LIVE NOW
Published : Jun 28, 2026, 07:25 AM ISTUpdated : Jun 28, 2026, 09:29 PM IST

India Latest News Live: Baahubali Facts - ಮೊದಲ ದಿನವೇ 70 ಕೋಟಿ ನಷ್ಟ.. ರಾಜಮೌಳಿ ಕಣ್ಣೀರಿಟ್ಟ ದಿನ - ಪ್ರಭಾಸ್ ಕೂಡ ಬೇಸರ!

ಸಾರಾಂಶ

ಇಂಫಾಲ: ಮಣಿಪುರದಲ್ಲಿ ನಾಗಾ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಕಾಂಗೋಕ್ಪಿ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಕುಳಿತಿದ್ದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಕುಕಿಗಳೇ ಹೆಚ್ಚಿರುವ ಜಿಲ್ಲೆಯಲ್ಲಿ ಕಳೆದ ತಿಂಗಳು ಮೂವರು ಪಾದ್ರಿಗಳನ್ನು ಹತ್ಯೆಗೈದ ಬಳಿಕ ಜಿಲ್ಲೆಯ ಮೇಲೆ ನಾಗಾಗಳು ಆರ್ಥಿಕ ದಿಗ್ಬಂಧನ ಹೇರಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ 1700 ರು.ಗೆ ಲಭ್ಯವಾಗುತ್ತಿದ್ದ 50 ಕೆಜಿ ಅಕ್ಕಿ ಚೀಲದ ಬೆಲೆ 5000 ರು.ಗೆ ತಲುಪಿದೆ. ಗೃಹ ಬಳಕೆಯ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ 5000 ರು.ಗೆ ಮಾರಾಟ ಮಾಡಲಾಗುತ್ತಿದೆ, 1.ಲೀ ಪೆಟ್ರೋಲ್‌ ಬೆಲೆ 250 ರು.ನಿಂದ 280 ರು.ಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ದಿಗ್ಬಂಧನ ಅದೆಷ್ಟು ಪರಿಣಾಮಕಾರಿಯಾಗಿದೆ ಎಂದರೆ ಇತ್ತೀಚೆಗೆ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ನೇಮ್ಚ ಕಿಪ್‌ಗೆನ್‌, ಕಳೆದ 4 ತಿಂಗಳಿನಿಂದ ತಮ್ಮ ಜಿಲ್ಲೆಯನ್ನು ಬಿಟ್ಟು ಹೊರಬರಲಾಗದೆ ಆನ್‌ಲೈನ್ ಮೂಲಕವೇ ಸಂಪುಟ ಸಭೆಗೆ ಹಾಜರಾಗುತ್ತಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ರಾಜ್ಯದ ಮೇಲೆ ಹೇರಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗಿತ್ತು. ಬಳಿಕ ನಡೆದ ಹಿಂಸಾಚಾರದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ.

09:29 PM (IST) Jun 28

Baahubali Facts - ಮೊದಲ ದಿನವೇ 70 ಕೋಟಿ ನಷ್ಟ.. ರಾಜಮೌಳಿ ಕಣ್ಣೀರಿಟ್ಟ ದಿನ - ಪ್ರಭಾಸ್ ಕೂಡ ಬೇಸರ!

Baahubali Facts: ಇಂದು ಭಾರತೀಯ ಚಿತ್ರರಂಗದ ಐತಿಹಾಸಿಕ ಯಶಸ್ವಿ ಸಿನಿಮಾ ಅಂತಾ ಕರೆಸಿಕೊಳ್ಳುವ 'ಬಾಹುಬಲಿ', ರಿಲೀಸ್ ಆದ ಮೊದಲ ದಿನವೇ ಭಾರೀ ನಷ್ಟ ಅನುಭವಿಸಿತ್ತಂತೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಅವರೇ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

08:31 PM (IST) Jun 28

Charu Asopa - 'ಆಕೆಯನ್ನ ಬಿಟ್ಟು ಇರಲು ಆಗಲ್ಲ'.. - ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!

