಾಲ ವಿಶೇಷ ತರಗತಿ ನಡೆಸಲಾಗುವುದು. ಅನುತ್ತೀರ್ಣರಾದವರ ಪ್ರಮಾಣಪತ್ರಗಳಲ್ಲಿ ‘ಕೌಶಲ್ಯ ಅಭಿವೃದ್ಧಿಗೆ ಅರ್ಹ’ ಎಂದು ನಮೂದಿಸುವ ಬಗ್ಗೆ ಶೀಘ್ರ ಪರೀಕ್ಷಾ ಮಂಡಳಿಗೆ ನಿರ್ದೇಶನ ನೀಡಲಾಗುವುದು’ ಎಂದು ತಿಳಿಸಿದರು.

ಪಠ್ಯವನ್ನು ಹೊರತುಪಡಿಸಿದ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಬಿಹಾರ ಸರ್ಕಾರ ಈಗಾಗಲೇ 1 ದಿನ ಪಾಟಿಚೀಲ ಇಲ್ಲದೆ ಶಾಲೆಗೆ ಬರುವ ಪರಿಪಾಠ ಆರಂಭಿಸಿದೆ.

10:07 PM (IST) Aug 30

'ಬಂದ ಬಂದ ಮೇಘರಾಜ' ಎಂದ ಮುದ್ದು ಚೆಲುವೆ - ಸಖತ್ ಕ್ಯೂಟ್‌ ಆಗಿ ಕಾಣಿಸಿಕೊಂಡ ನಟಿ ಇವರೇನಾ?

ಜನಪ್ರಿಯ ನಟಿ ಇದೀಗ ಮಳೆಯಲ್ಲಿ ನೆನೆಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿಯ ಕ್ಯೂಟ್ ಹಾಗೂ ನ್ಯಾಚುರಲ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

08:38 PM (IST) Aug 30

ಮತ್ತೆ ಶುರುವಾಯ್ತು ಬಾಲಕಿಯ ವರಾತ! ಕಣ್ಣೀರಿಟ್ಟು ಪ್ರಧಾನಿಯ ಕ್ಷಮೆ ಕೋರಿದಾಕೆಯಿಂದ ಪುನಃ ವಿಡಿಯೋ

ಪ್ರಧಾನಿ ಮೋದಿಯವರನ್ನು ನಿಂದಿಸಿ, ನಂತರ ಕ್ಷಮೆ ಕೋರಿದ್ದ ಬಾಲಕಿ ರುಚಿಕಾ ಸಿಂಗ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾಳೆ. ತನ್ನ ಜೀವನ ನರಕವಾಗಿದೆ ಮತ್ತು ಸ್ವಾತಂತ್ರ್ಯವಿಲ್ಲದಂತಾಗಿದೆ ಎಂದು ಮೋದಿಯವರನ್ನೇ ದೂಷಿಸಿ ಹೊಸ ವಿಡಿಯೋ ಮಾಡಿದ್ದಾಳೆ. ಈಕೆಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೇವಲ ಪ್ರಚಾರದ ಗೀಳು ಎಂದು ಟೀಕಿಸುತ್ತಿದ್ದಾರೆ.
Read Full Story

08:29 PM (IST) Aug 30

ವಿಜಯ್ ಮಲ್ಯರಿಂದ ಸ್ಪೂರ್ತಿ ಪಡೆದು 'ಬಿಲಿಯನೇರ್' ಆದ ನಟ ಅರ್ಜುನ್ ರಾಂಪಾಲ್! ಹೊಸ ಅವತಾರದಲ್ಲಿ ಒಟಿಟಿಗೆ ಲಗ್ಗೆ

ಖ್ಯಾತ ನಟ ಅರ್ಜುನ್ ರಾಂಪಾಲ್ ತಮ್ಮ ಮುಂಬರುವ 'ಬಿಲಿಯನೇರ್' ವೆಬ್ ಸರಣಿಯಲ್ಲಿ ಪ್ರಭಾವಿ ಉದ್ಯಮಿಯ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಶೂನ್ಯದಿಂದ ಉದ್ಯಮ ಸಾಮ್ರಾಜ್ಯವನ್ನು ಕಟ್ಟುವ ನಾಯಕನ ಕಥೆಯುಳ್ಳ ಈ ಸರಣಿಯ ಚಿತ್ರೀಕರಣ ನವೆಂಬರ್‌ನಲ್ಲಿ ಆರಂಭವಾಗಲಿದ್ದು, ಇದು ಅಮೆಜಾನ್ MX ಪ್ಲೇಯರ್‌ನಲ್ಲಿ ಪ್ರಸಾರವಾಗಲಿದೆ.
Read Full Story

08:07 PM (IST) Aug 30

ಟಾಕ್ಸಿಕ್ ನಟಿ ತಾರಾ ಸುತಾರಿಯಾಗೆ ಅಪರೂಪದ ಆರೋಗ್ಯ ಸಮಸ್ಯೆ - ಏನಿದು ಡಿಸ್ಕ್ಯಾಲ್ಕ್ಯುಲಿಯಾ?

