ಒಂದೇ ಮನೆಯಲ್ಲಿ ತಾಂಡವ್‌ ಹೆಂಡ್ತೀರು! ಶ್ರೇಷ್ಠಾಳನ್ನು ಚಿಕ್ಕಮ್ಮ ಎಂದು ಒಪ್ಪಿಕೊಂಡ ಮಕ್ಕಳು- ಮುಗಿದೇ ಬಿಡ್ತಾ ಭಾಗ್ಯಲಕ್ಷ್ಮಿ?

By Suchethana D  |  First Published Dec 14, 2024, 11:52 AM IST

ಸದಾ ಕಚ್ಚಾಡುತ್ತಿರುವ ಭಾಗ್ಯ ಮತ್ತು ಶ್ರೇಷ್ಠಾ ಒಂದೇ ಮನೆಯಲ್ಲಿದ್ದಾರೆ. ತಾಂಡವ್‌ ಜೊತೆ ಖುಷಿಖುಷಿಯಾಗಿದ್ದಾರೆ. ಶ್ರೇಷ್ಠಾಳನ್ನು ಚಿಕ್ಕಮ್ಮ ಎಂದು ಒಪ್ಪಿಕೊಂಡಿದ್ದಾರೆ ಮಕ್ಕಳು- ಏನಿದು ಭಾಗ್ಯಲಕ್ಷ್ಮಿ ಟ್ವಿಸ್ಟ್‌?
 


ಒಂದೇ ಮನೆಯಲ್ಲಿ ಭಾಗ್ಯ ಮತ್ತು ಶ್ರೇಷ್ಠಾ ಜೊತೆ ತಾಂಡವ್‌ ವಾಸ ಮಾಡುತ್ತಿದ್ದಾನೆ. ಎಲ್ಲರೂ ತುಂಬಾ ಖುಷಿಖುಷಿಯಾಗಿದ್ದಾರೆ. ತನ್ವಿ ಮತ್ತು ಗುಂಡ ಅಂತೂ ಶ್ರೇಷ್ಠಾಳನ್ನು ಚಿಕ್ಕಮ್ಮ ಎಂದು ಒಪ್ಪಿಕೊಂಡೇ ಬಿಟ್ಟಿದ್ದಾನೆ. ನೀನು ಮಾಡಿಕೊಡುವ ದೋಸೆ, ಇಡ್ಲಿ ತಿಂದು ಸಾಕಾಗಿ ಹೋಗಿದೆ. ಇನ್ನೇನಿದ್ರೂ ಶ್ರೇಷ್ಠಾ ಆಂಟಿ ಕೈಯಲ್ಲಿ ಪಾಸ್ಟಾ, ಅದೂ, ಇದೂ ಅಂತೆಲ್ಲಾ ಮಾಡಿಸಿಕೊಂಡು ವೆರೈಟಿ ವೆರೈಟಿ ತಿನ್ನುತ್ತೇವೆ ಎಂದಿದ್ದಾನೆ ಗುಂಡ. ಹೀಗೆ ಇದ್ದರೆ ಎಷ್ಟು ಖುಷಿಯಾಗಿಇರಬಹುದಲ್ವಾ ಎನ್ನುತ್ತಿದ್ದಾನೆ ತಾಂಡವ್‌. ಇನ್ನು ಶ್ರೇಷ್ಠಾ ಕೂಡ ಭಾಗ್ಯಳ ಮೇಲೆ ಪ್ರೀತಿ ತೋರುತ್ತಿದ್ದರೆ, ಭಾಗ್ಯಳೂ ಶ್ರೇಷ್ಠಾಳಿಗೆ ಮುತ್ತಿಕ್ಕಿ ಪ್ರೀತಿಯ ಧಾರೆಯನ್ನೇ ಹರಿಸಿದ್ದಾಳೆ! ಮಕ್ಕಳೂ ತಮಗೆ ಶ್ರೇಷ್ಠಾ ಆಂಟಿನೇ ತುಂಬಾ ಇಷ್ಟ ಎನ್ನುತ್ತಿದ್ದಾರೆ...

