LIVE NOW
Published : Jun 17, 2026, 07:10 AM ISTUpdated : Jun 17, 2026, 10:43 PM IST

India Latest News Live: ಭಾರತದ ಮೇಲೆ ದಾಳಿ ಮಾಡಿದ್ರೆ ನೆರವಿಗೆ ನಾವಿದ್ದೇವೆ, ಆದ್ರೆ ಮೋದಿ ನಾಯಕನಾಗಿದ್ರೆ ಮಾತ್ರ, ಟ್ರಂಪ್ ಗ್ಯಾರೆಂಟಿ

ಸಾರಾಂಶ

ಪುಣೆ: ‘ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅಂಡಮಾನ್‌ ಜೈಲಲ್ಲಿದ್ದಾಗ ಬ್ರಿಟಿಷ್ ಸರ್ಕಾರಕ್ಕೆ 10 ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ತಮ್ಮ ಶಿಕ್ಷೆ ಕಮ್ಮಿ ಮಾಡಲು ಕೋರಿದ್ದರು. ಆದರೆ ಅವರ ಸ್ವರವು ನಮ್ರತೆಯಿಂದ ಕೂಡಿರಲಿಲ್ಲ ಮತ್ತು ಆಗಿನ ಬ್ರಿಟಿಷರಿಗೆ ನಿಷ್ಠೆ ವ್ಯಕ್ತಪಡಿಸುವ ಪದಗಳನ್ನು ಅವು ಹೊಂದಿರಲಿಲ್ಲ’ ಎಂದು ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್‌ ಹೇಳಿದರು.

ಸಾವರ್ಕರ್‌ ಕುರಿತು ಕಾಂಗ್ರೆಸ್ಸಿಗ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆ ಪ್ರಶ್ನಿಸಿ ಅವರ ವಿರುದ್ಧ ಪುಣೆ ಸಂಸದ/ಶಾಸಕ ಕೋರ್ಟಲ್ಲಿ ನಡೆದಿರುವ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಸಾತ್ಯಕಿ ಈ ಹೇಳಿಕೆ ನೀಡಿದರು.

‘ಕ್ಷಮಾದಾನ ಅರ್ಜಿಯು ಕಾನೂನಾತ್ಮಕ ಕ್ರಮವಾಗಿತ್ತು. ಅದು ಅಪರಾಧವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

10:43 PM (IST) Jun 17

ಭಾರತದ ಮೇಲೆ ದಾಳಿ ಮಾಡಿದ್ರೆ ನೆರವಿಗೆ ನಾವಿದ್ದೇವೆ, ಆದ್ರೆ ಮೋದಿ ನಾಯಕನಾಗಿದ್ರೆ ಮಾತ್ರ, ಟ್ರಂಪ್ ಗ್ಯಾರೆಂಟಿ

ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ಸಹಾಯಕ್ಕೆ ಅಮೆರಿಕ ನಿಲ್ಲಲಿದೆ. ಆದರೆ ಅಲ್ಲಿ ಮೋದಿ ನಾಯಕನಾಗಿ ಇರಬೇಕು. ಬೇರೆ ನಾಯಕರಿದ್ದರೆ ನಾನು ಗ್ಯಾರೆಂಟಿ ಕೊಡಲಾರೆ ಎಂದು ಭೇಟಿ ವೇಳೆ ಟ್ರಂಪ್ ಹೇಳಿಕೆ ವೈರಲ್ ಆಗಿದೆ.

Read Full Story

09:51 PM (IST) Jun 17

403 ರನ್ ಬೃಹತ್ ಟಾರ್ಗೆಟ್ ಮುಂದೆ ಹೋರಾಟ ನೀಡಿ ಸೋತ ಆಫ್ಘಾನ್, ಭಾರತಕ್ಕೆ 170 ರನ್ ಭರ್ಜರಿ ಗೆಲುವು

ಭಾರತ ನೀಡಿದ 402 ರನ್ ಬೃಹತ್ ಟಾರ್ಗೆಟ್ ಮುಂದೆ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ರಹಮತ್ ಶಾ ಬ್ಯಾಟಿಂಗ್ ಆಫ್ಘಾನಿಸ್ತಾನ ತಂಡವನ್ನು ಹೀನಾಯ ಸೋಲಿನಿಂದ ತಪ್ಪಿಸಿತ್ತು. ಆದರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ಸರಣಿ ಗೆದ್ದುಕೊಂಡಿತು.

