ಭಾರತದ ಟಾಪ್ 5 ಶ್ರೀಮಂತ ನಗರಗಳು: ಬೆಂಗಳೂರಿನ ಸ್ಥಾನವೆಷ್ಟು ಗೊತ್ತಾ?

Published : Nov 11, 2024, 07:19 PM IST

ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮೀಣ ದೇಶವಾಗಿದ್ದ ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದಂತೆ ಜನರು ಗ್ರಾಮೀಣ ಪ್ರದೇಶ ಬಿಟ್ಟು ನಗರ ಕೇಂದ್ರಕ್ಕೆ ವಲಸೆ ಹೋಗುತ್ತಿದ್ದಾರೆ. ದೇಶದ ಕೆಲವು ನಗರಗಳು 1 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಆದರೆ, 2024ರ ಜಿಡಿಪಿ ಅನ್ವಯ ಯಾವ ನಗರಗಳು ಶ್ರೀಮಂತ ನಗರಗಳಾಗಿವೆ ಎಂಬ ಪಟ್ಟಿ ಇಲ್ಲಿದೆ ನೋಡಿ..

PREV
15
ಭಾರತದ ಟಾಪ್ 5 ಶ್ರೀಮಂತ ನಗರಗಳು: ಬೆಂಗಳೂರಿನ ಸ್ಥಾನವೆಷ್ಟು ಗೊತ್ತಾ?

5. ಚೆನ್ನೈ : ದೇಶದ ಪೂರ್ವ ಕರಾವಳಿಯ ದೊಡ್ಡ ನಗರಗಳಲ್ಲಿ ಒಂದಾಗಿರುವ ತಮಿಳುನಾಡು ರಾಜ್ಯದ ಚೆನ್ನೈ ನಗರವು 66 ಶತಕೋಟಿ ಡಾಲರ್ ಜಿಡಿಪಿಯನ್ನು ಹೊಂದಿದೆ. ಇದು ಭಾರತದ ಜಿಡಿಪಿಗೆ 1.12% ಕೊಡುಗೆ ನೀಡುತ್ತದೆ. ಈ ನಗರವು ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಚೆನ್ನೈ ತನ್ನ ಆಟೋಮೋಟಿವ್, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ಉದ್ಯಮಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸಾಂಸ್ಕೃತಿಕ ಪರಂಪರೆಯಲ್ಲಿ ಶ್ರೀಮಂತವಾಗಿರುವ ಚೆನ್ನೈ ತನ್ನ ಕಾಲಾತೀತ ದೇವಾಲಯಗಳನ್ನು ಹೊಂದಿದೆ.

25

4. ಬೆಂಗಳೂರು : ದಕ್ಷಿಣ ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ನಗರ 110 ಬಿಲಿಯನ್ ಡಾಲರ್ ಜಿಡಿಪಿ ಹೊಂದುವ ಮೂಲಕ ದೇಶದ 4ನೇ ಶ್ರೀಮಂತ ನಗರವಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 1.27 ಕೋಟಿ ಜನರು ವಾಸಿಸುತ್ತಿದ್ದಾರೆ. ಬೆಂಗಳೂರು ಐಟಿ ಕಂಪನಿಗಳಿಗೆ ಪ್ರಸಿದ್ಧವಾಗಿದ್ದು, ಇದನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ. ಇನ್ನು ಬೆಂಗಳೂರಿನಲ್ಲಿ ಕೆರೆ ಮತ್ತು ಉದ್ಯಾನಗಳು ಹೆಚ್ಚಾಗಿದ್ದು, ಪ್ರತಿ ರಸ್ತೆಗಳ ಇಕ್ಕೆಲಗಳು ಮರಗಳಿಂದ ಕೂಡಿದೆ. ಇಲ್ಲಿ ಉತ್ತಮ ಹವಾಗುಣವಿದ್ದು, ರಾತ್ರಿ ಜಗತ್ತಿನ ಮೋಜಿಗೆ ಹೆಸರುವಾಸಿಯಾಗಿದೆ.