Charu Asopa: ಖ್ಯಾತ ಟಿವಿ ನಟಿ ಚಾರು ಅಸೋಪಾ ಅವರು 'ಬಿಗ್ ಬಾಸ್ 20' ಶೋನ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಹಾಗಾಗಿ ಕೆರಿಯರ್‌ಗಿಂತ ಕುಟುಂಬವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

08:19 PM (IST) Jun 28

68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ

ವೆನಿಜುವೆಲಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇತ್ತ ಸಾವಿನ ಸಂಖ್ಯೆ 1400 ದಾಟಿದರೆ, ನಾಪತ್ತೆಯಾದವರ ಸಂಖ್ಯೆ ಬರೋಬ್ಬರಿ 68,000.

Read Full Story

06:34 PM (IST) Jun 28

Breakup - 'ಮಸ್ತ್ ಮಸ್ತ್ ಹುಡುಗಿ' ರವೀನಾ-ಅಕ್ಷಯ್ ಎಂಗೇಜ್‌ಮೆಂಟ್ ಆಗಿದ್ದರೂ ಮದುವೆ ಮುರಿದುಬಿದ್ದಿದ್ದು ಯಾಕೆ?

Bollywood Reunion: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿ 'ವೆಲ್ಕಮ್ ಟು ದಿ ಜಂಗಲ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದೆ. 90ರ ದಶಕದಲ್ಲಿ ಇವರಿಬ್ಬರು ಕೇವಲ ತೆರೆಯ ಮೇಲಿನ ಹಿಟ್ ಜೋಡಿಯಷ್ಟೇ ಆಗಿರಲಿಲ್ಲ.

Read Full Story

06:03 PM (IST) Jun 28

14 ಮಂದಿ ಸಂಚರಿಸುತ್ತಿದ್ದ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ಪತನ, ಅನುಮಾನ ಹುಟ್ಟಿಸಿದ ಅಪಘಾತ

ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾದಲ್ಲಿ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಹೆಲಿಕಾಪ್ಟರ್ ಪತನ ಹಲವು ಅನುಮಾನಕ್ಕೆ ಕಾರಣವಾಗಿದೆ.

Read Full Story

05:36 PM (IST) Jun 28

Varanasi - 'ಬಾಹುಬಲಿ'ಯಂತೆ ಅಲ್ಲ... 'ವಾರಣಾಸಿ' ಬಗ್ಗೆ ಕೊನೆಗೂ ದೊಡ್ಡ ರಹಸ್ಯ ಬಿಚ್ಚಿಟ್ಟ ರಾಜಮೌಳಿ!

Rajamouli: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ.

Read Full Story

05:17 PM (IST) Jun 28

Govinda - 'ಹೀರೋಗಳಿಗೆ ಇದೆಲ್ಲಾ ಕಾಮನ್'.. - ಗಂಡನ ಅಫೇರ್‌ಗಳ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಸುನಿತಾ!

Sunita Ahuja Interview: ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಗೋವಿಂದ ಪತ್ನಿ ಸುನಿತಾ ಅಹುಜಾ, ತಮ್ಮ ಪತಿಯ ಅಫೇರ್‌ಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

05:02 PM (IST) Jun 28

Samantha - ಗರ್ಭಿಣಿಯಾಗಿದ್ದರೂ ಶೂಟಿಂಗ್ ನಿಲ್ಲಿಸಲಿಲ್ಲ ಸಮಂತಾ - ಸಿಕ್‌ನೆಸ್‌ನಲ್ಲೇ ಹೈ-ಎನರ್ಜಿ ಹಾಡಿಗೆ ಡ್ಯಾನ್ಸ್

Samantha ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಗೆಲುವು ಸಮಂತಾಗೆ ಡಬಲ್ ಸಂಭ್ರಮ ತಂದುಕೊಟ್ಟಿದೆ. ಒಂದು ಕಡೆ ಸಿನಿಮಾ ಸೂಪರ್ ಹಿಟ್. 