Read Full Story

08:58 PM (IST) Jun 17

Temple - ಮನುಷ್ಯನ ಚರ್ಮದಂತೆ ಮೃದುವಾದ 10 ಅಡಿ ವಿಗ್ರಹ, ರಾತ್ರಿ ಕೇಳಿಸುತ್ತೆ ಸಿಂಹ ಘರ್ಜನೆ - ಇಲ್ಲಿದೆ ನಿಗೂಢ ದೇಗುಲ!

Telanganaದಲ್ಲಿ ಅನೇಕ ಹಳೆಯ ದೇವಸ್ಥಾನಗಳಿವೆ. ಆದರೆ ಕೆಲವು ಕ್ಷೇತ್ರಗಳು ತಮ್ಮ ವಿಶೇಷತೆಗಳಿಂದಾಗಿ ಹೆಚ್ಚು ಪ್ರಸಿದ್ಧಿ ಪಡೆದಿವೆ. ಅಂತಹ ಅಪರೂಪದ ದೇವಾಲಯಗಳಲ್ಲಿ ಮುಲುಗು ಜಿಲ್ಲೆಯ ಮಲ್ಲೂರುನಲ್ಲಿರುವ ಹೇಮಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವೂ ಒಂದು.

Read Full Story

08:34 PM (IST) Jun 17

Kamalinee Mukherjee - ಅದು ಭಕ್ತಿ ಸಿನಿಮಾ, ಆದ್ರೂ ನಾಗ್ ನೋಡಿ ಕಂಟ್ರೋಲ್ ತಪ್ಪುತ್ತಿದ್ದೆ ಅನ್ನೋದಾ ಈ ನಟಿ!

Kamalinee Mukherjee, ನಟ ನಾಗಾರ್ಜುನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. 'ಶಿರಡಿ ಸಾಯಿ' ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನರನ್ನು ನೋಡುತ್ತಲೇ ಇರುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

Read Full Story

08:10 PM (IST) Jun 17

OG 2 ಬಗ್ಗೆ ಕೊನೆಗೂ ಬಂತು ದೊಡ್ಡ ಅಪ್‌ಡೇಟ್ - ಪವನ್ ಕಲ್ಯಾಣ್ ಫ್ಯಾನ್ಸ್ ಕಾಯುತ್ತಿದ್ದ ಸುದ್ದಿ ಇದೇ!

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್‌ಬಸ್ಟರ್ ‘They Call Him OG’ ಚಿತ್ರದ ಸೀಕ್ವೆಲ್ OG 2 ಬಗ್ಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ತಕ್ಷಣ ಶೂಟಿಂಗ್ ಆರಂಭವಾಗಲಿದೆ.

Read Full Story

06:44 PM (IST) Jun 17

Near Death Experience - ಸಾವಿನ ನಂತರ ಏನಾಗುತ್ತೆ? ಬದುಕುಳಿದವರು ಹೇಳಿದ್ರು ಬೆಚ್ಚಿಬೀಳಿಸೋ ಸತ್ಯಗಳು!

ಸಾವಿನ ಬಾಗಿಲು ತಟ್ಟಿ ಬಂದವರು ಹೇಳುವ ಅನುಭವಗಳು ನಿಗೂಢ ಮತ್ತು ಅಷ್ಟೇ ಆಶ್ಚರ್ಯಕರ. 'ಸಾವಿನಂಚಿನ ಅನುಭವ'ಗಳ (Near Death Experiences) ಬಗ್ಗೆ ಆಧುನಿಕ ವಿಜ್ಞಾನ ಈಗ ಹೊಸ ಬೆಳಕು ಚೆಲ್ಲುತ್ತಿದೆ.

Read Full Story

06:21 PM (IST) Jun 17

Preethi Raj Shetty - ಟಿವಿಕೆ ಸೇರಿದ ಕೂಡಲೇ ವಿಜಯ್‌ರ ಕಾನೂನು ಸಲಹೆಗಾರ್ತಿ ಆದ ವಕೀಲೆ.. ಯಾರಿವರು ಶೆಟ್ಟಿ?

Vijay ಮತ್ತು ಸಂಗೀತಾ ಅವರ ವಿಚ್ಛೇದನ ಪ್ರಕರಣ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ, ಟಿವಿಕೆ ಪಕ್ಷ ಸೇರಿದ ವಕೀಲೆ ಪ್ರೀತಿ ರಾಜ್ ಶೆಟ್ಟಿ, ವಿಜಯ್ ಅವರ ವೈಯಕ್ತಿಕ ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ.

Read Full Story

06:06 PM (IST) Jun 17

ರೈತರಿಗೆ ಗುಡ್ ನ್ಯೂಸ್ - ಈ ದಿನದಂದು ಬರಲಿದೆ PM Kisan ಯೋಜನೆಯ 2 ಸಾವಿರ ರೂಪಾಯಿ ಹಣ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣವು ಜೂನ್ 20, 2026 ರಂದು ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳದಿಂದ 9.44 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಿದ್ದಾರೆ.

Read Full Story

06:01 PM (IST) Jun 17

ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌ - ಮನೆಯಿಂದ್ಲೇ ಮಾಡೋದು ಹೇಗೆ- ಹಂತ ಹಂತದ ಮಾಹಿತಿ

ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಬಳಕೆದಾರರು ಗ್ಯಾಸ್ ಸಬ್ಸಿಡಿ ಪಡೆಯುವುದನ್ನು ಮುಂದುವರಿಸಲು ಜೂನ್ 30ರೊಳಗೆ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಸ್ಥಗಿತಗೊಳ್ಳಲಿದ್ದು, ಆಯಾ ಗ್ಯಾಸ್ ಕಂಪನಿಯ ಮೊಬೈಲ್ ಆ್ಯಪ್ ಮೂಲಕ ಇದನ್ನು ಪೂರ್ಣಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Read Full Story

05:57 PM (IST) Jun 17

Sanchita Ugale - 'ನನ್ನ ಮಗಳಿಗೆ ಕಿರುಕುಳ ಕೊಡ್ತಿದ್ರು' - ಮಗಳ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ತಂದೆ!

Sanchita Ugale ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗಳ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ತಂದೆ, ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು, ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

Read Full Story

05:42 PM (IST) Jun 17

Dipika Chikhlia - ರಾಮಾಯಣದ ಸೀತೆ ಮಾಡರ್ನ್ ಅವತಾರದಲ್ಲಿ - ದೀಪಿಕಾ ಫೋಟೋ ನೋಡಿ ಫ್ಯಾನ್ಸ್ ಫಿದಾ!

Ramayan Sita: ರಾಮಾಯಣ ಸೀರಿಯಲ್‌ನಲ್ಲಿ ಸೀತೆಯ ಪಾತ್ರದಿಂದ ಮನೆಮಾತಾದ ದೀಪಿಕಾ ಚಿಖ್ಲಿಯಾ ಇತ್ತೀಚೆಗೆ ಜೀನ್ಸ್ ಮತ್ತು ಬಿಳಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಮಾಡರ್ನ್ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

05:41 PM (IST) Jun 17

ಆಫ್ಘಾನ್ ಎದುರು ದೊಡ್ಡ ಶತಕ ಸಿಡಿಸಿ ಶಿಖರ್ ಧವನ್, ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್..!

ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ದೊಡ್ಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದರ ಜತೆಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.

 

Read Full Story

05:20 PM (IST) Jun 17

Alia Bhatt - ಆಲ್ಫಾ ಟ್ರೇಲರ್‌ನಲ್ಲಿವೆ 7 ಪವರ್‌ಫುಲ್ ಡೈಲಾಗ್‌ಗಳು, ಆಲಿಯಾ ಪಂಚ್‌ಗೆ ಫ್ಯಾನ್ಸ್ ಫಿದಾ!

