ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 8 ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 2400 ವಿಮಾನಗಳಲ್ಲಿ ತಾಂತ್ರಿಕ ದೋಷದ ಸಮಸ್ಯೆ ಉಂಟಾಗಿದೆ. ಈ ಪೈಕಿ 2025ರಲ್ಲೇ ಅತಿ ಕಡಿಮೆ ಘಟನೆ ವರದಿಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕಳೆದ ವಾರ ಸಚಿವಾಲಯ ಲೋಕಸಭೆಗೆ ಸಲ್ಲಿಸಿರುವ ಅಂಕಿಅಂಶಗಳ ಪ್ರಕಾರ, 2022ರಲ್ಲಿ ಅತ್ಯಧಿಕ 524 ಪ್ರಕರಣಗಳು ದಾಖಲಾಗಿದೆ. ಆ ಬಳಿಕ ನಿಧಾನಕ್ಕೆ ಕುಸಿತ ಕಂಡಿದೆ. 2025ರಲ್ಲಿ ಅತಿ ಕನಿಷ್ಠ ಪ್ರಕರಣಗಳು ವರದಿಯಾಗಿದ್ದು, ನವೆಂಬರ್ ತನಕದ ಅಂಕಿ ಅಂಶದಲ್ಲಿ 382 ಘಟನೆಗಳು ನಡೆದಿದೆ.

10:07 AM (IST) Dec 23
2025ರಲ್ಲಿ ಹಲವು ಸಿನಿಮಾಗಳು ಗಳಿಕೆಯಿಂದ ನಿರ್ಮಾಪಕರನ್ನು ಶ್ರೀಮಂತರನ್ನಾಗಿ ಮಾಡಿವೆ. ಅತಿ ಹೆಚ್ಚು ಲಾಭ ತಂದುಕೊಟ್ಟ 10 ಚಿತ್ರಗಳಲ್ಲಿ 'ಧುರಂಧರ್' ಎಲ್ಲೂ ಇಲ್ಲ. ಬಾಕ್ಸ್ ಆಫೀಸ್‌ನಲ್ಲಿ ಲಾಭದ ವಿಷಯದಲ್ಲಿ ನಿಜವಾದ ಧುರಂಧರ ಎನಿಸಿಕೊಂಡ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
09:49 AM (IST) Dec 23
World Highest Railway Station: ಸಮುದ್ರ ಮಟ್ಟದಿಂದ 5,068 ಮೀಟರ್ ಎತ್ತರದಲ್ಲಿದೆ. ಇಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರೈಲುಗಳಲ್ಲಿ ಪ್ರಯಾಣಿಕರಿಗೆ ಆಕ್ಸಿಜನ್ ಮಾಸ್ಕ್‌ಗಳನ್ನು ಒದಗಿಸಲಾಗುತ್ತದೆ. ಈ ನಿಲ್ದಾಣದ ವಿಶೇಷತೆಯ ಮಾಹಿತಿ ಇಲ್ಲಿದೆ.
09:35 AM (IST) Dec 23
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳನ್ನು ನಡೆಸಲು ಕೆಎಸ್‌ಸಿಎ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಹಿಂದಿನ ಕಾಲ್ತುಳಿತದ ಘಟನೆ ಹಾಗೂ ವಿರಾಟ್ ಕೊಹ್ಲಿ ಆಡುವ ಸಾಧ್ಯತೆಯಿಂದಾಗಿ, ಸುರಕ್ಷತಾ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ.