ಉತ್ತರ ಪ್ರದೇಶದ ಯುವಕನೊಬ್ಬ ಹಲವು ಹೆಣ್ಣುಮಕ್ಕಳಿಗೆ ಮೋಸ ಮಾಡಿ, ನಿಖಾ ಮಾಡಿಕೊಳ್ಳಲು ರೆಡಿಯಾಗಿ ತಗ್ಲಾಕ್ಕೊಂಡಿರೋ ವಿಡಿಯೋ ವೈರಲ್ ಆಗಿದೆ.
ಮದುವೆ ಸಂಭ್ರಮ ನಡೆಯುತ್ತಿರುವಾಗ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ನಾಯಕನೋ, ನಾಯಕಿಯೋ ಇಲ್ಲವೇ ಇನ್ನಾರೋ ಬಂದು ನಿಲ್ಲಿ... ಎಂದು ಮದುವೆ ಮುರಿಯುವುದನ್ನು ಸಿನಿಮಾ, ಸೀರಿಯಲ್‌ಗಳಲ್ಲಿ ನೋಡಬಹುದು. ಆದರೆ ನಿಜ ಜೀವನದಲ್ಲಿಯೂ ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ. ಇಲ್ಲಿ ಯುವಕನೊಬ್ಬ ಮದುವೆಗೆ (ನಿಖಾ) ರೆಡಿಯಾಗಿದ್ದ. ನೋಡಲು ಪಾಪದ ರೀತಿ ಇರುವ ಈ ಭೂಪ ತಾನು ಗೆದ್ದು ಬೀಗಿದೆ ಎನ್ನುವ ಹುಮ್ಮಸ್ಸಿನಲ್ಲಿ ಇದ್ದ. ತನ್ನ ಬಗ್ಗೆ ಯಾರಿಗೂ ತಿಳಿದಿಲ್ಲ, ಯಾರೋ ಒಬ್ಬಳನ್ನು ಮದುವೆಯಾಗಿ ನೆಮ್ಮದಿಯಿಂದ ಇರಬಹುದು ಎಂದು ಅಂದುಕೊಂಡು, ಮದುವೆಗೆ ಸಿದ್ಧತೆ ನಡೆಸಿ, ವರನ ವೇಷದಲ್ಲಿ ಕುಳಿತಿದ್ದ. ಖಾಜಿಯವರು ನಿಖಾ ಆಚರಣೆಗಳನ್ನು ಮಾಡುತ್ತಿದ್ದರು. ವಧು "ಕಾಬೂಲ್ ಹೈ" ಎಂದು ಹೇಳುವ ಮೂಲಕ ಮದುವೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ, ನಡೆದದ್ದೇ ರೋಚಕ!
ಇನ್ನೇನು ವಧು ಕಬೂಲ್ ಹೈ ಎಂದಿದ್ದರೆ, ಮದುವೆ ನಡೆಯುತ್ತಿತ್ತು. ಅಷ್ಟರಲ್ಲಿಯೇ ವರನ ಯುವತಿಯೊಬ್ಬಳ ಎಂಟ್ರಿಯಾಗಿದೆ! ಈತ ನನಗೆ ಮೋಸ ಮಾಡಿದ್ದಾನೆ ಎಂದು ಒಂದೇ ಸಮನೆ ಯುವತಿ ಹೇಳಿದರೂ, ಅಲ್ಲಿದ್ದವರು ಆರಂಭದಲ್ಲಿ ಅವಳ ಮಾತನ್ನು ಕೇಳಲಿಲ್ಲ. ಸಾಲದು ಎನ್ನುವುದಕ್ಕೆ ಈಗ ಭೂಪ ಕೂಡ ಈಕೆ ತನಗೆ ಗೊತ್ತೇ ಇಲ್ಲ ಎನ್ನುವ ರೀತಿಯಲ್ಲಿ ನಾಟಕ ಮಾಡಿದ. ಹೇಳಿ ಕೇಳಿ ಇದು ತಂತ್ರಜ್ಞಾನದ ಯುಗ, ಹಿಂದಿನ ರೀತಿಯಲ್ಲಿ ಸುಲಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವಲ್ಲ! ಯುವತಿ ತಾವಿಬ್ಬರೂ ಜೊತೆಯಲ್ಲಿ ಇದ್ದ ಫೋಟೋ, ವಿಡಿಯೋಗಳನ್ನು ಅಲ್ಲಿದ್ದವರಿಗೆ ತೋರಿಸಿದ್ದಾಳೆ. ಇನ್ನು ಪಾಪ ಈತ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ ಹೇಳಿ? ವರನ ಮುಖ ಇಂಗು ತಿಂದ ಮಂಗನಂತಾಗಿತ್ತು. ಅದರೂ ಕೊನೆಯ ಪ್ರಯತ್ನವನ್ನೂ ಮಾಡಿದ. ಆದರೆ ಯುವತಿ ಆತನ ಇತಿಹಾಸವನ್ನೇ ಕೆದಕಿ ಬಿಟ್ಟಳು.