Alpha Trailer: 'ಆಲ್ಫಾ' ಸಿನಿಮಾದ ಟ್ರೇಲರ್ ಯಾಕೆ ಇಷ್ಟೊಂದು ಚರ್ಚೆಯಲ್ಲಿದೆ? ಟ್ರೇಲರ್‌ನಲ್ಲಿರುವ ಯಾವ ಡೈಲಾಗ್‌ಗಳು ಸದ್ದು ಮಾಡುತ್ತಿವೆ ಮತ್ತು ಅತಿ ಹೆಚ್ಚು ಚರ್ಚೆಯಾಗುತ್ತಿರುವ ಡೈಲಾಗ್ ಯಾವುದು?

Read Full Story

05:02 PM (IST) Jun 17

Orry Income - ಅಬ್ಬಬ್ಬಾ! ಒಂದೇ ರೀಲ್ಸ್‌ಗೆ 76 ಲಕ್ಷ - ಮದುವೆ-ಪಾರ್ಟಿಗೆ ಓರಿ ಚಾರ್ಜ್ ಕೇಳಿದ್ರೆ ಶಾಕ್ ಆಗ್ತೀರಾ!

Orry Income: ಸೋಷಿಯಲ್ ಮೀಡಿಯಾ ಸ್ಟಾರ್ ಓರಿ ಒಂದೇ ರೀಲ್‌ನಿಂದ ₹76 ಲಕ್ಷ ಸಂಪಾದಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಮದುವೆ, ಬರ್ತ್‌ಡೇ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ₹15 ರಿಂದ ₹25 ಲಕ್ಷದವರೆಗೆ ಶುಲ್ಕ ಪಡೆಯುತ್ತಾರೆ.

Read Full Story

05:01 PM (IST) Jun 17

ಇನ್ನು ವಿಮಾನದಲ್ಲೇ ಓಡಾಡಿ, ಏರ್ ಇಂಡಿಯಾದಿಂದ ಅತೀ ಕಡಿಮೆ ಬೆಲೆಯ ಬೆಸಿಕ್ ಫೇರ್ ಪ್ರಯಾಣ ಜಾರಿ

ಇನ್ನು ಮುಂದೆ ವಿಮಾನ ಪ್ರಯಾಣ ದುಬಾರಿ ಅಲ್ಲ. ಅತೀ ಕಡಿಮೆ ಬೆಲೆಯಲ್ಲಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಭಾರತದ ಯಾವುದೇ ಮೂಲೆಗೆ ಕೈಗೆಟುಕುವ ಬೆಲೆಯಲ್ಲಿ ಟೆಕೆಟ್ ಲಭ್ಯ. ಏನಿದು ಬೇಸಿಕ್ ಫೇರ್ ?

Read Full Story

04:42 PM (IST) Jun 17

Cocktail 2 - ನಮ್ಮಿಬ್ಬರ ಮಧ್ಯೆ ಲೆಸ್ಬಿಯನ್ ಕಥೆ ಇಲ್ಲ, ಅದು ಎಮೋಷನಲ್ ತ್ರಿಕೋನ ಅಷ್ಟೇ - ಕೃತಿ, ರಶ್ಮಿಕಾ ಸ್ಪಷ್ಟನೆ

Cocktail 2 ಸಿನಿಮಾದಲ್ಲಿ ಕೃತಿ, ರಶ್ಮಿಕಾ ನಡುವೆ ಲೆಸ್ಬಿಯನ್ ಲವ್ ಸ್ಟೋರಿ ಇದೆ ಎಂಬ ವದಂತಿಗೆ ನಟಿಯರೇ ಸ್ಪಷ್ಟನೆ ನೀಡಿದ್ದಾರೆ. ಇದು ಫಿಸಿಕಲ್ ತ್ರೀಸಮ್ ಅಲ್ಲ, ಎಮೋಷನಲ್ ತ್ರೀಸಮ್ ಎಂದು ಕೃತಿ ಸನೋನ್ ಹೇಳಿದ್ದಾರೆ.

Read Full Story

04:09 PM (IST) Jun 17

Ind vs Afg - ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಮತ್ತೋರ್ವ ಸ್ಟಾರ್ ಕ್ರಿಕೆಟಿಗನಿಗೆ ಗಾಯ!

ಆಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದ್ದು, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಬಿದ್ದಿದ್ದಾರೆ. ಈ ಹಿನ್ನಡೆಯ ನಡುವೆಯೂ, ನಾಯಕ ಶುಭ್‌ಮನ್ ಗಿಲ್ ಮತ್ತು ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
Read Full Story

03:21 PM (IST) Jun 17

ಇಂಡಿ ಒಕ್ಕೂಟ ಪ್ರತಿ ಪಕ್ಷದಲ್ಲಿ ಬಿರುಗಾಳಿ, ಸಮಾಜವಾದಿ ಪಾರ್ಟಿ ಇಬ್ಬಾಗ ಸಾಧ್ಯತೆ; ಯುಪಿ ಸಚಿವನ ಸುಳಿವು

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಮಹಾರಾಷ್ಟ್ರದಲ್ಲಿ ಉದ್ದವ್ ಶಿವಸೇನಾದಲ್ಲಿ ಬಂಡಾಯದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಇಬ್ಬಾಗದ ಸುಳಿವು ಸಿಗುತ್ತಿದೆ. ಯುಪಿ ಸಚಿನ ಈ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ.

Read Full Story

03:07 PM (IST) Jun 17

ತಾಯಿ...ತಾಯಿಯೇ... ಭಾರತದ ಶೂಟರ್ ಜಸ್ಪಾಲ್ ರಾಣಾ ಸಾವಿನ ಸುದ್ದಿ SA ತಾಯಿಯೂ ನಿಧನ!

ಭಾರತದ ಶ್ರೇಷ್ಠ ಶೂಟರ್ ಜಸ್ಪಾಲ್ ರಾಣಾ ಅವರ ಅಕಾಲಿಕ ಮರಣದ ನಾಲ್ಕೇ ದಿನಗಳಲ್ಲಿ, ಅವರ ತಾಯಿ ಶ್ಯಾಮಾ ದೇವಿ ರಾಣಾ ಅವರು ಮಗನ ಅಗಲಿಕೆಯ ಆಘಾತವನ್ನು ತಾಳಲಾರದೆ ನಿಧನರಾಗಿದ್ದಾರೆ. ಈ ಸರಣಿ ದುರಂತವು ರಾಣಾ ಕುಟುಂಬವನ್ನು ಮತ್ತು ಇಡೀ ಕ್ರೀಡಾಲೋಕವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ.
Read Full Story

02:59 PM (IST) Jun 17

Telegram Ban - 'ಮುಂದಿನ ನಿಷೇಧ ಯಾರ ಮೇಲೆ? ವಾಟ್ಸಾಪ್ ಮೇಲಾ?' ಟೆಲಿಗ್ರಾಂ ಬ್ಯಾನ್ ಮಾಡಿದ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

NEET-UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಟೆಲಿಗ್ರಾಂ ಬ್ಯಾನ್(Telegram ban) ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಹುಲ್ ಗಾಂಧಿ(Rahul gandhi) ತೀವ್ರವಾಗಿ ಟೀಕಿಸಿದ್ದಾರೆ. 'ಪೇಪರ್ ಲೀಕ್ ಮಾಫಿಯಾ'ವನ್ನು ಹಿಡಿಯುವ ಬದಲು, ಆ್ಯಪ್ ಬಳಸುವ ವಿದ್ಯಾರ್ಥಿಗಳಿಗೆ ಇನ್ನಷ್ಟು ತೊಂದರೆ ಕೊಡ್ತಿದೆ ಎಂದು ಟೀಕೆ

Read Full Story

02:29 PM (IST) Jun 17

ಹೊಸ ಡ್ರೆಸ್ ನೋಡಲು ಬಾರೋ ಎಂದು ಕರೆದ ಪ್ರೇಯಸಿ - ಕರೆಗೆ ಓಗೊಟ್ಟು ಬಂದು ಹೆಣವಾದ ಪ್ರಿಯಕರ

ಬಿಹಾರದ ಜಮುಯಿಯಲ್ಲಿ, ಪ್ರೇಯಸಿ ಆರತಿ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರೇಮಿ ಸಣ್ಣಲಾಲ್‌ನನ್ನು, ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Read Full Story

02:15 PM (IST) Jun 17

ಮದ್ಯದ ಖಾಲಿ ಬಾಟಲ್‌ ವಾಪಾಸ್‌ ನೀಡಿದ್ರೆ, ಡೈರೆಕ್ಟ್‌ ಅಕೌಂಟ್‌ಗೆ ವಾಪಾಸ್‌ ಬರುತ್ತೆ 10 ರೂಪಾಯಿ!

