ಕರ್ನಾಟಕದಲ್ಲಿ ಕಾಂಗ್ರೆಸ್ ಬೇಜವಾಬ್ದಾರಿ ಆರ್ಥಿಕ ನೀತಿ ರೂಪಿಸಿದೆ. ರಾಜ್ಯವು ಸದ್ಯ ದಿವಾಳಿಯತ್ತ ಸಾಗಿದ್ದು, ಆರ್ಥಿಕ ಅವ್ಯವಸ್ಥೆಯ ಅಂಚಿನಲ್ಲಿದೆ. ಸರ್ಕಾರದ ಸಾರ್ವ ಜನಿಕ ನಿಧಿಯ ನಿರ್ವಹಣೆಯು ಹಣಕಾಸಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಮುಂಬೈ(ನ.14): ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳು ಕರ್ನಾಟಕವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಕರ್ನಾಟಕವೀಗ ಗಂಭೀರ ಆರ್ಥಿಕ ಅಸ್ಥಿರತೆ ಎದುರಿಸುತ್ತಿದೆ. ಕಾಂಗ್ರೆಸ್‌ಗೆ ಮತ ಹಾಕುವುದು ತಂಬಾಕು ಸೇವನೆಯಂತೆ ಅಪಾಯಕಾರಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, 'ಕರ್ನಾಟಕದಲ್ಲಿ ಕಾಂಗ್ರೆಸ್ ಬೇಜವಾಬ್ದಾರಿ ಆರ್ಥಿಕ ನೀತಿ ರೂಪಿಸಿದೆ.
undefined
ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಶಾಸಕರಾದರೆ ಯುವಕರಿಗೆ ಉದ್ಯೋಗ, ಸಂಸದ ತೇಜಸ್ವಿ ಸೂರ್ಯ
ರಾಜ್ಯವು ಸದ್ಯ ದಿವಾಳಿಯತ್ತ ಸಾಗಿದ್ದು, ಆರ್ಥಿಕ ಅವ್ಯವಸ್ಥೆಯ ಅಂಚಿನಲ್ಲಿದೆ. ಸರ್ಕಾರದ ಸಾರ್ವ ಜನಿಕ ನಿಧಿಯ ನಿರ್ವಹಣೆಯು ಹಣಕಾಸಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ' ಎಂದರು.