ಮೊದಲನೆಯದಾಗಿ, ಆಫೀಸ್ ಟೆನ್ಷನ್ (office tension) ಆಫೀಸಿನಲ್ಲೇ ಬಿಟ್ಟು ಬನ್ನಿ. ನೀವು ಹಾಸಿಗೆ ಮೇಲೆ ಮಲಗಿದ ಮೇಲೆ ಆಫೀಸ್ ಬಗ್ಗೆ ಮಾತನಾಡೋ ತಪ್ಪು ಮಾಡ್ಬೇಡಿ. ಇದು ನಿಮಗೆ ಸಣ್ಣ ವಿಷಯ ಅನಿಸಿದರೂ, ಅದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಆದುದರಿಂದ ಇಂದೇ ಆ ಅಭ್ಯಾಸ ಬಿಟ್ಟು ಬಿಡಿ.
ನಿಮ್ಮ ಸೆಲ್ ಫೋನ್ ದೂರವಿಡಿ. ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಮೊಬೈಲ್‌ಗೆ ಎಷ್ಟೊಂದು ಡಿಪೆಂಡ್ ಆಗಿದ್ದಾರೆ ಅಂದ್ರೆ, ಬೆಡ್ ಮೇಲೆ ಸಹ ಮೊಬೈಲ್ ಬೇಕೇ ಬೇಕು. ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟಿವ್ ಆಗೋ ಯೋಚನೆಯಲ್ಲಿ ಫ್ಯಾಮಿಲಿ ಬಗ್ಗೇನೆ ಮರೆತು ಬಿಡ್ತಾರೆ. ಈ ತಪ್ಪು ಮಾಡ್ಬೇಡಿ. ರಾತ್ರಿಯಲ್ಲಿ ಸೆಲ್ ಫೋನಿನಿಂದ ದೂರ ಇರಿ. ಸೋಶಿಯಲ್ ಮೀಡಿಯಾ ಬದಲು ಫ್ಯಾಮಿಲಿಗೆ ಟೈಮ್ ಕೊಡಿ. ನಿಮ್ಮ ಹೆಂಡ್ತಿ ಜೊತೆ ಮಾತನಾಡಿ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತೆ.
ಪ್ರತಿದಿನ ಒಂದೆ ರೀತಿಯ ದಿನಚರಿ ಪಾಲಿಸಿ. ಯಾವಾಗ ಏಳಬೇಕು, ಯಾವಾಗ ತಿನ್ನಬೇಕು, ಯಾವಾಗ ಊಟ ಮಾಡಬೇಕು, ಯಾವಾಗ ಸ್ನೇಹಿತರೊಂದಿಗೆ ಮಾತನಾಡಬೇಕು, ನಿಮ್ಮ ಹೆಂಡತಿಗೆ ಯಾವಾಗ ಸಮಯ ನೀಡಬೇಕು ಎಂಬುದನ್ನು ದಿನದ ಆರಂಭದಲ್ಲಿ ನಿರ್ಧರಿಸಿ. ದೈನಂದಿನ ದಿನಚರಿಯನ್ನು ಅನುಸರಿಸಿ. ಆಗ ಎಲ್ಲಾ ಕೆಲಸಗಳು ಸರಿಯಾಗಿ ಆಗುತ್ತೆ, ಫ್ಯಾಮಿಲಿ ಜೊತೆ ಸಮಯ ಕಳೆಯಲು ಸಹ ಸಾಧ್ಯವಾಗುತ್ತೆ.
ಪ್ರತಿದಿನವೂ ರಾತ್ರಿ ಮಲಗೋ ಮುನ್ನ ಪ್ರೀತಿಯಿಂದ ಮಾತನಾಡಿ. ರಾತ್ರಿ ಕಚೇರಿ ಅಥವ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಡಿ. ಇದು ಇಬ್ಬರ ನಡುವಿನ ಸಂಬಂಧದ (relationship) ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ನೀವು ಸಂಬಂಧವನ್ನು ಉತ್ತಮವಾಗಿಡಲು ಬಯಸಿದರೆ, ನಿಮಗಾಗಿ ಸಮಯ ನೀಡಿ. ಇಬ್ಬರು ಜೊತೆಯಾಗಿ ಕಳೆದ ಸುಂದರ ಸಮಯದ ಬಗ್ಗೆ ಮಾತನಾಡಿ.
ರಾತ್ರಿ ಮಲಗುವ ಮೊದಲು ಯಾವತ್ತೂ ಜಗಳ ಮಾಡ್ಬೇಡಿ. ಏನೇ ಜಗಳ ಕೋಪ ಇದ್ದರೂ ಅದನ್ನು ಬೆಡ್‌ಗೆ ತರಲೇ ಬೇಡಿ. ಇದನ್ನು ಯಾವಾಗಲೂ ನೆನಪಿಡಿ. ಮಲಗುವ ಮುನ್ನ ವಾದ ಮಾಡುವುದು ಸರಿಯಲ್ಲ. ಈ ಸಮಯದಲ್ಲಿ ರೋಮ್ಯಾಂಟಿಕ್ ವಿಷ್ಯಗಳನ್ನು ಚರ್ಚಿಸಿ. ಸಾಮಾನ್ಯವಾಗಿ ಎಲ್ಲರ ವೈವಾಹಿಕ ಜೀವನದಲ್ಲೂ (Married Life) ಸಮಸ್ಯೆ ಇರುತ್ತೆ, ಆದರೆ ಅದರ ಬಗ್ಗೆ ಚರ್ಚಿಸಲು ರಾತ್ರಿ ಸರಿಯಾದ ಸಮಯ ಅಲ್ಲ.
