ಪಾಕಿಸ್ತಾನ ಆಯ್ಕೆ ಸಮಿತಿಗೆ ಇನ್ಜಮಾಮ್ ಗುಡ್ ಬೈ!

By Web Desk  |  First Published Jul 17, 2019, 5:40 PM IST

ಪಾಕಿಸ್ತಾನ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಮುಂದುವರಿಯಲು ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ನಿರಾಕರಿಸಿದ್ದಾರೆ. ಸುದ್ದಿಗೋಷ್ಠಿ ಕರೆದು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾರೆ.


ಇಸ್ಲಾಮಾಬಾದ್(ಜು.17): ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಲೀಗ್ ಹಂತದಿಂದ ಹೊರಬಿತ್ತು. ಲೀಗ್ ಟೂರ್ನಿಯ ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನ ರನ್ ರೇಟ್ ಕೊರತೆಯಿಂದ ಟೂರ್ನಿಯಿಂದ ಹೊರಬಿತ್ತು. ಬಳಿಕ ತಂಡದಲ್ಲಿ ಬದಲಾವಣೆ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಇನ್ಜಮಾಮ್ ಉಲ್ ಹಕ್ ಕೆಳಗಿಳಿದಿದ್ದಾರೆ.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!

Tap to resize

Latest Videos

undefined

2016ರಲ್ಲಿ ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಜವಾಬ್ದಾರಿ ವಹಿಸಿಕೊಂಡ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್, ಪಾಕ್ ತಂಡದಲ್ಲಿ ಹಲವು ಬದಲಾವಣೆ ಮಾಡಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಇನ್ಜಮಾಮ್ ಆಯ್ಕೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ವಿಶ್ವಕಪ್ ಟೂರ್ನಿಯ ಆಯ್ಕೆಯಿಂದ ಇನ್ಜಮಾಮ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥನ ಅವದಿ ವಿಸ್ತರಿಸಲು ಇನ್ಜಮಾಮ್ ಉಲ್ ಹಕ್ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸೆಮೀಸ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..?

ಸುದ್ದಿಗೋಷ್ಠಿ ನಡೆಸಿದ ಇನ್ಜಮಾಮ್ ಉಲ್ ಹಕ್, ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಮುಂದುವರಿಯಲು ಇಚ್ಚಿಸುವುದಿಲ್ಲ. ಜುಲೈ 30ಕ್ಕೆ ನನ್ನ ಅವದಿ ಮುಕ್ತಾಯಗೊಳ್ಳಲಿದೆ. ಅಲ್ಲೀವರೆಗೆ ಸೇವೆ ಸಲ್ಲಿಸುತ್ತೇನೆ ಎಂದು  ಇನ್ಜಮಾಮ್ ಹೇಳಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿನ  ಸೋಲು ನೋವು ತಂದಿದೆ. ಆರಂಭಿಕ ಪಂದ್ಯದಲ್ಲಿನ ಹೀನಾಯ ಸೋಲು ರನ್ ರೇಟ್ ಮೇಲೆ ಹೊಡೆತ ನೀಡಿತು. ಹೀಗಾಗಿ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

click me!