ನವದೆಹಲಿ: ಮಧ್ಯಪ್ರಾಚ್ಯ ಯುದ್ಧದ ನಡುವೆ ಜಾಗತಿಕವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಭಾರಿ ಕುಸಿದಿವೆ. ಬೆಂಗಳೂರಿನಲ್ಲಿ ಭಾನುವಾರ 1,45,970 ರು. ಇದ್ದ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10,320 ರು. ಇಳಿಕೆಯಾಗಿದ್ದು, 1,35,650 ರು. ಆಗಿದೆ.
ಅತ್ತ ಇದೇ ಪ್ರಮಾಣದ 22 ಕ್ಯಾರಟ್ ಹೊನ್ನಿನ ದರದಲ್ಲಿ 9,450 ರು. ಕುಸಿದು 1,24,350 ರು.ಗೆ ನಿಂತಿದೆ. 1 ಕೆ.ಜಿ. ಬೆಳ್ಳಿ ಬೆಲೆಯಲ್ಲೂ 15 ಸಾವಿರ ರು. ಇಳಿಕೆ ಆಗಿದ್ದು, 2.3 ಲಕ್ಷ ರು. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1.43 ಲಕ್ಷ ರು. ಇದ್ದರೆ, ಕೆ.ಜಿ. ಬೆಳ್ಳಿಗೆ 2.30 ಲಕ್ಷ ರು. ಆಗಿದೆ.
ಫ್ಯೂಚರ್ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಕುಸಿತವಾಗಿ 1.29 ಲಕ್ಷ ರು. ಆಗಿದೆ.
10:41 PM (IST) Mar 24
ಭಾರತದ ಇತಿಹಾಸದಲ್ಲಿಯೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ತಂಡ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ಒಕ್ಕೂಟ ಇದನ್ನು ಖರೀದಿಸಿದೆ. ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್‌ಸಿಬಿಯ ನೂತನ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ.
10:02 PM (IST) Mar 24
ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು 1.78 ಬಿಲಿಯನ್ ಡಾಲರ್‌ಗೆ ಖರೀದಿಸಿದೆ. ಈ ಒಪ್ಪಂದದ ಅಡಿಯಲ್ಲಿ, ಆದಿತ್ಯ ಬಿರ್ಲಾ ಗ್ರೂಪ್‌ನ ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್‌ಸಿಬಿಯ ಹೊಸ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ.
08:32 PM (IST) Mar 24
ಮಧ್ಯಪ್ರಾಚ್ಯದ ಯುದ್ಧದಿಂದ ಉಂಟಾದ ಅನಿಲ ಕೊರತೆಯು ಪ್ಯಾಕೇಜಿಂಗ್ ವಸ್ತುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ಭಾರತದಲ್ಲಿನ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳು ಬಿಯರ್ ಬೆಲೆಯಲ್ಲಿ ಶೇ. 12-15ರಷ್ಟು ಏರಿಕೆ ಮಾಡಲು ಸರ್ಕಾರದ ಅನುಮತಿ ಕೋರುತ್ತಿವೆ.
08:22 PM (IST) Mar 24
ಯಾಮಿ ಗೌತಮ್ ಅವರ ಪತಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
08:16 PM (IST) Mar 24
07:30 PM (IST) Mar 24
ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಗೃಹಿಣಿಯರಿಗೆ ಉಚಿತ ಫ್ರಿಡ್ಜ್ ಮತ್ತು ಯುವಕರಿಗೆ ಶೈಕ್ಷಣಿಕ ಸಾಲ ಮನ್ನಾದಂತಹ ಪ್ರಮುಖ ಭರವಸೆಗಳನ್ನು ನೀಡಿದೆ.
06:51 PM (IST) Mar 24
06:42 PM (IST) Mar 24
ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ. ಇರಾನ್ ಜೊತೆ ಅಮೆರಿಕಾದ ಸಂಧಾನದ ವರದಿಗಳ ನಡುವೆಯೂ, ಇರಾನ್ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
06:18 PM (IST) Mar 24
ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ 350 ಕೋಟಿ ಮೌಲ್ಯದ ಬಂಗಲೆಯು ಸರಳತೆ ಮತ್ತು ಪರಿಸರ ಸ್ನೇಹಿ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. 6 ಸಾವಿರ ಚದರ ಅಡಿ ವಿಸ್ತೀರ್ಣದ ಈ ಫಾರ್ಮ್‌ಹೌಸ್ ಶೈಲಿಯ ನಿವಾಸವು ಇಟ್ಟಿಗೆ ಮತ್ತು ಕಲ್ಲಿನ ವಾಸ್ತುಶಿಲ್ಪ ಹೊಂದಿದೆ.
