Published : Apr 20, 2026, 06:59 AM ISTUpdated : Apr 20, 2026, 08:29 PM IST

India Latest News Live: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಾರಾಂಶ

ಪುಣೆ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್‌ ಕಚೇರಿಯಲ್ಲಿ ವರ್ಷಗಳಿಂದ ನಡೆದಿದ್ದ ಕಾರ್ಪೊರೆಟ್‌ ಜಿಹಾದ್‌ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಪುಣೆಯಲ್ಲಿರುವ ಇನ್ಫೋಸಿಸ್‌ನ ಕಚೇರಿಯಲ್ಲೂ ಇಂತಹ ಘಟನೆಗಳು ನಡೆದಿವೆ ಎಂಬ ಆರೋಪಗಳು ಮುನ್ನೆಲೆಗೆ ಬಂದಿವೆ. ಇಂತಹ ಆರೋಪವಿದ್ದ ಒಂದು ಪೋಸ್ಟ್‌ಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೀಶ್‌ ರಾಣೆ, ‘ಗುರುತಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಕೂಡಲೇ ಎಚ್ಚೆತ್ತ ಇನ್ಫೋಸಿಸ್‌, ‘ಯಾವುದೇ ರೀತಿಯ ಕಿರುಕುಳ, ತಾರತಮ್ಯದ ವಿರುದ್ಧ ನಮ್ಮ ಕಂಪನಿ ಶೂನ್ಯ ಸಹಿಷ್ಣುವಾಗಿದೆ. ಉದ್ಯೋಗಿಗಳಿಗೆ ಎಲ್ಲರನ್ನು ಒಳಗೊಂಡ, ಸುರಕ್ಷಿತ, ಸಕಾರಾತ್ಮಕ ಮತ್ತು ಗೌರವಯುತ ವಾತಾವರಣವನ್ನು ಖಚಿತಪಡಿಸಲು ಶ್ರಮಿಸುತ್ತದೆ’ ಎಂದು ಸ್ಪಷ್ಟನೆ ನೀಡಿದೆ.

08:29 PM (IST) Apr 20

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಆರೋಗ್ಯ ಸಮಸ್ಯೆಯೊಂದು ಕ್ರಿಕೆಟಿಗನ ಕಾಡುತ್ತಿದೆ.

Read Full Story

07:55 PM (IST) Apr 20

ಮೋದಿ ಭೇಟಿಯಿಂದ ಸ್ಟಾರ್​ ಆಗಿರೋ ಈ ಅಂಗಡಿಯವ ನಿಜಕ್ಕೂ ಯಾರು? ಪ್ರಧಾನಿ ಬಗ್ಗೆ ಯುವಕ ಹೇಳಿದ್ದೇನು

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಜಲ್ಮುರಿ ಅಂಗಡಿಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಅಲ್ಲಿನ ಯುವಕ ವಿಕ್ರಮ್ ಜೊತೆ ಮಾತನಾಡಿ, ಜಲ್ಮುರಿ ಸವಿದ ಈ ಘಟನೆಯು ಆ ಯುವಕನನ್ನು ರಾತ್ರೋರಾತ್ರಿ ಪ್ರಸಿದ್ಧನನ್ನಾಗಿಸಿದೆ.
Read Full Story

07:29 PM (IST) Apr 20

ಅಂದು ಹುಡುಗನ ಕಡೆಯವ್ರು ಮನೆಗೆ ಬಂದಿದ್ರು, ಪೊಲೀಸ್ರು ಸಮನ್ಸ್​ ತಂದ್ರು - ಮದುವೆ ಬಗ್ಗೆ ಕಂಗನಾ ಮಾತು

ಸಂಸದೆ ಕಂಗನಾ ರಣಾವತ್, ಚಿರಾಗ್ ಪಾಸ್ವಾನ್ ಜೊತೆಗಿನ ಮದುವೆ ಸುದ್ದಿಯನ್ನು ತಮಾಷೆಯಾಗಿ ತಳ್ಳಿಹಾಕಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಮದುವೆ ಬಗ್ಗೆ ಪ್ರಶ್ನಿಸಿದಾಗ ಮೌನವಹಿಸಿದ ಅವರು, ತನ್ನ ಮೇಲಿರುವ ಕೇಸುಗಳಿಂದ ಮದುವೆ ವಿಳಂಬವಾಗುತ್ತಿದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ.
Read Full Story