35

3. ಕೋಲ್ಕತ್ತಾ: ಪೂರ್ವ ಕರಾವಳಿಯ ಪಶ್ಚಿಮ ಬಂಗಾಳದ ರಾಜ್ಯದ ರಾಜಧಾನಿ ಕೋಲ್ಕತ್ತಾ ಭಾರತದ 3ನೇ ಶ್ರೀಮಂತ ನಗರವಾಗಿದೆ. ಇದು 150 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ಇದನ್ನು ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಕೋಲ್ಕತ್ತಾದಲ್ಲಿ ಸುಮಾರು 1.4 ಕೋಟಿ ಜನರು ವಾಸಿಸುತ್ತಿದ್ದಾರೆ. ಈ ನಗರವೂ ಕೂಡ ಹಳೆಯ ಮತ್ತು ಹೊಸತು ಮಿಶ್ರಣವನ್ನು ಒಳಗೊಂಡ ಸ್ಥಳವಾಗಿದೆ. ಇಲ್ಲಿನ ಹೌರಾ ಸೇತುವೆ ಅತ್ಯಾಕರ್ಷಕ ತಾಣವಾಗಿವೆ.

45

2. ದೆಹಲಿ : ಭಾರತದ ರಾಜಧಾನಿ ದೆಹಲಿ  ಶ್ರೀಮಂತ ನಗರಗಳಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಈ ನಗರವು 293.6 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ದೆಹಲಿಯು ಅನೇಕ ಚಿಲ್ಲರೆ ವ್ಯಾಪಾರ, ಐಟಿ ಮತ್ತು ಪ್ರವಾಸೋದ್ಯಮ ಉದ್ಯೋಮಗಳು ಇಲ್ಲಿ ನೆಲೆಗೊಂಡಿವೆ. ದೆಹಲಿಯಲ್ಲಿ ಬರೋಬ್ಬರಿ 1.9 ಕೋಟಿ ಜನರು ವಾಸವಾಗಿದ್ದು, ಪ್ರಮುಖ ಕೈಗಾರಿಕೆಗಳು, ಸರ್ಕಾರದ ಆಡಳಿತ ಕೇಂದ್ರ, ರಾಷ್ಟ್ರ ರಾಜಕಾರಣದ ಕೇಂದ್ರ, ಪಾರ್ಲಿಮೆಂಟ್ ಮತ್ತು ಅಂತರರಾಷ್ಟ್ರೀಯ ವ್ಯಾಪಾರವನ್ನು ಒಳಗೊಂಡಿವೆ. ದೆಹಲಿಯು ಇತಿಹಾಸ ಮತ್ತು ಆಧುನಿಕತೆಯ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ.

55

1. ಮುಂಬೈ: ಭಾರತದ ಆರ್ಥಿಕ ರಾಜಧಾನಿ ಎಂದು ಕರೆಸಿಕೊಳ್ಳುವ ಮುಂಬೈ ನಗರ 2024ರಲ್ಲಿ ಭಾರತದ ಅಗ್ರ 10 ಶ್ರೀಮಂತ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದು ದೇಶದ ನೈತಿಕ ಆರ್ಥಿಕ ರಾಜಧಾನಿ ಆಗಿದ್ದು, ಬಾಂಬೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೆಲೆಯಾಗಿದೆ. ಮುಂಬೈಯು 310 ಶತಕೋಟಿ ಡಾಲರ್ GDP ಹೊಂದಿದೆ. ರಾಷ್ಟ್ರದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಇಲ್ಲಿ 2 ಕೋಟಿಗೂ ಅಧಕ ಜನಸಂಖ್ಯೆಯಿದ್ದು, ಉದ್ಯಮಗಳು ಹಣಕಾಸು, ಬಾಲಿವುಡ್, ಐಟಿ ಮತ್ತು ಉತ್ಪಾದನೆ ನೆಲೆಗೊಂಡಿವೆ.

ಮೂಲ ವರದಿ: https://tinyurl.com/2zaz22v2

click me!

Recommended Stories