ಚನ್ನಪಟ್ಟಣ ಉಪ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

Published : Nov 14, 2024, 03:48 PM IST
ಚನ್ನಪಟ್ಟಣ ಉಪ ಚುನಾವಣೆ ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

ಸಾರಾಂಶ

ಚನ್ನಪಟ್ಟಣ ಉಪಚುನಾವಣಾ ಕರ್ತವ್ಯದಿಂದ ವಾಪಸ್ಸಾದ ಪೊಲೀಸ್ ಪೇದೆ ಗುರುಲಿಂಗಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕರ್ತವ್ಯದ ಒತ್ತಡ ಮತ್ತು ಆಯಾಸದಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ರಾಮನಗರ (ನ.14): ಕರ್ನಾಟಕದಲ್ಲಿ ತೀವ್ರ ರಾಜಕೀಯ ಪೈಪೋಟಿ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕರ್ತವ್ಯಕ್ಕೆ ತೆರಳಿ ಮನೆಗೆ ವಾಪಸ್ ಬಂದಿದ್ದ ಪೊಲೀಸ್ ಪೇದೆ ನಿನ್ನೆ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 

ಹೌದು, ರಾಮನಗರ ಸಿಟಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗುರುಲಿಂಗಪ್ಪ ಮೃತ ಪೊಲೀಸ್ ಪೇದೆ ಆಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಚನ್ನಪಟ್ಟಣ ಉಪ ಚುನಾವಣೆಯ ಕರ್ತವ್ಯದಲ್ಲಿ ನಿರತರಾಗಿದ್ದ ಗುರುಲಿಂಗಪ್ಪ ನಿನ್ನೆ ಚುನಾವಣೆ ಮುಕ್ತಾಯಗೊಳಿಸಿದ ನಂತರ ಮನೆಗೆ ವಾಪಸ್ ಬಂದಿದ್ದರು. ಇನ್ನು ಚುನಾವಣೆಯ ಕರ್ತವ್ಯದಲ್ಲಿ ಹೆಚ್ಚು ಆಯಾಸಗೊಂಡಿದ್ದ ಗುರುಲಿಂಗಪ್ಪ ರಾತ್ರಿ ಮನೆಯಲ್ಲಿ ಮಲಗಿದವರು ಬೆಳಗ್ಗೆ ಎದ್ದೇ ಇಲ್ಲ. ಇನ್ನು ಗಂಡ ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಅವರ ಹೆಂಡತಿ ತವರು ಮನೆಗೆ ಹೋಗಿದ್ದರು.

ಇದನ್ನೂ ಓದಿ: ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!

ಇನ್ನು ಗಂಡ ಚುನಾವಣಾ ಕರ್ತವ್ಯ ಮುಗಿಸಿ ರಾತ್ರಿ ಫೋನಿನಲ್ಲಿ ಮಾತನಾಡಿ ಬೆಳಗ್ಗೆ ಬರುವಂತೆ ಹೇಳಿದ್ದರಿಂದ ಬೆಳಗ್ಗೆ ಹೆಂಡತಿ ಊರಿನಿಂದ ಹೊರಡುವಾಗ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಡ್ಯೂಟಿ ಮಾಡಿ ಸುಸ್ತಾಗಿ ಮಲಗಿರಬಹುದು ಎಂದು ಊರಿನಿಂದ ಬಂದು ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ಗಂಡ ಮೃತಪಟ್ಟ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದಾರೆ. ಇದನ್ನು ನೋಡಿದ ಹೆಂಡತಿ ಜೋರಾಗಿ ಅಳುತ್ತಲೇ ನೆರಹೊರೆಯವರ ಸಹಾಯದಿಂದ ಗಂಡನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಅದಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಗಂಡನ ಸಾವಿನಿಂದ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಚನ್ನಪಟ್ಟಣ ಉಪ ಚುನಾವಣೆ ನಿಮಿತ್ತು ಕಳೆದ ಎರಡು ಮೂರು ದಿನಗಳಿಂದ ಊಟ, ನಿದ್ದೆ ಸರಿಯಾಗಿ ಮಾಡಲಾಗದೇ ಗುರುಲಿಂಗಪ್ಪ ಬಳಲಿದ್ದರು. ಇದರಿಂದ ಆಯಾಸಗೊಂಡು ಮನೆಯಲ್ಲಿ ಮಲಗಿದ್ದಾಗ, ರಾತ್ರಿ ವೇಳೆಯೇ ಹೃದಯಾಘಾತವಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತಂತೆ ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