ರಿಯಲ್‌ ಮದ್ವೆ ಮುಗಿಸಿದ ಚಿನ್ನುಮರಿ ಶೂಟಿಂಗ್‌ ಸೆಟ್‌ನಲ್ಲಿ ರೀಲ್‌ ಪತಿ ಜೊತೆ ಹೇಗಿದ್ಲು? ವಿಡಿಯೋ ವೈರಲ್‌

By Suchethana D  |  First Published Dec 14, 2024, 12:18 PM IST

ಈಚೆಗಷ್ಟೇ ಮದುವೆಯಾಗಿರುವ ಚಿನ್ನುಮರಿ ಅಂದರೆ ನಟಿ ಚಂದನಾ ಅನಂತಕೃಷ್ಣ ಅವರು ಶೂಟಿಂಗ್‌ ಸೆಟ್‌ನಲ್ಲಿ ರೀಲ್‌ ಪತಿ ಸೈಕೋ ಜಯಂತ್‌ ಜೊತೆಗಿರುವ ದೃಶ್ಯಗಳ ವಿಡಿಯೋ ವೈರಲ್‌ ಆಗಿದೆ.
 


ಚಿನ್ನುಮರಿ ಎಂದರೆ ಸಾಕು... ಸೀರಿಯಲ್​ ಪ್ರಿಯರ ಕಣ್ಮುಂದೆ ಬರುವುದು ಜೀ ಕನ್ನಡದ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ಸೈಕೋ ಜಯಂತ್​ ಪತ್ನಿ ಜಾಹ್ನವಿ. ಗಂಡ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ತಿಳಿದುಕೊಂಡಿರೋ ಜಾಹ್ನವಿಗೆ ಈಗ ತಾನೇ ತನ್ನ ಗಂಡನ ನಿಜವಾದ ಮುಖ ಗೊತ್ತಾಗುತ್ತಿದೆ. ತನ್ನನ್ನು ಪ್ರೀತಿಸಲು ಆತ ಯಾವ ಮಟ್ಟಿಗೆ ಇಳಿಯುತ್ತಿದ್ದಾನೆ ಎನ್ನುವ ವಿಷಯ ಈಗಷ್ಟೇ ಈ ಪೆದ್ದು ಪತ್ನಿಗೆ ಗೊತ್ತಾಗುತ್ತಿದೆ. ತಾನು ಊಟ ಕೊಟ್ಟೆ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್​ ಅನ್ನು ಥಳಿಸಿರುವುದರಿಂದ ಹಿಡಿದು, ತನ್ನ ಪ್ರೀತಿಯ ಮೊಲವನ್ನು ಬಿಟ್ಟು ಬಂದಿದ್ದು ಅಷ್ಟೇ ಅಲ್ಲದೇ ತಮ್ಮ ಸ್ವಂತ ಮನೆಯವರ ಮೇಲೂ ಕಾಳಜಿ ಮಾಡಿದರೆ ಗಂಡನಿಗೆ ವಿಪರೀತ ಕೋಪ ಬರುತ್ತದೆ ಎಂಬೆಲ್ಲಾ ವಿಷಯ ಈಗ ಅರಿವಿಗೆ ಬರುತ್ತಿದೆ. ಸೀರಿಯಲ್​ ಟ್ವಿಸ್ಟ್​ ಪಡೆದುಕೊಳ್ಳುತ್ತಿರುವ ನಡುವೆಯೇ ನಿಜ ಜೀವನದಲ್ಲಿಯೂ ಹಸೆಮಣೆ ಏರಿದ್ದಾಳೆ ಚಿನ್ನುಮರಿ. ಈ ಚಿನ್ನುಮರಿಯ ರಿಯಲ್​ ಹೆಸರು  ಚಂದನಾ ಅನಂತಕೃಷ್ಣ. ಈಚೆಗಷ್ಟೇ ಇವರ ಮದುವೆ ನಡೆದಿದೆ.  ಉದ್ಯಮಿ ಆಗಿರುವ ಪ್ರತ್ಯಕ್ಷ್ ಅವರ ಜೊತೆ ಚಂದನಾ ಮದುವೆ ನಡೆದಿದೆ. 


ಇನ್ನು ಮದುವೆ ನಂತರದ ಕಾರ್ಯಗಳು, ಹನಿಮೂನ್‌, ಟೂರ್‍‌, ಟ್ರಿಪ್‌ ಅಂತೆಲ್ಲಾ ನಟಿ ಬಿಜಿಯಾಗಿರುವ ಕಾರಣ, ಶೂಟಿಂಗ್‌ಗೆ ಬರುವುದು ವಿಳಂಬ ಆಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಚಂದನಾ ಅವರು ಪುನಃ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನಾ ಅವರ ಜಾಗಕ್ಕೆ ಬೇರೆ ಯಾರಾದ್ರೂ ಬರ್ತಾರಾ ಎಂಬೆಲ್ಲಾ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿತ್ತು. ಇವರ  ಸಹೋದರಿ ಚಿನ್ಮಯಿ ಅನಂತಕೃಷ್ಣ ಅವರು ಕೂಡ ನಟನೆಯಲ್ಲಿ ಪಳಗಿದ್ದು ಮಾತ್ರವಲ್ಲದೇ ನೋಡಲು ಥೇಟ್‌ ಚಂದನಾ ರೀತಿಯಲ್ಲಿಯೇ ಇದ್ದುದರಿಂದ ಅವರೂ ಬಂದರೂ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಅದರೆ ಚಂದನಾ ಮಾತ್ರ ತಾವೇ ಸೀರಿಯಲ್‌ನಲ್ಲಿ ಮುಂದುವರೆದಿದ್ದು ಶೂಟಿಂಗ್‌ಗೆ ಹಾಜರಾಗಿದ್ದಾರೆ. ನಾಯಕ ಅಥವಾ ನಾಯಕಿಯ ಪಾತ್ರದಲ್ಲಿ ಒಬ್ಬರನ್ನು ದೀರ್ಘಕಾಲ ನೋಡಿದ ಮೇಲೆ ಅವರ ಜಾಗಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ವೀಕ್ಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈಗ ಚಂದನಾ ಅವರೇ ಚಿನ್ನುಮರಿಯಾಗಿ ಮುಂದುವರೆದಿರುವುದು ವೀಕ್ಷಕರಿಗೆ ಖುಷಿ ಕೊಡುತ್ತಿದೆ.

ಒಂದೇ ಮನೆಯಲ್ಲಿ ತಾಂಡವ್‌ ಹೆಂಡ್ತೀರು! ಶ್ರೇಷ್ಠಾಳನ್ನು ಚಿಕ್ಕಮ್ಮ ಎಂದು ಒಪ್ಪಿಕೊಂಡ ಮಕ್ಕಳು- ಮುಗಿದೇ ಬಿಡ್ತಾ ಭಾಗ್ಯಲಕ್ಷ್ಮಿ?