ಮಕ್ಕಳನ್ನು ಪ್ರತ್ಯೇಕ ಕೋಣೆಗಳಲ್ಲಿ ಮಲಗಲು ಬಿಡಿ. ನಿಮ್ಮಲ್ಲಿ ಕೆಲವರಿಗೆ ಇದು ಸರಿ ಅನ್ಸಲ್ಲ ಅಲ್ವಾ? ಆದ್ರೆ ಮಗು ಸ್ವಲ್ಪ ದೊಡ್ಡವರಾದಾಗ, ಅವರನ್ನು ಬೇರೆ ರೂಮ್ ಲ್ಲಿ ಖಂಡಿತಾ ಮಲಗಿಸಬಹುದು. ಯಾಕೆಂದ್ರೆ ಮದುವೆಯಾಗಿ ವರ್ಷಗಳ ನಂತರವೂ ಹ್ಯಾಪಿ ಜೀವನ (happy life) ನಿಮ್ಮದಾಗಲು ನಿಮ್ಮಿಬ್ಬರ ಖಾಸಗಿ ಸಮಯದಲ್ಲಿ ಮಗುವನ್ನು ಬರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮಗುವನ್ನು ಬೇರೆ ರೂಮ್ ಲ್ಲಿ ಮಲಗಿಸಬೇಕು. ಇದರಿಂದ ಸಂಬಂಧ ಸುಧಾರಿಸುತ್ತೆ.
ಮಲಗುವ ಮೊದಲು ಸ್ಮೋಕ್ (smoking) ಅಥವಾ ಡ್ರಿಂಕ್ಸ್ ಮಾಡ್ಬೇಡಿ. ಈ ಅಭ್ಯಾಸವು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಏಕೆಂದರೆ ಇದು ದೇಹಕ್ಕೆ ಹಾನಿಕಾರಕವಾಗಿದೆ. ನೀವು ವೈವಾಹಿಕ ಸಂಬಂಧವನ್ನು ಸಂತೋಷಗೊಳಿಸಲು ಬಯಸಿದರೆ ಸಾಧ್ಯವಾದಷ್ಟು ಬೇಗ ಈ ಎರಡು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಿ, ಇದ್ರಿಂದ ಲೈಫ್ ಆರಾಮವಾಗಿರುತ್ತೆ.
ಸಾಕು ಪ್ರಾಣಿಗಳನ್ನು (pet animals) ನಿಮ್ಮ ಕೋಣೆಯಲ್ಲಿ ಮಲಗಲು ಬಿಡಬೇಡಿ. ರಾತ್ರಿಯಲ್ಲಿ ಗಂಡ, ಹೆಂಡತಿಯ ನಡುವೆ ಪೆಟ್ ಅನಿಮಲ್ ಇದ್ರೆ ಇದ್ರಿಂದಾನೂ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಮನೆಯಲ್ಲಿ ಸಾಕುಪ್ರಾಣಿ ಇದ್ರೆ, ಗಂಡ, ಹೆಂಡ್ತಿ ಇಬ್ರೂ ಅದನ್ನೇ ಮುದ್ದು ಮಾಡುತ್ತಾ ಕಾಲ ಕಳೆಯುತ್ತಾರೆ. ಆದರೆ ನೀವು ನಿಮ್ಮ ಪೆಟ್ ನ್ನು ಎಷ್ಟೇ ಪ್ರೀತಿಸಿದರೂ, ರಾತ್ರಿಯಲ್ಲಿ ಅದನ್ನು ಬೆಡ್ ರೂಮಲ್ಲಿ ಇಡ್ಲೇಬೇಡಿ.
ವೈವಾಹಿಕ ಜೀವನ ಒಂದು ಪ್ರಮುಖ ಭಾಗ ಎಂದರೆ ಅದು ಸೆಕ್ಸ್. ಆದುದರಿಂದ ಲೈಂಗಿಕ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡಿ. ಈ ಅಗತ್ಯವನ್ನು ಯಾವತ್ತೂ ನಿರ್ಲಕ್ಷಿಸಬೇಡಿ. ಲೈಂಗಿಕ ಅಗತ್ಯಗಳನ್ನು ಪೂರೈಸದಿದ್ದರೆ, ಇದರಿಂದ ಸೆಕ್ಸ್ ಲೈಫ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಸೆಕ್ಸ್ ಲೈಫ್ (sex life) ಚೆನ್ನಾಗಿರುವಂತೆ ನೋಡಿಕೊಳ್ಳೋದು ಸಹ ಮುಖ್ಯ.
ಆಫೀಸ್ ಕೆಲಸ ಆಫೀಸ್ ನಲ್ಲೆ ಮಾಡಿ ಮುಗಿಸಿ ಬನ್ನಿ, ಒಂದು ವೇಳೆ ನೀವು ಆಫೀಸ್ ಕೆಲಸವನ್ನು ಮನೆಗೆ ತಂದು ರಾತ್ರಿ ಅದನ್ನೇ ಮಾಡಿದ್ರೆ ಪತಿ -ಪತ್ನಿ ಸಮಯ ಕಳೆಯಲು ಸಾಧ್ಯವಾಗೋದಿಲ್ಲ. ಹಾಗಾಗಿ ಆಫೀಸ್ ಕೆಲಸವನ್ನು ಮನೆಗೆ ತಂದು ಮಾಡೋದನ್ನು ಅವಾಯ್ಡ್ ಮಾಡ್ಲೇ ಬೇಕು. ಅವಾಗ ಮಾತ್ರ ಇಬ್ಬರು ಸಂತೋಷವಾಗಿರಲು ಸಾಧ್ಯ.