07:14 PM (IST) Apr 20

ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ

ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ, ಪ್ರಧಾನಿ ಮೋದಿ ಉದ್ಘಾಟನಾ ಸಮಾರಂಭ ಮುಂದೂಡಿಕೆ, ರಾಜಸ್ಥಾನದ ಅತೀ ದೊಡ್ಡ ರಿಫೈನರಿ ಘಟಕದಲ್ಲಿನ ಅಗ್ನಿ ಅವಘಡ ನಿಯಂತ್ರಣಕ್ಕೆ ತರಲು 20 ಅಗ್ನಿಶಾಮಕ ದಳ ಹರಹಾಸ ಪಟ್ಟಿದೆ.

 

Read Full Story

06:49 PM (IST) Apr 20

ದಳಪತಿ ವಿಜಯ್​- ಸಂಗೀತಾ ದಂಪತಿ ಡಿವೋರ್ಸ್​ ಕೇಸ್​ಗೆ ಭಾರಿ ಟ್ವಿಸ್ಟ್​ - ಇಂದು ನಡೆದದ್ದು ಏನು?

ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನ ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿದ್ದು,  ಇಬ್ಬರೂ ಹಾಜರಾಗಲು ಸೂಚಿಸಿದೆ.

Read Full Story

06:48 PM (IST) Apr 20

'ದೇವರು ನೋವನ್ನು ಶಾಂತಿಯಾಗಿಸಿದಾಗ ಆ ಹೊಳಪೇ ಬೇರೆ' - ರಾಯಲ್ ಲುಕ್‌ನಲ್ಲಿ ಮಿಂಚಿದ ಗಜ ನಟಿ ನವ್ಯಾ!

ದರ್ಶನ್ ಅಭಿನಯದ ಗಜ ಸಿನಿಮಾದ ನಟಿ ನವ್ಯಾ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್. ಅವರು ಹಂಚಿಕೊಳ್ಳುವ ಪೋಸ್ಟ್‌ಗಳು ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರ ಹೊಸ ಪೋಸ್ಟ್ ಒಂದು ವೈರಲ್ ಆಗಿದೆ.

Read Full Story

06:10 PM (IST) Apr 20

'ಯಾರು ಮಮ್ಮಾ? ನಾನು ನಿನ್ನ ಮಮ್ಮಾ ನಾ? ಏನ್ ಬೊಗಳ್ತಾ ಇದ್ದೀಯಾ ನೀನು?.. ಶೃತಿ ಹಾಸನ್ ಕೆಂಡಾಮಂಡಲ!

ಇದೀಗ ಬಹುಭಾಷಾ ನಟಿ, ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಅವರು ಸಾರ್ವಜನಿಕ ಸ್ಥಳದಲ್ಲಿ ಪಾಪರಾಜಿ ಒಬ್ಬನ ವಿರುದ್ಧ ಭಾರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Read Full Story

06:02 PM (IST) Apr 20

'ಜವಾನ್' ಡೈರೆಕ್ಟರ್ ಅಟ್ಲಿ ಮನೆಯಲ್ಲಿ ಸಂಭ್ರಮ - ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿ ಪ್ರಿಯಾ

'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ ಮತ್ತು ಅವರ ಪತ್ನಿ ಪ್ರಿಯಾ ಅಟ್ಲಿ ಸೋಮವಾರ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಈ ಖುಷಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

05:44 PM (IST) Apr 20

ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋಗಳ ಬೆಂಡೆತ್ತಿದ್ದ ಪೊಲೀಸರು

ಉತ್ತರ ಪ್ರದೇಶದ ಫತೇಪುರದಲ್ಲಿ ಶಾಲಾ ಬಾಲಕಿಯರಿಗೆ ಬೈಕ್‌ನಲ್ಲಿ ಬಂದು ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ 'ನಂತರದ' ಸ್ಥಿತಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Read Full Story