Read Full Story

04:49 PM (IST) Jun 28

Nivin Pauly-Alphonse Puthren - 10 ವರ್ಷದ ಬಳಿಕ ಮತ್ತೆ ಒಂದಾದ ʻಪ್ರೇಮಂʼ ಜೋಡಿ; ಆಲ್ಫೋನ್ಸ್ ಪುತ್ರೆನ್ ʻವಿಜಯಂʼ ಚಿತ್ರಕ್ಕೆ ನಿವಿನ್‌ ಪೌಲಿ ಹೀರೋ!

ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಂಚಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಪುತ್ರೇನ್ ಜೊತೆ ಮಾಡಲಿದ್ದಾರೆ.

Read Full Story

04:43 PM (IST) Jun 28

Eetha - ಶ್ರದ್ಧಾ ಕಪೂರ್ ಬಯೋಪಿಕ್‌ ಸಿನಿಮಾಗೆ ಭಾರೀ ವಿರೋಧ... ಟೈಟಲ್ ಬದಲಾಗುತ್ತಾ?

Eetha Biopic: ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಚರಿತ್ರೆ ಆಧಾರಿತ, ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದ ಹುಟ್ಟುಹಾಕಿದೆ.

Read Full Story

04:31 PM (IST) Jun 28

Kriti Sanon - ನಟಿ ಕೃತಿ-ಕಬೀರ್ ಬ್ರೇಕಪ್? ಬೇರೆ ಹುಡುಗಿ ಜೊತೆಗಿನ ಫೋಟೋ ವೈರಲ್, ಅಸಲಿ ಕಥೆಯೇನು?

Kriti Sanon: ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು.

Read Full Story

04:18 PM (IST) Jun 28

ಕೇವಲ 500 ರೂ. ವಾಚ್‌ಗಾಗಿ ಮರಣ - 3 ದಶಕಗಳ ಬಳಿಕ ಸುಪ್ರೀಂಕೋರ್ಟ್‌ನಿಂದ ಪ್ರಕರಣ ಇತ್ಯರ್ಥ!

ಕೇವಲ ₹500 ಮೌಲ್ಯದ ಕೈಗಡಿಯಾರಕ್ಕಾಗಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯಗೊಂಡ 29 ವರ್ಷಗಳ ಹಳೆಯ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಅಂತಿಮ ತೆರೆ ಎಳೆದಿದೆ. ಮಾನವೀಯ ದೃಷ್ಟಿಯಿಂದ, ಜೀವಂತವಿರುವ ಕೊನೆಯ ಅಪರಾಧಿಯ ವಯಸ್ಸನ್ನು ಪರಿಗಣಿಸಿ, ಆತನ ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ ಅವಧಿಗೆ ಸೀಮಿತಗೊಳಿಸಿ ಬಿಡುಗಡೆಗೆ ಆದೇಶಿಸಿದೆ.
Read Full Story

04:14 PM (IST) Jun 28

Anant Ambani - ತಿರುಪತಿಗೆ ತೆರಳಿ ಅಂಬಾನಿ ಪುತ್ರ ಮುಡಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಾರಣ!

Anant Ambani News: ಅನಂತ್ ಅಂಬಾನಿ ಅವರು ಭಾನುವಾರ ತಿರುಪತಿಯ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕವಾಗಿ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.

Read Full Story

03:41 PM (IST) Jun 28

Rules Change - ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್‌ ಕಾರ್ಡ್‌ನಲ್ಲಿ ಬದಲಾವಣೆ

Rules Change: ಇನ್ನು ಕೆಲವೇ ದಿನಗಳಲ್ಲಿ ಜುಲೈ ತಿಂಗಳು ಆರಂಭವಾಗಲಿದೆ. ಪ್ರತಿ ತಿಂಗಳ ಮೊದಲ ದಿನಾಂಕದಂತೆ, ಈ ಬಾರಿಯೂ ಹಲವು ಪ್ರಮುಖ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. ಗ್ಯಾಸ್ ಸಿಲಿಂಡರ್ ಬೆಲೆಯಿಂದ ಹಿಡಿದು ಬ್ಯಾಂಕ್ ಎಫ್‌ಡಿಗಳವರೆಗೆ ಅನೇಕ ವಿಷಯಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.
Read Full Story

