ಇಂತಹ ಕೊಲೆಗಡುಕನಿಗೆ ಪೊಲೀಸರು ಆಸ್ಪತ್ರೆಗೆ ಸೇರಿಸಿ ಏಕೆ ಚಿಕಿತ್ಸೆ ನೀಡುತ್ತಿದ್ದಾರೆ? ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ, ನರಳಿ ಸತ್ತಳೊ ಹಾಗೆಯೇ ಅವನು ಸಾಯಲಿ. ಅವನಿಗೆ ಚಿಕಿತ್ಸೆ, ರಕ್ಷಣೆ, ಭದ್ರತೆ ಯಾಕೆ ನೀಡಬೇಕೆಂದು ಪ್ರಶ್ನಿಸಿದರು.
ಹುಬ್ಬಳ್ಳಿ(ಮೇ.18): ನಮ್ಮ ಅಕ್ಕನನ್ನು ಕೊಂದ ವಿಶ್ವ(ಗಿರೀಶ)ನಿಗೆ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ಕೂಡಿಸುತ್ತಿದ್ದಾರೆ? ಅವನನ್ನು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಲ್ಲರ ಎದುರೇ ಎನ್‌ಕೌಂಟರ್ ಮಾಡಲಿ. ಇಲ್ಲವೇ ನಮ್ಮ ಕೈಗೆ ಕೊಡಿ, ನಾವೇ ಅವನನ್ನು ಕೊಂದು ಜೈಲಿಗೆ ಹೋಗುತ್ತೇವೆ ಎಂದು ಮೃತ ಅಂಜಲಿಯ ಸಹೋದರಿ ಯಶೋದಾ ಅಂಬಿಗೇರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಕೊಲೆಗಡುಕನಿಗೆ ಪೊಲೀಸರು ಆಸ್ಪತ್ರೆಗೆ ಸೇರಿಸಿ ಏಕೆ ಚಿಕಿತ್ಸೆ ನೀಡುತ್ತಿದ್ದಾರೆ? ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ, ನರಳಿ ಸತ್ತಳೊ ಹಾಗೆಯೇ ಅವನು ಸಾಯಲಿ. ಅವನಿಗೆ ಚಿಕಿತ್ಸೆ, ರಕ್ಷಣೆ, ಭದ್ರತೆ ಯಾಕೆ ನೀಡಬೇಕೆಂದು ಪ್ರಶ್ನಿಸಿದರು.
ಹುಬ್ಬಳ್ಳಿ: ಅಂಜಲಿ ಹಂತಕನನ್ನ ಬಂಧಿಸಿದ್ದೇ ಬಲು ರೋಚಕ..!
ಗಿರೀಶನಿಗೂ ನಮ್ಮ ಅಕ್ಕ ಅಂಜಲಿಗೂ ಯಾವುದೇ ಸಂಬಂಧವಿಲ್ಲ. ಅವಳ ಹತ್ಯೆಯಾದ ನಂತರ ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಅವನು ದಾವಣಗೆರೆ ರೈಲಿನಲ್ಲಿ ಮಹಿಳೆಯೋರ್ವಳ ಮೇಲೆ ಚಾಕು ಹಾಕಲು ಯತ್ನಿಸಿಲ್ಲವೇ? ಗಿರೀಶನ ಮನಸ್ಥಿತಿ ಸರಿಯಾಗಿರಲಿಲ್ಲ. ಹೀಗಾಗಿ ನಮ್ಮ ಅಕ್ಕ ಬಲಿಯಾಗಿದ್ದಾಳೆ. ಅವಳ ಚಿಂತೆಯಲ್ಲಿ ನಮ್ಮ ತಂಗಿ ಪೂಜಾ ಸಹ ಹಾಸಿಗೆ ಹಿಡಿದಿದ್ದಾಳೆ. ನಮ್ಮ ಅಕ್ಕನನ್ನು ಕೊಂದವನನ್ನು ಎನ್‌ಕೌಂಟರ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದಳು.