ಮಿಲನೋತ್ಸವಕ್ಕೆ ರಸಭಂಗ ಉಂಟುಮಾಡುವ ಆ 5 ಪ್ರಮಾದಗಳು!

By Bhavani Bhat  |  First Published Dec 12, 2024, 9:04 PM IST

ʼಗಂಧರ್ವ ಮಂಚದಲ್ಲಿ ರೋಮಾಂಚ ರಾತ್ರಿʼ ಎಂಬ ಕನಸು ನನಸಾಗಬೇಕಾದರೆ ಈ ತಪ್ಪುಗಳನ್ನು ಮಾಡಲೇಬಾರದು. ಮಧುರವಾದ ಹೊತ್ತನ್ನು ಹಾಳುಗೆಡವಬಲ್ಲ ಐದು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ. 


ಮೊದಲ ಮೊದಲ ಸಮಾಗಮವೋ, ಸಾವಿರದೊ೦ದನೆ ಮಿಲನವೋ... ಏನಾದರಾಗಲಿ, ಯಾವಾಗಲೂ ಅದು ಮಹೋತ್ಸವವೇ. ಪರಸ್ಪರರ ಸಮ್ಮತಿ ಮೇಲೆ ನಡೆಯುವ ಮಿಲನೋತ್ಸವ ಯಾವತ್ತೂ ಮುದವೇ, ಪ್ರತಿ ಸಲವೂ ಅಷ್ಟೇ. ಪುರುಷನಿಗೆ ಸೋಲಬಾರದೆಂಬ ಹಠ. ಪ್ರಕೃತಿಗೆ ತನ್ನದೆಲ್ಲವನ್ನೂ ಸಮರ್ಪಿಸಿಕೊಂಡು ಮುನ್ನುಗ್ಗುವ ಛಲ. ಮೊಗಮೊಗೆದು ಸುಖ ನೀಡುವಾಸೆ. ಆದರೂ ಒಂದೊಂದು ಸಲ ಅದೇಕೋ ತಾಳ ತಪ್ಪಿಹೋಗುತ್ತದೆ. ಅಮಲಿನಲ್ಲಿ ತೇಲುತ್ತಿರುವಾಗಲೇ ಧಡ್ಡಂತ ನಿರಾಸೆಯ ಪ್ರಪಾತದಲ್ಲಿ ಬಿದ್ದಂಥ ದುಸ್ವಪ್ನ. ಆ ಥರದ ಹತಾಶೆ ಸುಲಭದಲ್ಲಿ ಮರೆತು ಹೋಗುವಂತಾದದ್ದೂ ಅಲ್ಲ. 'ಹಿಂದೆಂದೂ ಹೀಗಾಗಿರಲಿಲ್ಲ. ಈಗೀಗ ನನ್ನವರು ಕಾಟಾಚಾರಕ್ಕೆ ಎಂಬಂತೆ ಮುಗಿಸಿ ಬಿಡುತ್ತಾರೆ' ಎಂದು ಹೆಂಡತಿ, 'ನನ್ನಾಕೆಗೆ ವೈವಿಧ್ಯವೇ ಬೇಕಿಲ್ಲ' ಎಂದು ಗಂಡ ದೂರುವುದು ಕಾಮನ್. ಮಧುರವಾದ ಹೊತ್ತಲ್ಲಿ ಸಾಮಾನ್ಯವಾಗಿ ನಡೆಯುವ ಐದು ತಪ್ಪುಗಳ ಬಗ್ಗೆ ಅರಿವಿದ್ದರೆ ಜೀವನವಿಡೀ ಮಧುಚಂದ್ರ ಅನುಭವಿಸಬಹುದು. ಏನವು?

ಈ ಸಮಯ ಸರಸಮಯ 

Tap to resize

Latest Videos

'ಮಂಚವ ಏರಿ ಮಧುವನು ಹೀರಿ ದಾಹವ ನೀಗಿ ಸುಖಿಸೋಣ' ಎನ್ನುತ್ತ ಆತುರಪಡುವವರೇ ಹೆಚ್ಚು. ಬಹಳಷ್ಟು ಜನರ ಸಮಸ್ಯೆ ಇದು. ಅನುಭವಿಗಳು ಕೂಡ
ಕೆಲವೊಮ್ಮೆ ಈ ವಿಚಾರದಲ್ಲಿ ಎಡವಿಬಿಡುತ್ತಾರೆ. ಕೊಂಚ ತಾಳ್ಮೆ ವಹಿಸಿದರೆ ಎಲ್ಲವೂ ಸಲೀಸು. ಮೂಲತತ್ವವನ್ನೇ ಮರೆತರೆ ಆಗುವ ಪ್ರಮಾದವಿದು. ಸರಸಕ್ಕೂ ಬೇಕು
ಸಾಕಷ್ಟು ಸಮಯ. ಜಗವ ಮರೆಯಲು ಅದುವೇ ಸೋಪಾನ. ಇಂಥದ್ದೇ ಅಂತಿಲ್ಲ. ಖುಷಿ ಕೊಡುವ ಪೋಲಿ ಮಾತುಗಳ ವಿನಿಮಯ, ಪ್ರೀತಿ ತುಂಬಿದ ನವಿರು
ಸ್ಪರ್ಶಾವಳಿಗಳು ಏನೆಲ್ಲ ಚಮತ್ಕಾರ ಮಾಡಬಲ್ಲವು.

ಚೆಂದಕ್ಕಿಂತ ಚೆಂದ

undefined

ಸಂಗಾತಿಯ ಪ್ರತಿ ಅಂಗಾಂಗವನ್ನೂ ಆರಾಧನಾ ಭಾವದಿಂದ ನೋಡಿ. ಇಲ್ಲದಿದ್ದರೆ ಮತ್ತಾವುದೋ ಸಂದರ್ಭದಲ್ಲಿ ಅವರ ಅವಯವಗಳ ಬಗ್ಗೆ ಲೇವಡಿ ಮಾಡಿಬಿಡಬ
ಹುದಾದ ಅಪಾಯ ಇರುತ್ತದೆ. ತಮಾಷೆಗೆಂದು ಹೀಗೆ ಮಾಡಿದರೂ ರಾದ್ಧಾಂತವೇ ಆದೀತು. ಸಂಗಾತಿ ನಿಮ್ಮ ಸಂಗವನ್ನೇ ತೊರೆದಾರು. ಎಷ್ಟೇ ಆತ್ಮೀಯರಾಗಿದ್ದರೂ
ಎಲ್ಲವನ್ನೂ ತೆರೆದಿಟ್ಟುಕೊಳ್ಳುವ ವಿಚಾರ ಬಂದಾಗ ಒಮ್ಮೊಮ್ಮೆ ಬಾಳಸಂಗಾತಿ ಕೂಡ ಹೊರಗಿನವರು ಅನ್ನಿಸುವುದುಂಟು. ಎಷ್ಟೆಂದರೂ ಮತ್ತೊಬ್ಬರ ಎದುರು ಹುಟ್ಟುಡುಗೆಯಲ್ಲಿರುವುದು ಮುಜುಗರದ ಸಂಗತಿಯೇ. ಅಷ್ಟಕ್ಕೂ ನಮ್ಮದೇ ದೇಹದ ಎಲ್ಲ ಭಾಗಗಳ ಬಗ್ಗೆಯೂ ನಮಗೇ ಥ್ರಿಲ್ ಇರುವುದಿಲ್ಲ ಅಲ್ಲವಾ?

