ಅದೇ ರೀತಿ ಆಕಳ ಹಾಲಿನಲ್ಲಿ ಕೊಬ್ಬು 4.4 ಗ್ರಾಂ, ಕಾರ್ಬೋಹೈಡ್ರೇಟ್‌ಗಳು 4.9 ಗ್ರಾಂ, ಕ್ಯಾಲ್ಸಿಯಂ 118 ಮಿ.ಗ್ರಾಂ ಇರುತ್ತದೆ. ಎಮ್ಮೆ ಹಾಲಿನಲ್ಲಿ ಕೊಬ್ಬು 6.6 ಗ್ರಾಂ, ಕಾರ್ಬೋಹೈಡ್ರೇಟ್‌ಗಳು 8.3 ಗ್ರಾಂ, ಕ್ಯಾಲ್ಸಿಯಂ 121 ಮಿ.ಗ್ರಾಂ ಇರುತ್ತದೆ. ಈ ಎರಡೂ ಹಾಲುಗಳಲ್ಲಿ ಲ್ಯಾಕ್ಟೋಸ್ ಇರುತ್ತದೆ. ಇದು ಆಕಳ ಹಾಲಿನಲ್ಲಿ 4.28 ಗ್ರಾಂ ಇದ್ದರೆ, ಎಮ್ಮೆ ಹಾಲಿನಲ್ಲಿ 4.12 ಗ್ರಾಂ ಇರುತ್ತದೆ.
ಎಮ್ಮೆ ಹಾಲಿನಲ್ಲಿ ಪೊಟ್ಯಾಸಿಯಮ್, ಬೀಟಾ-ಲ್ಯಾಕ್ಟೋಗ್ಲೋಬ್ಯುಲಿನ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆಕಳ ಹಾಲಿಗಿಂತ ಎಮ್ಮೆ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ.
ಈ ಹಾಲು ಅಧಿಕ ರಕ್ತದೊತ್ತಡ, ಬೊಜ್ಜು, ಮೂತ್ರಪಿಂಡದ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು. ಆಕಳ ಹಾಲಿನಲ್ಲಿ ಪ್ರೋಟೀನ್‌ಗಳು, ವಿಟಮಿನ್‌ಗಳು, ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಇವು ಮೂಳೆಗಳನ್ನು ಗಟ್ಟಿಗೊಳಿಸಲು, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.