05:38 PM (IST) Apr 20

2011ರಲ್ಲಿ ಐಪಿಎಲ್ ತಂಡದ ಮಾಲೀಕರೇ ಬ್ಲಾಕ್ ಮ್ಯಾಜಿಕ್ ಮಾಡಿದ್ರು, ಅದು ಯಾರೆಂದು ಬಿಚ್ಚಿಡ್ತೇನೆ - ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ

ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮಾಟಮಂತ್ರ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ, 2011ರಲ್ಲಿ ತಂಡದ ಮಾಲೀಕರೊಬ್ಬರು ಇಂತಹ ಕೃತ್ಯ ಎಸಗಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Read Full Story

04:57 PM (IST) Apr 20

ಲವ್ ಸ್ಟೋರಿ ವೈರಲ್ ಆದ ಬೆನ್ನಲ್ಲೇ, ನಿಮ್ಗೆ 'ಅದು' ಬೇಕಂದ್ರೆ-'ಈ ನಾಲ್ಕನ್ನು ಮನೆಯಿಂದ ಹೊರಹಾಕಿ' ಎಂದ ಮಾಧವನ್!

ಇತ್ತೀಚೆಗಷ್ಟೇ ಬಿಡುಗಡೆಯಾದ 'ಧುರಂಧರ್: ದ ರಿವೆಂಜ್' ಸಿನಿಮಾದ ಭರ್ಜರಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಲ್ಲಿ ಐಬಿ ಡೈರೆಕ್ಟರ್ ಅಜಯ್ ಸಾನ್ಯಾಲ್ ಪಾತ್ರದಲ್ಲಿ ಮಾಧವನ್ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈಗ ಮ್ಯಾಡಿ ಸುದ್ದಿಯಲ್ಲಿರುವುದು ಸಿನಿಮಾದಿಂದ ಮಾತ್ರವಲ್ಲ, ಅವರು ಹಂಚಿಕೊಂಡಿರುವ ಒಂದು ಸಣ್ಣ ವಿಡಿಯೋದಿಂದ!

Read Full Story

04:55 PM (IST) Apr 20

ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು

ನಾರಾಯಣಪುರ ಕಾಡು ಪ್ರದೇಶದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು, ಹೈದರಾಬಾದ್ ಹುಬ್ಬಳ್ಳಿ ವಿಮಾನ ಆತಂಕ ಪರಿಸ್ಥಿತಿ ಬೆನ್ನಲ್ಲೇ ಇದೀಗ ಖಾಸಗಿ ವಿಮಾನ ಪತನಗೊಂಡ ಮಾಹಿತಿ ಲಭ್ಯವಾಗಿದೆ.

 

Read Full Story

04:52 PM (IST) Apr 20

Mr X - ಸೋಮವಾರದ ಟೆಸ್ಟ್‌ನಲ್ಲಿ ಮಂಜು ವಾರಿಯರ್ ಸಿನಿಮಾ ಪಾಸ್ ಆಯ್ತಾ? ಇಲ್ಲಿದೆ ಕಲೆಕ್ಷನ್ ರಿಪೋರ್ಟ್

ಸೂಪರ್‌ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಸಿನಿಮಾ ಏಪ್ರಿಲ್ 17ಕ್ಕೆ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ಕಲೆಕ್ಷನ್ ಮಾತ್ರ ನಿರೀಕ್ಷೆ ತಲುಪಿಲ್ಲ. ಸೋಮವಾರದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.

Read Full Story

04:41 PM (IST) Apr 20

ರಿಲೀಸ್‌ಗೂ ಮುನ್ನವೇ ರೆಕಾರ್ಡ್ - 160 ಕೋಟಿಗೆ ಸೇಲ್ ಆಯ್ತು ರಜನಿಕಾಂತ್ ಸಿನಿಮಾದ ಒಟಿಟಿ ರೈಟ್ಸ್

ರಜನಿಕಾಂತ್ ನಟನೆಯ 'ಜೈಲರ್ 2' ಸಿನಿಮಾದ ಒಟಿಟಿ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಅಮೆಜಾನ್ ಪ್ರೈಮ್ ವಿಡಿಯೋ ಈ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದು ತಮಿಳು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.

