ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

ಅಪೂರ್ವ ಸಹೋದರರೆಂದು ಲೇವಡಿ ಮಾಡಿದ ದೇವೇಗೌಡ್ರು; ನಿಮ್ಮ ಮಕ್ಕಳಂತಲ್ಲ ಎಂದ ಡಿಕೆ ಬ್ರದರ್ಸ್!

Published : Nov 13, 2024, 08:31 PM IST

ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರ ಅಣ್ಣ-ತಮ್ಮಂದಿರ ಬಾಂಧವ್ಯದ ಬಗ್ಗೆ ಒಂದು ನೋಟ. ಡಿಕೆ ಸುರೇಶ್ ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಅಣ್ಣನ ಮೇಲಿನ ಅಪಾರ ಪ್ರೀತಿಯ ಹಿಂದಿನ ಗುಟ್ಟೇನು? ಡಿಕೆಶಿಗೆ ತಮ್ಮನ ಬೆಂಬಲ ಎಷ್ಟು ಮುಖ್ಯ?

ಕನಕಪುರದ ಅಣ್ಣ ತಮ್ಮನನ್ನು ಅಪೂರ್ವ ಸಹೋದರರೆಂದು ಲೇವಡಿ ಮಾಡಿದ್ರು ಮಾಜಿ ಪ್ರಧಾನಿ ದೇವೇಗೌಡ್ರು..! ಗೌಡರ ವ್ಯಂಗ್ಯಕ್ಕೆ ಡಿಕೆ ಸಹೋದರನ ಖಡಕ್ ಉತ್ತರ..! "ನಿಮ್ಮ ವಂಶದಂತಲ್ಲ ನಾವು, ನಿಮ್ಮ ಮಕ್ಕಳಂತಲ್ಲ ಈ ಅಣ್ತಮ್ಮ"-ಗೌಡರ ವಿರುದ್ಧ ಸಿಡಿದೆದ್ದ ಡಿಕೆ ಬ್ರದರು. ಅಣ್ಣನನ್ನು ಬಿಟ್ಟುಕೊಡದ ತಮ್ಮ, ತಮ್ಮನನ್ನೇ ಮಗ ಅನ್ನೋ ಅಣ್ಣ..! ಹೌದು ರೀ.. ನಾನು ನಮ್ಮಣ್ಣ.. ಅಪೂರ್ವ ಸಹೋದರರೇ, ಏನಿವಾಗ..? ಸಿಡಿದೆದ್ದ ಸಹೋದರ..!  ಅಷ್ಟಕ್ಕೂ ಒಡ ಹುಟ್ಟಿದವನೇ ಕನಕಪುರ ಬಂಡೆಯ ಅಸಲಿ ಶಕ್ತಿಯಾಗಿದ್ದು ಹೇಗೆ..? ಏನೀದು ಡಿಕೆ ಸಹೋದರರ ಜನ್ಮ ಜನ್ಮದ ಅನುಬಂಧ...?

ಡಿಕೆ ಸುರೇಶ್ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..? 

ರಾಜಕಾರಣ, ರಾಜಕೀಯ ಟೀಕೆ-ಟಿಪ್ಪಣಿಗಳು ಏನೇ ಇರ್ಲಿ... ಅಣ್ಣ-ತಮ್ಮಂದಿರು ಅಂತ ಬಂದ್ರೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವ್ರ ಬಾಂಧವ್ಯ ನಿಜಕ್ಕೂ ಅದ್ಭುತ.. ದೇಹ ಮಣ್ಣಿಗೆ, ಉಸಿರು ನಿನಗೆ ಅನ್ನೋ ತಮ್ಮ ಡಿಕೆ ಸುರೇಶ್.. ಹಾಗಾದ್ರೆ ಅವ್ರಿಗೆ ರಾಜಕೀಯ ಮಹತ್ವಾಕಾಂಕ್ಷೆಯೇ ಇಲ್ವಾ..? ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಅಣ್ಣನೇ ಸರ್ವಸ್ವ ಅಂತ ಹೇಳ್ತಿರೋದು ಯಾಕೆ..? ಅಣ್ಣ ಅಂದ್ರೆ ಈ ದೇವರು ಕೊಟ್ಟ ತಮ್ಮನಿಗೆ ಇಷ್ಟೊಂದು ಪ್ರೀತಿಯ ಅಸಲಿ ಗುಟ್ಟೇನು..?

ಡಿಕೆ ಸುರೇಶ್ ನನ್ನ ತಮ್ಮನಲ್ಲ, ಮಗ.. ಇದು ಸಹೋದರನ ಬಗ್ಗೆ ಡಿಕೆ ಶಿವಕುಮಾರ್ ಆಡಿದ್ದ ಮಾತು.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ತಮ್ಮನ ಅಸಲಿ ಬಲ ಏನು..?  ಅಣ್ಣ-ತಮ್ಮಂದಿರು ದಾಯಾದಿಗಳಾಗೋ ಈ ಕಾಲದಲ್ಲಿ ಒಡ ಹುಟ್ಟಿದವರು ಹೇಗಿರ್ಬೇಕು ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಡಿಕೆ ಬ್ರದರ್ಸ್. ಅಣ್ಣನಿಗೆ ತಮ್ಮ, ತಮ್ಮನಿಗೆ ಅಣ್ಣ.. ಅಷ್ಟಕ್ಕೂ ಅಪೂರ್ವ ಸಹೋದರರ ಪೈಕಿ ಡಿಕೆಶಿಗೆ ದೇವರು ಕೊಟ್ಟ ಈ ತಮ್ಮನ ಅಸಲಿ ಬಲ ಇಲ್ಲಿದೆ ನೋಡಿ.

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more