ನವದೆಹಲಿ: ಮತಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ, ಮುಂದಿನ ವಾರ 28ರಂದು' ಅಣಕು ಸಂಸತ್ತು' ನಡೆಸಲು ಚಿಂತನೆ ನಡೆಸಿದೆ.
ಈ ಅಣಕು ಅಧಿವೇಶನವು ಸಿಇಸಿ ವಾಗ್ದಂಡನೆ, ಅವರ ರಾಜೀನಾಮೆಗೆ ಒತ್ತಾಯ ಹಾಗೂ ಎಸ್‌ಐಆರ್‌ಕುರಿತಾದ ಸಮಗ್ರ ಚರ್ಚೆಗಳನ್ನು ಒಳಗೊಂಡಿರಲಿದೆ ಎಂದು ವಿಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಅ.28ರಂದು ಸಂಸದರನ್ನೊಳಗೊಂಡ ಸಭೆಯ ರೂಪದಲ್ಲಿ ಈ ಅಣಕು ಅಧಿವೇಶನ ನಡೆಯುವ ಸಾಧ್ಯತೆಯಿದೆ. ಸಿಐಸಿ ರಾಜೀನಾಮೆಗೆ ಒತ್ತಾಯಿಸಿ ನ.1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಿಗದಿಯಾಗಿರುವುದರಿಂದ ಇದುಸಂಸದರುಮತ್ತು ನಾಯಕರಷ್ಟೇ ಭಾಗವಹಿಸುವ ಸೀಮಿತ ಸಭೆಯಾಗಿರಲಿದೆ.
09:36 AM (IST) Oct 25
09:23 AM (IST) Oct 25
08:59 AM (IST) Oct 25
ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ತಾನವು ಕಾಶ್ಮೀರಿಗರನ್ನು ರಕ್ಷಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಸರ್ಕಾರದ ಉದ್ದೇಶ ಒಳ್ಳೆಯದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಫಾರೂಕ್ ಕ್ಷಮೆಯಾಚನೆಗೆ ಆಗ್ರಹ.
07:24 AM (IST) Oct 25
ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ತಂಗಿ ವೈ.ಎಸ್. ಶರ್ಮಿಳಾ ನಡುವೆ ಬೆಂಗಳೂರಿನ ಯಲಹಂಕ ಪ್ಯಾಲೇಸ್ ವಿಚಾರವಾಗಿ ಹೊಸ ವಿವಾದ ಭುಗಿಲೆದ್ದಿದೆ. ಶರ್ಮಿಳಾ ತಮ್ಮ ಮಗಳ ಮದುವೆಯನ್ನು ಈ ಬಂಗಲೆಯಲ್ಲಿ ಮಾಡಲು ನಿರ್ಧರಿಸಿದ್ದರೆ, ಭದ್ರತೆಯ ಕಾರಣ ನೀಡಿ ಜಗನ್ ಇದಕ್ಕೆ ನಿರಾಕರಿಸಿದ್ದಾರೆ.