Read Full Story

04:38 PM (IST) Apr 20

ನವವಿವಾಹಿತೆಯ ಸೀರೆ ಎಳೆದ ಕಿರಾತಕರು - ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ

ನಾಸಿಕ್‌ನ ಟಿಸಿಎಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ. ಟೀಮ್ ಲೀಡರ್ ರಾಝಾ ಮೆನನ್ ಮತ್ತು ತರಬೇತುದಾರ ಶಾರುಖ್ ಖುರೇಷಿ ಅಸಭ್ಯವಾಗಿ ವರ್ತಿಸಿದ್ದು, ಸೀರೆ ಎಳೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

04:23 PM (IST) Apr 20

ಟೆಹರಾನ್ ಆಂತರಿಕ ಕೋಲಾಹಲ - ನಾಯಕರಿಲ್ಲದೆಯೂ ನಡೆದೀತೇ ಶಾಂತಿ ಒಪ್ಪಂದ?

ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅತ್ಯಂತ ನಿಬಿಡವಾದ, ತೈಲ ಸಾಗಾಣಿಕೆಗೆ ಅತಿ ಮುಖ್ಯ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಈಗ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು.

Read Full Story

04:19 PM (IST) Apr 20

ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ

ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ, ದೇವಸ್ಥಾನದಲ್ಲಿ ಹಾರ ಬದಲಿಸಿ ಮದುವೆಯಾಗಿದ್ದಾರೆ. ಈ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read Full Story

04:16 PM (IST) Apr 20

'ನಾನು ಸೆಕೆಂಡ್ ಮದರ್' ಎಂದ ರಶ್ಮಿಕಾ ಮಂದಣ್ಣ; ಅವರಿಬ್ಬರ ಲವ್‌-ಕೇರಿಂಗ್‌ ನೋಡಿ ಹಲವರು ಶಾಕ್!

ಸೌತ್ ಇಂಡಿಯನ್ ಸಿನಿಮಾಗಳು ಮಾತ್ರವಲ್ಲ, ಬಾಲಿವುಡ್ ಸಿನಿಮಾಗಳ ಮೂಲಕವೂ ಕೂಡ ಸ್ಟಾರ್ ನಟಿಯಾಗಿ ಮಿಂಚಿರುವ ರಶ್ಮಿಕಾ ಮಂದಣ್ಣ ಅವರು, ಇತ್ತೀಚೆಗಷ್ಟೇ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಸೆಕೆಂಡ್ ಮದರ್’ ಅಂದಿದ್ಯಾಕೆ ನೋಡಿ.. 

Read Full Story

04:12 PM (IST) Apr 20

ಏನಪ್ಪಾ ಶುಭ್‌ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?
Read Full Story

03:47 PM (IST) Apr 20

ನಾಳೆ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಬೆಂಕಿ ಅವಘಡ, 20 ಅಗ್ನಿಶಾಮಕ ವಾಹನ ದೌಡು

ನಾಳೆ ಮೋದಿ ಉದ್ಘಾಟಿಸಬೇಕಿದ್ದ ರಿಫೈನರಿಯಲ್ಲಿ ಬೆಂಕಿ ಅವಘಡ, 20 ಅಗ್ನಿಶಾಮಕ ವಾಹನ ದೌಡು, ಬರೋಬ್ಬರಿ 79 ಸಾವಿರ ಕೋಟಿ ರೂಪಾಯಿ ಹೂಡಿಕೆಯ ರಿಫೈನರಿ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Read Full Story

02:53 PM (IST) Apr 20

'ಎನಿಥಿಂಗ್ ಟೂ ಮಚ್ ಈಸ್ ಟೂ ಬ್ಯಾಡ್' ಎಂದ ಯಶ್; ಯಾರಿಗೆ & ಯಾಕೆ ಹೇಳಿದ್ದು ರಾಕಿಂಗ್ ಸ್ಟಾರ್?

ರಾಮಾಯಣ ಸಿನಿಮಾ ತೆರೆಗೆ ಬರಲು ಕಾಲಾವಕಾಶವಿದ್ದರೂ, ಅಮೆರಿಕದ ಸಿನಿಮಾಕಾನ್‌ನಲ್ಲಿ ನಡೆದ ಒಂದು ಖಾಸಗಿ ಪ್ರದರ್ಶನ ಈಗ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ವೇಳೆ ಮಾತನ್ನಾಡಿರೋ ಯಶ್, ರಾಮಾಯಣ ಸಿನಿಮಾ ಹಾಗೂ ತಮ್ಮ ರಾಮಾಯಣ ಪಾತ್ರದ ಬಗ್ಗೆ ಹೇಳಿದ್ದಾರೆ. ಅದೇನು ಅಂತ ಇಲ್ಲಿದೆ ನೋಡಿ..

Read Full Story

02:51 PM (IST) Apr 20

ನಂಗೆ ಅದೊಂದೇ ಟೆನ್ಷನ್ ಇತ್ತು..! ಪಂಜಾಬ್ ಎದುರು ಲಖನೌ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಹಳೆಯ ಕಮೆಂಟ್ ವೈರಲ್

ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ, ಈ ಹಿಂದೆ ತಾನು ಪಂಜಾಬ್ ತಂಡವನ್ನು ಸೇರಲು ಇಷ್ಟಪಡುವುದಿಲ್ಲ ಎಂದು ಲಖನೌ ನಾಯಕ ರಿಷಭ್ ಪಂತ್ ನೀಡಿದ್ದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

02:31 PM (IST) Apr 20

IAS, IPS ಅಧಿಕಾರಿಗಳೇ ಅಸೂಯೆಪಡುವಷ್ಟು ಸಂಬಳ ಪಡೆಯುವ ಟೀ ಶಾಪ್ ಉದ್ಯೋಗಿ; ಆ ಹೋಟೆಲ್ ಯಾವುದು?

ಒಂದು ಟೀ ಅಂಗಡಿಯಲ್ಲಿ ಕೆಲಸ ಮಾಡುವ ಉದ್ಯೋಗಿಗೆ ಸಾಮಾನ್ಯವಾಗಿ ಎಷ್ಟು ಸಂಬಳ ಇರಬಹುದು? 5,000 ಅಥವಾ 10,000 ರೂಪಾಯಿ. ಹೆಚ್ಚೆಂದರೆ 20,000. ಕೆಫೆಯ ಉದ್ಯೋಗಿಯೊಬ್ಬರು ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಆ ಹೋಟೆಲ್ ಯಾವುದು ಗೊತ್ತಾ?

Read Full Story

01:31 PM (IST) Apr 20

ಸಾಯುವವರೆಗೂ ಸಸ್ಪೆನ್ಸ್ ಕಾಪಾಡಿಕೊಂಡಿದ್ದ ಪ್ರೇಮಿ - ಶವದ ಮುಂದೆ ಹೊಡೆದಾಡಿಕೊಂಡ ಆತನ ಇಬ್ಬರು ಪ್ರೇಯಸಿಯರು

ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬ ಏಕಕಾಲಕ್ಕೆ ಇಬ್ಬರು ಮಹಿಳೆಯರೊಂದಿಗೆ ರಹಸ್ಯವಾಗಿ ಸಂಬಂಧ ಹೊಂದಿದ್ದ. ಆತನ ಸಾವಿನ ನಂತರ ಅಂತ್ಯಸಂಸ್ಕಾರದ ವೇಳೆ ಈ ಸತ್ಯ ಬಯಲಾಗಿದ್ದು, ಇಬ್ಬರು ಗೆಳತಿಯರು ಶವಪೆಟ್ಟಿಗೆಯ ಮುಂದೆ ಜಗಳವಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