ಟಾಕ್ಸಿಕ್ ನಟಿ ತಾರಾ ಸುತಾರಿಯಾ ಸದ್ಯ ತಮ್ಮ ಸಿನಿಮಾಗಳಿಗಿಂತಲೂ ವೈಯಕ್ತಿಕ ಜೀವನದ ವಿಚಾರವೊಂದರಿಂದ ಸುದ್ದಿಯಲ್ಲಿದ್ದಾರೆ. ಇದೀಗ ಡಿಸ್ಕ್ಯಾಲ್ಕ್ಯುಲಿಯಾ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಡಿಸ್ಕ್ಯಾಲ್ಕ್ಯುಲಿಯಾ ಎಂದರೇನು, ಇದರ ಲಕ್ಷಣಗಳೇನು ಮತ್ತು ಚಿಕಿತ್ಸೆ ಹೇಗೆ ಎಂಬುದನ್ನು ತಿಳಿಯಿರಿ.

Read Full Story

08:04 PM (IST) Aug 30

'ಆ ಪದ'ವನ್ನೇ ಕಂಗನಾರ ತಲೆಗೆ ಕಟ್ಟಿದ ನಟ.. 'ಕ್ವೀನ್‌'ಗೆ ಗೊತ್ತಾದ್ರೆ ಗತಿ ಏನು? ಸತ್ಯವಾಗ್ಲೂ ಇದು ಶಾಕಿಂಗ್!!

“ಸ್ಟಾರ್ ಕಿಡ್ ಆಗಿರುವುದು ಕೂಡ ಒಂದು ದೊಡ್ಡ ಸವಾಲು. ಜನರ ನಿರೀಕ್ಷೆಗಳು ಅವರ ಮೇಲೆ ಬೆಟ್ಟದಷ್ಟಿರುತ್ತವೆ. ನಟರ ಮಕ್ಕಳಾದ ಕೂಡಲೇ ಅವರು ಅದ್ಭುತವಾಗಿ ನಟಿಸಬೇಕು ಎಂದು ಸಮಾಜ ನಿರೀಕ್ಷಿಸುತ್ತದೆ. ಅದು ಅವರಿಗೆ ಮಾಡುವ ಅನ್ಯಾಯ” ಎಂದ ಈ ನಟ, ಕಂಗನಾ ರಣಾವತ್ ಬಗ್ಗೆ ಹೇಳಿದ್ದೇನು?

Read Full Story

07:33 PM (IST) Aug 30

ಕಮಲದ ಬಳಿಕ ಮತ್ತೊಂದು ಕುತೂಹಲದ ಟ್ಯಾಟೂ ಹಾಕಿಸಿಕೊಂಡ ವಿರಾಟ್​ ಕೊಹ್ಲಿ - ಏನಿದರ ಗುಟ್ಟು

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಹಚ್ಚೆಗಳ ಸಂಗ್ರಹಕ್ಕೆ ಮತ್ತೊಂದು ಹೊಸ ವಿನ್ಯಾಸವನ್ನು ಸೇರಿಸುತ್ತಿದ್ದಾರೆ. ಹಚ್ಚೆ ಕಲಾವಿದರು ಕೊಹ್ಲಿಯ ತೋಳಿನ ಮೇಲೆ ಕೆಲಸ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಹೊಸ ಹಚ್ಚೆಯ ವಿನ್ಯಾಸ ಮತ್ತು ಅದರ ಹಿಂದಿನ ಕಾರಣದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಐದು ಅವಧಿಗಳ ನಂತರವೂ ಈ ಕಲಾಕೃತಿಯ ಕೆಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಕಲಾವಿದರು ತಿಳಿಸಿದ್ದಾರೆ.
Read Full Story

07:30 PM (IST) Aug 30

ನಟಿ ಗಿರಿಜಾ ಓಕ್‌ ಲುಕ್‌ನಲ್ಲಿ ಬಿಗ್‌ ಚೇಂಜ್‌ - ಫೋಟೋಸ್ ನೋಡಿದ್ರೆ ಕಣ್ಣು ಕದಲಿಸೋಕೆ ಆಗಲ್ಲ!

ಮರಾಠಿ ನಟಿ ಗಿರಿಜಾ ಓಕ್‌ ತಮ್ಮ ಹೊಸ ಶಾರ್ಟ್ ಹೇರ್‌ ಲುಕ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ವಿಭಿನ್ನ ಹೇರ್‌ಸ್ಟೈಲ್‌ನೊಂದಿಗೆ ಕಾಣಿಸಿಕೊಂಡಿರುವ ನಟಿಯ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

07:24 PM (IST) Aug 30

ಶಬ್ದಕ್ಕಿಂತ 8 ಪಟ್ಟು ಹೆಚ್ಚು ವೇಗ - ಮೈಕ್ರೋಸೆಕೆಂಡ್‌ಗಳಲ್ಲಿ ಗ್ರ್ಯಾಫೈಟ್ ಆಗಿ ಬದಲಾಗುವ ವಜ್ರ!

