ರೋಮ್ಯಾನ್ಸ್, ಲಿಪ್‌ಲಾಕ್ ದೃಶ್ಯದಲ್ಲಿ ನಟರಿಗೆ ಈ ಸಮಸ್ಯೆ ಕಾಡುತ್ತೆ, ತಮನ್ನಾ ಬೋಲ್ಡ್ ಮಾತು !

Published : May 17, 2024, 10:12 PM ISTUpdated : May 18, 2024, 08:45 AM IST
ರೋಮ್ಯಾನ್ಸ್, ಲಿಪ್‌ಲಾಕ್ ದೃಶ್ಯದಲ್ಲಿ ನಟರಿಗೆ ಈ ಸಮಸ್ಯೆ ಕಾಡುತ್ತೆ, ತಮನ್ನಾ ಬೋಲ್ಡ್ ಮಾತು !

ಸಾರಾಂಶ

ರೋಮ್ಯಾನ್ಸ್, ಲಿಪ್‌ಲಾಕ್ ಸೇರಿದಂತೆ ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನಟರಿಗೆ ಈ ಸಮಸ್ಯೆ ಕಾಡುತ್ತೆ. ಆದರೆ ನಟಿಯರು ಮ್ಯಾನೇಜ್ ಮಾಡಿದರೆ ನಟರು ಪರದಾಡುತ್ತಾರೆ ಎಂದು ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.  

ಮುಂಬೈ(ಮೇ.17) ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸೂಪರ್ ಹಿಟ್ ಚಿತ್ರ ನೀಡಿರುವ ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾ ಇದೀಗ ಬೋಲ್ಡ್ ಆಗಿ ಮಾತನಾಡಿದ್ದಾರೆ. ಅದರಲ್ಲೂ ಲಿಪ್‌ಲಾಕ್, ರೋಮ್ಯಾನ್ಸ್ ಸೇರಿದಂತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ಎದುರಾಗುವ ಸಮಸ್ಯೆ ಹಾಗೂ ಅನುಭವದ ಕುರಿತು ತಮನ್ನ ಮಾತನಾಡಿದ್ದಾರೆ. ಪ್ರಮುಖವಾಗಿ ಹಸಿಬಿಸಿ ದೃಶ್ಯಗಳನ್ನು ನಟಿಯರು ಮ್ಯಾನೇಜ್ ಮಾಡುತ್ತಾರೆ. ಆದರೆ ನಟರಿಗೆ ನರ್ವಸ್‌ನೆಸ್ ಕಾಡುತ್ತೆ ಎಂದಿದ್ದಾರೆ.

ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವಾಗ ನಟರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ. ನಾನು ನೋಡಿದಂತೆ ನಟರು ರೋಮ್ಯಾನ್ಸ್ ದೃಶ್ಯದಲ್ಲಿ ನಟಿಸಲು ನರ್ವಸ್ ಆಗುತ್ತಾರೆ ಎಂದು ತಮನ್ನ ಭಾಟಿಯಾ ಹೇಳಿದ್ದಾರೆ. ಇದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ. ರೋಮ್ಯಾನ್ಸ್ ದೃಶ್ಯ ಮಾಡುವಾಗ ಎಲ್ಲಿ ನಟಿಯರು ತಪ್ಪು ತಿಳಿದುಕೊಳ್ಳುತ್ತಾರೋ ಎಂದು ಆತಂಕಗೊಳ್ಳುತ್ತಾರೆ. ಹಸಿಬಿಸಿ ದೃಶ್ಯದಲ್ಲಿ ನಟಿಗೆ ಬೇಸರವಾಗಬಹುದೋ, ನಟಿ ಕಂಫರ್ಟೇಬಲ್ ಇದ್ದಾಳೋ ಅನ್ನೋದು ಅವರಿಗೆ ಚಿಂತೆಯಾಗುತ್ತದೆ. ಇದರ ಜೊತೆಗೆ ನಟಿಯರನ್ನು ಕಂಫರ್ಟ್‌ನಲ್ಲಿಡಬೇಕಾದ ಜವಾಬ್ದಾರಿಯೂ ಅವರ ಮೇಲಿರುತ್ತದೆ. ಹೀಗಾಗಿ ನಟರು ರೋಮ್ಯಾನ್ಸ್, ಲಿಪ್‌ಲಾಕ್ ದೃಶ್ಯದಲ್ಲಿ ಹೆಚ್ಚು ಚಡಪಡಿಸುತ್ತಾರೆ ಎಂದು ತಮನ್ನ ಹೇಳಿದ್ದಾರೆ.