01:05 PM (IST) Apr 20

ಅದು ಫುಡ್ ಪಾಯ್ಸನ್ ಅಲ್ಲ, ಹಾವು ಕಚ್ಚಿ ಸತ್ತಿರೋದು - ಪೊಲೀಸರ ವರದಿ ತಳ್ಳಿ ಹಾಕಿದ ವೈದ್ಯರು

 8 ವರ್ಷದ ಬಾಲಕನ ಸಾವಿಗೆ ವಿಷಕಾರಿ ಕಟ್ಟಾವು ಹಾವು ಕಡಿತವೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಫುಡ್ ಪಾಯ್ಸನಿಂಗ್ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ, ಮಕ್ಕಳ ಮಲಗುವ ಕೋಣೆಯಲ್ಲೇ ಹಾವು ಪತ್ತೆಯಾಗಿದೆ. ಮೃತ ಬಾಲಕನ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ.

Read Full Story

12:56 PM (IST) Apr 20

ಕೇವಲ ಒಂದು ಲಕ್ಷಯಿದ್ರೆ ಸಾಕು, ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಹಣ ಗಳಿಸಿ!

ಕಡಿಮೆ ಖರ್ಚಿನಲ್ಲಿ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕಾ? 1 ಲಕ್ಷ ರೂಪಾಯಿಗಿಂತ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಲಾಭದಾಯಕ ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಇಲ್ಲಿ ತಿಳಿಯೋಣ.

Read Full Story

12:54 PM (IST) Apr 20

'ಮಲಯಾಳಿ ಅಲ್ಲ' ಅಂದಿರಲಿಲ್ಲ; ಆದ್ರೆ, ಆವತ್ತು ಏನಾಯ್ತು? ಹಳೆಯ ಶಾಕಿಂಗ್ ಘಟನೆ ಹೇಳಿ ಅತ್ತುಬಿಟ್ಟ ಸಾಯಿ ಪಲ್ಲವಿ!

ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್‌ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ. ಅದೇನು ನೋಡಿ..

Read Full Story

12:43 PM (IST) Apr 20

ಕರ್ನಾಟಕದ ಹೊಸ ಮದ್ಯದ ನೀತಿ ಎಫೆಕ್ಟ್ - ಮದ್ಯದ ಕಂಪನಿಗಳ ಷೇರು ಮೌಲ್ಯ ಶೇ.3ರಷ್ಟು ಏರಿಕೆ; ಮೈಲ್ಡ್‌ ಬಿಯರ್‌ ಬೆಲೆ ಇಳಿಕೆ

ಕರ್ನಾಟಕ ಸರ್ಕಾರವು ಹಳೆಯ ಮದ್ಯ ತೆರಿಗೆ ನೀತಿಯನ್ನು ತಿದ್ದುಪಡಿ ಮಾಡಿ, 'ಆಲ್ಕೋಹಾಲ್-ಇನ್-ಬೆವರೇಜ್' (AIB) ಆಧಾರಿತ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಈ ಬದಲಾವಣೆಯಿಂದಾಗಿ ಯುನೈಟೆಡ್ ಬ್ರೂವರೀಸ್‌ನಂತಹ ಕಂಪನಿಗಳ ಷೇರುಗಳು ಏರಿಕೆ ಕಂಡಿದೆ.

Read Full Story

12:05 PM (IST) Apr 20

26 ವರ್ಷಗಳಿಂದ ತನ್ನ ಆರೈಕೆ ಮಾಡ್ತಿರುವ 43 ವರ್ಷದ ವ್ಯಕ್ತಿಯ ದತ್ತು ಪಡೆಯಲು ಹೈಕೋರ್ಟ್ ಮೊರೆ ಹೋದ ವೈದ್ಯ

ಮುಂಬೈನ 90 ವರ್ಷದ ನಿವೃತ್ತ ವೈದ್ಯರೊಬ್ಬರು, ತಮ್ಮನ್ನು ದೀರ್ಘಕಾಲದಿಂದ ಪಾಲನೆ ಮಾಡುತ್ತಿದ್ದ 43 ವರ್ಷದ ವ್ಯಕ್ತಿಯನ್ನು ದತ್ತು ಪಡೆಯಲು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ವಯಸ್ಕರ ದತ್ತು ಸ್ವೀಕಾರಕ್ಕೆ ಸ್ಪಷ್ಟ ಕಾನೂನು ಇಲ್ಲದಿರುವುದರಿಂದ, ಈ ಪ್ರಕರಣವು ಹೊಸ ಕಾನೂನು ಚರ್ಚೆಗೆ ಕಾರಣವಾಗಿದೆ.

