ಮೈಸೂರು ಮಹಾರಾಣಿ ಮಗುವಿನ ಜೊತೆ ಹೇಗಿರ್ತಾರೆ ನೋಡಿ! ತ್ರಿಶಿಕಾ ಸಿಂಪ್ಲಿಸಿಟಿಗೆ ನೆಟ್ಟಿಗರು ಫಿದಾ

By Bhavani Bhat  |  First Published Dec 14, 2024, 9:58 AM IST

ತ್ರಿಶಿಕಾ ಕುಮಾರಿ ಯದುವೀರ ಅವರ ಕೈ ಹಿಡಿದು ಮೈಸೂರಿಗೆ ಬಂದು ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಮುದ್ದಾದ ಮಗುವಿಗೆ ಜನ್ಮ ನೀಡಿರುವ ಅವರು ಮಗುವಿನ ಜೊತೆಗಿರೋ ರೀತಿ ನೋಡಿ ಎಲ್ಲರಿಗೂ ಖುಷಿ ಆಗಿದೆ.


ತ್ರಿಶಿಕಾ ಕುಮಾರಿ ಉತ್ತರದ ರಾಜಮನೆತನಕ್ಕೆ ಸೇರಿದವರು. ಲಂಡನ್‌ನಲ್ಲಿ ಓದಿದವರು. ತಾನಾಯ್ತು, ತನ್ನ ಕೆಲಸ ಆಯ್ತು ಅಂತಿರೋ ಈ ಹೆಣ್ಮಗಳು ತಾನು ಬಂದ ಪರಿಸರಕ್ಕೆ ಹೊಂದಿಕೊಂಡು ಇದೀಗ ಇಲ್ಲಿಯವರೇ ಆಗಿಬಿಟ್ಟಿದ್ದಾರೆ. ಮೈಸೂರು ಅರಮನೆಯಲ್ಲಿ ಎಲ್ಲದಕ್ಕೂ ಹೊಂದಿಕೊಂಡು ಇಲ್ಲಿಯ ಸಂಸ್ಕೃತಿ, ಭಾಷೆಯನ್ನು ಕಲಿತು ರೂಢಿಸಿಕೊಳ್ಳುತ್ತಿರುವ ಇವರ ಸಂಸ್ಕಾರಕ್ಕೆ ಎಲ್ಲರೂ ಶಹಭಾಸ್ ಅಂತಿದ್ದಾರೆ. ಹೇಳಿಕೇಳಿ ತ್ರಿಶಿಕಾ ಶ್ರೀಮಂತರ ಮನೆ ಹೆಣ್ಣುಮಗಳು. ವಿದೇಶದಲ್ಲಿ ಓದಿ ಬಂದವರು. ಇವರ ತಂದೆ ತಾಯಿಯೂ ರಾಜವಂಶಸ್ಥರೇ. ಇದೀಗ ಕೈ ಹಿಡಿದಿರುವ ಗಂಡ ಯದುವೀರ ಸಹ ಮೈಸೂರಿನ ಮಹಾರಾಜ ಎಂದು ಕರೆಸಿಕೊಂಡವರು. ಇದೀಗ ಸಂಸದರೂ ಆಗಿ ಮೈಸೂರಿನ ಜನರ ಮೆಚ್ಚುಗೆ ಪಡೆದಿದ್ದಾರೆ. ಇಷ್ಟೆಲ್ಲ ಆದರೂ ತ್ರಿಶಿಕಾಗೆ ಗತ್ತು, ದೌಲತ್ತು ಇರೋದು ಎಲ್ಲೂ ಕಾಣೋದಿಲ್ಲ. ಇವರಿಗೆ ಸಾಮಾನ್ಯರಂತೆ ಬದುಕೋದು ಇಷ್ಟ ಅನ್ನೋದು ಇವರು ಸೋಷಲ್ ಮೀಡಿಯಾದಲ್ಲಿ ಶೇರ್ ಮಾಡೋ ಫೋಟೋ, ವೀಡಿಯೋ ಮೂಲಕ ರಿವೀಲ್ ಆಗುತ್ತೆ.

ಅಂಥದ್ದೊಂದು ಫೋಟೋ ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ತ್ರಿಶಿಕಾ ಮಗುವಿನೊಂದಿಗೆ ಪೋಸ್ ನೀಡಿದ್ದಾರೆ. ಸಾರ್ವಜನಿಕ ಗಾರ್ಡನ್‌ನಲ್ಲಿ ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಗುವಿನ ಬಗ್ಗೆ ಇವರಾಡಿದ ಮಾತು ಕೇಳಿ ಎಷ್ಟೋ ಮಂದಿ ನೀವು ಯಾವ ಕವಿಗೂ ಕಡಿಮೆ ಇಲ್ಲ ಮೇಡಂ ಅಂತಿದ್ದಾರೆ. ಅಂದಹಾಗೆ ಈ ಬಾರಿಯ ದಸರಾದ ಆಯುಧಪೂಜೆಯ ಸಮಯದಲ್ಲೇ ತ್ರಿಶಿಕಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಇದು ಇವರ ಎರಡನೇ ಮಗು.