ಹೊಸ ಸಂಶೋಧನೆಯ ಪ್ರಕಾರ, ಹೈಪರ್‌ಸಾನಿಕ್ ವೇಗದ ತೀವ್ರ ಆಘಾತಕ್ಕೆ ಒಳಗಾದಾಗ ಜಗತ್ತಿನ ಅತ್ಯಂತ ಕಠಿಣ ವಸ್ತುವಾದ ವಜ್ರವು ಕ್ಷಣಾರ್ಧದಲ್ಲಿ ಗ್ರ್ಯಾಫೈಟ್ ಆಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯು ಅಪಾರ ಪ್ರಮಾಣದ ಶಕ್ತಿಯನ್ನು ಹೀರಿಕೊಳ್ಳುವುದರಿಂದ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಅತ್ಯಂತ ಗಟ್ಟಿಮುಟ್ಟಾದ ವಸ್ತುಗಳನ್ನು ವಿನ್ಯಾಸಗೊಳಿಸಲು ಇದು ನೆರವಾಗಲಿದೆ.
Read Full Story

07:12 PM (IST) Aug 30

WWE ಸ್ಟಾರ್ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಹೆಲ್ತ್ ಅಪ್‌ಡೇಟ್ ಕೊಟ್ಟ ರಸ್ಲಿಂಗ್ ಪಟು

WWE ಮೂಲಕ ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಮಿಂಚಿದ ಭಾರತದ ದಿ ಗ್ರೇಟ್ ಖಲಿ ಪ್ರಯಾಣಿಸುತ್ತಿದ್ದ ಕಾರು ಪಾಣಿಪತ್ ಬಳಿ ಅಪಘಾತಕ್ಕೀಡಾಗಿದೆ. ಟೋಲ್ ಪ್ಲಾಜಾ ಬಳಿಕ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

Read Full Story

06:42 PM (IST) Aug 30

ನೇಪಾಳ ಪ್ರವಾಹದಲ್ಲಿ ಸಿಲುಕಿ ಉತ್ತರ ಪ್ರದೇಶವರೆಗೆ ಈಜಿ ದಡ ಸೇರಿದ 2 ನಾಯಿ, ರಕ್ಷಿಸಿದ ಯುವಕನಿಂದ ಮನವಿ

ನೇಪಾಳ ಪ್ರವಾಹದಲ್ಲಿ ನಾಯಿ, ಬೆಕ್ಕು, ಜಾನುವಾರ, ಕಾಡು ಪ್ರಾಣಿಗಳು ಕೊಚ್ಚಿ ಹೋಗಿದೆ. ಬಹುತೇಕ ಮೃತಪಟ್ಟಿವೆ. ಈ ಪೈಕಿ ಎರಡು ಗೋಲ್ಡನ್ ರಿಟ್ರೀವರ್ ಪ್ರವಾಹ ನೀರಿನಲ್ಲಿ ಈಜುತ್ತಾ ಉತ್ತರ ಪ್ರದೇಶದಲ್ಲಿ ದಡ ಸೇರಿದೆ. ಈ ನಾಯಿಗಳ ರಕ್ಷಿಸಿದ ಯುವಕ ವಿಶೇಷ ಮನವಿ ಮಾಡಿದ್ದಾರೆ.

Read Full Story

06:40 PM (IST) Aug 30

ಮದ್ವೆಗೆ ಒಪ್ಪದ GEN Z! ನೈಟ್​ಕ್ಲಬ್​ನಲ್ಲೂ ನೋಂದಣಿ ಕೇಂದ್ರ- ಮೆಟ್ರೋನಲ್ಲೂ ಮದ್ವೆಗೆ ಅವಕಾಶ; ಎಲ್ಲಿದು

ಕುಸಿಯುತ್ತಿರುವ ವಿವಾಹ ದರವನ್ನು ಹೆಚ್ಚಿಸಲು, ಸರ್ಕಾರವು ಆಸ್ಪತ್ರೆಗಳು, ಬ್ಯಾಂಕ್‌ಗಳು ಮತ್ತು ನೈಟ್‌ಕ್ಲಬ್‌ಗಳಂತಹ ಅಸಾಮಾನ್ಯ ಸ್ಥಳಗಳಲ್ಲಿ ವಿವಾಹ ನೋಂದಣಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಯುವಜನರನ್ನು ಮದುವೆಗೆ ಪ್ರೋತ್ಸಾಹಿಸಲು ಮತ್ತು ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸಲು ಈ ನವೀನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಿದು ಇಂಥ ಪದ್ಧತಿ?