Read Full Story

12:03 PM (IST) Apr 20

ರಾಮಾಯಣ ಚಿತ್ರದ ಆ '20 ನಿಮಿಷ'ದ ದೃಶ್ಯ ಕಂಡು ಹೌಹಾರಿದ ಹಾಲಿವುಡ್ ಮಂದಿ; ಅದ್ರಲ್ಲಿ ಏನಿದೆ ಗೊತ್ತಾ?

ನಿತೇಶ್ ತಿವಾರಿ ಅವರ ಈ 'ರಾಮಾಯಣ' ಕೇವಲ ಸಿನಿಮಾ ಆಗಿ ಉಳಿಯದೆ, ಭಾರತೀಯ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ತೋರಿಸುವ ಒಂದು ಭವ್ಯ ಕಿಟಕಿ ಆಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ಆ 20 ನಿಮಿಷಗಳ ಝಲಕ್ ನೋಡಿದವರು ಕೊಟ್ಟಿರುವ ಪಾಸಿಟಿವ್ ರಿಯಾಕ್ಷನ್ ಈಗ ಹೊಸ ಟಾಕ್ ಸೃಷ್ಟಿಸಿದೆ.

Read Full Story

11:47 AM (IST) Apr 20

ಮೋದಿ ಸವಿದ ಜಲ್ಮುರಿಗೆ ಈಗ ಸಿಕ್ಕಾಪಟ್ಟೆ ಡಿಮಾಂಡ್​ - ಮನೆಯಲ್ಲೇ ತಯಾರಿಸೋದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ 10 ರೂಪಾಯಿಯ ಜಲ್ಮುರಿ ಸವಿದಿದ್ದು, ಈ ತಿನಿಸು ಭಾರೀ ಜನಪ್ರಿಯವಾಗಿದೆ. ಸಾಮಾನ್ಯ ಮಂಡಕ್ಕಿಗಿಂತ ಭಿನ್ನವಾದ, ಸಾಸಿವೆ ಎಣ್ಣೆಯ ವಿಶೇಷ ಸ್ಪರ್ಶವಿರುವ ಈ ಜಲ್ಮುರಿಯನ್ನು ತಯಾರಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Read Full Story

11:40 AM (IST) Apr 20

ಸಿಎಂ ಹೆಸರಿನ ₹40,000 ಬೆಲೆಯ ಐಪಿಎಲ್ ಟಿಕೆಟ್ ನಟಿ ಕೈಯಲ್ಲಿ! ರೇವಂತ್ ರೆಡ್ಡಿಗೆ ಸಂಕಷ್ಟ ತಂದ ನಟಿ ಕುಶಿತಾ ಕಲ್ಲಪು

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ಐಪಿಎಲ್ ವಿಐಪಿ ಟಿಕೆಟ್‌ಗಳು ನಟಿ ಕುಶಿತಾ ಕಲ್ಲಪು ಅವರ ಕೈಸೇರಿವೆ. ನಟಿಯೇ ಈ ಟಿಕೆಟ್‌ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

Read Full Story

11:21 AM (IST) Apr 20

ಆರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!