06:14 PM (IST) Mar 24
ಅಂತಿಮ ಕ್ಷಣದಲ್ಲಿ ಜೊತೆಗಿದ್ದ ತಾಯಿ, ನರಕ ಯಾತನೆ ಅಂತ್ಯಗೊಳಿಸಿ ನೋವಿಲ್ಲದ ಸಾವು ಕಂಡ ಹರೀಶ್ ರಾಣಾ , ಅಂತಿಮ ಕ್ಷಣಗಳಲ್ಲಿ ತಾಯಿಗೆ ಮಾತ್ರ ಜೊತೆಯಲ್ಲಿರಲು ಅವಕಾಶ ನೀಡಲಾಗಿತ್ತು. 2013ರಿಂದ ಕೋಮಾದಲ್ಲಿದ್ದ ಹರೀಶ್ ನೋವಿಲ್ಲದ ಲೋಕಕ್ಕೆ ಪಯಣ.
06:02 PM (IST) Mar 24
05:57 PM (IST) Mar 24
ಇಲ್ಲೊಂದು ಕಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾತು ಆಡಲು ಬಾರದ ಪುಟ್ಟ ಮಗುವೊಂದು ಅಸ್ವಸ್ಥಗೊಂಡಿದ್ದು, ಈ ವೇಳೆ ರೈಲ್ವೆ ಇಲಾಖೆಯ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಮಗುವಿನ ತಾಯಿಯೊಬ್ಬರು ಧನ್ಯವಾದ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
05:27 PM (IST) Mar 24
ಕಮರ್ಷಿಯಲ್ ಹೀರೋ ಆಗಿ ಮಿಂಚಿದ್ದ ನಾಗಾರ್ಜುನ, ಭಕ್ತಿ ಪ್ರಧಾನ ಚಿತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ಈ ನಟನ ಡ್ರೀಮ್ ರೋಲ್ ಯಾವುದು ಗೊತ್ತಾ? ಸ್ವತಃ ನಾಗ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
05:12 PM (IST) Mar 24
ಇಸೈಜ್ಞಾನಿ ಇಳಯರಾಜಾ ಅವರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಲು ಯೇಸುದಾಸ್ ಅವರಿಗೆ ಕರೆ ಬಂದಿತ್ತು. ಆದರೆ, ರೆಕಾರ್ಡಿಂಗ್‌ಗೆ ತಡವಾಗಿ ಬಂದ ಯೇಸುದಾಸ್, ಆ ಹಾಡನ್ನು ಹಾಡಲು ನಿರಾಕರಿಸಿ ವಾಪಸಾದರು. ಆ ಘಟನೆಯ ಬಗ್ಗೆ ಇಲ್ಲಿ ನೋಡೋಣ.
05:04 PM (IST) Mar 24
04:47 PM (IST) Mar 24
04:45 PM (IST) Mar 24
ಅಮೆರಿಕನ್ ಉದ್ಯಮಿ ಕಲ್ ಸೋಮಾನಿಗೆ ರಾಜಸ್ಥಾನ ರಾಯಲ್ಸ್ ಮಾರಾಟ, 15 ಸಾವಿರ ಕೋಟಿ ಡೀಲ್, ವಿಶೇಷ ಅಂದರೆ ಸೋಮಾನಿ ಜೊತೆ ಫ್ಲಿಪ್‌ಕಾರ್ಟ್ ಮಾಲೀಕ ಕೂಡ ಸೇರಿಕೊಂಡು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿದ್ದಾರೆ.
04:15 PM (IST) Mar 24
tooth extraction gone wrong: ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ನಂತರ ಆರೋಪಿ ವೈದ್ಯ ಪರಾರಿಯಾಗಿದ್ದು, ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
03:40 PM (IST) Mar 24
03:21 PM (IST) Mar 24
ಅಮೆರಿಕ-ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಇರಾನ್ ತನ್ನ ಬೃಹತ್ ಭೂಗತ ಮಿಲಿಟರಿ ಸಂಕೀರ್ಣದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸುಧಾರಿತ ಕ್ಷಿಪಣಿಗಳನ್ನು ಪ್ರದರ್ಶಿಸಲಾಗಿದ್ದು ಈ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯ ಕುಗ್ಗಿಲ್ಲ ಎಂದು ಇರಾನ್ ಜಗತ್ತಿಗೆ ಸಾರಿದೆ.