Read Full Story

06:23 PM (IST) Aug 30

8ನೇ ವೇತನ ಆಯೋಗ ಬಂದ್ರೆ ಎಷ್ಟು ಹೆಚ್ಚಾಗತ್ತೆ ಸಂಬಳ? Pay Commission ಮುಂದಿರೋ ಡಿಮಾಂಡ್​ ಏನು

ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ವರದಿಗಾಗಿ ಕಾಯುತ್ತಿದ್ದು, ವಾರ್ಷಿಕ ವೇತನ ಹೆಚ್ಚಳವನ್ನು ಶೇ.3 ರಿಂದ ಶೇ.6ಕ್ಕೆ ಏರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಜೈಪುರದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದ್ದು, ಇದು ನೌಕರರ ಮೂಲ ವೇತನದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.
Read Full Story

06:19 PM (IST) Aug 30

ಟಾಕ್ಸಿಕ್ ನಟಿ ಕಿಯಾರಾ ಅಡ್ವಾಣಿ ಲುಕ್‌ನಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಸೀರೆಯ ಮೇಲಲ್ಲ - ಅಷ್ಟಕ್ಕೂ ಏನದು?

ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಬಿಳಿ ಶಿಫಾನ್ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಸೀರೆಯ ಜೊತೆಗೆ ಅವರು 78 ಕ್ಯಾರೆಟ್‌ಗಿಂತಲೂ ಹೆಚ್ಚು ತೂಕದ, ವಜ್ರಖಚಿತ ಮಾಣಿಕ್ಯದ ನೆಕ್ಲೇಸ್ ಧರಿಸಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

Read Full Story

05:58 PM (IST) Aug 30

8ನೇ ವೇತನ ಆಯೋಗ ಜಾರಿಯಾದ್ರೆ ಪೆನ್ಷನ್​ ಕಟ್​? ಸಂಕಷ್ಟದಕ್ಕಿ ಪಿಂಚಣಿದಾರರು - ಕೇಂದ್ರ ಹೇಳಿದ್ದೇನು

8ನೇ ವೇತನ ಆಯೋಗ ಜಾರಿಯಾದರೆ ಕೆಲವು ನಿವೃತ್ತ ನೌಕರರ ಪಿಂಚಣಿ ನಿಲ್ಲುತ್ತದೆ ಎಂಬ ವೈರಲ್ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ಇದು ಸಂಪೂರ್ಣ ಸುಳ್ಳು ಎಂದು NC-JCMನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಸ್ಪಷ್ಟಪಡಿಸಿದ್ದು, ಪಿಂಚಣಿದಾರರು ಇಂತಹ ವದಂತಿಗಳನ್ನು ನಂಬಬಾರದು ಎಂದು ತಿಳಿಸಿದ್ದಾರೆ. ಪಿಂಚಣಿ ಪರಿಷ್ಕರಣೆ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
Read Full Story

05:24 PM (IST) Aug 30

ಕ್ಯಾಪ್ಟನ್ ವೈಭವ್ ಸೂರ್ಯವಂಶಿ! ದುಲೀಪ್ ಟ್ರೋಫಿಯಲ್ಲಿ ಶಮಿ, ಮುಕೇಶ್‌ ಅಂತಹ ದಿಗ್ಗಜರಿಗೇ ಬಾಸ್

ಇಶಾನ್ ಕಿಶನ್ ಗಾಯಗೊಂಡ ಹಿನ್ನೆಲೆಯಲ್ಲಿ, ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವನ್ನು ಮುನ್ನಡೆಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಮೊಹಮ್ಮದ್ ಶಮಿಯಂತಹ ಹಿರಿಯ ಆಟಗಾರರಿದ್ದ ತಂಡವನ್ನು ಅತೀ ಕಿರಿಯ ವಯಸ್ಸಿನಲ್ಲಿ ಮುನ್ನಡೆಸಿದ ಹೆಗ್ಗಳಿಕೆ ಈತನ ಪಾಲಾಗಿದೆ.

Read Full Story

05:09 PM (IST) Aug 30

13 ಶತಕೋಟಿ ವರ್ಷಗಳ ಕಾಸ್ಮಿಕ್ "ಹಮ್" - ಬ್ರಹ್ಮಾಂಡದ ಮೊದಲ ದೈತ್ಯ ಕಪ್ಪು ಕುಳಿಗಳ ರಹಸ್ಯ ಭೇದಿಸಿದ ಖಗೋಳಶಾಸ್ತ್ರಜ್ಞರು!