ತಮಿಳುನಾಡು ಮಾರುಕಟ್ಟೆ ನಿಗಮವು (Tasmac) ಚೆನ್ನೈನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಖಾಲಿ ಬಾಟಲಿ ಸಂಗ್ರಹಣಾ ಯಂತ್ರವನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಯೋಜನೆಯಡಿ, ಗ್ರಾಹಕರು ಖಾಲಿ ಬಾಟಲಿಗಳನ್ನು ಮರಳಿಸಿ ಯುಪಿಐ ಮೂಲಕ ₹10 ಮರುಪಾವತಿ ಪಡೆಯಬಹುದು.

Read Full Story

02:12 PM (IST) Jun 17

Defence - ಭಾರತದ ರಕ್ಷಣಾ ವಲಯದಲ್ಲಿ ಹೊಸ ಕ್ರಾಂತಿ! 10 ವರ್ಷಗಳಲ್ಲಿ ಆಗಿದ್ದೇನು? ಮೋದಿ ಹೇಳಿದ್ದಿಷ್ಟು

ಕಳೆದ 10 ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮರ್ಥ್ಯ ಸಂಪೂರ್ಣ ಬದಲಾಗಿದೆ, ಇದಕ್ಕೆಲ್ಲಾ ಆತ್ಮನಿರ್ಭರತೆಯೇ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ,  ರಾಜನಾಥ್ ಸಿಂಗ್ ಅವರು, 2025-26ನೇ ಸಾಲಿನಲ್ಲಿ ದೇಶದ ರಕ್ಷಣಾ ಉತ್ಪಾದನೆ ಸಾರ್ವಕಾಲಿಕ ದಾಖಲೆಯ 1.78 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ.

Read Full Story

02:02 PM (IST) Jun 17

ಡಿವೋರ್ಸ್‌ ಬಳಿಕ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ; ಆದ್ರೆ, ಸಿನಿಮಾದಲ್ಲಿ ನಟಿಸ್ತಿಲ್ಲ!

ಅಲ್ಲು ಅರ್ಜುನ್ ಜೊತೆ ‘ದೇಶಮುದುರು’ ಮೂಲಕ ಕೆರಿಯರ್ ಆರಂಭಿಸಿ, ಪುನೀತ್ ರಾಜ್‌ಕುಮಾರ್ ಜೊತೆ ‘ಬಿಂದಾಸ್’ ಚಿತ್ರದಲ್ಲಿ ಮಿಂಚಿದ್ದ ಈ ನಟಿ, ಇಂದು ವೈಯಕ್ತಿಕ ಜೀವನದ ಸೋಲನ್ನು ಮೆಟ್ಟಿ ನಿಂತು ವೃತ್ತಿಜೀವನದಲ್ಲಿ ಗೆಲ್ಲಲು ಹೊರಟಿದ್ದಾರೆ.

Read Full Story

01:49 PM (IST) Jun 17

ಟೀ-ಬನ್​ ಬಿಟ್ಟಿ ತಿಂದು ಕುಡಿದು ಸೆಲ್ಯೂಟ್ ಹೊಡೆಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಈ 'ಐಪಿಎಸ್​ ಅಧಿಕಾರಿ'

ಉತ್ತರ ಪ್ರದೇಶದ ಲಖನೌದಲ್ಲಿ, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಉಚಿತವಾಗಿ ಟೀ ಕುಡಿದು, ನಂತರ ಅಲ್ಲಿದ್ದ ಪೇದೆಗೆ ಸೆಲ್ಯೂಟ್ ಮಾಡಲು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೇದೆಗಳು ಆತನನ್ನು ವಿಚಾರಿಸಿದಾಗ, ಆತ ನಕಲಿ ಅಧಿಕಾರಿ ಎಂದು ತಿಳಿದುಬಂದಿದ್ದು, ಬಂಧಿಸಲಾಗಿದೆ.
Read Full Story

01:35 PM (IST) Jun 17

ಭಾರತ ಎದುರು ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ! ಟೀಂ ಇಂಡಿಯಾದಲ್ಲಿ ಮೂರು ಮೇಜರ್ ಚೇಂಜ್

