ಕಣ್ಣೀರಿನ ಜೊತೆಯಲ್ಲೇ ಮತದಾರರಿಂದ ಮತದಾನ; ಭಾವನಾತ್ಮಕ ಸನ್ನಿವೇಶಗಳಿಗೆ ವೇದಿಕೆಯಾದ ಮತಕ್ಷೇತ್ರ

By Kannadaprabha News  |  First Published Nov 14, 2024, 9:58 AM IST

ಕೇರಳದ ವಯನಾಡಿನಲ್ಲಿ ಭೂಕುಸಿತದಿಂದಾಗಿ ಸಂತ್ರಸ್ತರಿಗಾಗಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಭಾವನಾತ್ಮಕ ಸನ್ನಿವೇಶಗಳು ಕಂಡುಬಂದವು. ಮತ ಚಲಾಯಿಸಲು ಬಂದ ಸಂತ್ರಸ್ತರು ಕಳೆದುಹೋದವರನ್ನು ನೆನೆದು ಕಣ್ಣೀರಿಟ್ಟರು ಮತ್ತು ಪರಸ್ಪರ ಅಪ್ಪಿಕೊಂಡು ಸಾಂತ್ವನ ಹೇಳಿಕೊಂಡರು.


ವಯನಾಡ್‌: ಇತ್ತೀಚೆಗೆ ಭೂಕುಸಿತಕ್ಕೆ ತುತ್ತಾದ ಕೇರಳದ ವಯನಾಡು ಸಂತ್ರಸ್ತರಿಗೆಂದು ಸ್ಥಾಪಿಸಲಾಗಿದ್ದ ಮತಗಟ್ಟೆ ಬುಧವಾರ ಸಂತ್ರಸ್ತರ ಕಣ್ಣೀರು, ಅಪ್ಪುಗೆ ಮತ್ತು ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಸಂತ್ರಸ್ತರಿಗಾಗಿಯೇ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಲು ನೆರೆದ ಭೂಕುಸಿತದ ಸಂತ್ರಸ್ತರು, ಮತದಾನದ ವೇಳೆ ತಮ್ಮ ಜೊತೆಗಿರುತ್ತಿದ್ದವರನ್ನು ನೆನೆದು ಕಣ್ಣೀರಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮಡೊನೆ ಮತ ಚಲಾಯಿಸಿದ ಪ್ರೀತಿ ಪಾತ್ರರನ್ನು ಸ್ಮರಿಸಿಕೊಂಡರು. ಮತದಾನ ಕ್ಷೇತ್ರ ಅಕ್ಷರಶಃ ಭಾವನೆಗಳ ದುಃಖದ ತಾಣವಾಗಿ ಮಾರ್ಪಟ್ಟಿತು.

Latest Videos

ಮತದಾನಕ್ಕೆ ಒಂದೆಡೆ ಸೇರಿದ್ದ ಸಂತ್ರಸ್ತರು ಪರಸ್ಪರ ಅಪ್ಪಿಕೊಂಡರು. ತಾವು ಒಟ್ಟಿಗೆ ಸಂತೋಷವಾಗಿದ್ದ ದಿನಗಳನ್ನು ಮೆಲುಕು ಹಾಕಿದರು. ಭೂಕುಸಿತ ಪ್ರದೇಶಗಳಿಂದ ಮತದಾನ ಕ್ಷೇತ್ರಕ್ಕೆ ನಿಯೋಜಿಸಿದ್ದ ಬಸ್‌ನಲ್ಲಿ ಭೇಟಿಯಾದ ಸ್ನೇಹಿತರಿಬ್ಬರು ಅಪ್ಪಿಕೊಂಡರು. ‘ದುಃಖಿಸಬೇಡ. ಎಲ್ಲವೂ ಸರಿಯಾಗುತ್ತದೆ’ಎಂದು ಸಮಾಧಾನಪಡಿಸಿಕೊಂಡರು.

ಇದನ್ನೂ ಓದಿ:ವಯನಾಡು ರೀತಿ ದುರಂತ ತಪ್ಪಿಸಲು ಕ್ರಮ; ಬೀದಿಗೆ ಬಿದ್ದು ಬದುಕು ಅಂತ್ಯಗೊಳಿಸಿದ ಹಿರಿ ಜೀವ!

‘ಭೂಕುಸಿತದಲ್ಲಿ ಬದುಕುಳಿದವರನ್ನು ಜಿಲ್ಲೆಯ ಇತರ ಸ್ಥಳಗಳಿಗೆ ಸ್ಥಳಾಂತರಿಸಿದ್ದರು. ಈಗ ಅವರನ್ನು ಭೇಟಿಯಾದೆ. ನಾವು ಮೊದಲು, ನೀನು ಈಗ ಎಲ್ಲಿ ಇದ್ದೀಯಾ? ಈಗ ಹೇಗೆ ಇದ್ದೀಯಾ? ಎಂದು ಕೇಳಿಕೊಂಡೆವು’ ಎಂದು ಮಹಿಳೆಯೊಬ್ಬರು ಹೇಳಿದರು.

ವಯನಾಡಿನ ಮುಂಡಕ್ಕೈ, ಚೂರಲ್ಮಲಾ, ಮತ್ತು ಪುಂಚಿರಿಮಟ್ಟಂ ಪ್ರದೇಶಗಳಲ್ಲಿ ಜುಲೈ 30 ರಂದು ಸಂಭವಿಸಿದ ಭೂಕುಸಿತದಲ್ಲಿ ಸುಮಾರು 200 ಮಂದಿ ಅಸುನೀಗಿದ್ದರು,

ಇದನ್ನೂ ಓದಿ: ಅಯ್ಯೋ ವಿಧಿಯೇ: ಭೂಕುಸಿತದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡಿದ್ದ ಶ್ರುತಿಯ ಭಾವಿಪತಿಯೂ ಅಪಘಾತದಲ್ಲಿ ಸಾವು

click me!