ಖಗೋಳಶಾಸ್ತ್ರಜ್ಞರು ಸೂಪರ್‌ಮ್ಯಾಸಿವ್ ಕಪ್ಪು ಕುಳಿಗಳ ಮೂಲವನ್ನು ತನಿಖೆ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪಲ್ಸರ್‌ಗಳ ಮೂಲಕ ಪತ್ತೆಯಾದ ಗುರುತ್ವಾಕರ್ಷಣೆಯ ತರಂಗದ "ಹಮ್", ಬ್ರಹ್ಮಾಂಡದ ಆರಂಭದಲ್ಲಿದ್ದ 'ಡಾರ್ಕ್ ಸ್ಟಾರ್‌'ಗಳ ಕುಸಿತದಿಂದ ಉಂಟಾದ ಕಪ್ಪು ಕುಳಿಗಳಿಂದ ಬಂದಿರಬಹುದು ಎಂದು ಹೊಸ ಅಧ್ಯಯನವೊಂದು ಸೂಚಿಸುತ್ತದೆ.
Read Full Story

04:36 PM (IST) Aug 30

ಲಂಡನ್ ಕೆಲಸ, ಕೋಟಿ ಸಂಬಳ ತೊರೆದು IAS ಆಗಿದ್ದ ದಿವ್ಯಾ ಮಿತ್ತಲ್ ದಿಢೀರ್ ರಾಜೀನಾಮೆ

ಲಂಡನ್‌ನ ಉನ್ನತ ಉದ್ಯೋಗ ತೊರೆದು ತಾಯ್ನಾಡಿನ ಸೇವೆಗಾಗಿ ಐಎಎಸ್ ಆಗಿದ್ದ ದಿವ್ಯಾ ಮಿತ್ತಲ್, 13 ವರ್ಷಗಳ ಸಾರ್ಥಕ ಸೇವೆಯ ನಂತರ ತಮ್ಮ ಹುದ್ದೆಗೆ ಸ್ವಯಂಪ್ರೇರಿತ ರಾಜೀನಾಮೆ ನೀಡಿದ್ದಾರೆ. ಸ್ಥಾನದಿಂದ ಕೆಳಗಿಳಿದರೂ ದೇಶದ ಅಭಿವೃದ್ಧಿಗಾಗಿ ಜನಸೇವೆಯ ಮಿಷನ್ ಎಂದಿಗೂ ನಿಲ್ಲುವುದಿಲ್ಲ ಎಂದಿದ್ದಾರೆ.

Read Full Story

04:35 PM (IST) Aug 30

ಮಾರ್ಗ ಮಧ್ಯೆ ಪೆಟ್ರೋಲ್, ಡೀಸೆಲ್​​ ಖಾಲಿಯಾಯ್ತಾ? ತೊಂದರೆಗೆ ಸಿಲುಕಿದ್ದೀರಾ? ಚಿಂತೆ ಬಿಡಿ- ಹೀಗೆ ಮಾಡಿ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಪೆಟ್ರೋಲ್ ಖಾಲಿಯಾಗುವುದು, ವಾಹನ ಕೆಟ್ಟು ನಿಲ್ಲುವುದು ಅಥವಾ ವೈದ್ಯಕೀಯ ತುರ್ತುಸ್ಥಿತಿಗಳಂತಹ ಸಮಸ್ಯೆಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ, ಭಾರತೀಯ ಹೆದ್ದಾರಿ ಪ್ರಾಧಿಕಾರದ (NHAI) 24/7 ಟೋಲ್-ಫ್ರೀ ಸಹಾಯವಾಣಿ 1033 ಕ್ಕೆ ಕರೆ ಮಾಡಿ ತಕ್ಷಣದ ಸಹಾಯವನ್ನು ಪಡೆಯಬಹುದು.
Read Full Story

04:33 PM (IST) Aug 30

ಹಡಗಿನಷ್ಟೇ ಅಗ್ಗ, ವಿಮಾನದಷ್ಟೇ ವೇಗ - ನೀರಿನ ಮೇಲೆಯೇ ಲ್ಯಾಂಡಿಂಗ್, ಶಕ್ತಿಶಾಲಿ ಯುರೇಕಾಗೆ ಬೆಂಗಳೂರಿನ ಕಂಪನಿ ಚಾಲನೆ!

ಬೆಂಗಳೂರಿನ ಆಸ್ಪೆರಾ ಇಂಡಸ್ಟ್ರೀಸ್ 'ಯುರೇಕಾ' ಎಂಬ ಸ್ವಾಯತ್ತ ಉಭಯಚರ ಸರಕು ಸಾಗಣೆ ವಿಮಾನವನ್ನು ಅನಾವರಣಗೊಳಿಸಿದೆ. ಇದು ಸಮುದ್ರಕ್ಕಿಂತ ವೇಗವಾಗಿ ಮತ್ತು ಸಾಂಪ್ರದಾಯಿಕ ವಾಯು ಸಾಗಣೆಗಿಂತ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ತಲುಪಿಸುವ ಗುರಿ ಹೊಂದಿದೆ. ನೀರನ್ನೇ ರನ್‌ವೇ ಆಗಿ ಬಳಸುವ ಈ ವಿಮಾನವು ಸಾಗಣೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.
Read Full Story