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ತಲಾ ಮೂರು ಬದಲಾವಣೆ ಮಾಡಿದ್ದು, ಭಾರತದ ಪರ ಪ್ರಿನ್ಸ್ ಯಾದವ್ ಹಾಗೂ ಆಫ್ಘಾನಿಸ್ತಾನ ಪರ ಡೌರಿಷ್ ರಸೋಲಿ ಪದಾರ್ಪಣೆ ಮಾಡಿದ್ದಾರೆ.
Read Full Story

01:03 PM (IST) Jun 17

FIFA World Cup 2026 ಲಿಂಕ್ಡ್‌ಇನ್‌ ಮೂಲಕ ಸಿಕ್ಕ ಆಟಗಾರ ಈಗ ಕೇಪ್‌ವರ್ಡೆ ಟೀಂನ ತಾರಾ ಡಿಫೆಂಡರ್‌!

ಸ್ಪೇನ್‌ ವಿರುದ್ಧದ ಪಂದ್ಯದ ಬಳಿಕ ಕೇಪ್ ವರ್ಡೆ ಆಟಗಾರರು ಸುದ್ದಿಯಲ್ಲಿದ್ದಾರೆ. ಲಿಂಕ್ಡ್ಇನ್‌ ಮೂಲಕ ತಂಡಕ್ಕೆ ಆಯ್ಕೆಯಾದ ಡಿಫೆಂಡರ್‌ ರೊಬೆರ್ಟೊ ಲೊಪೆಜ್‌ ಹಾಗೂ ಒಂದೇ ದಿನದಲ್ಲಿ 80 ಲಕ್ಷ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಪಡೆದ ಗೋಲ್‌ಕೀಪರ್ ವೊಜಿನ್ಹಾ ಅವರ ಕಥೆ ಇಲ್ಲಿದೆ.
Read Full Story

12:55 PM (IST) Jun 17

ನೂತನ ನೊಯ್ಡಾ ಏರ್‌ಪೋರ್ಟ್‌ನಿಂದ ಸೇವೆ ಆರಂಭಿಸಿದ ಆಕಾಶ ಏರ್, ಬೆಂಗಳೂರಿಗೆ ನೇರ ವಿಮಾನ ಸಂಪರ್ಕ!

ಕೈಗೆಟುಕುವ ದರದ ವಿಮಾನಯಾನ ಸಂಸ್ಥೆ 'ಆಕಾಶ ಏರ್', ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ಸೇವೆ ಆರಂಭಿಸಿದ ಮೊದಲ ಸಂಸ್ಥೆಯಾಗಿದೆ. ಈ ಹೊಸ ಸೇವೆಯ ಭಾಗವಾಗಿ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ ನೊಯ್ಡಾಗೆ ಪ್ರತಿದಿನ ತಡೆರಹಿತ ವಿಮಾನ ಸಂಚಾರವನ್ನು ಆರಂಭಿಸಿದೆ. ಇದರೊಂದಿಗೆ, ಸಂಸ್ಥೆಯು ನೊಯ್ಡಾದಲ್ಲಿ ಅತ್ಯಾಧುನಿಕ ವಿಮಾನ ನಿರ್ವಹಣೆ ಮತ್ತು ದುರಸ್ತಿ ಘಟಕವನ್ನು ಸ್ಥಾಪಿಸುತ್ತಿದೆ.
Read Full Story

12:51 PM (IST) Jun 17

"ಕಣ್‌ ಕಣ್ಣ ಸಲಿಗೆ' ನಟಿ ಸಪ್ತಪದಿ ತುಳಿಯಲು ಸಜ್ಜು? ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು ಗೊತ್ತಾ?

ನಟಿ ಶರ್ಮಿಳಾ ಮಾಂಡ್ರೆ ಫ್ಯಾನ್ಸ್‌ನಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಈ ಪ್ರಶ್ನೆಗೆ ಉತ್ತರ ಕೊಡಬೇಕಷ್ಟೇ!

