ಗೇಮಿಂಗ್ ಕ್ರಿಯೇಟರ್ ಫೆರಾರಿ ಕಾರು ಅಪಘಾತದಲ್ಲಿ ಸಾವು, ಮೊಬೈಲ್‌ನಲ್ಲಿ ಭೀಕರ ದೃಶ್ಯ ಸೆರೆ, ಖ್ಯಾತ ಕ್ರಿಯೇಟರ್ ಆಗಮನದ ನಿರೀಕ್ಷೆಯಲ್ಲಿ ಹಲವರು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ದುರಂತ ನಡೆದು ಹೋಗಿದೆ.
ಲಾಸ್ ಎಂಜಲ್ಸ್ (ಡಿ.23) ಖ್ಯಾತ ಗೇಮಿಂಗ್ ಕ್ರಿಯೆಟರ್ ಆಗಮನಕ್ಕೆ ಹಲವರು ಕಾದು ಕುಳಿತಿದ್ದರು. ಕ್ರಿಯೇಟರ್ ಫೆರಾರಿ ಕಾರಿನಲ್ಲಿ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆಸಕ್ತರು ರಸ್ತೆ ಬದಿಯಲ್ಲಿ ಮೊಬೈಲ್ ಫೋನ್ ಮೂಲಕ ಸ್ಮರಣೀಯ ಕ್ಷಣ ಸೆರೆ ಹಿಡಿಯಲು ನಿಂತಿದ್ದರು. ಆದರೆ ಸಂಭ್ರಮದ ಕ್ಷಣ ದುರಂತವಾಗಿ ಮಾರ್ಪಟ್ಟಿದೆ. ಗೇಮಿಂಗ್ ಕ್ರಿಯೇಟರ್ ತನ್ನ ಫೆರಾರಿ ಕಾರಿನ ಮೂಲಕ ಅತೀ ವೇಗದಲ್ಲಿ ಸಾಗಿದ್ದಾನೆ. ದುರಂತ ಅಂದರೆ ನಿಯಂತ್ರಣಕ್ಕೆ ಸಿಗದೆ ಘಾಟಿ ರಸ್ತೆಗೆ ನಿರ್ಮಿಸಿದ ತಡೆ ಗೋಡೆಗೆ ಡಿಕ್ಕಿ ಹೊಡೆದು ಕ್ರಿಯೇಟರ್ ಹಾಗೂ ಮತ್ತೊರ್ವ ಮೃತಪಟ್ಟ ಘಟನೆ ಲಾಸ್ ಎಂಜಲ್ಸ್‌ನಲ್ಲಿ ನಡೆದಿದೆ.
ಕಾಲ್ ಆಫ್ ಡ್ಯೂಟಿ ವಿಡಿಯೇ ಗೇಮ್ ಕ್ರಿಯೇಟರ್
ಕಾಲ್ ಆಫ್ ಡ್ಯೂಟಿ ಜನಪ್ರಿಯ ವಿಡಿಯೋ ಗೇಮ್ ಕೋ ಕ್ರಿಯೇಟರ್ ವಿನ್ಸ್ ಝಂಪೆಲ್ಲಾ ದುರಂತ ಅಂತ್ಯ ಕಂಡಿದ್ದಾರೆ. 55 ವರ್ಷದ ವಿನ್ಸ್ ಝೆಂಪಲ್ಲಾ ತನ್ನ ಕೆಂಪ ಬಣ್ಣದ ಫೆರಾರಿ ಕಾರಿನಲ್ಲಿ ಅತೀ ವೇಗದಲ್ಲಿ ಸಾಗಿದಾಗ ದುರಂತ ಸಂಭವಿಸಿದೆ. ಸುರಂಗ ಮಾರ್ಗ ಮೂಲಕ ಸಾಗಿ ಬಂದ ವಿನ್ಸ್ ಝೆಂಪಲ್ಲಾ ಅತೀ ವೇಗದಲ್ಲಿ ಸಾಗಿದ್ದಾರೆ. ಪರ್ವತಗಳ ನಡುವಿನ ಸುಂದರ ರಸ್ತೆಯಲ್ಲಿ ಝೆಂಪೆಲ್ಲಾ ಸ್ಟಂಟ್ ಅಥವಾ ಶೋ ಆಫ್ ಮಾಡಿದ್ರಾ ಅನ್ನೋ ಅನುಮಾನಗು ಕಾಡತೊಡಗಿದೆ. ಅತೀ ವೇಗದ ಚಾಲನೆಯೇ ದುರಂತಕ್ಕೆ ಕಾರಣವಾಗಿದೆ.
ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆ
ವಿನ್ಸ್ ಝೆಂಪೆಲ್ಲಾ ಅತೀ ವೇಗವಾಗಿ ಫೆರಾರಿ ಕಾರಿನಲ್ಲಿ ಸಾಗಿದ್ದಾರೆ. ಸುರಂಗ ಮಾರ್ಗದ ಹೊರಭಾಗ ರಸ್ತೆಯಲ್ಲಿ ನಿಂತಿದ್ದ ಜನ ವಿನ್ಸ್ ಝೆಂಪಲ್ಲಾ ಫೆರಾರಿ ಕಾರು ಹಾಗೂ ಆತನ ವಿಡಿಯೋ ಸೆರೆ ಹಿಡಿಯಲು ನಿಂತಿದ್ದಾರೆ. ಆದರೆ ಝೆಂಪಲ್ಲಾ ಅತೀ ವೇಗ ಕೆಲವೇ ಕ್ಷಣದಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಸುರಂಗ ಮಾರ್ಗದಿಂದ ಕೆಲ ದೂರದಲ್ಲಿ ಸಣ್ಣ ಎಡತಿರುವಿತ್ತು. ಆದರೆ ಅತೀ ವೇಗದ ಕಾರಣ ವಿನ್ಸ್ ಝೆಂಪಲ್ಲಾ ಕಾರು ನಿಯಂತ್ರಣಕ್ಕೆ ತೆಗೆದುಕೊಂಡು ಎಡಕ್ಕೆ ತಿರುಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಾರು ನೇರವಾಗಿ ತಡೆ ಗೋಡೆಗೆ ಡಿಕ್ಕಿಯಾಗಿದೆ. ಎಲ್ಲಾ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ.
ತಕ್ಷಣವೇ ನೆರವಿಗೆ ಧಾವಿಸಿದ ಜನ, ಅಪಘಾತ ಬೆನ್ನಲ್ಲೇ ಹೊತ್ತಿ ಉರಿದ ಕಾರು
ವಿನ್ಸ್ ಝೆಂಪಲ್ಲಾ ಫೆರಾರಿ ಕಾರು ಅಪಘಾತದ ತೀವ್ರತೆ ಪುಡಿ ಪುಡಿಯಾಗಿದೆ. ಇಷ್ಟೇ ಅಲ್ಲ ಕಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಮೊಬಲ್ ಮೂಲಕ ದೃಶ್ಯ ಸೆರೆ ಹಿಡಿಯಲು ನಿಂತಿದ್ದ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ವಿನ್ಸ್ ಝೆಂಪಲ್ಲಾ ಹಾಗೂ ಮತ್ತೊರ್ವನ ಕಾರಿನಿಂದ ಹೊರಗೆಳೆದಿದ್ದಾರೆ. ಆದರೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೇಮಿಂಗ್ ಕ್ಷೇತ್ರದಲ್ಲಿ ವಿನ್ಸ್ ಝೆಂಪಲ್ಲಾ ದೊಡ್ಡ ಹೆಸರು. 1990ರಲ್ಲಿ ಶೂಟರ್ ಗೇಮಿಂಗ್‌ನಲ್ಲಿ ಡಿಸೈನರ್ ಆಗಿ ವೃತ್ತಿ ಆರಂಭಿಸಿದ ವಿನ್ಸ್ ಝೆಂಪಲ್ಲಾ ಬಳಿಕ ಹಂತ ಹಂತವಾಗಿ ಗೇಮಿಂಗ್ ಕ್ಷೇತ್ರದಲ್ಲಿ ವಿನ್ಸ್ ಸಾಧನೆ ಮಾಡಿದ್ದರು. 2002ರಲ್ಲಿ ವಿನ್ಸ್ ಕಾಲ್ ಆಫ್ ಡ್ಯೂಟಿ ಗೇಮಿಂಗ್ ಲಾಂಚ್ ಮಾಡಿದ್ದರು. ಮಿಲಿಟರಿ ಶೂಟರ್ ಗೇಮಿಂಗ್ ಆರಂಭಿಸಿದ ಮೊದಲಿಗ ಅನ್ನೋ ಹೆಗ್ಗಳಿಕೆಗೆ ವಿನ್ಸ್ ಪಾತ್ರರಾಗಿದ್ದರು. ಮಾಸ್ ಕಾಂಬಾಟ್ ಗೇಮಿಂಗ್‌ನಲ್ಲಿ ವಿನ್ಸ್ ಕಳೆದ ಎರಡು ದಶಕದಲ್ಲಿ 100 ಮಿಲಿಯನ್ ಗೇಮರ್ ಗೇಮ್ ಗೆದ್ದುಕೊಂಡಿದ್ದಾರೆ.
ಗೇಮಿಂಗ್ ಆಫ್ ಆರ್ಟ್ಸ್ ವಿನ್ಸ್ ಝೆಂಪಲ್ಲಾ ನಿಧನ ಖಚಿತಪಡಿಸಿದೆ. ಗೇಮಿಂಗ್ ಸಮೂಹ ತೀವ್ರ ಸಂತಾಪ ಸೂಚಿಸಿದೆ. ಇಡೀ ಜಗತ್ತಿಗೆ ಗೇಮಿಂಗ್ ಮನರಂಜನೆ ನೀಡಿದ ವ್ಯಕ್ತಿ ದುರಂತ ಅಂತ್ಯ ಕಂಡಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ.