03:59 PM (IST) Aug 30

ಸಾವು ಗೆದ್ದು ಬಂದ ಕಂದಮ್ಮ - ಪ್ರವಾಹದ ಅವಶೇಷಗಳಡಿ 3 ದಿನಗಳ ಬಳಿಕ 6 ವರ್ಷದ ಬಾಲಕಿ ಜೀವಂತ ಪತ್ತೆ

ನೇಪಾಳದ ಭೀಕರ ಪ್ರವಾಹದ ಅವಶೇಷಗಳಡಿ ಮೂರು ದಿನಗಳ ಕಾಲ ಹೂತುಹೋಗಿದ್ದ ಆರು ವರ್ಷದ ಬಾಲಕಿ ಪವಾಡಸದೃಶವಾಗಿ ಜೀವಂತವಾಗಿ ಪತ್ತೆಯಾಗಿದ್ದು, ಸಾವಿನ ದವಡೆಯಿಂದ ಬಂದ ಆಕೆಯ ಕಥೆ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಪುಟ್ಟ ಕಂದಮ್ಮ ಶೀಘ್ರವೇ ಗುಣಮುಖಳಾಗಿ, ತನ್ನ ಕುಟುಂಬವನ್ನು ಮರಳಿ ಸೇರಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Read Full Story

03:52 PM (IST) Aug 30

ಕೇವಲ ಎರಡೇ ಅಕ್ಷರ! ದೇಶದ ಅತಿಸಣ್ಣ ಹೆಸರಿನ 2 ರೈಲು ಸ್ಟೇಷನ್‌ ಮಾಹಿತಿ ಟ್ವೀಟ್‌ ಮಾಡಿದ ಭಾರತೀಯ ರೈಲ್ವೆ! ಏನಿದರ ವಿಶೇಷ?

ಭಾರತೀಯ ರೈಲ್ವೆ ಜಾಲದಲ್ಲಿ ಕೇವಲ ಎರಡು ಅಕ್ಷರಗಳ ಹೆಸರನ್ನು ಹೊಂದಿರುವ ಎರಡು ವಿಶಿಷ್ಟ ನಿಲ್ದಾಣಗಳಿವೆ. ಒಡಿಶಾದ 'ಇಬ್' ಮತ್ತು ಗುಜರಾತ್‌ನ 'ಓಡಿ' ಎಂಬ ಈ ನಿಲ್ದಾಣಗಳು ದೇಶದ ಎರಡು ವಿಭಿನ್ನ ಭಾಗಗಳಲ್ಲಿದ್ದರೂ, ತಮ್ಮ ಚಿಕ್ಕ ಹೆಸರಿನಿಂದಾಗಿ ಅಪರೂಪದ ಸಾಮ್ಯತೆಯನ್ನು ಹಂಚಿಕೊಂಡಿವೆ.
Read Full Story

03:52 PM (IST) Aug 30

ಎವರೆಸ್ಟ್​, LG ಇಂಗಿನ ಪೌಡರ್​ ಭಾರಿ ಡೇಂಜರ್​ - ಎರಡೂ ಕಂಪೆನಿಯನ್ನು ಬ್ಯಾನ್​ ಮಾಡಿದ FSSAI

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಎವರೆಸ್ಟ್ ಮತ್ತು ಲಾಲ್ಜಿ ಗೋಧು ಕಂಪನಿಗಳ ಇಂಗು ಪುಡಿ ಮಾರಾಟವನ್ನು ನಿಷೇಧಿಸಿದೆ. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಉತ್ಪನ್ನಗಳು ಕಳಪೆ ಗುಣಮಟ್ಟದ್ದಾಗಿದ್ದು, ನಿಗದಿತ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, FSSAI ಎರಡೂ ಕಂಪನಿಗಳಿಗೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
Read Full Story

03:22 PM (IST) Aug 30

BSNL ಗ್ರಾಹಕರಿಗೆ ಗುಡ್ ನ್ಯೂಸ್ - ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್..! ಹೊಸ ಆಫರ್‌ಗೆ ಜಿಯೋ, ಏರ್‌ಟೆಲ್ ಕಂಗಾಲು

ಸರ್ಕಾರಿ ಟೆಲಿಕಾಂ ಸಂಸ್ಥೆ BSNL ಕಡಿಮೆ ಬೆಲೆಯಲ್ಲಿ ದೀರ್ಘಾವಧಿ ವ್ಯಾಲಿಡಿಟಿ ನೀಡುವ ಹಲವು ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರೂ. 485 ಪ್ಲಾನ್ ಕೂಡ ಒಂದು. ಈ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ನಂತಹ ಪ್ರಯೋಜನಗಳು ಸಿಗುತ್ತವೆ.

