ನವದೆಹಲಿ: ಅಮೆರಿಕಕ್ಕೆ ಹೋಗಿ ನೆಲಸಬೇಕು ಎನ್ನುವ ಭಾರತೀಯರ ಕನಸು ಕ್ರಮೇಣ ಕಮರುತ್ತಿದೆ. ಮಾತ್ರವಲ್ಲ ಈಗಾಗಲೇ ಅಲ್ಲಿರುವ ಶೇ.40ರಷ್ಟು ಭಾರತೀಯರು ಅಮೆರಿಕ ತೊರೆಯುವ ಯೋಚನೆಯಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಕಾರ್ನೆಗೀ ಎಂಡೋಮೆಂಟ್ ನಡೆಸಿದ ಸಮೀಕ್ಷೆ ಅನ್ವಯ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಆ ದೇಶ ಬಿಡುವ ಚಿಂತನೆ ನಡೆಸಿದ್ದಾರೆ.ಶೇ.40 ರಷ್ಟು ಅನಿವಾಸಿ ಭಾರತೀಯರು ಈ ಬಗ್ಗೆ ಮಾತನಾಡಿದ್ದಾರೆ.ಭಾರತಕ್ಕೆ ಮರಳು ವುದಾಗಿ ಹೇಳಿರುವ ಪೈಕಿ ಶೇ.58ರಷ್ಟು ಜನರು ರಾಜಕೀಯ ವಿದ್ಯಮಾನದ ಕಾರಣ ನೀಡಿದ್ದರೆ, ಉಳಿದವರು ವೆಚ್ಚ, ಜನರು ಸುರಕ್ಷತೆಗೆ ಉಂಟಾಗಿರುವ ಕಳವಳ ಕಾರಣ ಎಂದು ಹೇಳಿದಿದ್ದಾರೆ. ಜತೆಗೆ ಬಹುತೇಕರು ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅವರು ಕೈಗೊಂಡಿರುವ ನೀತಿಗಳು ಕಾರಣ ಎಂದಿದ್ದಾರೆ.ಅಮೆರಿಕದಲ್ಲಿ 52 ಲಕ್ಷ ಭಾರತೀಯರಿದ್ದಾರೆ.
09:52 PM (IST) Apr 24
ಶುಕ್ರವಾರ ಸಲ್ಮಾನ್ ಖಾನ್ ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ರು. ಅಷ್ಟೇ ಅಲ್ಲ, ಆ ಸಿನಿಮಾ 2027ರ ಈದ್ ಹಬ್ಬಕ್ಕೆ ರಿಲೀಸ್ ಆಗುತ್ತೆ ಅಂತಾನೂ ಹೇಳಿದ್ರು. ಸಲ್ಮಾನ್ ಈ ಸುದ್ದಿ ಕೊಡ್ತಿದ್ದ ಹಾಗೆ..
09:28 PM (IST) Apr 24
ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಅಕ್ಷಯಪಾತ್ರ ಫೌಂಡೇಶನ್ 500 ಕೋಟಿ ಊಟ ದಾನ ಮಾಡಿದ ಸಾಧನೆಯನ್ನು ಮತ್ತು ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮವನ್ನು ಆಚರಿಸಲಾಯಿತು.
08:40 PM (IST) Apr 24
07:54 PM (IST) Apr 24
07:35 PM (IST) Apr 24
ಬಿ.ಎ. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮೇಲ್ವಿಚಾರಕರಿಗೆ 300 ರೂಪಾಯಿ ಲಂಚ ನೀಡಿ, ಮೊಬೈಲ್ ಫೋನ್ ಬಳಸಿ ನಕಲು ಮಾಡಿದ್ದಾರೆ. ಲಂಚ ನೀಡಲು ನಿರಾಕರಿಸಿದ ಕೆಲವು ವಿದ್ಯಾರ್ಥಿಗಳು ತಮಗೂ ಉಚಿತವಾಗಿ ನಕಲು ಮಾಡಲು ಅವಕಾಶ ನೀಡಬೇಕೆಂದು ಪ್ರತಿಭಟಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
07:00 PM (IST) Apr 24
ಎವರ್‌ಗ್ರೀನ್ ಲವ್ ಸ್ಟೋರಿಗಳಲ್ಲಿ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) ಚಿತ್ರಕ್ಕೆ ಈಗಲೂ ವಿಶೇಷ ಸ್ಥಾನವಿದೆ. 1995ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ನಟಿಸಿದ್ದರು.
