ಸುಸೈಡ್ ಪ್ಲಾನ್ ಮಾಡಿದವನಿಗೆ ಬದುಕುವ ಪ್ಲಾನ್ ಇರಲಿಲ್ವಾ ? ಗಂಡಸಲ್ವಾ, ಎಲ್ಲ ಎದುರಿಸಿ ಬದುಕು ಗೆಲ್ಲಬೇಕಿತ್ತು. ಯಾರ ಬೆಂಬಲವೂ ಇಲ್ಲದೇ ಗಂಡ, ಮಕ್ಕಳನ್ನು ಸಾಕು ಎಷ್ಟು ಹೆಣ್ಣು ಮಕ್ಕಳು ಭಾರತದಲ್ಲಿ ಇಲ್ಲ ಹೇಳಿ?
- ದೈವಜ್ಞ ಹರೀಶ್ ಕಶ್ಯಪ್, ಜ್ಯೋತಿಷಿ
ಒಬ್ಬನ ಸುಸೈಡ್, ವ್ಯವಸ್ಥೆಯ ತಲೆನೋವಾಗಿ, ಕೈಲಾಗದವನ ಬದಲು ಸಮಾಜ ಮೈ ಪರಚಿಕೊಂಡತೆ ಆಗಬಾರದು. ನಿನ್ನ ಹತಾಶೆ ಹಲವರ ಮೇಲೆ ಕೆಟ್ಟ ದುಷ್ಟ ಪ್ರಭಾವ ಬೀರುತ್ತೆ ಅನ್ನೋ ಎಚ್ಚರವೂ ಇಲ್ಲ. ಎಚ್ಚರ ತಪ್ಪಿರೋರು ಮಾತ್ರವೇ ಹೀಗೆಲ್ಲಾ ಮಾಡಿಕೊಂಡು ‘Pity’ಗೂ ಅರ್ಹರಾಗದೆ ಪ್ರೇತವಾಗಿ ಸುತ್ತುವುದು.
ಸಮಯ ಖರಾಬ್ ಆಗೋದು ಆಮೇಲೆ. ಅದಕ್ಕೆ ಮುನ್ನವೇ ಮನುಷ್ಯನೇ ಖರಾಬ್ ಆಗಿರ್ತಾನೆ. ಹಾಗಾಗಿಯೇ ಪುಟಗಟ್ಟಲೆ ಪತ್ರ ಬರೆದು ಸೋಶಿಯಲ್ ಮಿಡಿಯಾಗೆ ಹಾಕಿ, ತನ್ನ ಹೆಂಡತಿ, ಅತ್ತೆ, ಮಾವನ ಹೆಸರು ಬರೆದು ವೈರಲ್ ಮಾಡಿ , ಆಮೇಲೆ ಸೂಸೈಡ್ ಮಾಡಿಕೊಂಡ. Sad.ಅಸಹನೆಯ sadness ಸಮಾಜಕ್ಕೆ ಹೇರಿ ಹೋಗೋದು ಪಾತಕ. ತ್ಮಹತ್ಯೆಗೆ ಇಷ್ಟೆಲ್ಲಾ ಪ್ಲಾನಿಂಗ್ ಮಾಡಿದವ, ಅದನ್ನು ಎದುರಿಸಲು ಬೇಕಾದ ಪ್ಲಾನಿಂಗ್ ಮಾಡಲಿಲ್ಲ. ಜನರನ್ನು, ಶತ್ರುಗಳನ್ನು ಎದುರಿಸಿ ನಿಲ್ಲಬೇಕು.
ಒಳ್ಳೇ ಎಜುಕೇಶನ್ , ಕೆಲಸ, ಸಂಬಳ...ಅದೂ ನಮ್ ಬೆಂಗಳೂರು ವಾಸ. ಹತ್ತಾರು ಸಾಂತ್ವನ ಕೇಂದ್ರಗಳಿವೆ. ಕಾನೂನು, ಮನೋವೈದ್ಯರ ಕೌನ್ಸೆಲಿಂಗ್ ಇದೆ. ಬಳಸಿಕೊಳ್ಳಬೇಕು, ಹೋರಾಡಬೇಕು. ಅದೇ ಜೀವನ, ಹೋರಾಡಿ ಗೆಲ್ಲುವುದೇ ಜೀವನ. ಒಂದಿನ ಎಲ್ಲವೂ ನಿನ್ನ ದಾರಿಗೆ ಬರುತ್ತದೆ ಎಂಬ ಭರವಸೆ ಇರಬೇಕು. ಅದೆಲ್ಲ ಬಿಟ್ಟು ಸಾಯೋದಲ್ಲ. Nonsence !
