Jan 12, 2025, 2:49 PM IST
ಈ ಬಾರಿಯ ಬಿಗ್ ಬಾಸ್ ಕೊನೆ ಹಂತಕ್ಕೆ ಬಂದಿದೆ. ಫಿನಾಲೆಗೆ ಇನ್ನೆರಡೇ ವಾರ ಬಾಕಿ. ಫಿನಾಲೆಗೆ ಒಬ್ಬ ಸ್ಪರ್ಧಿ ಟಿಕೆಟ್ ಕೂಡ ಪಡೆದುಕೊಂಡಿದ್ದಾರೆ. ಆ ಸ್ಪರ್ಧಿ ಬೇರ್ಯಾರು ಅಲ್ಲ ಕುರಿಗಾಹಿ ಕಂ ಸಿಂಗರ್ ಹನುಮಂತ. ಈತ ಬರೀ ಫಿನಾಲೆ ಟಿಕೆಟ್ ಪಡೆಯೋದಷ್ಟೇ ಕಪ್ ಕೂಡ ಗೆದ್ದೇ ಗೆಲ್ತಾನೆ ಅನ್ನೋದು ಫ್ಯಾನ್ಸ್ ನಂಬಿಕೆ. ಹನುಮಂತ ಈ ಸಾರಿ ಬಿಗ್ ಬಾಸ್ ವಿನ್ನರ್ ಆಗೋದು ಬಹುತೇಕ ಖಚಿತ ಯಾಕೆ ಅಂತೀರಾ? ಈ ಸ್ಟೋರಿ ನೋಡಿ.
ದೊಡ್ಮನೆಗೆ ಅತಿಥಿಯಾಗಿ ಬಂದಿದ್ದ ಶರಣ್ ಮತ್ತು ಅದಿತಿ ಪ್ರಭುದೇವ ಹನುಮಂತನಿಗೆ ಫಿನಾಲೆ ಟಿಕೆಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಖುದ್ದು ಶರಣ್ ಈ ಬಾರಿ ಗೆಲ್ಲೋದು ಹನುಮಂತನೇ ಅಂತ ಹೇಳಿ ಉಳಿದ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಅಸಲಿಗೆ ಈ ಸಾರಿಯ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ನಲ್ಲಿ ಹನುಮಂತ ಇರಲೇ ಇಲ್ಲ. ಮೊದಲೆರಡು ವಾರ ಹವಾ ಕ್ರಿಯೇಟ್ ಮಾಡಿದ್ದ ಲಾಯರ್ ಜಗದೀಶ್ ಕೆಟ್ಟ ಪದ ಬಳಿಸಿ ಬಿಗ್ ಬಾಸ್ ಮನೆಯಿಂದ ಎವಿಕ್ಟ್ ಆದ ಮೇಲೆ , ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವನೇ ಈ ಹನುಮಂತ.
ಅಸಲಿಗೆ ಹನುಮಂತ ಮನೆಗೆ ಎಂಟ್ರಿ ಕೊಟ್ಟಾಗ ಈ ಹಳ್ಳಿ ಹೈದ, ಮುಗ್ದ. ಬಿಗ್ ಬಾಸ್ನಲ್ಲಿರೋ ಕಿಲಾಡಿಗಳ ಮುಂದೆ ಬಾಳಿಕೆ ಬರ್ತಾನಾ ಅಂತ ಅನುಮಾನ ಪಟ್ಟವರೇ ಹೆಚ್ಚು. ಮನೆಮಂದಿಯಂತೂ ಇವನನ್ನ ಸ್ಟ್ರಾಂಗ್ ಸ್ಪರ್ಧಿ ಅಂತ ಕನ್ಸಿಡರ್ ಮಾಡೇ ಇರಲಿಲ್ಲ.
ಬಿಗ್ ಬಾಸ್ನ ಹುಲಿ ಕುರಿ ಆಟದಲ್ಲಿ ಈ ಕುರಿಗಾಹಿ ಸರ್ವೈವ್ ಆಗಲ್ಲ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಮುಂದೆ ಹನುಮಂತ ಆಡಿದ ಆಟದ ಎದುರು ಎಲ್ಲರೂ ಥಂಡಾ ಹೊಡೆದು ಹೋದ್ರು. ವೀಕ್ಷಕರಂತೂ ಹನುಮಂತನಿಗೆ ಫುಲ್ ಮಾರ್ಕ್ಸ್ ಕೊಟ್ರು.
ಒಂದು ಹಂತದಲ್ಲಿ ಹನುಮಂತ ಕೊಂಚ ಡಲ್ ಆಗಿದ್ದ. ಆದ್ರೆ ಮನೆಗೆ ಅಪ್ಪ ಅಮ್ಮ ಬಂದು ಹೋದ ಮೇಲೆ ಮತ್ತೆ ಹನುಮಂತ ಫಾರ್ಮ್ಗೆ ಬಂದಿದ್ದಾನೆ. ಟಾಸ್ಕ್ಗಳಲ್ಲಿ ನುಗ್ಗಿ ಆಟ ವಾಡ್ತಾ ಇದ್ದಾನೆ. ಘಟಾನುಘಟಿ ಸ್ಪರ್ಧಿಗಳನ್ನ ಮೀರಿಸಿ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾನೆ.
ದೊಡ್ಮನೆಯಲ್ಲಿ ಆಟ ಗೆಲ್ಲೋಕೆ ಮುಖವಾಡ ಹಾಕೋರೇ ಹೆಚ್ಚು. ಆದ್ರೆ ಹನುಮಂತ ಯಾವತ್ತೂ ಮುಖವಾಡ ಹಾಕಿಲ್ಲ. ಹೇಗಿದ್ದಾನೋ ಹಾಗೇ ಇದ್ದಾನೆ ಅನ್ನೋದು ವೀಕ್ಷರ ಅಭಿಮತ. ಅಂತೆಯೇ ಈ ಸಾರಿಯ ಬಿಗ್ ಬಾಸ್ ಟ್ರೋಫಿಯನ್ನ ಹನುಮಂತ ಗೆಲ್ಲೋದು ಬಹುತೇಕ ಫಿಕ್ಸ್ ಎನ್ನಲಾಗ್ತಾ ಇದೆ.
ಎಲ್ಲಕ್ಕಿಂತ ಹೆಚ್ಚಾಗಿ ಹನುಮಂತನಿಗೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಬರೀ ಬಿಗ್ ಬಾಸ್ ಮಾತ್ರ ಅಲ್ಲ ಬೇರೆ ಬೇರೆ ರಿಯಾಲಿಟಿ ಶೋಗಳಿಂದಲೂ ಇವನು ಸಖತ್ ಜನಪ್ರಿಯ. ಸೋ ಉಳಿದೆಲ್ಲಾ ಸ್ಪರ್ಧಿಗಳಿಗಿಂತ ಹನುಮಂತನಿಗೆ ಹೆಚ್ಚು ಹೆಚ್ಚು ವೋಟ್ ಬರೋದ್ರಲ್ಲಿ ಡೌಟೇ ಇಲ್ಲ. ಇದೆಲ್ಲವೂ ಸೇರಿದ್ರೆ ಹನುಮಂತ ಈ ಸಾರಿ ಬಿಗ್ ಬಾಸ್ ವಿನ್ನರ್ ಆಗೋದು ಖಚಿತ.