BUSINESS
ಈಶಾ ಅಂಬಾನಿ ಅವರ ಪತಿಯ ಮನೆಯಾಗಿರುವ ಪಿರಮಲ್ ಕುಟುಂಬದ ರಾಜಸ್ಥಾನದಲ್ಲಿರುವ ಪಾರಂಪರಿಕ ಮನೆಈಗ ಪಾರಂಪರಿಕ ಹೋಟೆಲ್ ಆಗಿ ಬದಲಾಗಿದೆ .
ಇತಿಹಾಸ ಮತ್ತು ರಾಜಮನೆತನದ ವೈಭವ ಒಂದೇ ಸ್ಥಳದಲ್ಲಿ ನೋಡಬೇಕಾದರೆ ಈ ಸ್ಥಳಕ್ಕೆ ಭೇಟಿ ನೀಡಬೇಕು ಈಶಾ ಅಂಬಾನಿ ಅವರ ಅತ್ತೆಯ ಮನೆಯಾದ ಪಿರಮಲ್ ಕುಟುಂಬದ ಪಾರಂಪರಿಕ ಮನೆಗೆ ಭೇಟಿ ನೀಡಿದಾಗ ನಿಮಗೆ ಈ ಅನುಭವ ಸಿಗುತ್ತದೆ.
ರಾಜಸ್ಥಾನದ ಜುಂಜುನು ಜಿಲ್ಲೆಯ ಬಾಗರ್ ಎಂಬ ಪುಟ್ಟ ಪಟ್ಟಣದಲ್ಲಿರುವ ಈ ಮನೆ ಕೇವಲ ಅರಮನೆಯಲ್ಲ, ಇದು 20 ನೇ ಶತಮಾನದ ಆರಂಭದ ಭಾರತದ ಕೈಗಾರಿಕಾ ಅಭಿವೃದ್ಧಿಯ ಸಂಕೇತ.
ಪಿರಮಲ್ ಕುಟುಂಬದ ಸೇಠ್ ಪಿರಮಲ್ ಚತುರ್ಭುಜ್ ಮಖಾರಿಯಾ ಅವರು ಇದನ್ನು ನಿರ್ಮಿಸಿದ್ದು, ಪಿರಮಲ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಕಾಲಕ್ಕೆ ಸೇರಿದೆ.
ಸೇಠ್ ಪಿರಮಲ್, ಆಗ 50 ರೂ. ಜೇಬಲ್ಲಿಟ್ಟುಕೊಂಡು ಬಾಗರ್ನಿಂದ ಮುಂಬೈಗೆ ಬಂದರು ಮತ್ತು ಅವರು ಜವಳಿ ವ್ಯವಹಾರವನ್ನು ಪ್ರಾರಂಭಿಸಿದರು, ಅದು ಇಡೀ ಪಿರಮಲ್ ಸಾಮ್ರಾಜ್ಯವನ್ನು ನಿರ್ಮಿಸಿತು.
ಇಂದು ಈ ಪಿರಮಲ್ ಮನೆ ಪಾರಂಪರಿಕ ಹೋಟೆಲ್ ಆಗಿ ಬದಲಾಗಿದೆ, ಇದರ ಹಿಂದೆ ಭಾರತದ ಭವ್ಯ ಪರಂಪರೆ ರಕ್ಷಿಸುವ ಮತ್ತು ಅವುಗಳನ್ನು ಸುಂದರ ಹೋಟೆಲ್ಗಳಾಗಿ ಪರಿವರ್ತಿಸುವಲ್ಲಿ ಹೆಸರುವಾಸಿಯಾದ ನೀಮ್ರಾನಾ ಹೋಟೆಲ್ಗಳ ಕೈವಾಡವಿದೆ.
ಪಿರಮಲ್ ಮನೆಯ ಗೋಡೆಗಳ ಮೇಲೆ ಕೈಯಿಂದ ಮಾಡಿದ ವರ್ಣರಂಜಿತ ಚಿತ್ರಕಲೆಗಳಿವೆ, ಅಲ್ಲಿ ಅವು ಭಾರತ ಆಧುನೀಕರಣದತ್ತ ಸಾಗುತ್ತಿದ್ದ ಆ ಕಾಲದ ಕಥೆಯನ್ನು ಹೇಳುತ್ತದೆ.
ಇಂತಹ ಸ್ಥಳದಲ್ಲಿ ಉಳಿದುಕೊಳ್ಳುವುದು ನಿಮ್ಮ ಬಜೆಟ್ಗೆ ದುಬಾರಿ ಎಂದು ನೀವು ಭಾವಿಸಿದರೆ ತಪ್ಪು, ಪಿರಮಲ್ ಹವೇಲಿಯಲ್ಲಿ ನೀವು ಕೇವಲ 5,625 ರೂಗೆ ಹೆರಿಟೇಜ್ ಕಂಫರ್ಟ್ ಟ್ವಿನ್ ರೂಮ್ ಅನ್ನು ಬುಕ್ ಮಾಡಬಹುದು.
ಯಾವುದೇ ದೊಡ್ಡ ವ್ಯಕ್ತಿ ಅಥವಾ ವ್ಯಾಪಾರ ಉದ್ಯಮಿ ಎಂಬ ಗುರುತುಗಳಿಲ್ಲದವರಿಗೂ ಈ ಸ್ಥಳದಲ್ಲಿ ಉಳಿದುಕೊಳ್ಳುವ ಅವಕಾಶ ಇದ್ದು ಇದು ನಿಜಕ್ಕೂ ಆಕರ್ಷಕವಾಗಿದೆ.
ಈಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವರ ರಾಜಸ್ಥಾನದ ಈ ಪಾರಂಪರಿಕ ಮನೆ ವಿಭಿನ್ನ ರೀತಿಯ ಸಮೃದ್ಧಿಯನ್ನು ತರುತ್ತದೆ, ಇದು ಇತಿಹಾಸ, ಕಲೆ ಮತ್ತು ಈ ಕುಟುಂಬದ ಆಳವಾದ ಪರಂಪರೆಯನ್ನು ತೋರಿಸುತ್ತಿದೆ.