ಡಾ ರಾಜ್‌ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಡಾ ರಾಜ್ ಅವರೊಬ್ಬರೇ ಸಾಮಾನ್ಯ ಜನತೆಯ ಜೊತೆಗೆ ಇದ್ದರೇ ಅಥವಾ ನಟ ವಿಷ್ಣುವರ್ಧನ್ ಸೇರಿದಂತೆ, ಅಂದಿನ ಕಾಲದ..
ಡಾ ರಾಜ್‌ಕುಮಾರ್ (Dr Rajkumar) ನೇತೃತ್ವದಲ್ಲಿ 1980ರಲ್ಲಿ ಗೋಕಾಕ್ ಚಳುವಳಿ ನಡೆಯಿತು ಎಂಬುದು ಗೊತ್ತೇ ಇದೆ. ಕನ್ನಡ ಭಾಷೆ, ಕರ್ನಾಟಕದಲ್ಲಿ ಪಠ್ಯಪುಸ್ತಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಸೇರಿದಂತೆ 'ತ್ರಿಭಾಷಾ ಸೂತ್ರ' ಅಳವಡಿಕೆ ಮುಂತಾದ ಹತ್ತುಹಲವು ಸಂಗತಿಗಳ ಬಗ್ಗೆ ಈ ಚಳುವಳಿಗಳು ನಡೆದವು. ವರನಟ ಡಾ ರಾಜ್‌ಕುಮಾರ್ ಅವರು ಆ ಚಳುವಳಿಗೆ ಧುಮುಕಿದ್ದು ಹೇಗೆ? ಗೋಕಾಕ ಚಳುವಳಿಯ ನೇತೃತ್ವ ವಹಿಸಲು ಡಾ ರಾಜ್‌ಕುಮಾರ್ ಅವರಿಗೆ ಪ್ರೇರಣೆ ನೀಡಿದ್ದು ಯಾರು? ಈ ಎಲ್ಲ ವಿಷಯಗಳ ಬಗ್ಗೆ ಈಗಾಗಲೇ ಬೆಳಕು ಚೆಲ್ಲಲಾಗಿದೆ.
ಡಾ ರಾಜ್‌ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಡಾ ರಾಜ್ ಅವರೊಬ್ಬರೇ ಸಾಮಾನ್ಯ ಜನತೆಯ ಜೊತೆಗೆ ಇದ್ದರೇ ಅಥವಾ ನಟ ವಿಷ್ಣುವರ್ಧನ್ (Vishnuvardhan) ಸೇರಿದಂತೆ, ಅಂದಿನ ಕಾಲದ ಎಲ್ಲ ನಟನಟಿಯರೂ ಸಹ ಪಾಲ್ಗೊಂಡಿದ್ದರೇ ಎಂಬುದು ಇತ್ತೀಚೆಗೆ ಆಗಾಗ ಚರ್ಚೆಗೆ ಆಸ್ಪದ ನೀಡುತ್ತಿರುವ ಸಂಗತಿ. ಇದಕ್ಕೆ ಉತ್ತರ ಕೂಡ ಸ್ಪಷ್ಟವಾಗಿದೆ, ಆದರೆ ಅದು ಕೆಲವರಿಗೆ ತಲುಪಿಲ್ಲ ಅಷ್ಟೇ. ಡಾ ರಾಜ್ ನೇತೃತ್ವದ ಗೋಕಾಕ್ ಚಳುವಳಿಯಲ್ಲಿ ನಟರಾದ ವಿಷ್ಣುವರ್ಧನ್ ಹಾಗೂ ಶ್ರೀನಾಥ್ (Srinath) ಸಹ ಪಾಲ್ಗೊಂಡಿದ್ದರು.
ಗೋಕಾಕ್ ಚಳುವಳಿಗೆ ಡಾ ರಾಜ್‌ಕುಮಾರ್ ಧುಮುಕುವಂತೆ ಮಾಡಿದ್ದು ಯಾರೆಂಬ ಗುಟ್ಟು ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!
