ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ತಂದೆ-ತಾಯಿ ಬಗ್ಗೆ ಕೀಳು ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ವಿರುದ್ಧ ದೂರು ದಾಖಲಾಗಿದೆ. ಪೂರ್ಣ ತನಿಖೆ ನಡೆಸಿ ನೈನಾರ್ ವಿರುದ್ಧ ಸೂಕ್ತ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ವ್ಯಕ್ತಿಯೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ. ವಿಜಯ್ ಪದೇ ಪದೇ ಅಸೆಂಬ್ಲಿಯಲ್ಲಿ ಉದಯನಿಧಿ ಸ್ಟಾಲಿನ್‌ಗೆ 'ನಿಮ್ಮ ತಂದೆ ಎಲ್ಲಿದ್ದಾರೆ?' ಎಂದು ಪ್ರಶ್ನಿಸಿದ್ದರು. ಇದಕ್ಕೆ ಆಕ್ಷೇಪಿಸುವ ವೇಳೆ ನಾಗೇಂ ದ್ರನ್, “ನಿಮ್ಮ ತಂದೆ ಮನೆಯಲ್ಲಿ ಇಲ್ಲ ಎಂದಾದರೆ, ಆತ ಎಲ್ಲಿರುತ್ತಾನೆ ಎಂದು ತಾಯಿಯನ್ನು ಕೇಳಿ' ಎಂದಿದ್ದರು.
11:36 PM (IST) Aug 17
ನಟ ನಾಗಾರ್ಜುನ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾನು ಭ್ರಷ್ಟನಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಮಸ್ಯೆ ಇಲ್ಲ, ಆದರೆ ಹೊರಗಿನ ಜಗತ್ತಿನಲ್ಲಿ ಇದು ಹೆಚ್ಚಾಗಿದೆ.
10:49 PM (IST) Aug 17
ಆನಂದ್ ಮಹೀಂದ್ರಾ ಶ್ಲಾಘಿಸಿದ 5 ವರ್ಷದ ಬಾಲಕನ ರಾಷ್ಟ್ರಗೀತೆ ಗಾಯನದಿಂದ ನಾಗಾಲ್ಯಾಂಡ್ ಪ್ರವಾಸೋದ್ಯಮವು ಗಮನ ಸೆಳೆದಿದೆ. ಈ ಲೇಖನವು ಹಾರ್ನ್‌ಬಿಲ್ ಹಬ್ಬ, ಜುಕೊ ಕಣಿವೆ, ಖೊನೊಮಾ ಹಸಿರು ಗ್ರಾಮ ಸೇರಿದಂತೆ ನಾಗಾಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣಗಳ ವಿವರ ಇಲ್ಲಿದೆ.
10:01 PM (IST) Aug 17
ನಟಿಯೊಂದಿಗೆ ಮಾತನಾಡುವ ವೇಳೆ ಮುಂಬೈನ ಪಾಪರಾಜಿಗಳು ಆಕೆಯ ‘ರಾಮಾಯಣ’ ಪಾತ್ರದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ರಕುಲ್ ಪ್ರೀತ್ ಸಿಂಗ್ ನಗುತ್ತಲೇ ಸರಿಯಾದ ಉಚ್ಚಾರಣೆಯನ್ನು ಹೇಳಿಕೊಟ್ಟಿದ್ದಾರೆ.
09:42 PM (IST) Aug 17
ಪ್ರಧಾನಿ ಮೋದಿ ಸರ್ಕಾರದ ವಿರುದ್ಧದ ಅಪಪ್ರಚಾರ ಎದುರಿಸಲು ಮತ್ತು 2029ರ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸಲು ಗುಜರಾತ್‌ನ ಕಾನ್‌ಸ್ಟೆಬಲ್ ರಾಮಗರ್ ಗೋಸಾಯಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ಅವರ ನಡೆ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
09:41 PM (IST) Aug 17
09:25 PM (IST) Aug 17
ಕರ್ನಾಟಕ, ಜಾರ್ಖಂಡ್, ಮತ್ತು ಮಹಾರಾಷ್ಟ್ರದಲ್ಲಿನ ಮಳೆ ಕೊರತೆಯಿಂದಾಗಿ, ದೇಶದಲ್ಲಿ ಖಾರಿಫ್ ಭತ್ತದ ಬಿತ್ತನೆ ವಿಸ್ತೀರ್ಣ ಶೇ. 3.65 ರಷ್ಟು ಕುಸಿದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕುಸಿತ ದಾಖಲಾಗಿದೆ.