06:51 PM (IST) Apr 24
ಮಾರುಕಟ್ಟೆಯಿಂದ ತಂದ ಎಲ್ಲಾ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಒಳ್ಳೆಯದು ಎಂಬ ಭಾವನೆ ತಪ್ಪು. ಕೆಲವು ತರಕಾರಿಗಳನ್ನು ತಂಪಾದ ವಾತಾವರಣದಲ್ಲಿಟ್ಟರೆ ಅವುಗಳ ರುಚಿ, ಸುವಾಸನೆ ಮತ್ತು ಪೋಷಕಾಂಶಗಳು ಕಡಿಮೆಯಾಗಿ ಬೇಗನೆ ಹಾಳಾಗುತ್ತವೆ.
06:31 PM (IST) Apr 24
ನಟ ವರುಣ್ ಧವನ್ ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ, ಬಾಲ್ಯದಲ್ಲಿ ಶ್ರದ್ಧಾ ಕಪೂರ್ ತನಗೆ ಪ್ರಪೋಸ್ ಮಾಡಿದ್ದಾಗ, ತಾನು ಅದನ್ನು ನಿರಾಕರಿಸಿದ್ದಕ್ಕೆ ಹುಡುಗರ ಗುಂಪಿನಿಂದ ಪೆಟ್ಟು ತಿಂದಿದ್ದ ತಮಾಷೆಯ ಘಟನೆಯೊಂದನ್ನು ವರುಣ್ ನೆನಪಿಸಿಕೊಂಡಿದ್ದಾರೆ.
06:29 PM (IST) Apr 24
ಒಂದೇ ಏಟಿಗೆ ಆಪ್ ಗಲಿಬಿಲಿ, ಪಕ್ಷ ತೊರೆದು 7 ಸಂಸದರು ಬಿಜೆಪಿಗೆ, ಉಳಿದಿರೋ ಮೂವರು ಯಾರು? ರಾಘವ್ ಚಡ್ಡಾಗೆ ಪಾಠ ಕಲಿಸಲು ಹೋದ ಆಮ್ ಆದ್ಮಿ ಪಾರ್ಟಿ ಕಂಗಾಲಾಗಿದೆ. 7 ಸಂಸದರು ಪಕ್ಷ ತೊರೆದು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ.
06:24 PM (IST) Apr 24
ಮದುರೈ ಮೀನಾಕ್ಷಿ ಅಮ್ಮನ ದೇವಸ್ಥಾನ ಜಗತ್ತಿಗೇ ಫೇಮಸ್. ಆದರೆ, 'ಮೀನಾಕ್ಷಿ' ಅನ್ನೋದು ದೇವಿಯ ನಿಜವಾದ ಹೆಸರಲ್ಲ. ಹಾಗಿದ್ರೆ ಆಕೆಗೆ ಈ ಹೆಸರು ಹೇಗೆ ಬಂತು, ಯಾರು ಇಟ್ಟರು ಅನ್ನೋದರ ಹಿಂದೆ ಅಚ್ಚರಿಯ ಕಥೆಗಳಿವೆ. ಈ ದೇವಸ್ಥಾನದ ಬಗ್ಗೆ ಗೊತ್ತಿಲ್ಲದ ಹಲವು ರಹಸ್ಯಗಳನ್ನು ಇಲ್ಲಿ ತಿಳಿಯೋಣ.
06:11 PM (IST) Apr 24
ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರದ ದಾಖಲೆಯನ್ನು ಮುರಿದು ರಣವೀರ್ ಸಿಂಗ್ ಅಭಿನಯದ 'ಧುರಂಧರ್ ಪ್ರತಿಕಾರ' ಸಿನಿಮಾ ಹೊಸ ಇತಿಹಾಸ ಬರೆದಿದೆ. ವಿಶ್ವಾದ್ಯಂತ ಈ ಚಿತ್ರ ₹1783 ಕೋಟಿ ಗಳಿಕೆ ಕಂಡಿದೆ.
06:01 PM (IST) Apr 24
ಬೇಸಿಗೆಯಲ್ಲಿ ಏರ್ ಕೂಲರ್ ಬಳಸುವಾಗ ಕೆಲವೊಮ್ಮೆ ಕೆಟ್ಟ ವಾಸನೆ ಬರುವುದು ಸಾಮಾನ್ಯ. ಈ ಸಮಸ್ಯೆಯನ್ನು ಮನೆಯಲ್ಲೇ ಸುಲಭವಾಗಿ, ಯಾವುದೇ ಖರ್ಚಿಲ್ಲದೆ ಹೇಗೆ ಬಗೆಹರಿಸಬಹುದು ಎಂದು ಈ ಗ್ಯಾಲರಿಯಲ್ಲಿ ನೋಡೋಣ.
05:41 PM (IST) Apr 24
ಧನುಷ್ ಜೊತೆಗಿನ 'ಕಾರ' ಸಿನಿಮಾದಲ್ಲಿ ಕಪ್ಪಾಗಿ ಕಾಣಲು ಮೇಕಪ್ ಮಾಡಿಕೊಂಡಿದ್ದಾರೆ ಎಂಬ ಟೀಕೆಗೆ ನಟಿ ಮಮಿತಾ ಬೈಜು ಪ್ರತಿಕ್ರಿಯಿಸಿದ್ದಾರೆ. ಒಬ್ಬ ನಟಿಯಾಗಿ ನನ್ನ ಎಲ್ಲೆ ಮೀರಿ ನಟಿಸುವುದು ನನ್ನ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
05:34 PM (IST) Apr 24
ಶಾರುಖ್ ಖಾನ್ ಅವರು ಸದ್ಯ ತಮ್ಮ ಮುಂದಿನ ಸಿನಿಮಾ 'ಕಿಂಗ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಮಗಳು ಸುಹಾನಾ ಖಾನ್ ಕೂಡ ಅಭಿನಯಿಸುತ್ತಿರುವುದು ವಿಶೇಷ. 2023ರಲ್ಲಿ 'ಪಠಾಣ್' ಮತ್ತು 'ಜವಾನ್' ಮೂಲಕ ಸಾವಿರಾರು ಕೋಟಿ ಕೊಳ್ಳೆ ಹೊಡೆದಿದ್ದ ಕಿಂಗ್ ಖಾನ್, ಈಗ ಮತ್ತೆ ಬಾಕ್ಸ್ ಆಫೀಸ್ ಧೂಳಿಪಟ ಮಾಡಲು ಸಜ್ಜಾಗಿದ್ದಾರೆ.
04:58 PM (IST) Apr 24
ರಾಘವ್ ಚಡ್ಡಾ ಜೊತೆ ಪಕ್ಷ ತೊರೆದ ಇಬ್ಬರು ಸಂಸದರು ಬಿಜೆಪಿಗೆ, ಆಪ್ ಪಾರ್ಟಿ ಖಾಲಿ ಖಾಲಿ, ಈ ಬೆಳವಣಿಗೆ ಬೆನ್ನಲ್ಲೇ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಮೊದಲೆ ಕಳೆಗುಂದಿದ್ದ ಆಪ್ ಇದೀಗ ನಾಯಕರಿಲ್ಲದೆ ಬರಿಗಾಗುತ್ತಿದೆ.
