ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

By Web DeskFirst Published Jul 15, 2019, 4:32 PM IST
Highlights

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಫಲಿತಾಂಶ ಸೂಪರ್ ಓವರ್‌ನಲ್ಲಿ ನಿರ್ಧಾರವಾಯಿತು. ಈ ಸಂದರ್ಭದಲ್ಲಿ ಸೂಪರ್ ಓವರ್ ನಿಯಮಗಳ ಬಗ್ಗೆ ಸುವರ್ಣನ್ಯೂಸ್.ಕಾಂ ಬೆಳಕು ಚೆಲ್ಲುತ್ತಿದೆ.

ಬೆಂಗಳೂರು[ಜು.15]: ವಿಶ್ವಕಪ್ ಫೈನಲ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ರೋಚಕ ಪಂದ್ಯಕ್ಕೆ ಲಾರ್ಡ್ಸ್ ಮೈದಾನ ಸಾಕ್ಷಿಯಾಗಿದೆ. ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಇಯಾನ್ ಮಾರ್ಗನ್ ಪಡೆ ಸೂಪರ್ ಓವರ್‌ನಲ್ಲೀ ನಾಟಕೀಯ ಗೆಲುವು ದಾಖಲಿಸುವ ಮೂಲಕ ಚೊಚ್ಚಲ ವಿಶ್ವಕಪ್’ಗೆ ಮುತ್ತಿಕ್ಕಿದೆ.

ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಫಲಿತಾಂಶ ನಿರ್ಧರಿಸಲು ಅಂಪೈರ್’ಗಳು ಸೂಪರ್ ಓವರ್ ಮೊರೆ ಹೋದರು. ಸೂಪರ್ ಓವರ್’ನಲ್ಲೂ ಉಭಯ ತಂಡಗಳು 15 ರನ್ ಬಾರಿಸಿದವು. ನಿಯಮದಂತೆ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಯಿತು. 

ಸೂಪರ್ ಓವರ್ ನಿಯಮದಲ್ಲಿ ನ್ಯೂನ್ಯತೆಗಳಿವೆ. ಕೇವಲ ಬೌಂಡರಿ ಬಾರಿಸಿದ ಆಧಾರದಲ್ಲಿ ತಂಡದ ಫಲಿತಾಂಶ ನಿರ್ಧರಿಸುವುದು ಸರಿಯಲ್ಲ ಎಂದು ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
 
ಈ ಸಂದರ್ಭದಲ್ಲಿ ಸೂಪರ್ ಓವರ್ ನಿಯಮಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಸೂಪರ್ ಓವರ್ ಏನು, ಎತ್ತ.? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

* ಸೂಪರ್ ಓವರ್’ನಲ್ಲಿ 11 ಆಟಗಾರರು ಪಾಲ್ಗೊಳ್ಳುತ್ತಾದರೂ, ಒಂದು ತಂಡದ ಮೂವರು ಬ್ಯಾಟ್ಸ್’ಮನ್ ಗಳು ಹಾಗೂ ಒಬ್ಬ ಬೌಲರ್ ಪ್ರಮುಖ ಪಾತ್ರವಹಿಸುತ್ತಾರೆ.

* ಎರಡನೇ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್ ಮಾಡಿದ ತಂಡವೇ ಸೂಪರ್ ಓವರ್’ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕು.

* ಫೀಲ್ಡಿಂಗ್ ಮಾಡುವ ತಂಡವು ಯಾವ ಬದಿಯಿಂದ ಬೌಲ್ ಮಾಡಬೇಕು ಎನ್ನುವುದನ್ನು ಆಯ್ದುಕೊಳ್ಳಬಹುದು.

* ಸೂಪರ್ ಓವರ್’ನಲ್ಲಿ ಗರಿಷ್ಠ ರನ್ ಬಾರಿಸಿದ ತಂಡವನ್ನು ವಿಜಯಶಾಲಿ ಎಂದು ತೀರ್ಮಾನಿಸಲಾಗುತ್ತದೆ.

* ಸೂಪರ್ ಓವರ್’ನಲ್ಲಿ ಬ್ಯಾಟಿಂಗ್ ಮಾಡುವ ತಂಡ 2 ವಿಕೆಟ್ ಕಳೆದುಕೊಂಡರೆ, ಇನ್ನಿಂಗ್ಸ್ ಮುಕ್ತಾಯಗೊಳ್ಳಲಿದೆ.

* ಒಂದು ವೇಳೆ ಸೂಪರ್ ಓವರ್’ನಲ್ಲೂ ಟೈ ಆದರೆ, ಯಾವ ತಂಡ [ಮೊದಲ ಇನ್ನಿಂಗ್ಸ್ ಹಾಗೂ ಸೂಪರ್ ಓವರ್ ಸೇರಿ] ಗರಿಷ್ಠ ಬೌಂಡರಿ ಬಾರಿಸಿರುತ್ತದೆಯೋ ಆ ತಂಡವನ್ನು ಜಯಶಾಲಿ ಎಂದು ತೀರ್ಮಾನಿಸಲಾಗುತ್ತದೆ.
ಉದಾಹರಣೆಗೆ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಒಟ್ಟು 26 ಬೌಂಡರಿ ಬಾರಿಸಿತ್ತು, ನ್ಯೂಜಿಲೆಂಡ್ ಕೇವಲ 17 ಬೌಂಡರಿಗಳನ್ನಷ್ಟೇ ಬಾರಿಸಿತ್ತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಗೆಲುವು ನೀಡಲಾಯಿತು.     
 
 

click me!