03:10 PM (IST) Mar 24
ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಅಲ್ಪ ಮೊತ್ತ ಹೂಡಿಕೆ ಮಾಡಿ ಗಳಿಸಿ 25 ಲಕ್ಷ ರೂ ರಿಟರ್ನ್ಸ್, ಕೇಂದ್ರ ಸರ್ಕಾರ ಬೆಂಬಲಿತ ಸ್ಕೀಮ್ ಇದಾಗಿದ್ದು, ಸುರಕ್ಷಿತ ಹೂಡಿಕೆ ಪ್ಲಾನ್ ಆಗಿದೆ. ಮಾರುಕಟ್ಟೆಗಳ ಏರಿಳಿತ ಈ ಸ್ಕೀಮ್‌ಗೆ ಯಾವುದೇ ಸಮಸ್ಯೆ ಸೃಷ್ಟಿಸುವುದಿಲ್ಲ.
02:17 PM (IST) Mar 24
ಕ್ರಿಶ್ಚಿಯನ್ ಸೇರಿದಂತೆ ಇತರೆ ಧರ್ಮಕ್ಕೆ ಮತಾಂತರಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿಗಳು, ಆ ಸಮುದಾಯಕ್ಕೆ ಸಿಗುವ ಪ್ರಯೋಜನಗಳನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದವರನ್ನು ಮಾತ್ರ ಪರಿಶಿಷ್ಟ ಜಾತಿ ಎಂದು ಪರಿಗಣಿಸಬಹುದು ಎಂಬ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪನ್ನು ನ್ಯಾಯಾಲಯ ಎತ್ತಿಹಿಡಿದಿದೆ.
02:06 PM (IST) Mar 24
boyfriend killed widow: ಕೆಲ ದಿನಗಳ ಹಿಂದೆ ಕಾಲುವೆಯೊಂದರ ಬಳಿ ಮಹಿಳೆಯೊಬ್ಬರ ತಲೆ ಇಲ್ಲದ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಹಿಳೆಯ ಬಾಯ್‌ಫ್ರೆಂಡ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ. ಪ್ರಕರಣದ ಡಿಟೇಲ್ ಸ್ಟೋರಿ ಇಲ್ಲಿದೆ.
01:53 PM (IST) Mar 24
ಪತ್ನಿಯ ಶಿಕ್ಷಣಕ್ಕೆ ಬೆಂಬಲ ನೀಡಿ ಆಕೆಗೆ ಸರ್ಕಾರಿ ನೌಕರಿ ಸಿಕ್ಕ ನಂತರ, ಆಕೆ ತನ್ನಿಂದ ದೂರವಾಗಿದ್ದರಿಂದ ಮನನೊಂದ ಪತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಮತ್ತು ಆಕೆಯ ಸಂಬಂಧಿಕರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
01:38 PM (IST) Mar 24
01:23 PM (IST) Mar 24
ಯುದ್ಧ ನಡುವೆ ಪಾಕಿಸ್ತಾನದ ಮಹತ್ವದ ನಡೆ, ಅಮೆರಿಕ ಇರಾನ್ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ವೇದಿಕೆ?ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ದೇಶಗಳು ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
01:10 PM (IST) Mar 24
01:09 PM (IST) Mar 24
01:08 PM (IST) Mar 24
ತ್ರಿಶೂರ್‌ನ ವಲಪಾಡ್‌ನಲ್ಲಿ ಜಿಮ್ ಮತ್ತು ಬ್ಯೂಟಿ ಸಲೂನ್ ಹೆಸರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಶ್ರೀಲಕ್ಷ್ಮಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಳಿಯಿಂದ 2.270 ಕಿಲೋಗ್ರಾಂ ಹ್ಯಾಶಿಶ್ ಆಯಿಲ್, ನಗದು ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಖಾಲಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
12:20 PM (IST) Mar 24
ಮತಾಂತರಿಗಳಿಗೆ ಸುಪ್ರೀಂ ಶಾಕ್, ಕ್ರಿಶ್ಚಿಯನ್ ಸೇರಿ ಬೇರೆ ಧರ್ಮಕ್ಕೆ ಕನ್ವರ್ಟ್ ಆದ್ರೆ ದಲಿತ ಸ್ಥಾನಮಾನ ಇಲ್ಲ, ವಿದೇಶಿ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಸ್ಥಾನಮಾನ ಹಾಗೂ ರಕ್ಷಣೆಕೂಡ ಸಿಗಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
12:00 PM (IST) Mar 24
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರಿನ ಜ್ಯೋತಿಷ್ಯಕ್ಕೆ (Name Astrology) ವಿಶೇಷ ಪ್ರಾಮುಖ್ಯತೆ ಇದೆ. ಇಂಗ್ಲಿಷ್‌ನ 'A' ಅಕ್ಷರದಿಂದ ಹೆಸರು ಆರಂಭವಾಗುವವರ ಜೀವನ ಹೇಗಿರುತ್ತೆ? ಇಂಗ್ಲಿಷ್‌ನಲ್ಲಿ 'A' ಅಕ್ಷರದಿಂದ ಶುರುವಾಗುವ ಹೆಸರುಗಳು ಕನ್ನಡದಲ್ಲಿ 'ಅ, ಆ' ಅಕ್ಷರಗಳಿಂದ ಆರಂಭವಾಗುತ್ತವೆ.