03:41 PM (IST) Jun 28

ಗರಿಷ್ಠ ಸಾಕ್ಷರತೆಯಲ್ಲಿ ಕೇರಳಕ್ಕೆ 5ನೇ ಸ್ಥಾನ, ಮೊದಲ ಸ್ಥಾನ ಯಾರಿಗೆ? ಇಲ್ಲಿ ಶೇ.100ರಷ್ಟು ಲಿಟ್ರಸಿ

100 ಪರ್ಸೆಂಟ್ ಲಿಟ್ರಸಿ ಸಾರ್ ಎಂದರೆ ತಕ್ಷಣ ಕೇರಳ ನೆನಪಾಗುತ್ತದೆ. ಆದರೆ ಕೇರಳ ಭಾರತದ ಗರಿಷ್ಠ ಸಾಕ್ಷರತೆ ರಾಜ್ಯಗಳ ಪೈಕಿ 5ನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಕೇರಳದಲ್ಲಿ ಶೇ.100ರಷ್ಟು ಸಾಕ್ಷರತೆ ಇಲ್ಲ. ಹಾಗಾದರೆ ಮೊದಲ ನಾಲ್ಕು ಸ್ಥಾನದಲ್ಲಿ ಯಾರಿದ್ದಾರೆ?

Read Full Story

03:26 PM (IST) Jun 28

Most Used Car In India - ದೇಶದಲ್ಲಿ ಅತಿ ಹೆಚ್ಚು ಜನ ಖರೀದಿಸೋ ಸೆಕೆಂಡ್ ಹ್ಯಾಂಡ್ ಕಾರು ಯಾವುದು ಗೊತ್ತಾ?

Range extender hybrid cars in India: ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರುತಿ ಸುಜುಕಿ ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಖರೀದಿ ಮತ್ತು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

Read Full Story

03:22 PM (IST) Jun 28

ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಕೊಂದ ಸಿಯಾ ಗೋಯಲ್ ಪ್ರಕರಣ, ಮಿತ್ತಲ್ ಕುಟುಂಬ ಶಾಮೀಲು ಶಂಕೆ, ತೀವ್ರ ವಿಚಾರಣೆ

ಲೋನಾವಾಲ ಬಳಿಯ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಕೃತ್ಯ ಎಸಗಿದ್ದು, ಮದುವೆ ಪ್ರಸ್ತಾಪ ತಂದಿದ್ದ 'ಮಿತ್ತಲ್ ಕುಟುಂಬ'ದ ಪಾತ್ರ ಈಗ ಮುನ್ನೆಲೆಗೆ ಬಂದಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಿಯಾಳ ಕುಟುಂಬವನ್ನು ವಿಚಾರಣೆ ನಡೆಸುತ್ತಿದ್ದಾರೆ.
Read Full Story

02:57 PM (IST) Jun 28

ಟ್ರಿಪ್ ಹೋಗುವಾಗ ಇರಲಿ ಎಚ್ಚರ, ಪ್ಯಾಂಗಾಂಗ್ ಲೇಕ್‍ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂ ದಂಡ

ಸರಂಕ್ಷಿತ ಅರಣ್ಯ, ವನ್ಯಜೀವಿಗಳ ತಾಣ, ಸಂರಕ್ಷಿತ ಕೆರೆ, ನದಿ ಸೇರಿದಂತೆ ಕೆಲ ಪ್ರದೇಶಗಳಿಗೆ ಟ್ರಿಪ್ ಹೋಗುವ ಮಂದಿ ಎಚ್ಚರವಹಿಸುವುದು ಅಗತ್ಯ. ಇದೀಗ ಹೀಗೆ ಪ್ಯಾಂಗಾಂಗ್ ಲೇಕ್‌ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Read Full Story

01:33 PM (IST) Jun 28

Electric Scooter - ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಬದಲಿಸೋದು ಕಷ್ಟವೇ? ಸತ್ಯ ಏನು? ಸುಳ್ಳೇನು?

Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಆದರೂ, ಇವುಗಳ ಬಗ್ಗೆ ಜನರಲ್ಲಿ ಇನ್ನೂ ಕೆಲವು ತಪ್ಪು ಕಲ್ಪನೆಗಳಿವೆ. ಅಂತಹ ಕೆಲವು ಪ್ರಮುಖ ತಪ್ಪುಗ್ರಹಿಕೆಗಳು ಯಾವುವು? ಮತ್ತು ನಿಜವಾದ ಸತ್ಯಾಂಶಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

Read Full Story

01:23 PM (IST) Jun 28

Gold ETF - ಗೋಲ್ಡ್ ಇಟಿಎಫ್ ಅಂದ್ರೇನು? ಜನರು ಮುಗಿಬಿದ್ದು ಇದ್ರಲ್ಲಿ ಹೂಡಿಕೆ ಮಾಡ್ತಿರೋದು ಯಾಕೆ?

Gold ETF: ಚಿನ್ನದ ಮೇಲೆ ಹೂಡಿಕೆ ಮಾಡಲು ಅಂಗಡಿಗೆ ಹೋಗಿ ಚಿನ್ನವನ್ನೇ ಖರೀದಿಸಬೇಕಿಲ್ಲ. ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದರೂ ಚಿನ್ನ ಖರೀದಿಸಿದಂತೆಯೇ. ಇದೊಂದು ರೀತಿಯ ಮ್ಯೂಚುವಲ್ ಫಂಡ್ ಆಗಿದ್ದು, ನಿಮ್ಮ ಹಣದಿಂದ ಚಿನ್ನವನ್ನು ಖರೀದಿಸುತ್ತದೆ.
Read Full Story

12:28 PM (IST) Jun 28

ಇಬ್ಬರು ಶಾಲಾ ಬಾಲಕರ ಜೊತೆ ಬಾಲಕಿ ಪರಾರಿ - ಕಾಡಿನಲ್ಲಿ ಇವರು ಮಾಡಿದ್ದೇನು? ಬೆಚ್ಚಿಬೀಳೋ ಸ್ಟೋರಿ ಇದು

ಕೇರಳದ ಕೋಝಿಕ್ಕೋಡ್‌ನಲ್ಲಿ, ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಬಾಲಕರೊಂದಿಗೆ ಕಾಡಿಗೆ ಹೋಗಿ ನಾಪತ್ತೆಯಾಗಿದ್ದಾಳೆ. ಸ್ಮಾರ್ಟ್‌ಫೋನ್ ಮಾರಿ, ಬದುಕಲು ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಕಾಡಿನಲ್ಲಿ ಅಡಗಿಕೊಂಡಿದ್ದ ಈ ಮೂವರನ್ನು ಪೊಲೀಸರು ಮತ್ತು ಸ್ಥಳೀಯರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.

Read Full Story

11:59 AM (IST) Jun 28

15 ದಿನದಲ್ಲಿಯೇ ಮನೆಗೆ ಕಳುಹಿಸಿದ ಕಂಪೆನಿ - ಕಾರ್ಪೋರೆಟ್​ ಜಗತ್ತಿನ ಕರಾಳ ಮುಖ ತೆಗೆದಿಟ್ಟ ಉದ್ಯೋಗಿ

ಕೆಲಸಕ್ಕೆ ಸೇರಿ ಕೇವಲ 15 ದಿನಗಳಲ್ಲಿ ಉದ್ಯೋಗ ಕಳೆದುಕೊಂಡ ವ್ಯಕ್ತಿಯೊಬ್ಬರು ತಮ್ಮ ನೋವನ್ನು ರೆಡ್ಡಿಟ್​ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಆರ್‌ನಿಂದಾದ ಅನ್ಯಾಯ ಮತ್ತು ಬೆದರಿಕೆಯಿಂದಾಗಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮಾನಸಿಕವಾಗಿ ನರಳಬೇಕಾಯಿತು, ಇದು ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ತೆರೆದಿಟ್ಟಿದೆ.
Read Full Story