ಜುಂಜುಂ ಮಾಯ

ಏಕತಾನತೆ ನಿಜಕ್ಕೂ ಬೇಸರ ತರಿಸುತ್ತದೆ. ಒಂದು ವಿಷಯ ಮನಸ್ಸಿನಲ್ಲಿರಲಿ. ಶೈಲಿಯಲ್ಲಿ ಹೊಸತನ, ಪ್ರಯೋಗಶೀಲತೆ ಬೇಕೆನಿಸಿದರೆ ಸಂಗಾತಿ ಮೇಲೆ ಹೇರಬೇಡಿ. ಪರಸ್ಪರ ಸಮಾಲೋಚನೆಯ ಮೇರೆಗೆ ಬದಲಾವಣೆ ಆಗಲಿ. ಸಂಗಾತಿ ಒಪ್ಪದಿದ್ದರೆ ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುವ ಸಾಹಸ ಬೇಡ. ಅದರಿಂದ ತನ್ನ
ಅಭಿಪ್ರಾಯಕ್ಕೆ ಬೆಲೆ ಸಿಗುತ್ತಿಲ್ಲ ಎಂಬ ಭಾವ ಅವರಲ್ಲಿ ಬಲಿಯಬಹುದು. ಬದಲಾಗಿ ಈಗಿನ ಸ್ಥಿತಿ ಏಕೆ ಬೇಡ ಎನ್ನುವುದನ್ನು ಮನವರಿಕೆ ಮಾಡಿಕೊಡಿ. ಪ್ರೀತಿಯಿಂದ ರಮಿಸಿ ಒಪ್ಪಿಸಿ ಎಂಜಾಯ್ ಮಾಡಿ.

ಈ ವಿಷಯಗಳ ಬಗ್ಗೆ ಮಗಳ ಮುಂದೆ ಯಾವತ್ತೂ ಹೇಳಬಾರದು!

ಇವರಿದ್ದಾಗ ಅವರೇಕೆ?

ಏಕ ಸಂಗಾತಿಗೆ ನಿಷ್ಠರಾಗಿದ್ದರೂ 'ಆ ಹೊತ್ತಲ್ಲಿ' ಮನಸ್ಸಿನಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ಸಾಮಾನ್ಯ ಎನ್ನುತ್ತದೆ ಮನಶ್ಯಾಸ್ತ್ರ. ಆ ಫ್ಯಾಂಟಸಿ ಮನಸ್ಸಿನಿಂದ ಆಚೆ ಬಾರದಿರಲಿ. ಅಕಸ್ಮಾತ್ ಅಫೇರ್ ಇದ್ದರೂ ಅವರ ಪ್ರಸ್ತಾಪ ಬೇಡವೇ ಬೇಡ. “ನಿನಗಿಂತ ಅವರೇ ಹೆಚ್ಚು ಖುಷಿ ಕೊಡುತ್ತಾರೆ' ಎಂಬಂಥ ಮಾತುಗಳು ಬಾರದಿರಲಿ.

ಎಲ್ಲವೂ ಸಲೀಸು

ಈ ಸೂಚನೆ ಪುರುಷರಿಗೆ ಮಾತ್ರ. ಪೌರುಷ ಪ್ರದರ್ಶನಕ್ಕೆ ಆರ್ಭಟ ಬೇಡ. ಅದನ್ನೇ ಮೃದುವಾಗಿ ಪದಗಳಲ್ಲಿ ಅಭಿವ್ಯಕ್ತಿಸಿ. ಒರಟಾದ ದೇಹಭಾಷೆಗಿಂತ ಮೃದುವಾದ ಮಾತು, ತುಸುವೇ ನಾಟಿ ಅನಿಸುವ ಪೋಲಿ ಮಾತು ಹೆಚ್ಚು ಉದ್ರೇಕ ತರಿಸಬಲ್ಲುದು. 

ಪತಿಗೆ ಸರ್ವಸ್ವವನ್ನೇ ಧಾರೆ ಎರೆದ್ರೂ ತನ್ನ ಈ ಅಂಗ ಸ್ಪರ್ಶಿಸೋಕೆ ಬಿಡಲ್ಲ ಭಾರತೀಯ ಪತ್ನಿ !
 

click me!