Tap to resize

Latest Videos

ಇನ್ನೇನು ಮದುವೆ ಇದೆ ಎನ್ನುವಾಗಲೂ ಚಂದನಾ ಅವರು ಶೂಟಿಂಗ್‌ ಮುಗಿಸಿಯೇ ಹೋಗಿದ್ದರು. ಮದುವೆ ಹತ್ತಿರದಲ್ಲಿಯೇ ಇದ್ದರೂ ಅವರು ಶೂಟಿಂಗ್‌ ಸೆಟ್‌ನಲ್ಲಿ ಹೇಗಿದ್ದರು, ರೀಲ್‌ ಪತಿ ಸೈಕೋ ಜಯಂತ್‌ ಜೊತೆ ಹೇಗೆ ಶೂಟಿಂಗ್‌ ಸೆಟ್‌ನಲ್ಲಿ ಭಾಗಿಯಾಗಿದ್ದರು ಎನ್ನುವ ಶೂಟಿಂಗ್‌ ವಿಡಿಯೋ ಅನ್ನು ಡಿವಿ ಡ್ರೀಮ್ಸ್‌ ಯೂಟ್ಯೂಬ್ ಚಾನೆಲ್‌ ಶೇರ್‍‌ ಮಾಡಿಕೊಂಡಿದೆ. ಈವಿಡಿಯೋದಲ್ಲಿ ಶೂಟಿಂಗ್‌ ಹೇಗೆ ನಡೆಯುತ್ತದೆ, ಡೈಲಾಗ್‌ ಹೇಗೆ ಹೇಳಿಕೊಡಲಾಗುತ್ತದೆ, ಆಕ್ಷನ್‌ ಹೇಗೆ ಮಾಡಬೇಕು ಎಂಬ ಬಗ್ಗೆ ತೋರಿಸಲಾಗಿದೆ. ಇಲ್ಲಿ ನಡೆಯುವುದಕ್ಕೂ, ಕೊನೆಯದಾಗಿ ವೀಕ್ಷಕರ ಮುಂದೆ ಆ ದೃಶ್ಯಗಳು ತೋರಿಸುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಗಂಡನ ಮೇಲೆ ಜಾನು ಕೋಪ ಮಾಡಿಕೊಂಡಾಗಿನ ದೃಶ್ಯವಿದು. ಪತ್ನಿಯನ್ನು ಪತಿ ಹೇಗೆ ರಮಿಸುತ್ತಾನೆ, ಶೂಟಿಂಗ್‌ ಸೆಟ್‌ನಲ್ಲಿ ಹೇಗೆ ಹಿಂದಿನಿಂದ ನಟರಿಗೆ ನಿರ್ದೇಶನ ಮಾಡಲಾಗುತ್ತದೆ ಎಂಬ ಬಗ್ಗೆ ಇದರಲ್ಲಿ ನೋಡಬಹುದಾಗಿದೆ. 
 

ಇನ್ನು ಚಂದನಾ ಅವರು ಮದುವೆಯಾಗಿರುವ ಪ್ರತ್ಯಕ್ಷ್​ ಅವರು ಉದ್ಯಮಿಯಾಗಿದ್ದು, ಚಿತ್ರನಟ  ದಿವಂಗತ  ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಮಗನಾಗಿದ್ದಾರೆ. ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ,  ರಾಜಾ ರಾಣಿ  ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್​ ಆಗಿದ್ದು,   ಬಿಗ್ ಬಾಸ್   ಮನೆಗೆ ಹೋಗಿ ಬಂದ ಮೇಲೆ.  ಬಿಗ್ ಬಾಸ್ ಕನ್ನಡ 7  ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು.  ಹೂಮಳೆ  ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ  ಲಕ್ಷ್ಮೀ ನಿವಾಸ  ಸೀರಿಯಲ್‌ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ.  ಇನ್ನು ಪ್ರತ್ಯಕ್ಷ್​ ಕುರಿತು ಹೇಳುವುದಾದರೆ,  ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್​ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ  ಆರಂಭ  ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದವರು.   ಅಗ್ನಿಪರ್ವ ,  ಶುಭ ಮಿಲನ ,  ಜಯಭೇರಿ ,  ಉದ್ಭವ ,  ಅಮೃತ ಬಿಂದು ,  ಶಿವಯೋಗಿ ಅಕ್ಕಮಹಾದೇವಿ ,  ಉಂಡು ಹೋದ ಕೊಂಡು ಹೋದ ,  ಕ್ರಮ  ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ.  ಬಳಿಕ ಅವರು,  ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು.  ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ.  2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್​ ಅವರೂ ಕಾಫಿ ಎಸ್ಟೇಟ್​ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

undefined

ನಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ 'ನಗುವಿನೊಡೆಯ'ನ ಪರಿಚಯಿಸಿದ ಆ್ಯಂಕರ್ ಅನುಶ್ರೀ
 

click me!