ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

Published : Jul 18, 2019, 12:49 PM ISTUpdated : Jul 18, 2019, 12:59 PM IST
ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

ಸಾರಾಂಶ

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ವೇಳೆ ಮಾರ್ಟಿನ್ ಗಪ್ಟಿಲ್ ಎಸೆದ ಓವರ್ ಥ್ರೋ ಬೌಂಡರಿ ಗೆರೆ ದಾಟಿದ್ದರ ಬಗ್ಗೆ, ಬೆನ್ ಸ್ಟೋಕ್ಸ್ ಆ ನಾಲ್ಕು ರನ್‌ಗಳು ಬೇಡ ಎಂದು ಮಾಡಿದ್ದರು ಎಂದು ಜೇಮ್ಸ್ ಆ್ಯಂಡರ್‌ಸನ್ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  

ಲಂಡನ್‌(ಜು.18): ಏಕದಿನ ವಿಶ್ವಕಪ್‌ ಫೈನಲ್‌ ಹೀರೋ ಬೆನ್‌ ಸ್ಟೋಕ್ಸ್‌, ಓವರ್‌ ಥ್ರೋನಿಂದ ಸಿಕ್ಕ ಹೆಚ್ಚುವರಿ 4 ರನ್‌ಗಳನ್ನು ತಂಡದ ಮೊತ್ತದಿಂದ ತೆಗೆದುಹಾಕಿ, ನಮಗೆ ಆ ರನ್‌ಗಳ ಅವಶ್ಯಕತೆ ಇಲ್ಲ ಎಂದು ಅಂಪೈರ್‌ಗೆ ಕೂಡಲೇ ತಿಳಿಸಿದ್ದರು ಎಂದು ಇಂಗ್ಲೆಂಡ್‌ನ ಟೆಸ್ಟ್‌ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಹೇಳಿದ್ದಾರೆ. 

ಬೆನ್ ಸ್ಟೋಕ್ಸ್‌ಗೆ ಬ್ರಿಟನ್ ಸರ್ಕಾರದಿಂದ ‘ಸರ್‌’ ಗೌರವ?

‘ಸ್ಟೋಕ್ಸ್‌ ಅಂಪೈರ್‌ಗಳನ್ನು ನಾಲ್ಕು ರನ್‌ ಸೇರಿಸದಂತೆ ಕೇಳಿಕೊಂಡರು. ಆದರೆ ನಿಯಮದ ಪ್ರಕಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಂಪೈರ್‌ಗಳು ತಿಳಿಸಿದರು’ ಎಂದು ಆ್ಯಂಡರ್‌ಸನ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಸ್ಟೋಕ್ಸ್‌, ತಮ್ಮ ಬ್ಯಾಟ್‌ಗೆ ಚೆಂಡು ಬಡಿದು 4 ಹೆಚ್ಚುವರಿ ರನ್‌ ಸಿಕ್ಕಿದ್ದಕ್ಕೆ ನ್ಯೂಜಿಲೆಂಡ್‌ ಆಟಗಾರರ ಬಳಿ ಜೀವನಪೂರ್ತಿ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಇಲ್ಲಿದೆ ನೋಡಿ ಆ ಕ್ಷಣ: 

ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಟೈ ಮಾಡಿಕೊಂಡಿತ್ತು. ಗುರಿ ಬೆನ್ನತ್ತುವ ಮಾರ್ಟಿನ್ ಗಪ್ಟಿಲ್ ಎಸೆದ ಥ್ರೋ ಬೆನ್ ಸ್ಟೋಕ್ಸ್ ಬ್ಯಾಟ್ ಗೆ ತಾಗಿ ಚಂಡು ಬೌಂಡರಿ ಸೇರಿತ್ತು. ಆಗ ಅಂಪೈರ್ ಓವರ್ ಥ್ರೋ ರೂಪದಲ್ಲಿ  ರನ್ ನೀಡಿದ್ದರು. ಆ ಇತರೆ 4 ರನ್ ನೀಡದಿದ್ದರೆ, ನ್ಯೂಜಿಲೆಂಡ್ ಜಯಿಸುವ ಸಾಧ್ಯತೆಯಿತ್ತು.  

ವಿಶ್ವಕಪ್ 2019: ಅಪರೂಪದ ವಿಶ್ವದಾಖಲೆ ಬರೆದ ಸಾಧಕರಿವರು..!
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!