ಬೆಂಗಳೂರು ಟೆಕ್ಕಿ ಅತುಲ್ ಮ್ಯಾಟ್ರಿಮೊನಿ ಮದುವೆ, ಸಂಸಾರ, ಲೈಂಗಿಕತೆ ಗುಟ್ಟು ಬಿಚ್ಚಿಟ್ಟ ಸಂಬಂಧಿಕರು!
undefined
ಅವಳಿಲ್ಲದೆ ಹೋದರೆ , ಮಗನಿಲ್ಲದೆ ಹೋದರೆ ಕತ್ತೆ ಬಾಲ.. ಅನ್ನೋ ದಾರ್ಷ್ಟ್ಯ ಬೇಕು. ನಮ್ಮ ದೇಶದಲ್ಲಿ , ಜಗತ್ತಿನೆಲ್ಲೆಡೆ ಎಂದಿಗೂ ಇಂದಿಗೂ ಅತ್ಯಂತ ಪುರುಷ ಪೀಡನೆ ಎದುರಿಸುತ್ತಲೇ ಜೀವನ ಏಗುವುದು ಹೆಂಗಸರು ಮತ್ತು ಮತ್ತವಳ ಮಕ್ಕಳೇ. ಗಂಡಸಲ್ಲ. ನಿನ್ನ ಹಾಗೇ ಈ ಹೆಂಗಸರೂ ಯೋಚಿಸಿ, ಹೆದರಿದ್ದರೆ, ಜಗತ್ತಿನ ಅರ್ಧದಷ್ಟು ಹೆಂಗಸರು ಸೂಸೈಡ್ ಮಾಡಿಕೊಳ್ಳುತ್ತಿದ್ದರು! ಹಾಗಿದ್ಯಾ ಹೆಣ್ಮಕ್ಕಳ ಪರಿಸ್ಥಿತಿ, ನೀ ಕಣ್ ತೆರೆದು ನೋಡಿಲ್ಲ, ಮೂರ್ಖ!
ಹೊಡೆತ, ಬಡಿತ, ಜಗಳ, ಅವಿದ್ಯೆ, ಗಲೀಜು, ವ್ಯಸನ, ಸಂಪಾದನೆ ಇಲ್ಲ, ದೌರ್ಜನ್ಯ, ಅತ್ಯಾಚಾರ, ವ್ಯಾಭಿಚಾರಿಗಳೇ ಮೊದಲಾದ ಅಸಂಖ್ಯ ಗಂಡಸರ ಕ್ರೌರ್ಯಗಳಿಗೆ ತಲೆ, ಜೀವ ಕೊಟ್ಟವಳು, ಕೊಡುತ್ತಿರುವಳು ಎಂದಿಗೂ ಹೆಣ್ಣೇ. ಬಹಳ, ಬಹಳ ಕಾಲದಿಂದ. ಈ ಜಗತ್ತು ಸಂಸಾರದಲ್ಲಿ ಇರುವುದಕ್ಕೆ ಕಾರಣ ಹೆಣ್ಣಿನ ಸಹನೆ. ತಾಳುವಿಕೆ ಮತ್ತು ಸ್ವೀಕೃತ ಮನೋಭಾವ. ಜೀವನ ಹೀಗೆಯೇ, ನಾನೇ ಸೈರಿಸಿಕೊಂಡು ಹೋಗಬೇಕು. ಇಂದಲ್ಲ ನಾಳೆ ಸರಿಯಾಗುತ್ತೆ ಎಂಬ ಮನೋಧರ್ಮ ಹೆಂಗಸಿಗೆ ಇರುವಷ್ಟು ಗಂಡಸಿಗೆ ಇಲ್ಲ.
ಉದಾಹರಣೆಗೆ- ನಮ್ಮ ಮನೆಯ ಕೆಲಸದವಳು ರತ್ನಮ್ಮ. ಎರಡು ಮಕ್ಕಳು. ಕುಡುಕ ಲಸಾಡಿ ಗಂಡ. ಅವನ ದಾರಿಯೇ ಹಿಡಿದಿರುವ ಮಗ ಬೇರೆ. ಈ ಕತ್ತೆಗಳು ಮಾಡಿರುವ ಸಾಲವನ್ನೂ ತಾನೇ ಏಗಿ ತೀರಿಸುತ್ತಾ, ನಾಕಾರು ಮನೆಗೆಲಸ ಮಾಡ್ಕೊಂಡು, ಮಕ್ಕಳ ಸಾಕಿ, ಸಾಕುತ್ತಾ ಹೆಣ್ ಮಗಳಿಗೆ ಮದುವೆ ಮಾಡಿ, ಅವಳಿಗೆ ಎರಡು ಮಕ್ಕಳು, ಅವುಗಳನ್ನೂ ಹೇಗೋ ಊರಿನ (ಕೊಳ್ಳೆಗಾಲ) ಸಹಾಯ ಸಂಬಂಧದಿಂದ ಸಾವರಿಸಿಕೊಂಡು, ಸರ್ಕಾರ ಕೊಡುವ ಚಿಲ್ಲರೆ ಸಹಾಯಗಳ ಪಡೆಯಲು ಹೆಣಗುತ್ತಾ , ದಿನಾ ಅದೇ ನಗುಮೊಗದಿಂದ ಕೆಲಸಕ್ಕೆ ಬರುವಳು.
ಇದು ಹೋರುವಿಕೆ, ತಾಕತ್ ಅಂದರೆ ಅಂದ್ರೆ ಇದು.