ಹಾಗಿದ್ದರೆ, ಯಾಕೆ ಕೆಲವರು ವಿಷ್ಣುವರ್ಧನ್ ಅಥವಾ ಶ್ರೀನಾಥ್ ಅವರುಗಳ ಹೆಸರನ್ನು ಗೋಕಾಕ್ ಚಳುವಳಿಯ ವಿಷಯದಲ್ಲಿ ಹೇಳುವುದಿಲ್ಲ ಎಂದರೆ ಅದಕ್ಕೊಂದು ಬಲವಾದ ಕಾರಣವಿದೆ. ಅದು ತುಂಬಾ ಜನರಿಗೆ ಗೊತ್ತಿಲ್ಲ. ಗೋಕಾಕ್ ಚಳುವಳಿಯಲ್ಲಿ ಒಂದೆರಡು ದಿನ ನಟರಾದ ವಿಷ್ಣುವರ್ಧನ್ ಹಾಗೂ ಶ್ರೀನಾಥ್ ಸಹ ಪಾಲ್ಗೊಂಡಿದ್ದರು. ಆದರೆ, ವಿಷ್ಣುವರ್ಧನ್ ಅವರಿಗೆ ಅದೇ ವೇಳೆ ಕಣ್ಣಿನ ಬೇನೆ ಶುರುವಾಗಿತ್ತು. ಸಾಂಕ್ರಾಮಿಕ ಕಣ್ಣುಬೇನೆ ರೋಗವಾದ್ದರಿಂದ ಅವರು ಬಳಿಕ ಆ ಚಳುವಳಿಗೆ ಹೋಗಲಿಲ್ಲ.
ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ 'ತ್ರಿನಯನಿ' ನಟ ಚಂದು ಆತ್ಮಹತ್ಯೆ!
ಗೋಕಾಕ್ ಚಳುವಳಿ ಮುಗಿದ ಬಳಿಕ, 'ಗೋಕಾಕ್ ವಿಜಯ್ ಜಾಥಾ' ಎಂದು ಸಂಭ್ರಮಾಚರಣೆ ಮಾಡಲಾಯಿತು. ಅಂದು ಚಳುವಳಿಯಲ್ಲಿ ಪಾಲ್ಗೊಂಡವರಿಗೆ ಕೃತಜ್ಞತೆ ಅರ್ಪಿಸಲಾಯಿತು. ಅನಾರೋಗ್ಯದ ಕಾರಣ, ನಟರಾದ ವಿಷ್ಣುವರ್ಧನ್ ಹಾಗೂ ಶ್ರೀನಾಥ್ ಅದರಲ್ಲಿ ಪಾಲ್ಗೊಂಡಿರಲಿಲ್ಲ. ಈ ಕಾರಣಕ್ಕೆ, ಗೋಕಾಕ್ ವಿಜಯ್ ಜಾಥಾ ವಿಷಯ ಬಂದಾಗ ಡಾ ರಾಜ್‌ಕುಮಾರ್ ಹೆಸರಿನ ಜೊತೆಗೆ ಸಹಜವಾಗಿಯೇ ನಟರಾದ ವಿಷ್ಣುವರ್ಧನ್ ಹಾಗೂ ಶ್ರೀನಾಥ್ ಹೆಸರುಗಳು ಬರುವುದಿಲ್ಲ.
ಅದೊಂದೇ ಸಿನಿಮಾ ಸೋಲಿನಿಂದ ಗೋವಿಂದ ನಟನೆ ಬಿಟ್ಟು ರಾಜಕೀಯ ಸೇರಿಕೊಂಡ್ರು!
ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಇಂದಿಗೂ ಕೂಡ ಕೆಲವರು ಡಾ ರಾಜ್‌ಕುಮಾರ್ ಜೊತೆ ಗೋಕಾಕ್ ಚಳುವಳಿಯಲ್ಲಿ ನಟರಾದ ವಿಷ್ಣುವರ್ಧನ್ ಹಾಗೂ ಶ್ರೀನಾಥ್ ಅವರುಗಳು ಇರಲಿಲ್ಲ ಎಂದು ಹೇಳುತ್ತಾರೆ. ಆದರೆ ಅದು ಸರಿಯಲ್ಲ. ಗೋಕಾಕ್ ಚಳುವಳಿಯಲ್ಲಿ ಅವರುಗಳು ಕೂಡ ಭಾಗಿಯಾಗಿದ್ದರು. ಆದರೆ, ವಿಷ್ಣು ಅವರು ಕಣ್ಣಿನ ಬೇನೆ ಕಾರಣಕ್ಕೆ ಹಾಗೂ ಶ್ರೀನಾಥ್ ಅವರೂ ಸಹ ಅನಾರೋಗ್ಯದ ಕಾರಣಕ್ಕೆ ಎರಡು ದಿನಗಳ ಬಳಿಕ ಬರಲು ಸಾಧ್ಯವಾಗಲಿಲ್ಲ.