ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮಗಳ ಪ್ರಕಾರ, ಸಂಸ್ಥೆಗಳು ಕೋರ್ಸ್‌ಗಳು, ಶುಲ್ಕಗಳು, ಉದ್ಯೋಗಾವಕಾಶಗಳು ಮತ್ತು ಆದಾಯದ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡುವಂತಿಲ್ಲ.
ನವದೆಹಲಿ: ದಾರಿತಪ್ಪಿಸುವ ಜಾಹೀರಾತು ಕೋಚಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದ ಹಾಗೂ ಶೇ.100ರಷ್ಟು ಖಚಿತ ಉದ್ಯೋಗಗಳಂತಹ ಹುಸಿ ಭರವಸೆ ನೀಡುವ ತರಬೇತಿ ಸಂಸ್ಥೆ ಗಳನ್ನು ನಿಯಂತ್ರಿಸಲು ಕೇಂದ್ರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರನ್ವಯ ಸಂಸ್ಥೆಗಳು ತಮ್ಮ ಬಗ್ಗೆ ಸುಳ್ಳು ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಹೊಸ ಮಾರ್ಗಸೂಚಿಯಲ್ಲೇನಿದೆ?
ಕೋಚಿಂಗ್ ಸೆಂಟರ್‌ಗಳಿಗೆ ಸಂಬಂಧಿಸಿದ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ಇವುಗಳು ಒದಗಿಸುವ ಕೋರ್ಸ್, ಅವಧಿ, ಬೋಧಕರಕುರಿತಮಾಹಿತಿ, ಶುಲ್ಕ ಮರುಪಾವತಿ ನೀತಿ, ಪರೀಕ್ಷೆಗಳು, ಖಚಿತ ಉದ್ಯೋಗಾವಕಾಶ ಹಾಗೂ ಆದಾಯ ಏರಿಕೆ ಕುರಿತು ಯಾವುದೇ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ.
ಇದನ್ನೂ ಓದಿ: ಅನುಕಂಪದ ನೇಮಕ ಹಕ್ಕು ಅಲ್ಲ: ಸುಪ್ರೀಂನಿಂದ ಮಹತ್ವದ ತೀರ್ಪು
ಕೋಚಿಂಗ್ ಸೆಂಟರ್ ಎಂದರೇನು?: ಮಾರ್ಗ ಹೊಸ ಮಾರ್ಗಸೂಚಿ ಪ್ರಕಾರ 'ಕೋಚಿಂಗ್' ಎಂದರೆ ಅದು ಶೈಕ್ಷಣಿಕ ಬೆಂಬಲ, ಶಿಕ್ಷಣ, ಮಾರ್ಗದರ್ಶನ, ಅಧ್ಯಯನ ಕಾರ್ಯಕ್ರಮ ಹಾಗೂ ಟ್ಯೂಷನ್ ಒಳಗೊಂಡಿರಬೇಕು. ಆದರೆ ಆಪ್ತ ಸಮಾಲೋಚನೆ, ಕ್ರೀಡೆ, ಕ್ರಿಯಾತ್ಮಕ ಚಟುವಟಿಕೆಗಳು ಇದಕ್ಕೆ ಹೊರತಾಗಿರಬೇಕು. ಈ ಸಂಸ್ಥೆಗಳು ಒಪ್ಪಿಗೆಯಿಲ್ಲದೆ ಯಶಸ್ವಿ ಅಭ್ಯರ್ಥಿಗಳ ಪೋಟೋ, ಶೈಕ್ಷಣಿಕ ಸಾಧನೆಗಳನ್ನು ಪ್ರದರ್ಶಿಸುವಂತಿಲ್ಲ.
ಇದನ್ನೂ ಓದಿ: ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂ ಬ್ರೇಕ್: ದೇಶವ್ಯಾಪಿ ಪ್ರಕಟವಾದ ಹೊಸ ಮಾರ್ಗಸೂಚಿಯಲ್ಲೇನಿದೆ?