ನನ್ನ ಅಜ್ಜಿ, ತಂದೆಯ ತಾಯಿ. ಆಕೆಗೆ ಮೂರು ಗಂಡು ಮಕ್ಕಳು, ಗಂಡನಿಂದ ಯಾವುದೇ ಸವಲತ್ತು, ಸಹಾನುಭೂತಿ ಇಲ್ಲ. ಕಡು ಕಷ್ಟದ ಕಾಲ (60 ವರ್ಷಗಳ ಹಿಂದೆ). ತನ್ನ ತವರೂ ದೈನೇಸಿಯೇ, ಆದರೂ ಹೇಗೋ ಸಂಡಿಗೆ, ಉಪ್ಪಿನಕಾಯಿ ಹಾಕುತ್ತ, ಕಾಫಿ ಪುಡಿ ಹುರಿದು, ಮಾರಿ ಮೂರು ಮಕ್ಕಳ ಬೆಳೆಸಿ, ಓದಿಸಿ, ಮನೆ ಕಟ್ಟಿ ಅದೂ ತಾತನ ಹೆಸರಿನಲ್ಲಿ. ಮೊಮ್ಮಕ್ಕಳ ಪಡೆದು (ನಾವು), ನನ್ನ ಅಪ್ಪ- ಅಮ್ಮನ ಕೊನೆಗಾಲದ ಸೇವೆಯಿಂದ ಸದ್ಗತಿ ಕಂಡಳು. ಇದು ಹೋರುವಿಕೆ, ಇದು ತಾಕತ್.
ಇಂಥ ಲಕ್ಷಾಂತರ 'ಹೆಣ್ಣು ಸಂಸಾರದ ಕಣ್ಣು' ಸಾಹಸ ಕಥನಗಳ ನನ್ನ ಪ್ರಾಯದ ಪ್ರತಿಯೊಬ್ಬ ಭಾರತೀಯನೂ ಕೊಡಬಲ್ಲ. ತನ್ನ ಇರವಿಗೆ , ಹೆಣ್ಣಿನ ತ್ಯಾಗ ಬಲಿದಾನ ಕಾರಣ. ಬರಿದೆ ಅಪ್ಪನ ಸುಖಾಶ್ರಯ ಪಡೆದ ಪುಣ್ಯವಂತರು ಲೋಕದಲ್ಲಿ ಕಡಿಮೆಯೇ.
ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನದ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?
ನಾನು ಹೇಳುವುದೆಲ್ಲ ಗಂಡಸರಿಗಿಂತ , ಹೆಂಗಸರಿಗೆ ಹೆಚ್ಚು ಅರ್ಥವಾಗುತ್ತೆ.
ಸೂಸೈಡ್ ಮಾಡಿಕೊಂಡ ಅಂತ ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಬಭ್ರುವಾಹನರಾಗಿದ್ದಾರೆ. ಕೋರ್ಟ್‌ಗೆ ತರಾಟೆ, ಅವನ ಪತ್ನಿಯ ವಿರುದ್ಧ ಘೋರ ಭಾಷಣಗಳು ಅಬ್ಬಬ್ಬಾ.. ಒಬ್ಬನೂ ಗಂಡಸನಿಗೂ ನಾ ಹೇಳಿದ ದಾಟಿಯಲ್ಲಿ ದನಿ ಇಲ್ಲ. ಇದು ಅವನು ಸತ್ತಿದ್ದಕ್ಕಿಂತ sad ಅನಿಸುತ್ತೆ. ಏನಾಗಿದೆ ಬದುಕಿರೋ ಗಂಡಸರಿಗೆ?
ಈಗಿನ ಹೆಂಗಸರು ಅಪ್ ಗ್ರೇಡ್, ಅಪ್ಡೇಟ್ ಆಗಿದ್ದಾರೆ, ಧನವಂತರಾಗಿದ್ದಾರೆ. ಸೊಕ್ಕೂ ಬಂದಿದೆ, ಡೊಂಟ್ ಕೇರ್ ಆ್ಯಟಿಟ್ಯೂಡ್ ಕೂಡಾ ಬಂದಿದೆ, ಸ್ತ್ರೀ ಪರ ಕಾನೂನುಗಳ ದುರುಪಯೋಗ ಮಾಡುತ್ತಾ ಇದ್ದಾರೆ, ಹೌದು. ನಿರಾಕರಿಸಿ ನಾ ಸಾಧಿಸಬೇಕಾದ್ದು ಏನಿಲ್ಲ. ನೀವು 'ಗಂಡಸು' ಅಲ್ವಾ? ಬಹದ್ದೂರ್ ಗಂಡಿನಂತೆ ಎದುರಿಸಿ. ಗಂಡಸುತನ ತೋರಿ, ಜೀವಿಸಿ, ನಿಮಗೆ ಅನ್ಯಾಯ ಮಾಡಿದ ಹೆಣ್ಣಿನ ಕಣ್ಣು ಕುಕ್ಕುವಂತೆ ಜೀವನ ಕಟ್ಟಿಕೊಳ್ಳಿ, ಉಳಿದ ಜೀವನವನ್ನು ಸಂತೋಷದಿಂದ ಕಳೆಯಲೇನು ಅಡ್ಡಿ?