12:00 PM (IST) Mar 24
ಕಳ್ಳರ ಟ್ರಕ್‌ನಿಂದ ತಪ್ಪಿಸಿಕೊಂಡು 17 ಕಿ.ಮಿ ನಡೆದು ಮರಳಿ ಮನೆ ಸೇರಿದ 7 ನಾಯಿಗಳ ಸಾಹಸಗಾಥೆ, 7 ನಾಯಿಗಳು ದಾರಿ ಮೂಲಕ ನಡೆದುಕೊಂಡು ಸಾಗುತ್ತಿರುವ ದೃಶ್ಯ ಸೆರೆಯಾಗಿದೆ. ಪುಟ್ಟ ಕಾರ್ಗಿ ತಳಿಯ ನಾಯಿ ಇತರ ನಾಯಿಗಳಿಗೆ ದಾರಿ ತೋರಿಸಿದೆ.
11:36 AM (IST) Mar 24
11:16 AM (IST) Mar 24
11:16 AM (IST) Mar 24
wife kills husband in rajasthan: ಮಕ್ಕಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕಿಯೇ ಇಲ್ಲಿ ದಾರಿತಪ್ಪಿದ್ದಾಳೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು
11:03 AM (IST) Mar 24
ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ, ಈ ಚಾಲೆಂಜ್ ಗೇಮ್ ಅತ್ಯಂತ ಅಪಾಯಕಾರಿಯಾಗಿದೆ. ಎನೂ ಅರಿವಿಲ್ಲದ ಮಕ್ಕಳು ರೀಲ್ಸ್ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದರೆ ಎಚ್ಚರವಹಿಸುವುದು ಸೂಕ್ತ.
09:45 AM (IST) Mar 24
09:07 AM (IST) Mar 24
20 ವರ್ಷಗಳ ದಾಂಪತ್ಯದ ನಂತರ ಮಹಿಳೆಯೊಬ್ಬಳಿಗೆ ತನ್ನ ಪತಿಯ ಸತ್ಯ ಗೊತ್ತಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಈ ರಹಸ್ಯ ಬಯಲಾಗಿದ್ದು, ಪತಿಯ ಈ ನಂಬಿಕೆ ದ್ರೋಹದಿಂದ ಆಘಾತಕ್ಕೊಳಗಾದ ಆಕೆ ವಿಚ್ಛೇದನಕ್ಕೆ ಮುಂದಾಗಿದ್ದಾರೆ.
08:53 AM (IST) Mar 24
Giorgia Meloni video : ತಮ್ಮ ಬಗೆಗಿನ ಪಾಸಿಟಿವ್ ವಿಚಾರ ಕೇಳುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ನೆಗೆಟಿವ್ ವಿಚಾರವನ್ನು ಹೇಳಿದಾಗ ಅನೇಕರು ಅದನ್ನು ಸ್ವೀಕರಿಸುವುದಕ್ಕಿಂತ ಹೇಳಿದವರ ಮೇಲೆ ಮುಗಿಬೀಳೋದೇ ಹೆಚ್ಚು. ಬಹುತೇಕರು ವಾದಕ್ಕಿಳಿಯುತ್ತಾರೆ. ಆದರೆ ಇಟಲಿ ಪ್ರಧಾನಿ ಏನ್ ಮಾಡಿದ್ರು ನೋಡಿ..
08:26 AM (IST) Mar 24
common credit card scams ಇಮೇಲ್, ಫೋನ್ ಕರೆ, ಎಟಿಎಂ, ಮತ್ತು ರಿವಾರ್ಡ್ ಪಾಯಿಂಟ್‌ಗಳ ಆಮಿಷದಂತಹ ಹಲವು ವಿಧಾನಗಳ ಮೂಲಕ ವಂಚಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ಹಣ ದೋಚುತ್ತಾರೆ.