Read Full Story

03:16 PM (IST) Aug 30

ರಾಷ್ಟ್ರಪತಿಗಳ ವೈರಲ್ ಎಡಿಸಿ, ನೆಟ್ಟಿಗರ ಮನಗೆದ್ದಿದ್ದ ಪ್ಯಾರಾ ಕಮಾಂಡೋ ಮೇಜರ್ ರಿಷಭ್ ಸೇನೆಗೆ ದಿಢೀರ್ ನಿವೃತ್ತಿ!

ರಾಷ್ಟ್ರಪತಿಗಳ ಮಾಜಿ ಎಡಿಸಿ ಹಾಗೂ ಪ್ಯಾರಾ ಎಸ್‌ಎಫ್ ಕಮಾಂಡೋ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ 12 ವರ್ಷಗಳ ಸೇವೆ ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಮ್ಮ ಮಿಲಿಟರಿ ಸಾಧನೆಗಳು ಮತ್ತು ರಾಷ್ಟ್ರಪತಿಗಳ ಸಹಾಯಕರಾಗಿ ವೈರಲ್ ಆದ ಕ್ಷಣಗಳಿಂದ ಪ್ರಸಿದ್ಧರಾಗಿದ್ದ ಅವರು, ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

03:08 PM (IST) Aug 30

7 ಬಾರಿ ಚಾಂಪಿಯನ್ ಭಾರತಕ್ಕೆ ಥಾಯ್ಲೆಂಡ್ ಸವಾಲು; ಮಹಿಳಾ ಏಷ್ಯಾಕಪ್‌ ಅಭಿಯಾನ ಆರಂಭ

ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ, ಅತ್ಯಂತ ಯಶಸ್ವಿ ತಂಡವಾದ ಭಾರತವು ಥಾಯ್ಲೆಂಡ್‌ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇತ್ತೀಚಿನ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಭಾರತ ತಂಡಕ್ಕೆ ಈ ಪಂದ್ಯವು ನಿರ್ಣಾಯಕವಾಗಿದ್ದು, ಮತ್ತೊಂದೆಡೆ ಮೊದಲ ಪಂದ್ಯ ಗೆದ್ದಿರುವ ಥಾಯ್ಲೆಂಡ್‌ ಆತ್ಮವಿಶ್ವಾಸದಲ್ಲಿದೆ.
Read Full Story

01:50 PM (IST) Aug 30

ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಹುದ್ದೆಗೆ ಶಶಿಧರ್ ಜಗದೀಶನ್ ಗುಡ್‌ಬೈ - ಆಡಳಿತ ಮಂಡಳಿ ಮನವೊಲಿಸಿದರೂ ಬದಲದ ನಿರ್ಧಾರ!

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶಶಿಧರ್ ಜಗದೀಶನ್ ಅವರು ತಮ್ಮ ಅಧಿಕಾರಾವಧಿ ಮುಗಿದ ನಂತರ ಮರುನೇಮಕಾತಿ ಪಡೆಯದಿರಲು ನಿರ್ಧರಿಸಿದ್ದಾರೆ. ಅವರ ಮನವೊಲಿಸುವ ಆಡಳಿತ ಮಂಡಳಿಯ ಪ್ರಯತ್ನಗಳು ವಿಫಲವಾಗಿದ್ದು, ಅವರ ನಾಯಕತ್ವ ಮತ್ತು ಐತಿಹಾಸಿಕ ವಿಲೀನದಲ್ಲಿನ ಪಾತ್ರವನ್ನು ಮಂಡಳಿ ಶ್ಲಾಘಿಸಿದೆ. ಈ ನಿರ್ಧಾರವು ಭಾರತೀಯ ಖಾಸಗಿ ಬ್ಯಾಂಕಿಂಗ್ ವಲಯದಲ್ಲಿನ ನಾಯಕತ್ವ ಬದಲಾವಣೆಗಳ ಸರಣಿಯ ಭಾಗವಾಗಿದೆ.
Read Full Story

01:48 PM (IST) Aug 30

ಹೊಸ ಎಲ್‌ಪಿಜಿ ಸಂಪರ್ಕ ಯಾವಾಗ ಸಿಗುತ್ತೆ? ಕೇಂದ್ರ ಸರ್ಕಾರ ಏಕೆ ನಿಷೇಧ ಮಾಡಿದೆ?

ಭಾರತದಾದ್ಯಂತ 14.2 ಕೆಜಿ ತೂಕದ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯೇ ಇದಕ್ಕೆ ಕಾರಣವಾಗಿದ್ದು, ಪರ್ಯಾಯವಾಗಿ ಗ್ರಾಹಕರಿಗೆ 5 ಮತ್ತು 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ.
Read Full Story

12:34 PM (IST) Aug 30

ದೆಹಲಿಯ ₹50 ಲಕ್ಷ ವೇತನ ಬಿಟ್ಟು ಲಂಡನ್‌ 1 ಕೋಟಿ ಉದ್ಯೋಗ ಆಯ್ಕೆ ಮಾಡಿದ ಭಾರತೀಯ ಮಹಿಳೆ, ಕಾರಣ ಹೆಚ್ಚು ಸಂಬಳವೆಂದಲ್ಲ!