Read Full Story

12:21 PM (IST) Jun 17

ವರ್ಷದಲ್ಲೇ ಕೋಟ್ಯಾಧಿಪತಿ ಮಾಡಿದ ₹4ರ ಷೇರು ! ₹1 ಲಕ್ಷ ಹೂಡಿದವರಿಗೆ ಹೊಡೀತು ಲಾಟರಿ

Multibagger Penny Stocks: ಷೇರು ಮಾರುಕಟ್ಟೆ ಅಂದ್ರೆ ರಿಸ್ಕ್ ಇದ್ದೇ ಇರುತ್ತೆ, ಆದ್ರೆ ನಿಮ್ಮ ಅದೃಷ್ಟ ಮತ್ತು ರಿಸರ್ಚ್ ಸರಿಯಾಗಿದ್ರೆ, ಮಾರುಕಟ್ಟೆ ನಿಮ್ಮನ್ನು ರಾತ್ರೋರಾತ್ರಿ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಮಾಡಬಲ್ಲದು. ಕೆಲವೊಮ್ಮೆ ಕೆಲವು ಷೇರುಗಳು ಇಡೀ ಆಟವನ್ನೇ ಬದಲಿಸಿಬಿಡುತ್ತವೆ. 

Read Full Story

12:10 PM (IST) Jun 17

ವೈಭವ್ ಸೂರ್ಯವಂಶಿ ಬೆನ್ನಿಗೆ ನಿಂತ ಬಿಸಿಸಿಐ; ಮೈದಾನದಲ್ಲಿ ಕಿರಿಕ್ ಮಾಡಿದ ಶ್ರೀಲಂಕಾ ಆಟಗಾರನಿಗೆ ಬಿತ್ತು ಭಾರೀ ದಂಡ!

ದಾಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಕ್ರಿಕೆಟ್ ಪಂದ್ಯದ ನಂತರ ಆಟಗಾರರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣದಲ್ಲಿ, ಬಿಸಿಸಿಐ ತನ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ. ಆದರೆ, ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರನ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.
Read Full Story

11:14 AM (IST) Jun 17

ಬೆಂಗಳೂರಿಗೆ ಬರೋ ರೈಲು ಪ್ರಯಾಣಿಕರ ಗಮನಕ್ಕೆ; ಮೆಜೆಸ್ಟಿಕ್‌ ಬರುತ್ತಿಲ್ಲ ನಿಮ್ಮ ಟ್ರೈನ್

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್)ರೈಲ್ವೆ ನಿಲ್ದಾಣದ ಯಾರ್ಡ್ ಕಾಮಕಾರಿ ಕೇರಳ ರೈಲುಗಳ ಮೇಲೆ ಪರಿಣಾಮ ಬೀರಿರುವುದರಿಂದ ಬೆಂಗಳೂರಿನಲ್ಲಿ ರೈಲು ಸಂಚಾರದಲ್ಲಿ ಅಡಚಣೆ ಮುಂದುವರೆದಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

11:10 AM (IST) Jun 17

ನಾಗಲೋಟಕ್ಕೆ ಬಿತ್ತು ಬ್ರೇಕ್; ಚಿನ್ನದ ಬೆಲೆಯಲ್ಲಿ ಎರಡನೇ ದಿನವೂ ಇಳಿಕೆ, ಇಂದೇ ಖರೀದಿಸಿ

ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳು ಕುಸಿದಿದ್ದು, ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಲಾಭದಾಯಕವಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
Read Full Story

10:34 AM (IST) Jun 17

ನೆಚ್ಚಿನ Pizza Hut 2.7 ಬಿಲಿಯನ್ ಡಾಲರ್‌ಗೆ ಮಾರಾಟ - ಖರೀದಿ ಮಾಡುತ್ತಿರೋರು ಯಾರು?

ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಮತ್ತು ಮಾರಾಟ ಕುಸಿತದಿಂದಾಗಿ, ಪಿಜ್ಜಾ ಹಟ್‌ನ ಮೂಲ ಕಂಪನಿ ಯಮ್ ಬ್ರ್ಯಾಂಡ್ಸ್ ಅದನ್ನು 2.7 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಮಾರಾಟವು ಎರಡು ಭಾಗಗಳಲ್ಲಿ ನಡೆಯಲಿದೆ.

Read Full Story

More Trending News