04:47 PM (IST) Apr 24
ಪ್ರಸ್ತುತ ಅಣ್ಣು ಕಪೂರ್ ತಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದ್ದರೂ, ತನ್ನ ತಂಗಿಯ ಬದುಕು ಹಾಳಾಯಿತು ಮತ್ತು ಆಕೆಗೆ ಯಾವುದೇ ಬೆಂಬಲವಿಲ್ಲ ಎನ್ನುವ ಕೊರಗು ಮಾತ್ರ ಅವರಲ್ಲಿ ಹಾಗೆಯೇ ಉಳಿದಿದೆ. ಬಾಲಿವುಡ್‌ನ ಈ ಕರಾಳ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
04:33 PM (IST) Apr 24
ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ರಿಪೋರ್ಟ್ ಇಲ್ಲಿದೆ ನೋಡಿ.
03:59 PM (IST) Apr 24
ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಜ್ಯಸಭಾ ಎಂಪಿ ರಾಘವ್ ಚಡ್ಡಾ, ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಸದ್ದಡಿಗಿಸಲು ಪ್ರಯತ್ನಿಸಿದ ಆಪ್‌ಗೆ ಯುವಕ ನಾಯಕ ತಿರುಗೇಟು ನೀಡಿದ್ದಾರೆ.
03:57 PM (IST) Apr 24
03:21 PM (IST) Apr 24
ಪಶ್ಚಿಮ ಬಂಗಾಳದಲ್ಲಿ ಗೆದ್ದ ನಂತರ ದೆಹಲಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಅವರ ಈ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
03:19 PM (IST) Apr 24
ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ ‘ತ್ರಿಶಾ ರಹಸ್ಯವಾಗಿ ಮತಾಂತರಗೊಂಡಿದ್ದಾರಾ?’ ಎಂಬುದು. ಅಷ್ಟೇ ಅಲ್ಲದೆ, ಕಳೆದ ಕೆಲವು ಸಮಯದಿಂದ ತಮಿಳಿನ ಖ್ಯಾತ ನಟರೊಬ್ಬರ ಜೊತೆ ತ್ರಿಶಾ ಹೆಸರು ಕೇಳಿಬರುತ್ತಿದೆ. ಹೀಗಾಗಿ, ‘ಆ ಸ್ಟಾರ್ ನಟನ ಜೊತೆ ಈ ನಟಿಗೆ ಮದುವೆ ಆಗೋಯ್ತಾ? ಆ ನಟನಿಗೋಸ್ಕರವೇ ಇವರು ಧರ್ಮ ಬದಲಿಸಿದರಾ?’ ಎಂಬ ಅನುಮಾನಗಳು ದಟ್ಟವಾಗಿವೆ.
03:19 PM (IST) Apr 24
ಪ್ರಧಾನಿ ಮೋದಿ ಬೋಟ್ ಹತ್ತುತ್ತಾರೆ ಎಂದು ಗೊತ್ತಿರಲಿಲ್ಲ,ರೋಚಕ ಘಟನೆ ಬಿಚ್ಚಿಟ್ಟ ಮೊಹಮ್ಮದ್ ಇಫ್ತಿಕರ್ ಅಹಮ್ಮದ್ ಹೇಳಿದ್ದಾರೆ. ಬೋಟ್‌ಮ್ಯಾನ್ ಜೊತೆ ಮೋದಿ ಮಾತುಕತೆ ಸೇರಿದಂತೆ ಕೆಲ ರೋಚಕ ಘಟನೆ ಬಯಲಾಗಿದೆ.
02:49 PM (IST) Apr 24
ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮಹೀಂದ್ರ ಸ್ಕಾರ್ಪಿಯೋ ಕಾರಿನಿಂದ ಮದುವೆ ಕ್ಯಾನ್ಸಲ್, ಮಂತ್ರಘೋಷಗಳು ಮೊಳಗುತ್ತಿತ್ತು. ಕುಟುಂಬಸ್ಥರು ನೆರೆದಿದ್ದರು. ಆದರೆ ಮದುವೆ ನಡೆಯಲೇ ಇಲ್ಲ. ಏನಿದು ಮದುವೆಗೆ ಅಡ್ಡಿಯಾದ ಕಾರಿನ ಕತೆ
02:02 PM (IST) Apr 24
01:38 PM (IST) Apr 24
ಬೆಂಗಳೂರಿನ ಬೊಮ್ಮಸಂದ್ರದಲ್ಲಿ ವಿಶ್ವದ ಅತಿದೊಡ್ಡ 'ರಾಮೇಶ್ವರಂ ಕೆಫೆ' ಆರಂಭವಾಗಿದೆ. 90,000 ಚದರ ಅಡಿ ವಿಸ್ತೀರ್ಣದಿಂದ ಪ್ರಸಿದ್ಧಿಯಾಗಿರುವ ಬೆನ್ನಲ್ಲೇ ರಾಮೇಶ್ವರಂ ಕೆಫೆಯ ದುಬಾರಿ ಆಹಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಅಂಥದ್ದೇ ಒಂದು ಬಿಲ್ ಈಗ ವೈರಲ್ ಆಗಿದೆ.