ಮೆಹಂದಿ ನೋಡಿಯೇ, ಶೋಭಿತಾ- ನಾಗಚೈತನ್ಯ ದಾಂಪತ್ಯ ಜೀವನ ಡಿಸೈಡ್ ಮಾಡಿಬಿಟ್ರಲ್ಲಾ ನೆಟ್ಟಿಗರು!
ಇವನು ನನ್ನೊಬ್ಬಳನ್ನೇ ಅಲ್ಲ, ತುಂಬಾ ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ. ನನ್ನನ್ನು ಪ್ರೆಗ್ನೆಂಟ್ ಮಾಡಿದ್ದ. ಕೊನೆಗೆ ಮಗುವನ್ನು ತೆಗೆಸಿದ. ಹೀಗೆ ತುಂಬಾ ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿದ್ದಾನೆ, ಈತನನ್ನು ಸುಮ್ಮನೇ ಬಿಡಿಬೇಡಿ ಎಂದೆಲ್ಲಾ ಹೇಳಿದ್ದಾರೆ. ಆರಂಭದಲ್ಲಿ ಹುಡುಗನ ಮಾತುಕೇಳಿ ಅಲ್ಲಿದ್ದವರೆಲ್ಲರೂ ಯುವತಿಯ ಮೇಲೆಯೇ ರೇಗಾಡಿದ್ದರು. ಬಳಿಕ ಆಕೆ ಯಾವಾಗ ಸಾಕ್ಷ್ಯಾಧಾರಗಳನ್ನು ತೋರಿಸಿದಳೋ, ಎಲ್ಲರೂ ತೆಪ್ಪಗಾದರು. ವರ ಮಹಾಶಯ ಮಾತ್ರ ಏನು ಹೇಳದೇ ಬೆಪ್ಪಗೆ ಕುಳಿತಿದ್ದ. ಇನ್ನು ತನ್ನ ಯಾವ ಸುಳ್ಳುಗಳೂ ನಡೆಯುವುದಿಲ್ಲ ಎಂದು ಅವನಿಗೆ ತಿಳಿದಿತ್ತು. ಇದರ ವಿಡಿಯೋ ವೈರಲ್ ಆಗಿದೆ.
undefined
ವಿಷಯ ತಿಳಿಯುತ್ತಿದ್ದಂತೆಯೇ, ವಧುವಿನ ಮನೆಯವರು ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವುದಾಗಿ ತಿಳಿದುಬಂದಿದೆ. ಸದ್ಯ ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿ ಮದುವೆಯಾಗಲು ಹೊರಟ ಭೂಪ ಜೈಲು ಪಾಲಾಗಿದ್ದಾನೆ! ಅಂದಹಾಗೆ ವರನ ಹೆಸರನ್ನು ಬಿಹಾರಿಗಢ್‌ನ ಶೇರ್ಪುರ್ ಗ್ರಾಮದ ದಿಲ್ಬಹರ್ ಎಂದು ಗುರುತಿಸಲಾಗಿದೆ. ವರನ ಮನೆಯವರು ನಿಖಾ ಮಾಡಿಕೊಳ್ಳಲು ಮದುವೆ ಮೆರವಣಿಗೆಯೊಂದಿಗೆ ಗಗಲ್ಹಾಡಿಗೆ ಆಗಮಿಸಿದ್ದರು. ಅತಿಥಿಗಳು ಊಟ ಮಾಡಿದರು, ಅಷ್ಟರಲ್ಲಿಯೇ ಲವರ್ ಆಗಮಿಸಿ ಸಮಾರಂಭಕ್ಕೆ ಅಡ್ಡಿಪಡಿಸಿರುವುದು ಗೊತ್ತಾಗಿದೆ. ಕಳೆದ ಏಳು ವರ್ಷಗಳಿಂದ ದಿಲ್ಬಹರ್ ಜೊತೆ ಸಂಬಂಧ ಹೊಂದಿದ್ದಳು ಎಂದು ಗೆಳತಿ ಬಹಿರಂಗಪಡಿಸಿದ್ದಾಳೆ. ದಿಲ್ಬಹರ್ ತನಗೂ ಗರ್ಭಪಾತ ಮಾಡಿಸಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಇದಲ್ಲದೆ, ಅವಳು ನವೆಂಬರ್ 30 ರಂದು ಕೇರಳದ ಪೊಲೀಸ್ ಠಾಣೆಯಲ್ಲಿ ದಿಲ್ಬಹರ್ ವಿರುದ್ಧ ದೂರು ದಾಖಲಿಸಿದ್ದಳು. ಅವಳು ತನ್ನ ಮತ್ತು ದಿಲ್ಬಹರ್ನ ಫೋಟೋವನ್ನು ಎಲ್ಲರಿಗೂ ತೋರಿಸಿದಳು,
ಎಲ್ಲಾ ಕಡೆ ಒಳ ಉಡುಪು ಹಾಕಿದ್ದೆ, ನಿಮಗೆ ಕಾಣಿಸ್ಲಿಲ್ಲ: ಸಮಜಾಯಿಷಿ ಕೊಟ್ಟು ಮತ್ತೆ ಎಡವಟ್ಟು ಮಾಡಿಕೊಂಡ ಪೂನಂ ಪಾಂಡೆ !