08:50 PM (IST) Aug 17
ಕ್ರಿಕೆಟ್‌ನಲ್ಲಿ ಆಟಗಾರರ ಎತ್ತರವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವಿಶೇಷ ಲಾಭವನ್ನು ನೀಡುತ್ತದೆ. ಭಾರತದ ಅತ್ಯಂತ ಎತ್ತರದ ಆಟಗಾರರಾದ ಅಬೆ ಕುರುವಿಲ್ಲಾ (6.6) ರಿಂದ ಹಿಡಿದು ಇಶಾಂತ್ ಶರ್ಮಾ ಮತ್ತು ಶಿವಂ ದುಬೆವರೆಗಿನ ಟಾಪ್ 7 ಆಟಗಾರರ ಮಾಹಿತಿ ಇಲ್ಲಿದೆ.
08:14 PM (IST) Aug 17
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯೊಂದರಲ್ಲಿ ದೆವ್ವದ ವದಂತಿಯಿಂದಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯನ್ನು ತೊರೆದಿದ್ದಾರೆ. ರಾತ್ರಿ ವೇಳೆ ಗೆಜ್ಜೆ ಸದ್ದು, ಅಳು, ನಗುವಿನಂತಹ ವಿಚಿತ್ರ ಶಬ್ದಗಳು ಕೇಳಿಬಂದಿದೆ.
07:48 PM (IST) Aug 17
07:31 PM (IST) Aug 17
ನಟಿ ಶ್ರೀದೇವಿ ಅವರ ಜೀವನಚರಿತ್ರೆ 'ದಿ ಎಂಪ್ರೆಸ್'ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದು ಅಧ್ಯಾಯ ಬರೆದಿದ್ದಾರೆ. ಈ ವೇಳೆ, ದಂತಕಥೆಯಂತಿದ್ದ ನಟಿಯ ನಟನೆ, ಅದರಲ್ಲೂ 'ಮಿಸ್ಟರ್ ಇಂಡಿಯಾ' ಚಿತ್ರದ ಅಭಿನಯವನ್ನು ನೆನಪಿಸಿಕೊಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
07:00 PM (IST) Aug 17
06:49 PM (IST) Aug 17
ದೆಹಲಿಯಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಗೆ ಕರೆಂಟ್ ಶಾಕ್ ನೀಡಿ ಕ್ರೂರವಾಗಿ ಹತ್ಯೆ ಮಾಡಿ, ದರೋಡೆಯ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾಳೆ. ಕೊನೆಗೆ ಈಕೆ ಲಾಕ್ ಆಗಿದ್ದು ಹೇಗೆ ಗೊತ್ತಾ?
06:42 PM (IST) Aug 17
06:24 PM (IST) Aug 17
05:46 PM (IST) Aug 17
05:21 PM (IST) Aug 17
05:16 PM (IST) Aug 17
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದಲ್ಲಿ ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಬೆಂಬಲಿತ 'ಶಹಜಾದ್ ಭಟ್ಟಿ' ಭಯೋತ್ಪಾದಕ ಜಾಲವನ್ನು ಭಾರತೀಯ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ.
05:08 PM (IST) Aug 17
‘ಕೆಜಿಎಫ್’, ‘ಧುರಂಧರ್’ ಅಂತಹ ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಮತ್ತು ಸಾರಾ ಅರ್ಜುನ್ ಅವರ ಕರಿಯರ್ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ.
04:30 PM (IST) Aug 17
04:19 PM (IST) Aug 17
ಆಗ್ನೇಯ ಏಷ್ಯಾದಿಂದ ಅಡಿಕೆ ಆಮದು ಮಾಡಿಕೊಂಡು, 'ಸಾಫ್ಟಾ' ಒಪ್ಪಂದವನ್ನು ದುರ್ಬಳಕೆ ಮಾಡಿ ಭಾರತ ಸರ್ಕಾರಕ್ಕೆ ಸುಮಾರು 2,500 ಕೋಟಿ ರೂ. ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭೇದಿಸಿದೆ.
02:33 PM (IST) Aug 17
01:07 PM (IST) Aug 17
01:02 PM (IST) Aug 17
ಸಂಜೀವ್ ಗೋಯೆಂಕಾ ಮಾಲೀಕತ್ವದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವು ದಿ ಹಂಡ್ರೆಡ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಫೈನಲ್‌ನಲ್ಲಿ ಟ್ರೆಂಟ್ ರಾಕೆಟ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಜೋಸ್ ಬಟ್ಲರ್ ಪಡೆ, ಗೋಯೆಂಕಾ ಅವರ ಟ್ರೋಫಿ ಬರವನ್ನು ನೀಗಿಸಿದೆ. ಟಿಮ್ ಸೈಫರ್ಟ್ ಫೈನಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನ ರೂವಾರಿಯಾದರು.
12:25 PM (IST) Aug 17
ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 10 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದ ಬಗೆಗಿನ ಸ್ಪೆಷಲ್ ಮಾಹಿತಿ ಇಲ್ಲಿದೆ ನೋಡಿ..
12:10 PM (IST) Aug 17
ಪ್ರಧಾನಿ ನರೇಂದ್ರ ಮೋದಿಯವರ "ದಿಮಾಗಿ ನಕ್ಸಲ್" ಹೇಳಿಕೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ "ದಿಮಾಗಿ ನಕ್ಸಲ್ ಜನತಾ ಪಾರ್ಟಿ" ಎಂಬ ಖಾತೆಯೊಂದು ಸಂಚಲನ ಸೃಷ್ಟಿಸಿದೆ. ಇನ್‌ಸ್ಟಾಗ್ರಾಂನಿಂದ ಕಣ್ಮರೆಯಾದ ಈ ಖಾತೆಯು ಎಕ್ಸ್‌ನಲ್ಲಿ ಮತ್ತೆ ಹುಟ್ಟಿಕೊಂಡಿದೆ.
12:07 PM (IST) Aug 17
ಮಲಯಾಳಂ ನಟ ಮತ್ತು ರಾಜಕೀಯ ನಾಯಕ ದೇವನ್ ಅವರು ಕೇರಳ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಕಾರಣ ಮತ್ತು ಹಿರಿಯ ನಾಯಕರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಬೇಸರದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 2021ರಲ್ಲಿ ತಮ್ಮ ಕೇರಳ ಪೀಪಲ್ಸ್ ಪಾರ್ಟಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.
11:25 AM (IST) Aug 17
10:52 AM (IST) Aug 17
10:39 AM (IST) Aug 17
ಎಲ್ ನಿನೋ ಪ್ರಭಾವದಿಂದ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಪ್ರಮಾಣ ದಾಖಲಾಗಿದೆ. ಕರ್ನಾಟಕ ಮಾತ್ರವಲ್ಲದೇ, ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಪ್ರಯಾಣ ಕಡಿಮೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಟಿಟಿಡಿ ಪ್ರಮುಖ ನಿರ್ಣಯ ತೆಗೆದುಕೊಂಡಿದೆ.
09:50 AM (IST) Aug 17
07:47 AM (IST) Aug 17
07:14 AM (IST) Aug 17
ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ₹70,000 ಕೋಟಿ ವೆಚ್ಚದ ಪ್ರೊಜೆಕ್ಟ್ 75(1) ಸಬ್‌ಮರೀನ್ ಒಪ್ಪಂದಕ್ಕೆ ಶೀಘ್ರದಲ್ಲೇ ಚಾಲನೆ ಸಿಗುವ ನಿರೀಕ್ಷೆಯಿದೆ. ಈ ಯೋಜನೆಯಡಿ, ಜರ್ಮನಿಯ ಥಿಸೆನ್‌ಕ್ರುಪ್ ಮರೈನ್ ಸಿಸ್ಟಮ್ ಮತ್ತು ಭಾರತದ ಮಝಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಸಹಭಾಗಿತ್ವದಲ್ಲಿ ಭಾರತೀಯ ನೌಕಾಪಡೆಗೆ 6 ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ.
05:49 AM (IST) Aug 17
ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ. ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಈ ಕಲುಷಿತ ನೀರಿನ ಸೇವನೆಯು ಫುಡ್ ಪಾಯಿಸನಿಂಗ್, ಭೇದಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.