ಮುಡಿಯಲ್ಲಿ ಮಲ್ಲಿಗೆ, ಮೊಗದಲ್ಲಿ ಕಿರು ಲಜ್ಜೆ- ಚಂದವೋ ಚಂದ ಅಂದ್ರು ಫ್ಯಾನ್ಸ್‌

First Published | May 18, 2024, 12:49 PM IST

ಪಿಂಕ್  ಮತ್ತು ಮೆರೋನ್ ಬಾರ್ಡರ್ ಸೀರೆ ಧರಿಸಿ ನಟಿ ಮೋಕ್ಷಿತಾ ಪೈ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಸೀರೆಯಲ್ಲಿ ನೀವು ಚಂದವೋ ಚಂದ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ.

ಪಿಂಕ್ ಮತ್ತು ಮೆರೋನ್ ಬಾರ್ಡರ್ ಸೀರೆ ಧರಿಸಿ, ಮುಡಿಯಲ್ಲಿ ಮಲ್ಲಿಗೆ ಹೂ ಮಾಲೆ, ಕೊರಳಲ್ಲಿ ಸಿಂಪಲ್ ನೆಕ್ಲೆಸ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಟ್ಟು ಐದು ಫೋಟೋಗಳನ್ನು ಮೋಕ್ಷಿತಾ ಪೈ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ 21 ಸಾವಿರಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಮೆಂಟ್‌ಗಳು ಬಂದಿವೆ.

Mokshitha

ಸೋ ಕ್ಯೂಟ್, ಮುದ್ದು, ಬ್ಯೂಟಿಫುಲ್, ಕನ್ನಡತಿ ನಮ್ಮ ಪಾರು, ಸುಂದರವಾದ ಸೀರೆ, ಲವ್ ಯು ಪಾರು ಅಕ್ಕ, ಬೊಂಬೆ, ನಿಮ್ಮ ನಗುವೇ ನಿಮಗೆ ಆಭರಣ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕೆಲವರು ನಿಮ್ಮ ಮೊಬೈಲ್ ನಂಬರ್ ಕೊಡಿ ಅಂತ ಕೇಳಿದ್ದಾರೆ.

Latest Videos

click me!