ಅನ್ಯಕೋಮಿನ ಯುವಕನೋರ್ವ ಅಪ್ರಾಪ್ತೆ ಯುವತಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವಿಜಯಪುರದ ಇಂಡಿ ತಾಲೂಕಿನ ಚಿಕ್ಕಬೇವನೂರು ಗ್ರಾಮದಲ್ಲಿ ನಡೆದಿದೆ. ಸೋಹೇಲ್ ಹೊನಮುರಗಿ ಬಂಧಿತ ಆರೋಪಿ
ಅಪ್ರಾಪ್ತೆ ಯುವತಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಅನ್ಯಕೋಮಿನ ಯುವಕನ ಬಂಧನ
ವಿಜಯಪುರ (ಮೇ.18): ಅನ್ಯಕೋಮಿನ ಯುವಕನೋರ್ವ ಅಪ್ರಾಪ್ತೆ ಯುವತಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ವಿಜಯಪುರದ ಇಂಡಿ ತಾಲೂಕಿನ ಚಿಕ್ಕಬೇವನೂರು ಗ್ರಾಮದಲ್ಲಿ ನಡೆದಿದೆ.
ಸೋಹೇಲ್ ಹೊನಮುರಗಿ ಬಂಧಿತ ಆರೋಪಿ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದ ಸೋಹೇಲ್. ಇಂಡಿ ಗ್ರಾಮೀಣ ಪೊಲೀಸರು ಆರೋಪಿಯನ್ನ ಪತ್ತೆ ಮಾಡಿ ಬಂಧಿಸಿದ್ದಾರೆ.
ಏ.13 ರಂದು ಅಪ್ರಾಪ್ತೆ ಯುವತಿಯನ್ನ ಪುಸಲಾಯಿಸಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಏ.17ರಂದು ತಂದು ಗ್ರಾಮದಲ್ಲಿ ಬಿಟ್ಟು ಪರಾರಿಯಾಗಿದ್ದ. ಮಹಾರಾಷ್ಟ್ರದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಯುವತಿ ಆರೋಪಿಸಿದ ಹಿನ್ನೆಲೆ, ಆರೋಪಿ ಸೋಹೇಲ್ ವಿರುದ್ಧ ಕಲಂ 366, 376(2) (ಐ), ಐಪಿಸಿ & 4, 6, 12, ಪೊಕ್ಸೋ 2012 ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದ ಇಂಡಿ ಗ್ರಾಮೀಣ ಠಾಣೆ ಪೊಲೀಸರು. ಆರೋಪಿಯನ್ನ ಪತ್ತೆ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಪ್ರೀತಿಸಿ ಓಡಿ ಬಂದಿದ್ದ ಜೋಡಿಗೆ ಹಿಂದೂ ಕಾರ್ಯಕರ್ತರಿಂದ ಧರ್ಮದೇಟು