ಗೂಗಲ್ 2024 ರಲ್ಲಿ (Google 2024) ಹೆಚ್ಚು ಹುಡುಕಲ್ಪಟ್ಟ ಟಾಪ್ ರೆಸಿಪಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಉಪ್ಪಿನಕಾಯಿ ಅತಿ ಹೆಚ್ಚು ಸರ್ಚ್ ಮಾಡಿದ ರೆಸಿಪಿಗಳಲ್ಲಿ ಭಾರತದಲ್ಲಿ ಎರಡನೇ ಸ್ಥಾನ ಮತ್ತು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಪ್ಪಿನಕಾಯಿ ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚಾಗಿ ಜನರು ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ತಿನ್ನುತ್ತಾರೆ, ಆದರೆ ಉಪ್ಪಿನಕಾಯಿಯಲ್ಲಿ ಅನೇಕ ಪೋಷಕಾಂಶಗಳ ಉಪಸ್ಥಿತಿಯಿಂದಾಗಿ, ಇದರಿಂದ ಹೆಚ್ಚಿನ ಪ್ರಯೋಜನ ಕೂಡ ಸಿಗುತ್ತೆ.
ಭಾರತದಲ್ಲಿ ಅನೇಕ ರೀತಿಯ ಉಪ್ಪಿನಕಾಯಿಗಳನ್ನು (pickles) ತಯಾರಿಸಲಾಗುತ್ತದೆ. ಇದರಲ್ಲಿ ಅನೇಕ ಮಸಾಲೆಗಳನ್ನು ಬಳಸಲಾಗುತ್ತದೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉಪ್ಪಿನಕಾಯಿ ತಿನ್ನುವುದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇನ್ನು ಆರೋಗ್ಯ ತಜ್ಞರು ಹೇಳುವಂತೆ ಉಪ್ಪಿನಕಾಯಿ ಸೇವಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಇದು ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತದೆ ಮತ್ತು ನಮ್ಮ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಉಪ್ಪಿನಕಾಯಿ ಅನೇಕ ಪ್ರಯೋಜನಗಳನ್ನು ಹೊಂದಿದೆ ನಿಜಾ, ಆದರೆ ಇದು ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಎಣ್ಣೆಯನ್ನು ಹೊಂದಿರುವುದರಿಂದ ಇದನ್ನು ಮಿತವಾಗಿ ತಿನ್ನಬೇಕು. ಉಪ್ಪಿನಕಾಯಿಯಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಉಪ್ಪಿನಕಾಯಿಯಲ್ಲಿ ಅನೇಕ ಮಸಾಲಾಗಳನ್ನು ಬಳಸಲಾಗುತ್ತದೆ ಮತ್ತು ಇದನ್ನು ಹುದುಗುವಿಕೆ (fermentation) ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ, ಇದು ನಮ್ಮ ಕರುಳಿಗೆ ಪ್ರಯೋಜನ ನೀಡುವ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಮಲಬದ್ಧತೆ, ಉಬ್ಬರ ಮತ್ತು ಅಜೀರ್ಣದಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಈ ಬ್ಯಾಕ್ಟೀರಿಯಾಗಳು ನಮಗೆ ಸಹಾಯ ಮಾಡುತ್ತವೆ. ಇದಲ್ಲದೆ, ಅರಿಶಿನ, ಜೀರಿಗೆ, ಶುಂಠಿ, ಬೆಳ್ಳುಳ್ಳಿಯಂತಹ ಪದಾರ್ಥಗಳನ್ನು ಉಪ್ಪಿನಕಾಯಿಯಲ್ಲಿ ಬಳಸಲಾಗುತ್ತದೆ, ಇದು ನಮ್ಮ ಜೀರ್ಣಕ್ರಿಯೆಯ (digestion system) ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ನಿಂಬೆ ಉಪ್ಪಿನಕಾಯಿ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಚರ್ಮ ಮತ್ತು ಮೂಳೆಗಳಿಗೆ ಪ್ರಯೋಜನಕಾರಿ