ಅರೆರೆ... ಇದೇನಿದು ಈ ಪರಿ ಭಾಗ್ಯಲಕ್ಷ್ಮಿಯಲ್ಲಿ ಟ್ವಿಸ್ಟ್‌? ಸಾಧ್ಯನೇ ಇಲ್ಲ ಎಂದುಕೊಂಡ್ರಾ? ಸೀರಿಯಲ್‌ ವೀಕ್ಷಕರು, ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರೇಮಿಗಳು ಇಷ್ಟೊಂದು ಗಾಬರಿಯಾಗುವ ಅಗತ್ಯವಿಲ್ಲ. ಏಕೆಂದರೆ ಇದು ನಡೆದಿದ್ದು ಸೀರಿಯಲ್‌ನಲ್ಲಿ ಅಲ್ಲ. ಬದಲಿಗೆ ಭಾಗ್ಯಲಕ್ಷ್ಮಿ ಶೂಟಿಂಗ್‌ ಸೆಟ್‌ನಲ್ಲಿ. ರೇಡಿಯೋ ಸಿಟಿ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಶೇರ್‍‌ ಮಾಡಲಾಗಿದೆ. ಹಾವು ಮುಂಗುಸಿಯಂತೆ ಇರುವ ಭಾಗ್ಯ ಮತ್ತು ಶ್ರೇಷ್ಠಾ ಹಾಗೂ ಭಾಗ್ಯ ಮತ್ತು ತಾಂಡವ್‌, ಇಲ್ಲಿ ಜೊತೆ ಜೊತೆಯಾಗಿ ಇರುವುದನ್ನು ನೋಡಬಹುದು. ಮಕ್ಕಳೂ ಶ್ರೇಷ್ಠಾ ಆಂಟಿ ಎಂದು ಆಕೆಯನ್ನು ಪ್ರೀತಿಸುವುದನ್ನು ನೋಡಬಹುದು. ತಾಂಡವ್‌, ಸೀರಿಯಲ್‌ನಲ್ಲಿಯೂ ಹೀಗೆಯೇ ಒಂದೇ ಮನೆಯಲ್ಲಿ ಇರಬಹುದಲ್ವೇ ಎಂದು ತಮಾಷೆ ಮಾಡುವುದನ್ನೂ ನೋಡಬಹುದು. ಸೀರಿಯಲ್‌ನಲ್ಲಿ ಕಿತ್ತಾಡುವ ನಾವು, ಶೂಟಿಂಗ್‌ ಸೆಟ್‌ನಲ್ಲಿ ಹೇಗೆ ಜಾಲಿಯಾಗಿ ಇರ್‍ತೇವೆ, ತಮಾಷೆ ಮಾಡಿಕೊಂಡು ಇರುತ್ತೇವೆ ಎನ್ನುವುದನ್ನು ಈ ನಟ-ನಟಿಯರು ವಿಡಿಯೋ ಮೂಲಕ ತೋರಿಸಿದ್ದಾರೆ. ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಲೇ, ತಮಾಷೆ ಮಾಡಿಕೊಳ್ಳುತ್ತಿದ್ದಾರೆ.

Tap to resize

Latest Videos

ನಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ 'ನಗುವಿನೊಡೆಯ'ನ ಪರಿಚಯಿಸಿದ ಆ್ಯಂಕರ್ ಅನುಶ್ರೀ

ಭಾಗ್ಯ ಅಮ್ಮ ಮಾಡಿಕೊಡುವ ಇಡ್ಲಿ, ದೋಸೆ ತಿಂದು ಸಾಕಾಗಿದೆ, ನಮಗೆ ಶ್ರೇಷ್ಠಾ ಆಂಟಿನೇ ಬೇಕು ಎಂದು ಗುಂಡಾ ತಮಾಷೆ ಮಾಡಿದ್ದರೆ, ಅದಕ್ಕೆ ಭಾಗ್ಯ ಅವಳು ನಿಮ್ಮನ್ನು ಬೀದಿಗೆ ತರುತ್ತಾಳೆ ಎಂದಿದ್ದಾಳೆ. ಆದರೆ ಇದಾಗಲೇ ಇಬ್ಬರೂಮೊಬೈಲ್‌ ನಂಬರ್‍‌ ಎಕ್ಸ್‌ಚೇಂಜ್‌ ಮಾಡಿಕೊಂಡು ಬಿಟ್ಟಿದ್ದಾರೆ, ಇಬ್ಬರೂ ಫ್ರೆಂಡ್ಸ್‌ ಆಗಿದ್ದಾರೆ ಎಂದು ತನ್ವಿ ತಮಾಷೆ ಮಾಡಿದ್ದಾಳೆ. ಎಲ್ಲರೂ ಬೈದು ಬೈದು ಪಾಪ ಶ್ರೇಷ್ಠಾ ಸುಸ್ತಾಗಿ ಹೋಗಿದ್ದಾಳೆ. ಇದೇ ಕಾರಣಕ್ಕೆ ಅವಳಿಗೆ ಗಂಡು ಕೂಡ ಸಿಗ್ತಿಲ್ಲ ಎಂದು ಭಾಗ್ಯ ತಮಾಷೆ ಮಾಡುವುದನ್ನೂ ಈವಿಡಿಯೋದಲ್ಲಿ ನೋಡಬಹುದು. ಒಟ್ಟಿನಲ್ಲಿ ಆನ್‌ ಸ್ಕ್ರೀನ್‌ ಮತ್ತು ಆಫ್ ಸ್ಕ್ರೀನ್‌ಗಳಲ್ಲಿ ಒಂದು ಸೀರಿಯಲ್‌ ತಂಡ ಹೇಗೆ ಭಿನ್ನವಾಗಿರುತ್ತದೆ ಎನ್ನುವುದನ್ನು ಚಿತ್ರ ತಂಡ ತೋರಿಸಿದೆ. 

undefined

ಇದನ್ನು  ಭಾಗ್ಯಲಕ್ಷ್ಮಿ ಸೀರಿಯಲ್‌ ಬಗ್ಗೆ ಹೇಳುವುದಾದರೆ, ಇದೀಗ ಕುತೂಹಲದ ಘಟ್ಟ ತಲುಪಿದೆ. ಏನೇ ಮಾಡಿದರೂ ಗಂಡನೇ ಹೆಣ್ಣಿಗೆ ಸರ್ವಸ್ವ, ಅವನು ಎಷ್ಟೇ ಟಾರ್ಚರ್‍‌ ಕೊಟ್ಟರೂ ಅದನ್ನು ಸಹಿಸಿಕೊಳ್ಳಬೇಕು, ಗಂಡನನ್ನು ಬಿಟ್ಟ ಹೆಣ್ಣಿಗೆ ಸಮಾಜದಲ್ಲಿ ಜೀವಿಸಲು ಸಾಧ್ಯವೇ ಇಲ್ಲ... ಹೀಗೆ ಹೆಣ್ಣಿನ ಮೇಲೆ ಅದರಲ್ಲಿಯೂ ಸಾಮಾನ್ಯ ಗೃಹಿಣಿಯಾದವಳೊಬ್ಬಳ ಮೇಲೆ ಇರುವ ಎಲ್ಲಾ ನಂಬಿಕೆ, ಮಾತುಗಳನ್ನೂ ಹುಸಿ ಮಾಡಿದ್ದಾಳೆ ಭಾಗ್ಯ. ಗಂಡಿನ ಹೆಣ್ಣು ಬೇಕೇ ವಿನಾ ಹೆಣ್ಣು ಗಂಡಿಲ್ಲದೇ ತಾನು, ತನ್ನ ಮಕ್ಕಳು, ತನ್ನ ಸಂಸಾರವನ್ನು ನಿಭಾಯಿಸುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಡುತ್ತಿದ್ದಾಳೆ ಭಾಗ್ಯ. ಇಷ್ಟು ವರ್ಷ ಗಂಡ, ಆತನ ಅಕ್ರಮ ಸಂಬಂಧ ಎಲ್ಲವುಗಳನ್ನೂ ಸಹಿಸಿ, ಏನೇ ಆದರೂ ಕೊನೆಯ ಪಕ್ಷ ಮಕ್ಕಳ ಸಲುವಾಗಾದರೂ ಗಂಡನ ಜೊತೆ ಬಾಳಬೇಕು ಎಂದು ಅಂದುಕೊಂಡಿದ್ದ ಭಾಗ್ಯಳಿಗೆ ಅದು ಸಾಧ್ಯವೇ ಇಲ್ಲ ಎಂದು ಗೊತ್ತಾದಾಗ ಈ ವಿಚ್ಛೇದನ ಕೊಡಲೂ ಮುಂದಾಗಿದ್ದಾಳೆ.ಇದು ಇಲ್ಲಿಯವರೆಗೆ, ಸೀರಿಯಲ್‌ನಲ್ಲಿ ಆಗಿರುವ ಅಪ್‌ಡೇಟ್‌.  

ಪ್ರೆಗ್ನೆಂಟ್‌ ಮಾಡಿ ಓಡಿ ಹೋದ... ನಿಖಾಗೆ ರೆಡಿಯಾಗಿ ಗರ್ಲ್ ಫ್ರೆಂಡ್ ಕೈಲಿ ತಗ್ಲಾಕ್ಕೊಂಡ! ವಿಡಿಯೋ ವೈರಲ್‌

 

click me!