ಸತತ ಸೋಲುಗಳ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಗೆಲುವಿನ ಬಗ್ಗೆ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಶ್ಲಾಘಿಸಿದರು. ಅಲ್ಲದೆ, ಇಂತಹ ಪಿಚ್‌ಗಳಲ್ಲಿ ಸ್ಟ್ರೈಕ್ ರೇಟ್‌ಗಿಂತ ವಿಕೆಟ್‌ಗಳ ನಡುವಿನ ಓಟಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
Read Full Story

10:12 AM (IST) Apr 20

ಆಡುಗಳ ಸಾಯಿಸಿದ ನಾಯಿ, ನಾಯಿಗೆ ವಿಷವಿಟ್ಟ ಮನುಷ್ಯ - ವಿಷಪೂರಿತ ನಾಯಿಗಳ ತಿಂದು 25ಕ್ಕೂ ಹೆಚ್ಚು ಅತೀ ಅಪರೂಪದ ರಣಹದ್ದುಗಳು ಸಾವು

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ, ಮೇಕೆಗಳನ್ನು ಕೊಂದ ಸೇಡಿಗಾಗಿ ಗ್ರಾಮಸ್ಥರು ಬೀದಿ ನಾಯಿಗಳಿಗೆ ವಿಷವಿಟ್ಟಿದ್ದಾರೆ. ಈ ವಿಷಾಹಾರ ಸೇವಿಸಿ ಸತ್ತ ನಾಯಿಗಳ ಶವವನ್ನು ತಿಂದ 25ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ ಹಿಮಾಲಯನ್ ಗ್ರೀಫನ್ ರಣಹದ್ದುಗಳು ಸಾವನ್ನಪ್ಪಿವೆ.

Read Full Story

09:55 AM (IST) Apr 20

IPL 2026 - ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲಿಸಿ ಅಪರೂಪದ ದಾಖಲೆ ಬರೆದ ವರುಣ್ ಚಕ್ರವರ್ತಿ!

ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ರಿಂಕು ಸಿಂಗ್ ಅವರ ಅಜೇಯ ಅರ್ಧಶತಕ ತಂಡವನ್ನು ಗೆಲುವಿನ ದಡ ಸೇರಿಸಿದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದು T20 ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ಸ್ಪಿನ್ನರ್ ಎಂಬ ಹೊಸ ದಾಖಲೆ ಬರೆದರು.
Read Full Story

08:52 AM (IST) Apr 20

IPL 2026 - ನಿನ್ನೆ ನಡೆದ ಕೋಲ್ಕತಾ ನೈಟ್ ರೈಡರ್ಸ್-ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ ಮತ್ತು ಸುನಿಲ್‌ ನರೇನ್‌ ದಾಳಿಗೆ ನಲುಗಿದ ರಾಜಸ್ಥಾನ ರಾಯಲ್ಸ್‌ 155 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಕೆಕೆಆರ್‌, ರಿಂಕು ಸಿಂಗ್‌ರ ಅಜೇಯ ಅರ್ಧಶತಕ ಹಾಗೂ ಅನುಕೂಲ್‌ ರಾಯ್‌ ಜೊತೆಗಿನ ಜೊತೆಯಾಟದ ಬಲದಿಂದ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.
Read Full Story

08:48 AM (IST) Apr 20

ಪಾಕ್‌ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ನಂಬಲೇಬೇಡಿ - ಟ್ರಂಪ್‌ಗೆ ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮುಂದಾಗಿದ್ದಾರೆ. ಆದರೆ, ಮುನೀರ್‌ಗೆ ಇರಾನ್‌ನ ಅರೆಸೇನಾಪಡೆ ಐಆರ್‌ಜಿಸಿ ಜೊತೆ ನಂಟಿದ್ದು, ಆತ 'ರೆಡ್ ಫ್ಲ್ಯಾಗ್' ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. 

Read Full Story

08:27 AM (IST) Apr 20

ಮೋದಿ ಸೀತಾ ಮಾತೆಯ ಅಪಹರಿಸಲು ಪ್ರಯತ್ನಿಸಿದ ಮಾರೀಚನಂತೆ - ತೆಲಂಗಾಣ ಮುಖ್ಯಮಂತ್ರಿ ರೆಡ್ಡಿ ವಿವಾದಿತ ಹೇಳಿಕೆ

ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪ್ರಧಾನಿ ಮೋದಿಯವರು ಸಂವಿಧಾನವನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂದು ಮಾರೀಚನಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Read Full Story

More Trending News