ರಾತ್ರಿ 8 ಗಂಟೆ ಬಳಿಕ ಈ ಕೆಲಸವನ್ನು ತಮನ್ನಾ ಅಪ್ಪಿತಪ್ಪಿಯೂ ಮಾಡೋದಿಲ್ವಂತೆ: ಮಿಲ್ಕಿ ಬ್ಯೂಟಿಯ ವಿಚಿತ್ರ ಅಭ್ಯಾಸವೇನು?

ನಟಿಯರು ಈ ರೀತಿಯ ದೃಶ್ಯಗಳನ್ನು ಮ್ಯಾನೇಜ್ ಮಾಡುತ್ತಾರೆ. ಬಹುತೇಕ ನಟಿಯರು ಕಂಫರ್ಟ್ ಆಗಿ ರೋಮ್ಯಾನ್ಸ್ ಸೇರಿದಂತೆ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುತ್ತಾರೆ. ಆದರೆ ನಟರು ಇತರ ದೃಶ್ಯದಲ್ಲಿ ನಟಿಸಿದಷ್ಟು ಸುಲಭವಾಗಿ ನಟಿಸಲು ಸಾಧ್ಯವಾಗುವಿದಿಲ್ಲ ಎಂದು ತಮನ್ನ ಭಾಟಿಯಾ ಹೇಳಿದ್ದಾರೆ.

ತಮನ್ನಾ ತಮ್ಮ ಚಿತ್ರಗಳ ಆಯ್ಕೆಯಲ್ಲಿ ಹೆಚ್ಚೂ ಗಮನ ನೀಡುತ್ತಾರೆ. ಸುದೀರ್ಘ ವರ್ಷಗಳ ಕಾಲ ತಮನ್ನ ಹಸಿಬಿಸಿ ದೃಶ್ಯ, ಲಿಪ್‌ಲಾಕ್ ದೃಶ್ಯಗಳಿಂದ ದೂರವಿದ್ದರು. ಆದರೆ ಆದರೆ ವಿಜಯ್ ವರ್ಮಾ ಜೊತೆ ಲಸ್ಟ್ ಸ್ಟೋರಿಸ್ 2ನಲ್ಲಿ ಲಿಪ್‌ಲಾಕ್ ಸೀನ್‌ನಲ್ಲಿ ತಮನ್ನ ಕಾಣಿಸಿಕೊಂಡಿದ್ದಾರೆ. ಇನ್ನು ಅಮೇಜಾನ್ ಪ್ರೈಮ್‌ನ ಜೀ ಕರ್ದಾದಲ್ಲಿ ಸುಹೈಲ್ ನಯ್ಯರ್ ಜೊತೆ ಇಂಟಿಮೇಟ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿದರೆ ತಮನ್ನ ಇಂಟಿಮೇಟ್ ಸೀನ್‌ಗಳ ದೃಶ್ಯಗಳಿಂದ ದೂರವಿದ್ದಾರೆ. 

ತಮನ್ನಾ ಅಭಿನಯದ ಅರಮನೈ 4 ಭಾರಿ ಯಶಸ್ಸು ಗಳಿಸಿದೆ. ತೆಲುಗು ಡಬ್ ಚಿತ್ರ ಇದಾಗಿದ್ದು, ಆರಂಭದಲ್ಲಿ ಉತ್ತಮ ಗಳಿಕೆ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ 47.90 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದರ ಹಿಂದಿ ಡಬ್ ಮೇ 24ರಂದು ತೆರೆಗೆ ಅಪ್ಪಳಿಸಲಿದೆ. ಈ ಮೂಲಕ ದೇಶಾದ್ಯಂತ ಮೋಡಿ ಮಾಡಲು ತಮನ್ನಾ ಸಜ್ಜಾಗಿದ್ದಾರೆ.

ಮುಂಬೈನಲ್ಲಿರುವ ತಮನ್ನಾ ಭಾಟಿಯಾ ಐಶಾರಾಮಿ ಮನೆ ಹೇಗಿದೆ ನೋಡಿ, ಇದರ ಬೆಲೆ ಎಷ್ಟು ಗೊತ್ತಾ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!