ಲಂಡನ್‌ನಲ್ಲಿ ವಾಸಿಸುತ್ತಿರುವ ಜಸ್ಲೀನ್ ಕೌರ್ ಎಂಬ ಭಾರತೀಯ ಮಹಿಳೆ, ದೆಹಲಿಯ 50 ಲಕ್ಷ ರೂ. ಸಂಬಳದ ಬದಲು ಲಂಡನ್‌ನ 1 ಕೋಟಿ ರೂ. ಸಂಬಳದ ಉದ್ಯೋಗವನ್ನು ಏಕೆ ಆರಿಸಿಕೊಂಡರು ಎಂಬುದನ್ನು ವಿವರಿಸಿದ್ದಾರೆ. ಉತ್ತಮ ಗಾಳಿಯ ಗುಣಮಟ್ಟ, ಮಹಿಳಾ ಸುರಕ್ಷತೆ, ಮತ್ತು ಉತ್ತಮ ಕೆಲಸ-ಜೀವನ ಸಮತೋಲನವನ್ನು ಅವರು ಪ್ರಮುಖ ಕಾರಣಗಳಾಗಿ ನೀಡಿದ್ದು, ಈ ಕುರಿತ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story

11:29 AM (IST) Aug 30

ಯುಕೆ ಪ್ರವಾಸದಲ್ಲಿ ಭಾರತೀಯ ಮಹಿಳೆಗೆ ಹದಿಹರೆಯದ ಮಕ್ಕಳಿಂದ ಜನಾಂಗೀಯ ನಿಂದನೆ, ಕಹಿ ಅನುಭವ ಹಂಚಿಕೊಂಡ ಯೂಟ್ಯೂಬರ್!

ಯುಕೆ ಪ್ರವಾಸದಲ್ಲಿದ್ದ ಭಾರತೀಯ ಮಹಿಳೆಯೊಬ್ಬರು, ಹದಿಹರೆಯದವರಿಂದ ಜನಾಂಗೀಯ ನಿಂದನೆ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ. ಸರೋವರದ ಬಳಿ ನಡೆದ ಈ ಘಟನೆಯ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ನಂತರ ಅಧಿಕಾರಿಗಳು ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಪೂರ್ಣ ಅನುಭವವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Read Full Story

09:43 AM (IST) Aug 30

ಇಂದಿನಿಂದ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ; ಸಿಂಗಲ್ಸ್‌ನಲ್ಲಿ ಗೆದ್ದರೆ ಸಿಗುತ್ತೆ ₹52.6 ಕೋಟಿ!

ವರ್ಷದ ಕೊನೆಯ ಗ್ರ್ಯಾನ್ ಸ್ಲಾಂ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಚಾಲನೆ ದೊರೆತಿದೆ. ಜೋಕೋವಿಚ್, ಆಲ್ಕರಜ್, ಸಬಲೆಂಕಾ, ಸ್ವಿಯಾಟೆಕ್ ಸೇರಿದಂತೆ ವಿಶ್ವದ ಅಗ್ರ ಆಟಗಾರರು ಕಣದಲ್ಲಿದ್ದು, ಈ ಬಾರಿ ದಾಖಲೆಯ ₹52.6 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಲಾಗಿದೆ. ಆದರೆ, ಸಿಂಗಲ್ಸ್ ವಿಭಾಗದಲ್ಲಿ ಯಾವುದೇ ಭಾರತೀಯ ಆಟಗಾರರು ಸ್ಪರ್ಧಿಸುತ್ತಿಲ್ಲ.
Read Full Story

07:40 AM (IST) Aug 30

ಎವರೆಸ್ಟ್‌ ಎಗ್ ಕರಿ, ಚಿಕನ್, ಗರಂ ಮಸಾಲಾ & ಲಾಲ್ಜೀ ಇಂಗು ಮಾರಾಟದ ಮೇಲೆ ನಿರ್ಬಂಧ

ಕಳಪೆ ಗುಣಮಟ್ಟದ ಕಾರಣ ನೀಡಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎವರೆಸ್ಟ್‌ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟವನ್ನು ನಿಷೇಧಿಸಿದೆ. ಈ ಕ್ರಮ ತಕ್ಷಣದಿಂದ ಜಾರಿಗೆ ಬಂದಿದ್ದು, ಎವರೆಸ್ಟ್‌ನ ಇತರ ಮೂರು ಮಸಾಲಾ ಉತ್ಪನ್ನಗಳಲ್ಲೂ ನಿಯಮ ಉಲ್ಲಂಘನೆ ಪತ್ತೆಯಾಗಿದೆ.
Read Full Story

More Trending News