11:22 AM (IST) Jun 28

Bigg Bossಗೆ ಅವಕಾಶ ಕೋರಿ ವಿಡಿಯೋ ಮಾಡಿದ ಪೊಲೀಸ್​ ಸಂಕಷ್ಟದಲ್ಲಿ! ಕೆಲಸ ಕಳೆದುಕೊಳ್ಳೋ ಭೀತಿ

ಕನ್ನಡ ಬಿಗ್​ಬಾಸ್​ ಜನಸಾಮಾನ್ಯರಿಗೆ ಅವಕಾಶ ನೀಡುತ್ತಿರುವಂತೆಯೇ, ತೆಲುಗು ಬಿಗ್​ಬಾಸ್​ಗೆ ಪೊಲೀಸ್ ಸಮವಸ್ತ್ರದಲ್ಲಿಯೇ ಆಡಿಷನ್ ನೀಡಿದ ಕಾನ್‌ಸ್ಟೆಬಲ್ ನಾಗಾರ್ಜುನ ರೆಡ್ಡಿ ವಿವಾದಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸೇವಾ ನಿಯಮ ಉಲ್ಲಂಘನೆಗಾಗಿ ಅವರು ಶಿಸ್ತು ಕ್ರಮವನ್ನು ಎದುರಿಸುತ್ತಿದ್ದಾರೆ.
Read Full Story

10:34 AM (IST) Jun 28

ಕಾಸರಗೋಡು - ಹಿಂದೂ ವ್ಯಕ್ತಿಗೆ ಮುಸ್ಲಿಂ ಮಹಿಳೆಯಿಂದ ಅಂತ್ಯಸಂಸ್ಕಾರ, ಶಾಸ್ತ್ರೋಕ್ತವಾಗಿ ಕೊಳ್ಳಿ ಇಟ್ಟ ಹೆಣ್ಮಗು!

ಕಾಸರಗೋಡಿನ ಮುಸ್ಲಿಂ ಮಹಿಳೆ ಇರ್ಫಾನಾ ಇಕ್ಬಾಲ್, ಕುಟುಂಬದಿಂದ ತಿರಸ್ಕೃತನಾದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಾರೆ. ಕ್ಯಾನ್ಸರ್‌ನಿಂದ ಮೃತಪಟ್ಟ ನಾರಾಯಣನ್ ಎಂಬುವವರ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ, ಇವರು ತೋರಿದ ಮಾನವೀಯತೆ ಮತ್ತು ಕೋಮು ಸೌಹಾರ್ದತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

10:30 AM (IST) Jun 28

ಮಗು ವಿಷಯ ತೆಗೆದು ಕಣ್ಣೀರು ಹಾಕಿ, ಎಲ್ಲ ಚೆನ್ನಾಗಿದೆ ಅಂತ ನಾಟಕ ಮಾಡಿ ಡಿವೋರ್ಸ್‌ ಘೋಷಿಸಿದ Bigg Boss ವಿಜೇತ!

Actor Gaurav Khanna Akanksha Chamola Divorce: ಮದುವೆಯಾಗಿ 10 ವರ್ಷಗಳ ಬಳಿಕ ನಟ ಗೌರವ್‌ ಖನ್ನಾ, ಆಕಾಂಕ್ಷಾ ಛಮೋಲ ಅವರು ಡಿವೋರ್ಸ್‌ ಪಡೆಯಲಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ Lock UPP Season 2 ಶೋನಲ್ಲಿ ಆಕಾಂಕ್ಷಾ ಸ್ಪರ್ಧಿ. ಆ ವೇಳೆ ಅವರು ಡಿವೋರ್ಸ್‌ ವಿಷಯ ರಿವೀಲ್‌ ಮಾಡಿದ್ದಾರೆ.

 

Read Full Story

More Trending News