ಸಿಜ್ಲಿಂಗ್ ಹಾಟ್ ಆವತಾರದಲ್ಲಿ ಮೌನಿ ರಾಯ್‌ ಫೋಟೋ ವೈರಲ್‌!

First Published Sep 17, 2023, 6:15 PM IST

ಮೌನಿ ರಾಯ್‌ (Mouni Roy) ಅವರು ಚಿತ್ರರಂಗದ  ಬೋಲ್ಡ್‌ ನಟಿಯರಲ್ಲಿ ಒಬ್ಬರು. ಆಗಾಗ ತಮ್ಮ ಬೋಲ್ಡ್‌ ಹಾಗೂ ಹಾಟ್‌ ಆವತಾರಗಳಿಂದ ಇಂಟರ್‌ನೆಟ್‌ಗೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ. ಅದೇ ರೀತಿ ಮೌನಿ ಅವರು ಕೆಲವು ಫೋಟೋಗಳು ಹಂಚಿಕೊಂಡಿದ್ದು ಸಖತ್‌ ವೈರಲ್‌ ಆಗಿವೆ ಮೌನಿ ಅವರ ಲೇಟೆಸ್ಟ್‌ ಫೋಟೋಗಳು ಇಲ್ಲಿವೆ.

ಶುಕ್ರವಾರ, ಸೆಪ್ಟೆಂಬರ್ 15 ರಂದು ಮೌನಿ ರಾಯ್ ಅವರು ಹೊಳೆಯುವ ಕಪ್ಪು ಉಡುಪಿನಲ್ಲಿ ಬೋಲ್ಡ್‌  ಮತ್ತು ಮಾದಕ ಫೋಟೋಗಳನ್ನು ಹಂಚಿಕೊಂಡು ಸೋಸಿಯಲ್‌ ಮೀಡಿಯಾದಲ್ಲಿ  ಬೆಂಕಿ ಹಚ್ಚಿದರು. 

ಮೌನಿ ರಾಯ್ ಈ ಫೋಟೊಗಳಲ್ಲಿ ಸಖತ್‌ ಮಾದಕ ಮತ್ತು  ಸಿಜ್ಲಿಂಗ್ ಹಾಟ್  ಆಗಿ ಕಾಣುತ್ತಿದ್ದಾರೆ. ಆಕೆಯ ಫೋಟೋಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. 

ಮೌನಿಯ ಫೋಟೋಗಳು ಅವರ ಫ್ಯಾನ್ಸ್‌ನ ಮೆಚ್ಚುಗೆ ಮತ್ತು ಕಾಮೆಂಟ್‌ಗಳಿಂದ ತುಂಬಿ ಹೋಗಿದೆ. ಅವರ ಅಭಿಮಾನಿಯೊಬ್ಬರು 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ಮೌನಿ ರಾಯ್ ಸೂಪರ್ ಸ್ಟಾರ್' ಎಂದು ಬರೆದಿದ್ದಾರೆ.

ಮೌನಿ ರಾಯ್ ಅವರ ಬೋಲ್ಡ್ ಫೋಟೋಗಳಿಗೆ  ನಟಿ ದಿಶಾ ಪಟಾನಿ  ಕೂಡ ಪ್ರತಿಕ್ರಿಯಿಸಿದ್ದಾರೆ. ಮೌನಿಯನ್ನು ಸೂಪರ್‌ ಹಾಟ್‌ ಎಂದು ದಿಶಾ ಕರೆದಿದ್ದಾರೆ.

ಮೌನಿ ರಾಯ್ ಅವರ BFF ದಿಶಾ ಪಟಾನಿ ಅವರು ಈ ವರ್ಷದ ಆರಂಭದಲ್ಲಿ ಅಮೆರಿಕಾದಲ್ಲಿ ಅಕ್ಷಯ್ ಕುಮಾರ್ ನೇತೃತ್ವದ ದಿ ಎಂಟರ್‌ಟೈನರ್ಸ್ ಪ್ರವಾಸಕ್ಕೆ ಹೋಗಿದ್ದರು,

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದಬ್ರಹ್ಮಾಸ್ತ್ರದಲ್ಲಿ  ಜುನೂನ್ ಪಾತ್ರವನ್ನು ನಿರ್ವಹಿಸಿ  ಮೌನಿ ರಾಯ್‌  ಪ್ರೇಕ್ಷಕರನ್ನು ಮೆಚ್ಚಿಸಿದ್ದರು. 

ಈ ವರ್ಷದ ಆರಂಭದಲ್ಲಿ, ಅವರು ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಗಾಗಿ IIFA ಪ್ರಶಸ್ತಿಯನ್ನು ಗೆದ್ದರು.

1948 ರ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಘಟನೆಯನ್ನು ಆಧರಿಸಿದ 2018 ರ ಚಲನಚಿತ್ರ ಗೋಲ್ಡ್‌ನಲ್ಲಿ  ಪ್ರಮುಖ ನಟಿಯಾಗಿ ನಟಿಸಿದ ಮೌನಿ ರಾಯ್ ಅವರ ಮೊದಲ ಪಾತ್ರವಾಗಿತ್ತು.

Photo Courtesy: Instagram

ಮೌನಿ ಅವರು ಅತ್ಯಂತ ಜನಪ್ರಿಯ ಧಾರವಾಹಿ  ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಕಳೆದ ವರ್ಷ ಮಕ್ಕಳ ನೃತ್ಯ ರಿಯಾಲಿಟಿ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿ'ಲ್ ಮಾಸ್ಟರ್ಸ್ ಸೀಸನ್ 5 ರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

click me!