01:33 PM (IST) Apr 24
01:04 PM (IST) Apr 24
01:02 PM (IST) Apr 24
12:45 PM (IST) Apr 24
12:20 PM (IST) Apr 24
12:04 PM (IST) Apr 24
ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಜಾಗತಿಕ ಪಾತ್ರದ ಬಗ್ಗೆ ಮಾತನಾಡಿದರು. ಆರ್‌ಎಸ್‌ಎಸ್ ಪ್ರೇರಿತ ಸಂಘಟನೆಗಳ ಸ್ವರೂಪದ ಬಗ್ಗೆ ಹೇಳಿದ್ದೇನು ತಿಳಿಯಿರಿ.
11:57 AM (IST) Apr 24
ನಟಿ ಕಾಜೋಲ್, ಇತ್ತೀಚೆಗೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಎವರ್‌ಗ್ರೀನ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಈ ನಟಿ, ತಮ್ಮ ವೃತ್ತಿಜೀವನದುದ್ದಕ್ಕೂ ಒಂದು ಕಟ್ಟುನಿಟ್ಟಾದ ನಿಯಮವನ್ನು ಪಾಲಿಸಿಕೊಂಡು ಬಂದಿದ್ದರು. ಅದುವೇ ತೆರೆಯ ಮೇಲೆ 'ನೋ ಕಿಸ್ಸಿಂಗ್'. ಆದರೆ ಅದನ್ನೀಗ ಮುರಿದಿದ್ದಾರೆ.
11:30 AM (IST) Apr 24
10:30 AM (IST) Apr 24
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಅಮೆರಿಕದ ಕಾರ್ಲೈಲ್‌ನಲ್ಲಿರುವ ಯುಎಸ್ ಆರ್ಮಿ ವಾರ್ ಕಾಲೇಜಿನ ಇಂಟರ್‌ನ್ಯಾಷನಲ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಮಾಡಲಾಗಿದೆ. ಈ ಪ್ರತಿಷ್ಠಿತ ಗೌರವ ಪಡೆದ ಮೂರನೇ ಭಾರತೀಯ ಸೇನಾ ಮುಖ್ಯಸ್ಥ ಇವರು.
09:36 AM (IST) Apr 24
ಹುಟ್ಟಿದ ದಿನಾಂಕ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ನೀವು ಇತರರೊಂದಿಗೆ ಹೇಗೆ ಬೆರೆಯುತ್ತೀರಿ ಎಂಬುದನ್ನೂ ಹೇಳುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರುತ್ತಾರೆ. ಆ ದಿನಾಂಕಗಳು ಬಗ್ಗೆ ತಿಳಿಯೋಣ
09:10 AM (IST) Apr 24
08:18 AM (IST) Apr 24
07:35 AM (IST) Apr 24
07:28 AM (IST) Apr 24
ಹೋರ್ಮುಜ್ ಜಲಸಂಧಿಯಲ್ಲಿ ಭಾರತದತ್ತ ಸಾಗುತ್ತಿದ್ದ ನೌಕೆಯನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದು, ಈ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದು ಹೋರ್ಮುಜ್ ಮೇಲಿನ ತಮ್ಮ ಹಿಡಿತವನ್ನು ಸಾಬೀತುಪಡಿಸುವ ಇರಾನ್‌ನ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.