Tap to resize

Latest Videos

ಯದುವೀರ್ ಅವರನ್ನು ರಾಜಮಾತೆ ಪ್ರಮೋದಾದೇವಿ ಅವರು 2015ರಲ್ಲಿ ದತ್ತು ಸ್ವೀಕರಿಸುವ ಮೂಲಕ ಮೈಸೂರು ಒಡೆಯರ್ ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು. 2016ರ ಜೂನ್ 27ರಂದು ರಾಜಸ್ಥಾನ ರಾಜಮನೆತನದ ತ್ರಿಷಿಕಾ ಕುಮಾರಿ ಅವರನ್ನು ಯದುವೀರ್ ವಿವಾಹವಾಗಿದ್ದರು. ಈ ದಂಪತಿಗೆ 2017ರ ಡಿ 6ರಂದು ಮೊದಲ ಮಗು ಜನಿಸಿತ್ತು. ಈ ಮಗುವಿಗೆ ಆದ್ಯ ವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿತ್ತು. ಈಗ ಏಳು ವರ್ಷಗಳ ಬಳಿಕ ಈ ದಂಪತಿ ಎರಡನೇ ಪುತ್ರನನ್ನು ಸ್ವಾಗತಿಸಿದ್ದಾರೆ.

ಎಂಟು ವರ್ಷದ ಕೆಳಗೆ ನಾವಿಬ್ರೂ ಹೇಗಿದ್ವಿ ಗೊತ್ತಾ? ಕೇಳ್ತಿದ್ದಾರೆ ಮೈಸೂರು ಮಹಾರಾಣಿ

undefined

ಎಂಟು ತಿಂಗಳು ಮುಗಿದಿದ್ದರಿಂದ, ತ್ರಿಷಿಕಾ ಹೆರಿಗೆ ದಿನಗಳನ್ನು ಎಣಿಸುತ್ತಿದ್ದರು. ಇದರಿಂದ ಈ ಬಾರಿ ಅವರು ಹೆಚ್ಚು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ನವರಾತ್ರಿ ವೇಳೆಯೇ ಮಗು ಆಗಬಹುದು ಎಂದು ಕುಟುಂಬ ನಿರೀಕ್ಷಿಸಿತ್ತು. ಈಗಾಗಲೇ ಒಬ್ಬ ಮಗ ಇರುವುದರಿಂದ ಮಗಳು ಅರಮನೆಗೆ ಮಹಾಲಕ್ಷ್ಮಿ ರೂಪದಲ್ಲಿ ಬರಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಎರಡನೇ ಬಾರಿಯೂ ಗಂಡು ಮಗುವಿನ ಆಗಮನವಾಗಿತ್ತು.

Trishika Kumari: ತ್ರಿಶಿಕಾ ಕುಮಾರಿಗೆ ಗಂಡು ಮಗು; ವಿಜಯದಶಮಿಯಲ್ಲಿ ಅರಮನೆಯವರು ಭಾಗವಹಿಸೋ ಹಾಗಿಲ್ವಾ?

ಇದೀಗ ಮೈಸೂರು ಮಹಾರಾಣಿ ಒಂದು ಮುದ್ದಾದ ಹೆಣ್ಣುಮಗುವಿನೊಂದಿಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮಗುವಿಗೆ ತಾನು ಆಂಟಿ ಆಗ್ತೀನಿ ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಅತ್ತೆಯ ಕಣ್ಮುಂದಿನ ಬೆಳಕು ಇವಳು, ಇವಳು ಎಲ್ಲೆಲ್ಲ ಹೋಗುತ್ತಾಳೋ ಅಲ್ಲೆಲ್ಲ ಬೆಳಕಾಗುತ್ತದೆ' ಅಂತ ಪೋಯೆಟಿಕ್ ಆಗಿ ಬರೆದುಕೊಂಡಿದ್ದಾರೆ. ಮುದ್ದಾದ ಈ ಮಗು ತನ್ನ ಸೊಸೆ ಅನ್ನೋ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಬಹುಶಃ ತ್ರಿಶಿಕಾ ಎರಡನೇ ಬಾರಿ ತಾಯಿ ಆಗ್ತಿರೋದಕ್ಕೆ ಇವರಿಗೆ ಹೆಣ್ಣುಮಗುವಿನ ಮೇಲಿನ ಇಷ್ಟ ರೀಸನ್ ಆಗಿರಬಹುದು ಅಂತ ಬಹಳ ಮಂದಿ ಗೆಸ್ ಮಾಡಿದ್ದರು. ತನಗೆ ಹೆಣ್ಣುಮಗುವೆಂದರೆ ಪ್ರೀತಿ ಅನ್ನೋದನ್ನೂ ತ್ರಿಶಿಕಾ ಇತ್ತೀಚೆಗೆ ಹೇಳಿಕೊಂಡಿದ್ದರು. ಇದೀಗ ಹೆಣ್ಣುಮಗುವಿನೊಂದಿಗೆ ಫೋಟೋಗೆ ಪೋಸ್ ನೀಡುವ ಮೂಲಕ ಅದನ್ನು ಮತ್ತೊಮ್ಮೆ ರಿವೀಲ್ ಮಾಡಿದ್ದಾರೆ. ಮೈಸೂರು ಮಹಾರಾಣಿಯ ಈ ಪೋಸ್ಟ್ ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿದೆ.

 

click me!