ಉಪ್ಪಿನಕಾಯಿಗಳು ನೈಸರ್ಗಿಕವಾಗಿ ವಿಟಮಿನ್ ಕೆ (Vitamin K), ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದನ್ನು ಸೇವಿಸೋದ್ರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ. ಇದು ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಆಸ್ಟಿಯೊಪೊರೋಸಿಸ್ ಅಪಾಯದಿಂದ ರಕ್ಷಿಸುತ್ತದೆ. ಉಪ್ಪಿನಕಾಯಿ ನಮ್ಮ ಚರ್ಮಕ್ಕೂ ಪ್ರಯೋಜನಕಾರಿ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಆಂಟಿ ಏಜಿಂಗ್ ಆಗಿ ಕಾರ್ಯನಿರ್ವಹಿಸುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯಕ
ಉಪ್ಪಿನಕಾಯಿಯಲ್ಲಿರುವ ಮಸಾಲೆಗಳು ನಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತವೆ, ಇದು ತೂಕ ನಷ್ಟಕ್ಕೆ (weight loss) ಸಹಾಯ ಮಾಡುತ್ತದೆ. ಉಪ್ಪಿನಕಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದನ್ನು ತಿನ್ನೋದ್ರಿಂದ ನಿಮಗೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ ಮತ್ತು ಹೆಚ್ಚುವರಿ ಕ್ಯಾಲೊರಿಗಳ ಸೇವನೆಯನ್ನು ಕಡಿಮೆ ಮಾಡುತ್ತದೆ. ವಿನೆಗರ್ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ತಿನ್ನೋದ್ರಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬು ಕಡಿಮೆಯಾಗುತ್ತದೆ. ಯಾವಾಗಲೂ ಸ್ವಲ್ಪ ಉಪ್ಪು ಮತ್ತು ಎಣ್ಣೆಯನ್ನು ಬಳಸುವ ಉಪ್ಪಿನಕಾಯಿ ತಿನ್ನಲು ಪ್ರಯತ್ನಿಸಿ. ವಿಶೇಷವಾಗಿ ಮಾರುಕಟ್ಟೆಯಲ್ಲಿ ತಯಾರಿಸಿದ ಉಪ್ಪಿನಕಾಯಿಗಳಿಗಿಂತ ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಗಳನ್ನು ಸೇವಿಸುವುದು ಉತ್ತಮ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಉಪ್ಪಿನಕಾಯಿಯಲ್ಲಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಇದನ್ನು ಫರ್ಮೆಂಟೇಶನ್ (Fermentation) ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ, ಈ ಕಾರಣದಿಂದಾಗಿ ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಅರಿಶಿನ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸಿದ ಉಪ್ಪಿನಕಾಯಿ ಅನೇಕ ಸೀಸನಲ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ತಿನ್ನುವ ಮೂಲಕ ಶೀತ ಮತ್ತು ವೈರಲ್ ಸೋಂಕುಗಳನ್ನು ತಪ್ಪಿಸಬಹುದು. ಮಾವು ಮತ್ತು ನಿಂಬೆ ಉಪ್ಪಿನಕಾಯಿಯಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಮಧುಮೇಹವನ್ನು ನಿಯಂತ್ರಿಸುತ್ತದೆ
ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯಲ್ಲಿ ಸ್ವಲ್ಪ ಪ್ರಮಾಣದ ಉಪ್ಪು ಇರುತ್ತೆ. ಇದು ಮಧುಮೇಹಕ್ಕೆ (diabetes) ಪ್ರಯೋಜನಕಾರಿಯಾಗಿದೆ. ಈ ಉಪ್ಪಿನಕಾಯಿಯಲ್ಲಿ ವಿನೆಗರ್ ಕೂಡ ಇರುತ್ತೆ, ಇದು ನಮ್ಮ ದೇಹದ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಯನ್ನು ತಡೆಯಲು ವಿನೆಗರ್ ನಮಗೆ ಸಹಾಯ ಮಾಡುತ್ತದೆ. ಉಪ್ಪಿನಕಾಯಿಯಲ್ಲಿರುವ ಫೈಬರ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಉಪ್ಪಿನಕಾಯಿ ತಿನ್ನುವುದು ಮಧುಮೇಹ ರೋಗಿಗಳಿಗೆ ನೈಸರ್ಗಿಕವಾಗಿ ಪ್ರಯೋಜನಕಾರಿ, ಆದರೆ ಅದನ್ನು ಮಿತವಾಗಿ ಸೇವಿಸಿ.